ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಡಯಟ್‌ಗಳ ನೋಡಲ್ ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಕುರಿತು .

ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಡಯಟ್‌ಗಳ ನೋಡಲ್ ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಕುರಿತು.

ಡಯಟ್‌

ಡಯಟ್‌: ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ-07.11.2024 20 08.11.2024 ಮತ್ತು 14.11.2024 ರಿಂದ 15.11.2024 ರವರೆಗೆ ನಡೆದ ಕಾರ್ಯಾಗಾರದಲ್ಲಿ ಕೆಲವು ಡಯಟ್‌ಗಳ ನೋಡಲ್ ಅಧಿಕಾರಿಗಳು ಹಾಜರಾಗಿರುವುದಿಲ್ಲ. ‘ಆದ್ದರಿಂದ ಡಯಟ್‌ನ ಪ್ರಾಂಶುಪಾಲರುಗಳು ನೋಡಲ್ ಅಧಿಕಾರಿಗಳಮೂಖಾಂತರ ಈ ದಿನ ಕಾರ್ಯಾಗಾರದಲ್ಲಿ ನೀಡಿದ ಮಾಹಿತಿಗಳಾದ, ಸಮೀಕ್ಷೆ, ಮೇಲ್ವಿಚಾರಣೆ, ಮೌಲ್ಯಮಾಪನ, ಬೋಧಕರ ತರಬೇತಿ, ಫಲಿತಾಂಶ ಪ್ರಕಟಣೆ ಇತ್ಯಾದಿಗಳ ಮಾಹಿತಿಯನ್ನು ಪಡೆಯುವುದು ಹಾಗೂ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಬೇಕಾಗಿರುವುದರ ಜೊತೆಗೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

1. ಡಯಟ್‌ನ ವ್ಯಾಪ್ತಿಯ ತಾಲ್ಲೂಕುಗಳಲ್ಲಿನ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಹಂತದ ಚಟುವಟಿಕೆಗಳ ಸಂಪೂರ್ಣ ಮೇಲ್ವಿಚಾರಣೆ ಮತ್ತು ಅನುಪಾಲನೆ ನಡೆಸುವುದು.

2. ರಾಜ್ಯ ಹಂತದಿಂದ ನೀಡುವ ಸೂಚನೆಗಳಂತೆ ವರ್ಷದ ಅಂತ್ಯದಲ್ಲಿ ಅನಕ್ಷರಸ್ಥ ಕಲಿಕಾರ್ಥಿಗಳಿಗೆ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ಮುದ್ರಿಸಿ ರಕ್ಷಿಸುವ ಹಾಗೂ ತಾಲ್ಲೂಕು ಹಂತಕ್ಕೆ ವಿತರಣೆ ಮಾಡಿ ಮೌಲ್ಯಮಾಪನ ಮಾಡಿಸಿ, ಫಲಿತಾಂಶ ಪ್ರಕಟಣೆ ಮಾಡಿ, ರಾಜ್ಯ ಕಛೇರಿಗೆ ನೀಡುವುದು ಮತ್ತು ಮೌಲ್ಯಮಾಪನದ ದಾಖಲೆಗಳನ್ನು ರಕ್ಷಿಸುವ ಹಾಗೂ ಲೆಕ್ಕ ಪತ್ರಗಳ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಣೆ ಮಾಡುವುದು.

3. ಪರೀಕ್ಷಾ ಮೌಲ್ಯ ಮಾಪನಕ್ಕೆ ನಿಗಧಿಪಡಿಸಿರುವ ಅನುದಾನವನ್ನು ನಿಯಮಾನುಸಾರ ನಿರ್ವಹಣೆ ಮಾಡಬೇಕು. ಇದಕ್ಕೆ ಅವಶ್ಯಕವಿರುವ ಬ್ಯಾಂಕ್ ಖಾತೆಗಳ ನಿರ್ವಹಣೆ ಡಿ.ಎ.ಇ.ಓ ಮತ್ತು ಡಯಟ್ (ಶೈಕ್ಷಣಿಕ ಜಿಲ್ಲೆಗಳ ಡಯಟ್‌ಗಳೂ ಸೇರಿದಂತೆ) ಪ್ರಾಂಶುಪಾಲರು ಕಾರ್ಯವನ್ನು ಸಮನ್ವಯತೆಯಿಂದ ನಿರ್ವಹಣೆ ಮಾಡುವುದು.

4. ತಮ್ಮ ವ್ಯಾಪ್ತಿಯಲ್ಲಿನ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿನ ಬೋಧಕರಿಗೆ ತರಬೇತಿಯನ್ನು ನೀಡಲು ಎಂ.ಆ‌ರ್.ಪಿ ಗಳನ್ನು ಗುರುತಿಸಿ ನಿಯೋಜಿಸುವ ಹಾಗೂ ರಾಜ್ಯಹಂತ ತರಬೇತಿಯ ನಂತರ ಬೋಧಕರಿಗೆ ತರಬೇತಿಯನ್ನು ನೀಡುವ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಣೆ ಮಾಡುವುದು.

5. ಎಲ್ಲಾ ಡಯಟ್‌ನಲ್ಲಿ ಸಾಕ್ಷರತಾ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಅವರ ಮೂಲಕ ಕಾಲ ಕಾಲಕ್ಕೆ ಈ ಕಛೇರಿಯಿಂದ ನೀಡುವ ನೀಡುವ ನಿರ್ದೇಶನಗಳನ್ನು ಪಾಲಿಸುವುದು.

6. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಎಲ್ಲಾ ಸಾಕ್ಷರತಾ ಕಾರ್ಯಕ್ರಮಗಳ ಸಮಗ್ರ ಮಾಹಿತಿ ಪಡೆದು ಡಿ.ಎ.ಇ.ಓ ಅವರ ಸಹಯೋಗದೊಂದಿಗೆ ಸಾಕ್ಷರತೆಯ ವಿವಿಧ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.

7. ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಹಿರಿಯ/ಕಿರಿಯ ಉಪನ್ಯಾಸಕರನ್ನು ಮೇಲುಸ್ತುವಾರಿ ಅಧಿಕಾರಿಗಳೆಂದು ನೇಮಿಸುವುದು, ನೋಡಲ್ ಅಧಿಕಾರಿಗಳು ತಾಲ್ಲೂಕಿಗೆ ಹೋದಾಗ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡುವುದು.

8. ಶೈಕ್ಷಣಿಕ ನೋಡಲ್ ಅಧಿಕಾರಿಗಳಾದ ಹಿರಿಯ/ಕಿರಿಯ ಉಪನ್ಯಾಸಕರು ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಾಕ್ಷರತಾ ಕಾರ್ಯಕ್ರಮದ ಮೇಲುಸ್ತುವಾರಿ ಮಾಡುವುದು.

9. ಪ್ರಸಕ್ತ ವರ್ಷದಲ್ಲಿರುವ ಮೂರು ಸಾಕ್ಷರತಾ ಕಾರ್ಯಕ್ರಮಗಳ ಬಗ್ಗೆ : | ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪಾಲಕರಿಗೆ ಸಾಕ್ಷರತಾ ಕಾರ್ಯಕ್ರಮಗಳ ಬಗೆಗೆ ತಿಳಿಸುವುದು.
10. ಪ್ರಾಂಶುಪಾಲರು ಡಯಟ್ ಹಂತದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮತ್ತು ಸಾಕ್ಷರತಾ ತಾಲ್ಲೂಕು ನೋಡಲ್ ಅಧಿಕಾರಿಗಳ ಮಾಸಿಕ ಸಭೆಯನ್ನು ಕರೆದು ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡಿ ರಾಜ್ಯ ಕಚೇರಿಗೆ ವರದಿ ಮಾಡುವುದು.

ಕಾರ್ಯಾಗಾರದಲ್ಲಿ ನೀಡಿದ ಮಾರ್ಗದರ್ಶನದ ಅಂಶಗಳನ್ನು ಜಿಲ್ಲೆಗಳಲ್ಲಿ ತರಬೇತಿ ನೀಡುವಾಗ ಇದರಂತೆ ಕ್ರಮವಹಿಸಲು ತಿಳಿಸಿದೆ.

1. ರಾಜ್ಯದಲ್ಲಿ ಸಾಕ್ಷರತಾ ಕಾರ್ಯಕ್ರಮಗಳು ನಡೆದು ಬಂದ ದಾರಿ ಮೂಲಕ ಕಾರ್ಯಕ್ರಮಗಳ ಪರಿಚಯ ಮಾಡಿಸಿ ಪ್ರಾರಂಭಿಕ ಹಂತದಿಂದ ಪ್ರಸ್ತುತ ನಡೆಯುತ್ತಿರುವ ಕಾರ್ಯಕ್ರಮಗಳವರೆಗೆ ಅವುಗಳ ಮಹತ್ವಗಳನ್ನು ತಿಳಿಸಲಾಗಿದೆ.

2. ಅನಕ್ಷರಸ್ಥರಿಗೆ ಬೋಧಿಸುವ ಸಮಯದಲ್ಲಿ ಹಾಗೂ ಬೋಧಕರಿಗೆ ತರಬೇತಿಗಳನ್ನು ಆಯೋಜಿಸುವ ಸಂದರ್ಭದಲ್ಲಿ ಸಂವಹನ ಮತ್ತು ಭಾಷಣ ಕಲೆಗಳ ಮಹತ್ವವನ್ನು ತಿಳಿಸಲಾಗಿತ್ತು.

ಬುನಾದಿ ಸಾಕ್ಷರತಾ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಲು ಮಾರ್ಗದರ್ಶನ ನೀಡಲಾಯಿತು.

3. 4. ವಯಸ್ಕ ಅನಕ್ಷರಸ್ಥರ ಮನಸ್ಥಿತಿಯನ್ನು ಆಧರಿಸಿ ಕಲಿಕಾ ಕೇಂದ್ರಗಳನ್ನು ನಡೆಸಬೇಕಾದ ಮಹತ್ವವನ್ನು ತಿಳಿಸಲಾಯಿತು.

5. ಬಾಳಿಗೆ ಬೆಳಕು ಹಾಗೂ ಸವಿ ಬರಹ ಅಭ್ಯಾಸ ಪುಸ್ತಕ ಪರಿಷ್ಕರಿಸಿದ ಪ್ರಾಥಮಿಕೆಯ ಪರಿಚಯವನ್ನು ಮಾಡಿಕೊಡಲಾಯಿತು.

6. ಪ್ರಾಥಮಿಕೆಯ ವಿಶ್ಲೇಷಣೆ, ಬೋಧನಾ ವಿಧಾನಗಳು, ಬೋಧನಾ ಹಂತಗಳನ್ನು ಪ್ರಾಯೋಗಿಕವಾಗಿ ಬೋಧಿಸಲಾಯಿತು. ಜೊತೆಗೆ ಸಿದ್ಧಪಡಿಸಿದ ವೀಡಿಯೋ ಪಾಠ ಪ್ರದರ್ಶಿಸಲಾಯಿತು.

7. ಬಾಳಿಗೆ ಬೆಳಕು ಪ್ರಾಥಮಿಕೆ ಹಾಗೂ ಸವಿಬರಹ ಅಭ್ಯಾಸ ಪುಸ್ತಕಗಳನ್ನು ಬೋಧಿಸಲು ಅಗತ್ಯವಿರುವ ಕೌಶಲಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

8. ತರಬೇತಿಯಲ್ಲಿ ಹಾಗೂ ಕಲಿಕಾ ಕೇಂದ್ರಗಳನ್ನು ನಡೆಸುವಾಗ ವಹಿಸಬೇಕಾದ ನಾಯಕತ್ವ ಗುಣಗಳು, ಮತ್ತು ತಂಡದ ನಿರ್ವಹಣೆ ಮಾಡುವ ವಿವಿಧ ವಿಧಾನಗಳ ಪರಿಚಯ ಮಾಡಿಕೊಡಲಾಯಿತು.

9. ತಂಡಗಳ ಮೂಲಕ ಪ್ರಾತ್ಯಕ್ಷಿಕೆ ಪಾಠಗಳನ್ನು ಮಂಡನೆ ಮಾಡಿಸಲಾಯಿತು.

10. ವಯಸ್ಕರ ಕಲಿಕೆ ಹಾಗೂ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ವಿಧಾನದ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

11. ಕಲಿಕಾ ಕೇಂದ್ರಗಳನ್ನು ಹೇಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ಭಾಷೆ ಜೊತೆಗೆ ಲೆಕ್ಕಾಚಾರದ ಚಟುವಟಿಕೆಗಳನ್ನು ರೂಪಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.

12. ಜಿಲ್ಲಾ ಹಂತದಲ್ಲಿ ಬೋಧಕರಿಗೆ ತರಬೇತಿಯನ್ನು ಆಯೋಜಿಸಲು ತರಬೇತಿ ವಿನ್ಯಾಸ, ಸಾಕ್ಷರತಾ ಕಾರ್ಯಕ್ರಮಗಳ ರಿವೀಕ್ಷಣೆ, ಮತ್ತುಮೌಲ್ಯಮಾಪನಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

13. ಜಿಲ್ಲಾ ಹಂತದಲ್ಲಿ ತರಬೇತಿ ನೀಡುವಾಗ ಸಂಪನ್ಮೂಲ ವ್ಯಕ್ತಿಗಳು ಮತ್ತು ಮುಖ್ಯ ತರಬೇತುದಾರರ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಲಾಯಿತು.

14. ಜಿಲ್ಲಾ ಮಟ್ಟದಲ್ಲಿ ತರಬೇತಿಗೆ ಹಾಗೂ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿದ್ಧಪಡಿಸಬೇಕಾದ ಕ್ರಿಯಾಯೋಜನೆಯನ್ನು ರೂಪಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.

15. ಲೆಕ್ಕಪತ್ರ ನಿರ್ವಹಣೆ, ಖಜಾನೆ ಹಂತದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ನಿವಾರಣೆಗೆ ಲೆಕ್ಕಾಧಿಕಾರಿಗಳಿಂದ ಮಾಹಿತಿ ನೀಡಲಾಯಿತು.

16. ಮೌಲ್ಯಮಾಪನ ಕಾರ್ಯಕ್ಕೆ ಸಿದ್ಧಪಡಿಸಬೇಕಾದ ಪ್ರಶ್ನೆಪತ್ರಿಕೆಗಳ ಸಿದ್ದತೆ ಪರೀಕ್ಷೆಗಳನ್ನು ನಡೆಸುವುದು, ಮೌಲ್ಯಮಾಪನ ನಡೆಸುವುದು ಹಾಗೂ ಫಲಿತಾಂಶ ಪ್ರಕಟಣೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು.

17. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಡಯಟ್ ಹಂತದಲ್ಲಿ ಕಾರ್ಯಕ್ರಮಗಳ ಅಂಕಿಅಂಶಗಳನಿರ್ವಹಣೆ ಹಾಗೂ ಎರಡು ಕಛೇರಿಗಳ ಸಮನ್ವಯದೊಂದಿಗೆ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಮಾಡುವುದರ ಕುರಿತು ವಿವರವಾದ ಮಾಹಿತಿ ನೀಡಲಾಯಿತು.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಲಿಂಕ್ ಡಾಕ್ಯುಮೆಂಟ್, 1000 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರರ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡುವ ಕಾರ್ಯಕ್ರಮ ಹಾಗೂ ಉಲ್ಲಾಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತಮಗೆ ನಿಗದಿಪಡಿಸಿರುವ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಣೆ ಮತ್ತು ಜಿಲ್ಲಾ ಹಂತದಲ್ಲಿ ಸಿದ್ಧಪಡಿಸುವ ಕ್ರಿಯಾಯೋಜನೆಯನ್ನಾಧರಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮೇಲ್ಕಂಡ ಅಂಶಗಳನ್ನು ಪಾಲಿಸಲು ಹಾಗೂ ಯಶಸ್ವಿಗೊಳಿಸಲು ತಿಳಿಸಿದೆ.

Click here to download 

WhatsApp Group Join Now
Telegram Group Join Now

Leave a Comment