7ನೇ ವೇತನ ಆಯೋಗ ಅಕ್ಟೋಬರ್ 20ಕ್ಕೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ 3% ಹೆಚ್ಚಳ ಘೋಷಣೆ ಸಾಧ್ಯತೆ -2024.
7ನೇ ವೇತನ ಆಯೋಗ ಇದೇ ವರ್ಷದ ಎರಡನೇ ತುಟ್ಟಿಭತ್ಯೆ (Dearness Allowance) ಪಡೆಯಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಇದೇ ತಿಂಗಳೇ ಸಿಹಿ ಸುದ್ದಿ ದೊರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ಜುಲೈ 1ರಿಂದಲೇ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ (Dearness Relief) ಪರಿಷ್ಕರಣೆ ಮಾಡಿ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಹಣದುಬ್ಬರ ವಿರುದ್ಧ ನೌಕರರಿಗೆ ಬೂಸ್ಟರ್ ನೀಡಲಿದೆ.
ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ಜನವರಿ 1ರಿಂದ ಅನ್ವಯವಾಗುವಂತೆ ಶೇಕಡಾ 4ರಷ್ಟು ತುಟ್ಟಿಭತ್ಯೆ (DA hike), ತುಟ್ಟಿ ಪರಿಹಾರವನ್ನು (DR Hike) ಮಾರ್ಚ್ ತಿಂಗಳಲ್ಲಿ ಪಡೆದುಕೊಂಡಿದ್ದಾರೆ. ನಂತರ 6 ತಿಂಗಳಿಗೆ (ಜುಲೈ) ಹೆಚ್ಚಾಗಬೇಕಿದ್ದ ತುಟ್ಟಿ ಭತ್ಯೆಯನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಆಗಬೇಕಿತ್ತು. ಕಾರಣಾಂತರಗಳಿಂದ ಅದನ್ನು ಅಕ್ಟೋಬರ್ 20ರಂದು ಘೋಷಿಸಲು ಕೇಂದ್ರ ಸರ್ಕಾರ ಯೋಜನೆ ಮಾಡಿಕೊಂಡಿದೆ ಎಂದು ವರದಿ ತೆಳಿದು ಬಂದಿದೆ.
7ನೇ ವೇತನ ಆಯೋಗ ತುಟ್ಟಿಭತ್ಯೆ ಪ್ರಮಾಣ ಶೇಕಡಾ 53ಕ್ಕೆ ಏರಿಕೆ?
ಈ ಬಾರಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇಕಡಾ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಘೋಷಿಸಲಿದೆ. ಇದರಿಂದ ತುಟ್ಟಿಭತ್ಯೆ ಪ್ರಮಾಣ ಶೇಕಡಾ 53ಕ್ಕೆ ಏರಿಕೆ ಆಗಲಿದೆ. ಈಗಾಗಲೇ ತುಟ್ಟಿಭತ್ಯೆ ಪ್ರಮಾಣ ಶೇಕಡಾ 50ಕ್ಕೆ ಏರಿಕೆ ಆಗಿದ್ದರಿಂದ ಒಂದಷ್ಟು ಭತ್ಯೆಗಳು ಸ್ವಯಂ ಪ್ರೇರಿತವಾಗಿ ಏರಿಕೆ ಆಗಿದ್ದು, ಅವುಗಳಿಂದ ನೌಕರರು ಪ್ರಯೋಜನೆ ಪಡೆದುಕೊಂಡಿದ್ದಾರೆ.
7ನೇ ವೇತನ ಆಯೋಗ ಜುಲೈ 1ರಿಂದ ಅನ್ವಯವಾಗುಂತೆ DA ಹೆಚ್ಚಳ .
ಈಗಾಗಲೇ 1 ಕೋಟಿ ನೌಕರರ ಕುಟುಂಬಗಳು ತುಟ್ಟಿಭತ್ಯೆ ಶೇಕಡಾ 50 ಹೆಚ್ಚಳದ ಲಾಭವನ್ನು ಪಡೆದುಕೊಂಡಿದ್ದಾರೆ. ಇದೀಗ ಜುಲೈ ಒಂದರಿಂದ 3% ಏರಿಕೆ ಮಾಡಿ ಘೋಷಿಸಲು ಸಿದ್ಧತೆ ಪ್ರಾರಂಭವಾಗಿವೆ. ಈ ಬಗ್ಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟದಿಂದ ಅನುಮೋದನೆ ದೊರೆಯಲಿದೆ.
ಸದ್ಯ ನೌಕರರು ತುಟ್ಟಿಭತ್ಯೆ ಎಷ್ಟು ಹೆಚ್ಚಳ ಸಿಗಲಿದೆ ಎಂಬುದರ ಜೊತೆಗೆ 8ನೇ ವೇತನ ಆಯೋಗ ಜಾರಿಯಾದರೆ, ಈದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮೂಲ ವೇತನ, ತುಟ್ಟಿಭತ್ಯೆ, ತುಟ್ಟಿಪರಿಹಾರದಂತಹ ಅನೇಕ ಲಾಭಗಳು ಸಿಗಲಿವೆ. ಅವೆಲ್ಲವು ಎಷ್ಟು ಪರ್ಸೆಟೇಜ್‌ನಲ್ಲಿ ಸಿಗಲಿವೆ, ಯಾವಾಗ ಹೊಸ ವೇತನ ಆಯೋಗ ಘೋಷಣೆ ಆಗಲಿದೆ ಎಂದು ಕುತೂಹಲದಿಂದ ನೋಡುತ್ತಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ವರ್ಷವು ಪ್ರತಿ ತಿಂಗಳಿಗೆ ಒಮ್ಮೆ ಜನವರಿ ಮತ್ತು ಜುಲೈ ತಿಂಗಳಲ್ಲಿ ನೌಕರರ ತುಟ್ಟಿಭತ್ಯೆಯನ್ನು ಪರಿಷ್ಕರಣೆ ಮಾಡುತ್ತದೆ. ಅಂದಿನ ಹಣದುಬ್ಬರ, ಫಿಟ್‌ಮೆಂಟ್ ಅಂಶದ ಆಧಾರದಲ್ಲಿ DA ಹೆಚ್ಚಳ ಮಾಡಿ ಆದೇಶಿಸುತ್ತದೆ. ಈ ವರ್ಷದ ಜನವರಿ DA ಪರಿಷ್ಕರಣೆ ನೌಕರರ ಕೈ ಸೇರಿದೆ.
8ನೇ ವೇತನ ಆಯೋಗ: ನೌಕರರಿಗೆ ಹಿನ್ನಡೆ?
ನೌಕರರು ಕೇಂದ್ರ ಸರ್ಕಾರದಿಂದ 8ನೇ ವೇತನ ಆಯೋಗದ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈವರೆಗೆ ಯಾವೊಂದು ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಟ್ಟುಕೊಟ್ಟಿಲ್ಲ. ಸದ್ಯ ನೌಕರರು ಸಂಘಗಳು ಬೇಡಿಕೆವುಳ್ಳ ಶಿಫಾರಸುಗಳನ್ನು ಸಲ್ಲಿದ್ದಾರೆ. ಸದ್ಯಕ್ಕೆ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡುವಲ್ಲಿ ನಿರಾಸಕ್ತಿ ವಹಿಸಿದೆ. ಇದು ನೌಕರರಿಗೆ ದೊಡ್ಡ ಆಘಾತ ನೀಡಿದೆ.
http://www.zeus-vs-hades-wiki.ru
last news about zeus vs hades
http://www.zeus-vs-hades-wiki.ru