Government Employee: ಸರ್ಕಾರಿ ನೌಕರರ ಜನವರಿ ತಿಂಗಳ ವೇತನ ಎಷ್ಟು ಕಡಿತ, ವಿವರಗಳು-2025.
Government Employee: ಜನವರಿ ತಿಂಗಳು ಮುಗಿಯುತ್ತಾ ಬಂದಿದ್ದು, ತಿಂಗಳ ವೇತನವನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಹೊಸ ವರ್ಷದ 1 ತಿಂಗಳ ವೇತನದಲ್ಲಿ ಕರ್ನಾಟಕದ ಸರ್ಕಾರಿ ನೌಕರರಿಗೆ ಕಡಿತವಾಗಲಿದೆ. ಹೌದು ಈಗಾಗಲೇ ಎಲ್ಲಾ ಸರ್ಕಾರಿ ನೌಕರರ ವೇತನ ಎಷ್ಟು ಕಡಿತಗೊಳಿಸಬೇಕು?, ಈ ಪ್ರಕ್ರಿಯೆ ಹೇಗೆ ನಡೆಸಬೇಕು? ಎಂದು ಈ ಮಾಹಿತಿಯನ್ನು ನೀಡಲಾಗಿದೆ.
-
Click here…
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಎಲ್ಲಾ ಅಧಿಕಾರಿ-ನೌಕರರ ಗಮನಕ್ಕೆ ಮಾಹಿತಿಯನ್ನು ನೀಡಿದೆ. ಸದಸ್ಯತ್ವ ಶುಲ್ಕವನ್ನು ಕಡಿತ ಮಾಡಲಾಗುತ್ತದೆ ಎಂದು ಹೇಳಿದೆ. ಈ ಹಿಂದೆ ಡಿಸೆಂಬರ್‌ನಲ್ಲಿಯೇ ಸುತ್ತೋಲೆಯ ಮೂಲಕ ಈ ಕುರಿತು ಮಾಹಿತಿಯನ್ನು ಹಂಚಿಕೆ ಮಾಡಲಾಗಿತ್ತು.
K-2ನಲ್ಲಿ ಎಲ್ಲಾ DDOಗಳು ತಮ್ಮ ಲಾಗಿನ್‌ಗಳಲ್ಲಿ ಮ್ಯಾಪಿಂಗ್ ಮಾಡಿಕೊಂಡು ರೂ. 200ಗಳ ಸದಸ್ಯತ್ವ ಶುಲ್ಕವನ್ನು ಜನವರಿ ತಿಂಗಳ ವೇತನದಲ್ಲಿ ಕಡಿತಗೊಳಿಸಲು ಕೋರಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ.
ನೌಕರರ ಸುತ್ತೋಲೆಯ ವಿವರಗಳು.
ಡಿಸೆಂಬರ್ 30ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುತ್ತೋಲೆಯ ಮೂಲಕ ವೇತನ ಕಡಿತದ ಕುರಿತು ಎಲ್ಲಾ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಹಾಗೂ ಯೋಜನಾ ಶಾಖೆಗಳ ಅಧ್ಯಕ್ಷರುಗಳಿಗೆ ಮಾಹಿತಿ ರವಾನೆ ಮಾಡಿತ್ತು. ಈ ಸುತ್ತೋಲೆ 2025ನೇ ಸಾಲಿನ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಣೆಯ ಬಗ್ಗೆ ಎಂಬ ವಿಷಯ ಒಳಗೊಂಡಿತ್ತು.
ಸರ್ಕಾರದ ಆದೇಶ ದಿನಾಂಕ 04-11-2019ರನ್ವಯ ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುತ್ತದೆ. ಅದರಂತೆ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಂದ ಸರ್ಕಾರಿ ನೌಕರರ ಸಂಘದ 2025ನೇ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕ ರೂ. 200ಗಳನ್ನು 2025ನೇ ಜನವರಿ ಮತ್ತು ಫೆಬ್ರವರಿ ತಿಂಗಳ ವೇತನದಲ್ಲಿ ಕಟಾವುಗೊಳಿಸಿ, ಕೇಂದ್ರ ಸಂಘದ ಉಳಿತಾಯ ಖಾತೆಗೆ ಜಮಾಗೊಳಿಸಲು ಕ್ರಮಕೈಗೊಳ್ಳುವುದು ಎಂದು ತಿಳಿಸಿತ್ತು.
-
Click here…
ಕರ್ನಾಟಕ ಪರೀಕ್ಷಾ ಪ್ರಾಧಿಕಾರ:2025-26 ನೇ ಸಾಲಿಗೆ ಕರ್ನಾಟಕದ ರಾಜ್ಯದಲ್ಲಿನ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ.
ಜಿಲ್ಲಾ, ತಾಲ್ಲೂಕು/ ಯೋಜನಾ ಶಾಖೆ ಕಾರ್ಯಕಾರಿ ಸಮಿತಿ ಸಭೆಯನ್ನು ದಿನಾಂಕ 15-01-2025ರೊಳಗೆ ಏರ್ಪಡಿಸಿ ಸದಸ್ಯತ್ವ ಸಂಗ್ರಹಣೆ ವಿಷಯದನ್ನು ಮಂಡಿಸಿ ಎಲ್ಲಾ ಪದಾಧಿಕಾರಿಗಳು/ ನಿರ್ದೇಶಕರು ಆಯಾ ಇಲಾಖಾ ನೌಕರರ ಸದಸ್ಯತ್ವ ಶುಲ್ಕವನ್ನು ವೇತನದಲ್ಲಿ ಕಟಾವುಗೊಳಿಸಲು ಕ್ರಮವಹಿಸುವುದು.
ತಮ್ಮ ಜಿಲ್ಲೆ/ ತಾಲ್ಲೂಕು ಶಾಖೆಯ ಲೆಟರ್ ಹೆಡ್‌ನಲ್ಲಿ ಕೇಂದ್ರ ಸಂಘದ ಬ್ಯಾಂಕ್ ಖಾತೆ ವಿವರದ ಮಾದರಿ ಪತ್ರ ಹಾಗೂ ಸರ್ಕಾರದ ಆದೇಶವನ್ನು ಖಜಾನಾಧಿಕಾರಿಗಳು ಹಾಗೂ ವೇತನ ಬಟವಾಡೆ ಅಧಿಕಾರಿಗಳಿಗೆ ನೀಡಿ, K-2 ಮೂಲಕ ಸದಸ್ಯತ್ವ ಶುಲ್ಕವನ್ನು ಕಟಾಯಿಸಲು ಪತ್ರದ ಮೂಲಕ ಕೋರುವುದು.
ಜಿಲ್ಲಾ/ ತಾಲ್ಲೂಕು ಶಾಖೆ ಅಧ್ಯಕ್ಷರು ಖಜಾನಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಶೇ.100 ರಷ್ಟು ಸದಸ್ಯತ್ವ ಶುಲ್ಕ ಕಟಾವುಗೊಳಿಸುವ ಗುರಿ ಸಾಧಿಸುವುದು. ಚೆಕ್/ ಡಿಡಿ/ ನಗದು ರೂಪದಲ್ಲಿ ಸಂಗ್ರಹಿಸಲ್ಪಟ್ಟ ಸದಸ್ಯತ್ವ ಶುಲ್ಕವನ್ನು ವಿಳಂಬ ಮಾಡದೆ ಕೇಂದ್ರ ಸಂಘಕ್ಕೆ ಸಲ್ಲಿಸುವುದು ಎಂದು ತಿಳಿಸಿತ್ತು.
-
Click here…
EEDS ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ.
ಖಜಾನೆ-2 ಮತ್ತು H M R S. ತಂತ್ರಾಂಶ ಅಳವಡಿಸದಿರುವ ಕೆಲವು ಇಲಾಖೆಗಳ ನೌಕರರ ವೇತನದಿಂದ ಕಟಾಯಿಸಲಾದ ಸದಸ್ಯತ್ವ ಶುಲ್ಕದ ಮೊತ್ತವನ್ನು ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರಿಗೆ ಪಾವತಿಯಾಗುವಂತೆ ಚೆಕ್/ ಡಿಡಿ ಮೂಲಕ ನೀಡುವುದು ಎಂದು ಸೂಚಿಸಿತ್ತು.