Egg( ಮೊಟ್ಟೆ): ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ ಮೊಟ್ಟೆ -2024.
Egg(ಮೊಟ್ಟೆ): ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ 6 ದಿನಗಳು ಮೊಟ್ಟೆ(Egg) ವಿತರಣೆ ಮಾಡುವ ಯೋಜನೆ ಜಾರಿಯಲ್ಲಿದೆ. ಆದರೆ, ಹೆಚ್ಚಿಗಿರುವ ಮೊಟ್ಟೆ(Egg) ಬೆಲೆಯಿಂದಾಗಿ ಶಾಲಾ ಮುಖ್ಯೋಪಾಧ್ಯಾಯರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಅನುದಾನ ಸಾಲದಾಗಿದೆ. ಹೀಗಾಗಿ, ಕೆಲವು ಶಾಲೆಗಳು ಮೊಟ್ಟೆಯ(Egg) ಸಂಖ್ಯೆಯನ್ನು ಕಡಿಮೆ ಮಾಡಿ, ಬಾಳೆಹಣ್ಣು ನೀಡುತ್ತಿವೆ. ಸರ್ಕಾರ ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ, ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಾರದಲ್ಲಿ 6 ದಿನಗಳು ಮೊಟ್ಟೆ (egg) ನೀಡುತ್ತಿದೆ. ಸರ್ಕಾರದ ಯೋಜನೆಯಿಂದ ಮಕ್ಕಳು ಖುಷಿಯಿಂದ ಮೊಟ್ಟೆ(Egg) ಸೇವಿಸುತ್ತಿದ್ದರೆ, ಆದರೆ ಮುಖ್ಯೋಪಾಧ್ಯಾಯರಿಗೆ ಮಾತ್ರ ಮೊಟ್ಟೆ ಖರೀದಿ ಮಾಡುವ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಾಗಿದ್ದರು ಕೂಡ ಸರ್ಕಾರ ಮಾತ್ರ ಅನುದಾನವನ್ನು ಹೆಚ್ಚಿಸದೇ ಇರುವುದು. ಹೀಗಾಗಿ ಮೊಟ್ಟೆ ಖರೀದಿ ಮಾಡುವ ಮುಖ್ಯೋಪಾಧ್ಯಾಯರ ತಲೆ ಬಿಸಿ ಹೆಚ್ಚಿಸುತ್ತಿದೆ.
Egg(ಮೊಟ್ಟೆ):ಶಾಲಾ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಮೊದಲು ವಾರದಲ್ಲಿ 2 ದಿನಗಳು ಮಾತ್ರ ಮೊಟ್ಟೆ(Egg)ಗಳನ್ನು ನೀಡಲಾಗುತ್ತಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್, ಸರ್ಕಾರದ ಜೊತೆ ಕೈಜೋಡಿಸಿದ್ದರಿಂದ, ಪ್ರಸುತ್ತ ವಾರದಲ್ಲಿ 6 ದಿನಗಳು ಕೂಡ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಬಹುತೇಕ ವಿದ್ಯಾರ್ಥಿಗಳು ಮೊಟ್ಟೆಯನ್ನು ಖುಷಿ ಖುಷಿಯಿಂದ ತಿನ್ನುತ್ತಿದ್ದಾರೆ. ಮೊಟ್ಟೆಗಳನ್ನು ತಿನ್ನದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚೆಕ್ಕಿ ನೀಡಲಾಗುತ್ತಿದೆ. ಮೊಟ್ಟೆ(Egg)ಗಳನ್ನು ನೀಡುತ್ತಿರುವುದಕ್ಕೆ ಯಾರ ವಿರೋಧವು ಇಲ್ಲಾ. ಆದರೆ ಮೊಟ್ಟೆ ವಿತರಣೆ ಇದೀಗ ಶಾಲೆಯ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟವನ್ನು ತರುತ್ತಿದೆ. ಏಕೆಂದರೆ ಮಾರುಕಟ್ಟೆಯಲ್ಲಿ ಇರುವ ಮೊಟ್ಟೆ ದರವೇ ಬೇರೆ. ಸರ್ಕಾರ ನೀಡುತ್ತಿರುವ ಮೊಟ್ಟೆ ಬೆಲೆ ಬೇರೆ.
ಸರ್ಕಾರ 1 ಮೊಟ್ಟೆಗೆ 5 ರೂಪಾಯಿ 24 ಪೈಸೆ ನೀಡಿದರೆ, ಅದನ್ನು ಸುಲಿಯಲು ಮತ್ತು ಬೇಯಿಸಲು 80 ಪೈಸೆ ಸೇರಿದಂತೆ ಪ್ರತಿ ಮೊಟ್ಟೆಗೆ 6 ರೂಪಾಯಿ. ನೀಡುತ್ತದೆ. ಆದರೆ ಇದು ಸಾಲದು ಅಂತಿದ್ದಾರೆ ಶಾಲೆಯ ಮುಖ್ಯೋಪಾಧ್ಯಾಯರು.
ಸದ್ಯ ಮಾರುಕಟೆಯಲ್ಲಿ 1 ಮೊಟ್ಟೆ(Egg)ಯ ಬೆಲೆ 6 ರಿಂದ 6.50 ಪೈಸೆಗೆ ಸಿಗುತ್ತಿದೆ. ಅದನ್ನು ಬೇಯಿಸಲು ಮತ್ತು ಸುಲಿಯುವ ಖರ್ಚು ಸೇರಿದರೆ 1 ಮೊಟ್ಟೆಗೆ 7ರಿಂದ 7.50 ಪೈಸೆ ಬೀಳುತ್ತಿದೆ. ಆದರೆ ಸರ್ಕಾರ 6 ರೂಪಾಯಿ ಮಾತ್ರ ನೀಡ್ತಿರೋದರಿಂದ, ಗುಣಮಟ್ಟದ ಮೊಟ್ಟೆಗಳನ್ನು ಖರೀದಿಸಿ ನೀಡಲು ತೊಂದರೆಯಾಗುತ್ತಿದೆಯಂತೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಅನೇಕ ಶಾಲೆಯ ಮುಖ್ಯೋಪಾಧ್ಯಾಯರು, ಮೊಟ್ಟೆ(Egg) ಬೆಲೆ ಹೆಚ್ಚಿಸುವಂತೆ ಡಿಡಿಪಿಐ ಮೂಲಕ ಸರ್ಕಾರಕ್ಕೆ ಮನವಿಯನ್ನು ಮೇಲಿಂದ ಮೇಲೆ ಸಲ್ಲಿಸುತ್ತಲೆ ಇದ್ದಾರೆ. ಆದರೆ ಸರ್ಕಾರ ಇದಕ್ಕೆ ಇದುವರೆಗೂ ಸ್ಪಂದಿಸಿಲ್ಲ.
ಹೀಗಾಗಿ ಜಿಲ್ಲೆಯ ಶಾಲೆಗಳಲ್ಲಿ ಆರು ದಿನ ಮೊಟ್ಟೆ ಬದಲಾಗಿ ನಾಲ್ಕು ದಿನ ಮಾತ್ರ ಮೊಟ್ಟೆ(Egg)ಗಳನ್ನು ನೀಡಿ, ಉಳಿದ ಎರಡು ದಿನ ಕೇವಲ ಬಾಳೆಹಣ್ಣು ನೀಡುತ್ತಿದ್ದಾರೆ. ಮೊಟ್ಟೆಗೆ ಖರ್ಚು ಮಾಡುತ್ತಿರುವ ಹೆಚ್ಚುವರಿ ಹಣವನ್ನು ಬಾಳೆಹಣ್ಣು ನೀಡಿ ಸರಿದೂಗಿಸಿಕೊಳ್ಳುತ್ತಿದ್ದಾರೆ. ಇದರಿಂದ ವಾರದಲ್ಲಿ ಆರು ದಿನ ಮೊಟ್ಟೆ ತಿನ್ನಬೇಕು ಅನ್ನೋ ಕೆಲ ಮಕ್ಕಳಿಗೆ ನಿರಾಸೆಯಾಗುತ್ತಿದೆ.
ಮೊಟ್ಟೆ(Egg)ಗಳನ್ನು ವಿತರಿಸುತ್ತಿರುವುದು ಮಕ್ಕಳ ಖುಷಿ ಹೆಚ್ಚಿಸಿದ್ದರೆ, ಮುಖ್ಯೋಪಾಧ್ಯಾಯರಿಗೆ ಮಾತ್ರ ಹಣ ಸರಿದೂಗಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಮಾರುಕಟ್ಟೆಯಲ್ಲಿ ಏರಿಳಿತವಾಗುತ್ತಿರುವ ಬೆಲೆಗೆ ಅನುಗುಣವಾಗಿ ಮೊಟ್ಟೆ( Egg) ಖರೀದಿ ಅನುದಾನವನ್ನು ಕೂಡ ನೀಡುವ ಕೆಲಸ ಮಾಡಬೇಕಿದೆ.
Egg (Motte): Government school principals faced financial hardship Egg-2024.
Egg: There is a plan to distribute eggs for 6 days to children in government and aided schools in Karnataka. However, school principals are facing financial difficulties due to the high price of eggs. A grant is a loan sanctioned by the government. Thus, some schools are reducing the number of eggs and serving bananas. The government has been urged to increase the subsidy according to the price rise.
With the aim of increasing nutrition among children, the government is providing eggs 6 days a week to state government and aided schools. Children are happily consuming eggs due to the government scheme, but they are facing difficulties in buying eggs only for the headmaster. The reason for this is that even though the price of eggs has increased in the market, the government has not increased the subsidy. Thus, the heads of the headmasters who buy eggs are getting hot.
Egg(ಮೊಟ್ಟೆ): Financial difficulties for school principals.
Earlier, students studying in class 1 to 10 in government and aided schools of the state were given eggs only 2 days a week. But for the past few months, Azim Premji Foundation has joined hands with the government, and now eggs are being distributed 6 days a week. Most of the students are happily eating the egg. Students who do not eat eggs are given banana or peanut check. There is no objection to giving eggs. But the egg distribution is now bringing financial hardship to the school headmaster. Because the price of eggs in the market is different. The price of eggs offered by the government is different.
- Read more…
2025-26 ನೇ ಸಾಲಿನ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ : ಬೇಕಾಗುವ ದಾಖಲೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
While the government pays 5 rupees 24 paise for 1 egg, 6 rupees per egg including 80 paise for peeling and cooking. gives But the headmaster of the school says that this is not enough.
At present, the price of 1 egg in the market is 6 to 6.50 paise. 7 to 7.50 paise for 1 egg if the cost of cooking and peeling it is included. But since the government is giving only 6 rupees, it seems that it is difficult to buy and provide quality eggs. Thus, many school headmasters of Koppal district have been submitting requests to the government through DDPI to increase the price of eggs. But the government has not yet responded to this.
Therefore, instead of eggs for six days in the schools of the district, eggs are given only for four days and only bananas are given for the remaining two days. They are compensating the extra money spent on eggs by giving them bananas. Because of this, some children are disappointed that they have to eat eggs six days a week.
While the distribution of eggs has increased the children’s happiness, the headmaster is struggling to make ends meet. Therefore, the government should also work to provide subsidy for the purchase of eggs according to the fluctuating prices in the market.