7th Pay Commission: ರಾಜ್ಯ ಸರ್ಕಾರಿ ನೌಕರರ ಡಿಎ ಲೆಕ್ಕಾಚಾರ, ಶಿಫಾರಸುಗಳು -2024.

7th Pay Commission: ರಾಜ್ಯ ಸರ್ಕಾರಿ ನೌಕರರ ಡಿಎ ಲೆಕ್ಕಾಚಾರ, ಶಿಫಾರಸುಗಳು -2024.

7th Pay Commission:

7th Pay Commission: ಆಗಸ್ಟ್ 20: ಕರ್ನಾಟಕ ಸರ್ಕಾರ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಿದೆ. ಸರ್ಕಾರಿ ನೌಕರರು ವೇತನ ಹೆಚ್ಚಳದ ಜೊತೆಗೆ ತುಟ್ಟಿ ಭತ್ಯೆ (Dearness Allowance) ಏರಿಕೆಯ ಬಗ್ಗೆ ಲೆಕ್ಕಾಚಾರವನ್ನು ಹಾಕುತ್ತಿರುತ್ತಾರೆ. ರಾಜ್ಯ 7ನೇ ವೇತನ ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಡಿಎ ಹೆಚ್ಚಳದ ಲೆಕ್ಕಾಚಾರದ ಕುರಿತು ಸಹ ಶಿಫಾರಸುಗಳನ್ನು ಮಾಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವಾದ ಬಳಿಕ ರಾಜ್ಯ ಸರ್ಕಾರ ಡಿಎ ಹೆಚ್ಚಳವನ್ನು ಮಾಡುತ್ತದೆ.

7th Pay Commission:

   ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ರೂಢಿಯಲ್ಲಿರುವಂತೆ, ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬೇಕಾದ ತುಟ್ಟಿ ಭತ್ಯೆಯ ಸೂತ್ರವನ್ನು ನಿರ್ಧರಿಸುವ ಕಾರ್ಯವನ್ನು ಸಹ ಈ ಆಯೋಗಕ್ಕೆ ವಹಿಸಲಾಗಿದೆ ಎಂದು ಹೇಳಿದೆ. ಹಣದುಬ್ಬರ ಪರಿಣಾಮದಿಂದ ನೌಕರರ ವೇತನದ ಮೌಲ್ಯವನ್ನು ರಕ್ಷಿಸಲು ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಸಂದಾಯ ಮಾಡಲಾಗುತ್ತದೆ. ಹಣದುಬ್ಬರವನ್ನು ಯಾವ ರೀತಿಯಲ್ಲಿ ಸರಿದೂಗಿಸುವುದು ಮತ್ತು ವೇತನ ರಚನೆಯಲ್ಲಿ ಅಳವಡಿಸುವುದು ಎಂಬುದನ್ನು ತುಟ್ಟಿ ಭತ್ಯೆ ಸೂತ್ರವು ಸೂಚಿಸುತ್ತದೆ ಎಂದು ಹೇಳಿದೆ.

7th Pay Commission:

ಡಿಎ ಲೆಕ್ಕಾಚಾರ ಹಾಕುವುದು ಹೇಗೆ?

ಹಲವು ವರ್ಷಗಳಿಂದ ಕರ್ನಾಟಕವು ಕೇಂದ್ರ ತುಟ್ಟಿ ಭತ್ಯೆ ಸೂತ್ರವನ್ನು ಮತ್ತು ವಿಧಾನವನ್ನು ಅನುಸರಿಸಿಕೊಂಡು ಬರುತ್ತಿದೆ. ಬಹುತೇಕ ಇತರೆ ರಾಜ್ಯಗಳು ಸಹ ಇದೇ ರೀತಿ ಮಾಡುತ್ತಿವೆ. ಆಯೋಗದ ಶಿಫಾರಸ್ಸುಗಳು ಜಾರಿಗೆ ಬಂದ ಸಮಯದಲ್ಲಿ ಅನ್ವಯವಾಗುವ ತುಟ್ಟಿ ಭತ್ಯೆಯ ಪ್ರಮಾಣವನ್ನು ನಿಷ್ಪರಿಣಾಮಗೊಳಿಸಿ (ಪರಿಷ್ಕೃತ) ವೇತನದಲ್ಲಿ ಅದನ್ನು ಅಂತರ್ಗತಗೊಳಿಸಲಾಗುತ್ತದೆ.

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಟ್ಟಿ ಭತ್ಯೆಯನ್ನು ಲೆಕ್ಕ ಹಾಕಲು ಅನುಸರಿಸುವ ಸೂತ್ರವು ಹೀಗಿದೆ. ಪ್ರತಿ ವರ್ಷದ ಡಿಸೆಂಬರ್ ಮತ್ತು ಜೂನ್ ಅಂತ್ಯಕ್ಕೆ ಎಐಸಿಪಿಐಎನ್‌ನ 12 ತಿಂಗಳ ಅಂದಾಜು ಮೊತ್ತದ ಏರಿಕೆ ಮತ್ತು ಇದಕ್ಕೆ ಪ್ರತಿಯಾಗಿ ವೇತನ ರಚನೆಯನ್ನು ನಿರ್ಧರಿಸಲು ಬಳಸಲಾದ ಸೂಚ್ಯಂಕದ ಮೂಲ ಸಂಖ್ಯೆಯನ್ನು ಆಧರಿಸಿ ತುಟ್ಟಿ ಭತ್ಯೆಯ ಪರಿಹಾರವನ್ನು ರೂಪಿಸಲಾಗುತ್ತದೆ. ಪ್ರತಿ ವರ್ಷವೂ ಜನವರಿ ಮತ್ತು ಜುಲೈನಲ್ಲಿ ಎರಡು ಬಾರಿ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲಾಗುತ್ತದೆ.

7th Pay Commission:

  ಆಯೋಗವು ಈ ಪದ್ಧತಿಯನ್ನು ಬದಲಿಸಲು ಯಾವುದೇ ಕಾರಣವಿಲ್ಲವೆಂದು ಮತ್ತು 4ನೇ ರಾಜ್ಯ ವೇತನ ಆಯೋಗವು ಅವಲೋಕಿಸಿದಂತೆ ಪ್ರಸ್ತುತ ಪದ್ಧತಿಯು ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಭಾಗೀದಾರರಿಂದ ಉತ್ತಮವಾಗಿ ಗ್ರಹಿಸಲ್ಪಟ್ಟಿರುತ್ತದೆ ಹಾಗೂ ಹೊಸ ಪದ್ಧತಿಯನ್ನು ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಕಾಲವ್ಯಯವಾಗುವುದಲ್ಲದೇ ಹೆಚ್ಚುವರಿ ಲಾಭ ಅಥವ ಪ್ರಯೋಜನವಿಲ್ಲದಿರುವುದರಿಂದ ಕೇಂದ್ರ ತುಟ್ಟಿ ಭತ್ಯೆ ಸೂತ್ರ ಮತ್ತು ವಿಧಾನವನ್ನು ಮುಂದುವರೆಸಲು ಶಿಫಾರಸು ಮಾಡುತ್ತದೆ.

ತುಟ್ಟಿಭತ್ಯೆ ಲೆಕ್ಕಾಚಾರ ಹಾಕುವುದು ಹೇಗೆ?

  ಕೇಂದ್ರ ವೇತನ ಪರಿಷ್ಕರಣೆ ಜಾರಿಯಾದಾಗ ದಿನಾಂಕ 01/01/2023ರಲ್ಲಿ ಸೂಚ್ಯಂಕ ಅಂಶವು 372.10 ಅಗಿತ್ತು ಮತ್ತು ದಿನಾಂಕ 01/01/2016ರಲ್ಲಿ 261.40 ಅಗಿತ್ತು. ಕೇಂದ್ರ ಸರ್ಕಾರವು ಇದನ್ನು ಶೇ.42ಕ್ಕೆ ಪೂರ್ಣಾಂಕಗೊಳಿಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೇತನ ಪರಿಷ್ಕರಣೆಗಳು ವಿವಿಧ ಕಾಲ ಘಟ್ಟಗಳಲ್ಲಿ ನಡೆಸಲಾಗುವುದರಿಂದ, ಪರಿಷ್ಕೃತ ವೇತನದಲ್ಲಿ ಅನ್ವಯವಾಗುವ ತುಟ್ಟಿ ಭತ್ಯೆಯ ವಿಲೀನದಲ್ಲಿನ ಸೂಚ್ಯಂಕ ಹಂತಗಳು ಭಿನ್ನವಾಗಿರುತ್ತವೆ.

  ಕೇಂದ್ರ ವೇತನ ರಚನೆಯ ಸೂಚ್ಯಂಕ ಮೂಲವನ್ನು ರಾಜ್ಯ ವೇತನ ರಚನೆಯ ಮೂಲ ಸೂಚ್ಯಂಕದೊಂದಿಗೆ ಭಾಗಿಸುವುದರಿಂದ ಪಡೆಯಲಾಗುವ ಗುಣಾಕಾರಾಂಶವನ್ನು ಬಳಸಿ ಕೇಂದ್ರ ಸರ್ಕಾರದ ತುಟ್ಟಿ ಭತ್ಯ ದರವನ್ನು ಅಪವರ್ತನೀಕರಿಸುವ ಮೂಲಕ ಈ ವ್ಯತ್ಯಾಸವನ್ನು ಪರಿಗಣಿಸುವುದು ಅಗತ್ಯವಾಗುತ್ತದೆ/ ಈ ವ್ಯತ್ಯಾಸಕ್ಕೆ ವಿವರಣೆ ನೀಡುವುದು ಅಗತ್ಯವಾಗುತ್ತದೆ.

  ದಿನಾಂಕ 01/01/2016ರಂದು ಜಾರಿಗೆ ತರಲಾದ ಪರಿಷ್ಕೃತ ಕೇಂದ್ರ ವೇತನ ರಚನೆಯಲ್ಲಿ ದಿನಾಂಕ 01/01/2016ರಂದು ಅನ್ವಯವಾಗುವ ತುಟ್ಟಿ ಭತ್ಯೆಯನ್ನು ಭಾರತ ಸರ್ಕಾರವು ತಟಸ್ಥಗೊಳಿಸಿತು ಎಂಬುದನ್ನು ಗಮನಿಸಬಹುದಾಗಿದೆ. ಆ ಕಾಲಘಟ್ಟದಲ್ಲಿ, ಸೂಚ್ಯಂಕ ಹಂತವು 261.40 ಆಗಿತ್ತು. ಅದೇ ರೀತಿ, ಈ ಆಯೋಗದ ಶಿಫಾರಸ್ಸುಗಳಲ್ಲಿ ದಿನಾಂಕ 01/07/2022 ರಂದು ಅನ್ವಯವಾಗುವ ತುಟ್ಟಿ ಭತ್ಯೆಯನ್ನು ಸೂಚ್ಯಂಕ ಹಂತ 361.704 ರಲ್ಲಿ ಸಂಪೂರ್ಣವಾಗಿ ನಿಷ್ಪರಿಣಾಮಗೊಳಿಸಲಾಗಿದೆ.

  ಇದರನುಸಾರ, ದಿನಾಂಕ 01/01/2023ರಿಂದ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವುದಕ್ಕಾಗಿ 0.722 (261.4 ಅನ್ನು 361.704 ರಿಂದ ಭಾಗಿಸುವುದು) ಗುಣಾಕಾರಾಂಶವು ಅನ್ವಯವಾಗುತ್ತದೆ. ಇದು 1:0.722 ಅನುಪಾತಕ್ಕೆ ಕಾರಣವಾಗುತ್ತದೆ. ಅಂದರೆ, ಭಾರತ ಸರ್ಕಾರದಿಂದ ಮಂಜೂರಾಗುವ ಪ್ರತಿ ಶೇ.1 ರಷ್ಟು ತುಟ್ಟಿ ಭತ್ಯಗೆ, ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರಾಗುವ ತುಟ್ಟಿ ಭತ್ಯೆಯು ಶೇ.0.722 ಆಗಿರುತ್ತದೆ ಎಂದು ಹೇಳಿದೆ.

    ಧನ್ಯವಾದಗಳು…..

 

WhatsApp Group Join Now
Telegram Group Join Now