7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ DA ಶೇ.57ಕ್ಕೆ ಏರಿಕೆ. ಹೆಚ್ಚಳದ ಸಂಪೂರ್ಣ ಮಾಹಿತಿ-2025.

7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ DA ಶೇ.57ಕ್ಕೆ ಏರಿಕೆ.  ಹೆಚ್ಚಳದ ಸಂಪೂರ್ಣ ಮಾಹಿತಿ-2025.

7th Pay Commission

7th Pay Commission: ದೇಶದಲ್ಲಿ ಜಾರಿಯಲ್ಲಿರುವ 7ನೇ ವೇತನ ಆಯೋಗಡಿ(7th Pay Commission) ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ತುಟ್ಟಿಭತ್ಯೆ (DA hike) ಹಾಗೂ ತುಟ್ಟಿ ಪರಿಹಾರ (DR Hike) ಹೆಚ್ಚಳ ಘೋಷಣೆ ಮಾಡಲಿದೆ. ಪ್ರತಿ ವರ್ಷದಂತೆ 2024ರ ಜನವರಿ ತಿಂಗಳಿನ ತುಟ್ಟಿಭತ್ಯೆ ಏರಿಕೆ ಘೋಷಣೆಗಾಗಿ 1 ಕೋಟಿ ನೌಕರರು ಉತ್ಸುಕರಾಗಿದ್ದಾರೆ. AICPI ಸೂಚ್ಯಂಕದ ಆಧಾರದ ಮೇಲೆ ಹೆಚ್ಚಳವಾಗಲಿದೆ.

ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ಸರ್ಕಾರಿ ನೌಕರಿಗೆ ಶುಭ ಸುದ್ದಿ ನೀಡಲಿದೆ. ತುಟ್ಟಿಭತ್ಯೆ ಈ ಭಾರಿಯು ಶೇಕಡಾ 3-4ರಷ್ಟು ಏರಿಕೆ ಮಾಡುವ ಸಂಭವವಿದೆ. ಹೀಗಾದಲ್ಲಿ, ತುಟ್ಟಿಭತ್ಯೆ ಒಟ್ಟು ಪ್ರಮಾಣವು ಶೇಕಡಾ 53 ರಿಂದ 56 ಇಲ್ಲವೇ 57ಕ್ಕೆ ಹೆಚ್ಚಾಗುತ್ತದೆ. ಇದರಿಂದ ನೌಕರರಿಗೆ ವಿವಿಧ ಭತ್ಯೆಗಳು ಏರಿಕೆ ಆಗಲಿವೆ. ಸರ್ಕಾರದ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಪ್ರತಿ 6 ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ 2 ಸಾರಿ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ಘೋಷಣೆ ಆಗುತ್ತದೆ. ಈ ಬಾರಿಯ ಏರಿಕೆಯು ನೌಕರರ ಮಾಸಿಕ ಮೂಲ ವೇತನದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಲಿದೆ. ಪಿಂಚಣಿ ಪಡೆಯುವ ಪಿಂಚಣಿದಾರರ ಪಿಂಚಣಿಯಲ್ಲೂ ಮಹತ್ವದ ಬದಲಾವಣೆ ತರಲಿದೆ.

ಪ್ರತಿ ವರ್ಷ ಜನವರಿ ಹಾಗೂ ಜುಲೈ ಗೆ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಏರಿಕೆ ಮಾಡಲಾಗುತ್ತದೆ. ಜನವರಿ ಹೆಚ್ಚಳವನ್ನು ಮಾರ್ಚ್‌ ತಿಂಗಳಲ್ಲಿ, ಜುಲೈ ಏರಿಕೆಯನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಆಗುತ್ತದೆ. 2024ರ ಜನವರಿಯಲ್ಲಿ ಶೇಕಡಾ 4ರಷ್ಟು ಡಿಎ ಏರಿಕೆ ಮಾಡಿದ್ದರಿಂದ ತುಟ್ಟಿಭತ್ಯೆ ಒಟ್ಟು ಪ್ರಮಾಣ ಶೇ.50ಕ್ಕೆ ತಲುಪಿತ್ತು. ನಂತರ ಜುಲೈ ಏರಿಕೆ (ಶೇ.3) ಸೇರಿ ಶೇ.53ಕ್ಕೆ ತಲುಪಿದೆ.

DA ಶೇಕಡಾ 57ಕ್ಕೆ ತಲುಪುವ ಸಾಧ್ಯತೆ.

ಕಳೆದ ವರ್ಷದಂತೆ 2025ರಲ್ಲಿ ಸರ್ಕಾರ ಶೇಕಡಾ 3 ಇಲ್ಲವೇ 4ರಷ್ಟು ಏರಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. 4ರಷ್ಟು ಹೆಚ್ಚಾದ್ಲಲಿ DA ಪ್ರಮಾಣ ಶೇಕಡಾ 57ಕ್ಕೆ ತಲುಪಬಹುದು. ಇದು ಜನವರಿಯಿಂದ ಅನ್ವಯವಾಗುವಂತೆ ಮುಂದಿನ ಹೋಳಿ ಹಬ್ಬಕ್ಕೆ ಸರ್ಕಾರ ಗಿಫ್ಟ್ ನೀಡಲಿದೆ.

2025 ರ ತುಟ್ಟಿಭತ್ಯೆ ಹೆಚ್ಚಳದಿಂದ 46 ಲಕ್ಷ ಕೇಂದ್ರ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು ಲಾಭಪಡೆದುಕೊಳ್ಳಲಿದ್ದಾರೆ. ಇದನ್ನು ಏಳನೇ ವೇತನ ಆಯೋಗ(7th Pay Commission)ದಡಿ AICICI(ಎಐಸಿಐಸಿಐ) ಸೂಚ್ಯಂಕ ಡೇಟಾ ಅವಲಂಬಿಸಿ ಹೆಚ್ಚಳಕ್ಕೆ ನಿರ್ಧರಿಸುತ್ತಾರೆ. ಹೆಚ್ಚಳ ವೇಳೆ ಫೀಟ್‌ಮೆಂಟ್ ಅಂಶವು ಮಹತ್ವದ ಪಾತ್ರವಹಿಸುತ್ತದೆ.

ಕಾಲಕಾಲಕ್ಕೆ ಹೆಚ್ಚಾಗುವ ಬೆಲೆ ಏರಿಕೆ, ಹಣದುಬ್ಬರದ ಸಂದರ್ಭದಲ್ಲಿ ಸರ್ಕಾರಿ ನೌಕರರ ಆರ್ಥಿಕ ಸಮತೋಲನ ಕಾಪಾಡಲು ಈ ತುಟ್ಟಿಭತ್ಯೆ ಏರಿಕೆಗಳು ಸಹಾಯವಾಗುತ್ತವೆ. ಹೀಗಾಗಿ ಪ್ರತಿ ಭಾರಿಯು ಏರಿಕೆ ವೇಳೆ ನೌಕರರ ನಿರೀಕ್ಷೆಗಳು ಬಹಳಷ್ಟಿರುತ್ತೆ. ಏಕೆಂದರೆ ಭತ್ಯೆಗಳು ಹೆಚ್ಚಾದಾಗ, ಮೂಲ ವೇತನದಲ್ಲಿ ಕೊಂಚ ಬದಲಾವಣೆ ಆಗುತ್ತದೆ.

WhatsApp Group Join Now
Telegram Group Join Now

Leave a Comment