HURL : ಹಿಂದೂಸ್ತಾನ್ ಉರ್ವಾರಕ್ ರಾಸಾಯನ್ ಲಿಮಿಟೆಡ್ನಲ್ಲಿ 212 ಹುದ್ದೆಗಳಿಗೆ :2024.
ಹಿಂದೂಸ್ತಾನ್ ಉರ್ವಾರಕ್ ರಸಾಯನ್ ಲಿಮಿಟೆಡ್ (ಎಚ್ ಯುಆರ್ ಎಲ್) ಡಿಪ್ಲೊಮಾ ಮತ್ತು ಗ್ರಾಜುಯೇಟ್ ಎಂಜಿನಿಯರ್ ಟ್ರೇನಿ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಅಕ್ಟೋಬರ್ 21ರ ಒಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ.
ಗ್ರಾಜುಯೇಟ್ ಎಂಜಿನಿಯರಿಂಗ್ ವಿಭಾಗದಲ್ಲಿ 67, ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದಲ್ಲಿ 145 ಸೇರಿ ಒಟ್ಟು 212 ಟ್ರೇನಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೆಮಿಕಲ್, ಇನ್ಸ್ಟುಮೆಂಟೇಶನ್, ಎಲೆಕ್ಟಿಕಲ್, ಮೆಕಾನಿಕಲ್ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಅರ್ಹತೆಗಳೇನು?:
ಗ್ರಾಜುಯೇಟ್ ವಿಭಾಗದ ಟೇನಿ ಹುದ್ದೆಗಳಿಗೆ ಕೆಮಿಕಲ್ ಎಂಜಿನಿಯರಿಂಗ್, ಕೆಮಿಕಲ್ ಟೆಕ್ನಾಲಜಿ, ಕೆಮಿಕಲ್ ಪ್ರೋಸಸ್ ಟೆಕ್ನಾಲಜಿ, ಇನ್ಸ್ಟ್ರುಮೆಂಟೇಶನ್ ಅಂಡ್ ಕಂಟ್ರೋಲ್, ಇನ್ಸ್ಟ್ರುಮೆಂಟೇಶನ್ ಆಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿ ಕೇಶನ್, ಎಲೆಕ್ಟ್ರಾನಿಕ್ಸ್ ಆಂಡ್ ಕಂಟ್ರೋಲ್, ಎಲೆಕ್ಟಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಈ ಯಾವುದಾದರೂ ಒಂದು ವಿಷಯದಲ್ಲಿ
ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಮತ್ತು ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಕಡ್ಡಾಯ.
ಡಿಪ್ಲೊಮಾ ಟ್ರೇನಿ ಹುದ್ದೆಗಳಿಗೆ ಕೆಮಿಕಲ್ ಎಂಜಿನಿಯರಿಂಗ್, ಕೆಮಿಕಲ್ ಟೆಕ್ನಾಲಜಿ, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್
ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟಿಕಲ್ ಈ ಯಾವುದಾದರೂ ವಿಷಯಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಪೂರೈಸಿರಬೇಕು. ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದು ಕಡ್ಡಾಯ.
ಹುದ್ದೆಗಳು : 212
ವಯೋಮಿತಿ:
ಗ್ರಾಜುಯೇಟ್ ಟ್ರೇನಿ ಹುದ್ದೆಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ, ಡಿಪ್ಲೊಮಾ ಟ್ರೇನಿ ಹುದ್ದೆಗಳಿಗೆ ಗರಿಷ್ಠ 27 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಸೈಪೆಂಡ್:
ಗ್ರಾಜುಯೇಟ್ ಟ್ರೇನಿ ಎಂಜಿನಿಯರ್ಗಳಿಗೆ ಮಾಸಿಕ 40,000 ರೂ., ಡಿಪ್ಲೊಮಾ ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ 23,000 ರೂ. ಸ್ಟೆಪೆಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ :
ಗ್ರಾಜುಯೇಟ್ ಟ್ರೇನಿ ಹುದ್ದೆಗಳ ಆಕಾಂಕ್ಷಿಗಳು 750 ರೂ., ಡಿಪ್ಲೊಮಾ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 500 ರೂ. `ಅರ್ಜಿ ಶುಲ್ಕ ಪಾವತಿಸಬೇಕು. ಎಲ್ಲ ವರ್ಗದ ಅಭ್ಯರ್ಥಿಗಳೂ ಶುಲ್ಕ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ. ಭಾರತದ ಯಾವುದೇ ಮೂಲೆಯಲ್ಲಾದರೂ ಸೇವೆ ಸಲ್ಲಿಸಲು ಸಿದ್ದರಿರುವವರು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅಕ್ಟೋಬರ್ 21, 2024
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ
ಹೆಚ್ಚಿನ ಮಾಹಿತಿಗಾಗಿ : Click
1 thought on “HURL : For 212 Posts in Hindustan Urwarak Rasayan Limited :2024.”