7th Pay Commission: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಎಷ್ಟು ಏರಿಕೆ? -2024.

7th Pay Commission: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಎಷ್ಟು ಏರಿಕೆ? -2024.

7th Pay Commission:

 

7th Pay Commission: ಕರ್ನಾಟಕ ಸರ್ಕಾರ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯ ಶಿಫಾರಸುಗಳನ್ನು ಅಂಗೀಕರಿಸಿ ಜಾರಿಗೊಳಿಸುವ ಕುರಿತು ಆದೇಶವನ್ನು ಹೊರಡಿಸಿದೆ. ಸರ್ಕಾರಿ ನೌಕರರ ವೇತನ, ಭತ್ಯೆಗಳು ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ಏರಿಕೆಯಾಗಿದೆ. ಯಾವ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂಬುದು ಲೆಕ್ಕಾಚಾರವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎಷ್ಟು ವೇತನ ಸಿಗಲಿದೆ?.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಿಂದಿನ ವೇತನ ಶ್ರೇಣಿ, ಪರಿಷ್ಕೃತ ವೇತನ ಶ್ರೇಣಿಯ ಮಾಹಿತಿಯನ್ನು ನೀಡಲಾಗಿದೆ.

ಸರ್ಕಾರಿ ಶಾಲಾ ಶಿಕ್ಷಕರ 2018ರ ಪರಿಷ್ಕೃತ ವೇತನ ಶ್ರೇಣಿ, 2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಯಾವ ರೀತಿ ವೇತನ ಪುನರ್ ನಿಗದಿ ಮಾಡಲಾಗಿದೆ? ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ. ಅವುಗಳ ವಿವರವಾದ ಮಾಹಿತಿ ಈ ಕೆಳಗಿನಿಂತೆ ಇದೆ.

ಶಾಲಾ ಶಿಕ್ಷಕರ ವೇತನ.

ಸರ್ಕಾರ ತನ್ನ ಆದೇಶದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಮತಿ ‘S’ ಎಂಬುವವರು ಹುದ್ದೆಗೆ ಅನ್ವಯಿಸುವ 2018ರ ಪರಿಷ್ಕೃತ ವೇತನ ಶ್ರೇಣಿಯ ಪ್ರಸಕ್ತ ಹಿರಿಯ ವೇತನ ಶ್ರೇಣಿ ರೂ. 30350-58250 ರಲ್ಲಿ ವೇತನವನ್ನು ಪಡೆಯುತ್ತಿರುತ್ತಾರೆ. ಶ್ರೀಮತಿ ‘S’ ಎಂಬುವವರಿಗೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ದಿನಾಂಕ 01/01/2023ರಂದು 4ನೇ ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡಲಾಗಿರುತ್ತದೆ. ನೌಕರರ ವೇತನ ವಿವರಗಳು ಈ ಕೆಳಕಂಡಂತಿದೆ ಎಂದು ಹೇಳಿದೆ.

 1ನೇ ಜುಲೈ 2022 ರಂದು ಧಾರಣೆ ಮಾಡಿದ ಪ್ರಾಥಮಿಕ ಶಾಲಾ ಶಿಕ್ಷಕರು ಹುದ್ದೆಯ ಪದನಾಮ ಪ್ರಾಥಮಿಕ ಶಾಲಾ ಶಿಕ್ಷಕರು. ಹುದ್ದೆಗೆ ಅನ್ವಯಿಸುವ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ ರೂ.30350-750-32600-850-36000-950-39800-1100-46400-1250-53900-1450-58250

 1ನೇ ಜುಲೈ 2022ರಂದು ಇದ್ದಂತೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನ (3ನೇ ಸ್ಥ.ವೇ.ಬ. ಪಡೆದ ನಂತರ) ರೂ. 58,250+4350 ವೈವೇ.

 ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ 1ನೇ ಜನವರಿ 2023.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ.

 

 ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ 49050-1250-52800-1375-58300-1500-64300-1650-74200-1900-85600-2300-92500

 1ನೇ ಜುಲೈ 2022ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ ರೂ. 92,500+6900 ವೈವೇ

 ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ನಿಯಮ 8ರಉಪನಿಯಮ (1)ರನ್ವಯ ದಿನಾಂಕ 1/1/2023ರಂದು ಲಭ್ಯವಿದ್ದ 4ನೇ ಸ್ಥ.ವೇ.ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕ ವೇತನ ನಿಗದಿ. ರೂ.92,500+6900 ವೈವೇ+2300 ವೈವೇ

 ದಿ: 01.01.2024ರಂದು 5ನೇ ಸ್ಥ.ವೇ.ಬಡ್ತಿಯನ್ನು ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ ರೂ.92,500+ 6900 ವೈವೇ +2300 ವೈವೇ+2300 ವೈವೇ ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ ಎಂದು ಆದೇಶ ಹೇಳಿದೆ.

 ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ. 7ನೇ ಸ್ಥ.ವೇ.ಬಡ್ತಿ 1ನೇ ಜನವರಿ 2025.

   ಧನ್ಯವಾದಗಳು…..

ಇನ್ನು ಹೆಚ್ಚಿನ ಮಾಹಿತಿ ಪಡೆಯಲು  ಆತ್ಮೀಯ ಗೆಳೆಯರೇ ನಮ್ಮ WhatsApp and Telegram ದಯವಿಟ್ಟು Follow ಮಾಡಿ …..

 

WhatsApp Group Join Now
Telegram Group Join Now

Leave a Comment