Supreme Court Jobs 2024:ಸುಪ್ರೀಂ ಕೋರ್ಟ್‌’ನಿಂದ 80 ಜೂನಿಯರ್ ಅಟೆಂಡಂಟ್ ನೇಮಕ: 10th, ಡಿಪ್ಲೊಮ ಪಾಸಾದವರಿಗೆ ವೇತನ ರೂ.46,210.

Supreme Court Jobs 2024:ಸುಪ್ರೀಂ ಕೋರ್ಟ್‌’ನಿಂದ 80 ಜೂನಿಯರ್ ಅಟೆಂಡಂಟ್ ನೇಮಕ: 10th, ಡಿಪ್ಲೊಮ ಪಾಸಾದವರಿಗೆ ವೇತನ ರೂ.46,210.

 

Supreme Court Jobs 2024: ಭಾರತ ಸರ್ವೋಚ್ಚ ನ್ಯಾಯಾಲಯವು ಜೂನಿಯರ್ ಅಟೆಂಡಂಟ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಳನ್ನು ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

   ಭಾರತೀಯ ಸರ್ವೋಚ್ಛ ನ್ಯಾಯಾಲಯವು 80 ಜೂನಿಯರ್ ಕೋರ್ಟ್‌ ಅಟೆಂಡಂಟ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಭಾರತೀಯ ಪ್ರಜೆಗಳು, ನಿಗದಿತ ಶೈಕ್ಷಣಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಲೆವೆಲ್ 3 ಪೇ ಮೆಟ್ರಿಕ್ಸ್‌ ಬೇಸಿಕ್ ವೇತನ ರೂ.21700 ಇರಲಿದೆ. ಸಂಚಿತ ವೇತನ ಹೆಚ್‌ಆರ್‌ಎ ಸೇರಿ ಒಟ್ಟಾರೆ ರೂ.46,210 ಮಾಸಿಕ ಸಿಗಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಇನ್ನಷ್ಟು ಹೆಚ್ಚಿನ ಮಾಹಿತಿ ಕೆಳಗಿನಂತೆ ತಿಳಿಯಿರಿ.

Supreme Court Jobs 2024: 80 Junior Attendant Recruitment by Supreme Court: 10th, Diploma Pass Salary Rs.46,210.

ಸುಪ್ರೀಂ ಕೋರ್ಟ್‌ ಜೂನಿಯರ್ ಕೋರ್ಟ್‌ ಅಟೆಂಡಂಟ್‌ ಹುದ್ದೆಗೆ ಅರ್ಹತೆಗಳು?

• ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್‌ನಿಂದ ಎಸ್ಎಸ್‌ಎಲ್‌ಸಿ ಪಾಸ್ ಜತೆಗೆ, ಕನಿಷ್ಠ ಒಂದು ವರ್ಷದ ಪೂರ್ಣಾವಧಿ ಡಿಪ್ಲೊಮ ಶಿಕ್ಷಣವನ್ನು ಅಡುಗೆ / ಪಾಕಶಾಲೆ ವಿಷಯದಲ್ಲಿ ಪಡೆದಿರಬೇಕು.

 ಜತೆಗೆ ಕನಿಷ್ಠ 3 ವರ್ಷಗಳ ಕಾಲ ಪ್ರತಿಷ್ಠಿತ ಹೋಟೆಲ್‌ಗಳು / ರೆಸ್ಟೋರೆಂಟ್‌ಗಳು / ಸರ್ಕಾರಿ ಇಲಾಖೆಗಳಲ್ಲಿ ಅಡುಗೆ ಮಾಡಿದ ಅನುಭವವನ್ನು ಹೊಂದಿರಬೇಕು.

ಸುಪ್ರೀಂ ಕೋರ್ಟ್‌ ಜೂನಿಯರ್ ಕೋರ್ಟ್‌ ಅಟೆಂಡಂಟ್‌ ಹುದ್ದೆಗೆ ವಯಸ್ಸಿನ ಅರ್ಹತೆಗಳು ?

ಈ ಹುದ್ದೆಗಳಿಗೆ ಅರ್ಜಿ ಹಾಕಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಸುಪ್ರೀಂ ಕೋರ್ಟ್‌ ಜೂನಿಯರ್ ಕೋರ್ಟ್‌ ಅಟೆಂಡಂಟ್‌ ಹುದ್ದೆಗೆ ಅರ್ಜಿ ಹಾಕಲು ಪ್ರಮುಖ ದಿನಾಂಕಗಳು.

ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ ಮಾಡುವ ಆರಂಭಿಕ ದಿನಾಂಕ: 23-08-2024.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12-09-2024

ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ :

ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಸುಪ್ರೀಂ ಕೋರ್ಟ್‌ ಜೂನಿಯರ್ ಕೋರ್ಟ್‌ ಅಟೆಂಡಂಟ್‌ ಹುದ್ದೆಗೆ ಅಪ್ಲಿಕೇಶನ್‌ ಶುಲ್ಕ ವಿವರ.

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.400.ಇತರೆ

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.400.

ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ರೂ.200.

ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬಹುದು.

ಸುಪ್ರೀಂ ಕೋರ್ಟ್‌ ಜೂನಿಯರ್ ಕೋರ್ಟ್‌ ಅಟೆಂಡಂಟ್‌ ಹುದ್ದೆಗೆ ಆಯ್ಕೆ ವಿಧಾನ.

ಒಟ್ಟಾರೆ 200 ಅಂಕಗಳಿಗೆ ಲಿಖಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌, ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಹಾಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಭಾರತ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ https://www.sci.gov.in/ ಗೆ ಭೇಟಿ ನೀಡಿರಿ. ಅಂದಹಾಗೆ ಅರ್ಜಿ ಲಿಂಕ್‌ ಅನ್ನು ಆಗಸ್ಟ್‌ 23 ರಂದು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಮರೆಯದಿರಿ.

ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಡಿಪ್ಲೊಮ ಶಿಕ್ಷಣದ ಅಂಕಪಟ್ಟಿ, ಜನ್ಮ ದಿನಾಂಕ ದಾಖಲೆ, ಇತರೆ ಮಾಹಿತಿಗಳು ಅಗತ್ಯವಾಗಿರುತ್ತವೆ.

    ಧನ್ಯವಾದಗಳು…..

WhatsApp Group Join Now
Telegram Group Join Now