UPSC IAS Notification:ಕೇಂದ್ರ ಲೋಕಸೇವಾ ಆಯೋಗದ 979 ಹುದ್ದೆಗೆ ಅರ್ಜಿ ಆಹ್ವಾನ-2025.

UPSC IAS Notification:ಕೇಂದ್ರ ಲೋಕಸೇವಾ ಆಯೋಗದ 979 ಹುದ್ದೆಗೆ ಅರ್ಜಿ ಆಹ್ವಾನ-2025.

UPSC

UPSC IAS Notification:ಕೇಂದ್ರ ಲೋಕಸೇವಾ ಆಯೋಗದ ತನ್ನ 2025 ನೇ ಸಾಲಿನ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಾರ, ನಾಗರೀಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿವಿಧ ಪದವಿಗಳನ್ನು ಪಾಸ್‌ ಮಾಡಿದವರು, ಅಂತಿಮ ವರ್ಷದಲ್ಲಿ ಓದುತ್ತಿರುವವರು,UPSC ಪರೀಕ್ಷೆಗಳಲ್ಲಿ ಆಸಕ್ತಿ ಇದ್ದಲ್ಲಿ IAS, IPS, ಇತರೆ ನಾಗರೀಕ ಸೇವೆಗಳ ಹುದ್ದೆಗೆ ಸೇರಲು ಈ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

2025ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ( UPSC) ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಾರ, ಇಂದು (ಜನವರಿ 22, 2025) UPSC ನಾಗರೀಕ ಸೇವೆಗಳ ಪ್ರಿಲಿಮ್ಸ್‌ ಪರೀಕ್ಷಾ ಅಧಿಸೂಚನೆ ಬಿಡುಗಡೆ ಆಗಿದೆ. ಈ ಹುದ್ದೆಗಳಿಗೆ ಪದವಿ ಪಾಸಾದವರು, ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವವರು ಸಹ ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು. ಈ ಸಾಲಿನ CSE ಪರೀಕ್ಷೆ ಮೂಲಕ ಎಷ್ಟು ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂಬುದನ್ನು ಹಾಗೂ ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಕೇಂದ್ರ ಲೋಕಸೇವಾ ಆಯೋಗದ( UPSC) ಐಎಎಸ್‌, ಐಪಿಎಸ್‌, ಇತರೆ ಗ್ರೂಪ್‌ A, ಗ್ರೂಪ್‌ B ನಾಗರೀಕ ಸೇವೆಗಳಿಗೆ ಸೇರ ಬಯಸುವವರು, ಅರ್ಜಿ ಹಾಕಲು ಬೇಕಾದ ಸಂಪೂಣ೯ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳಿ.

ನೇಮಕಾತಿ ಪರೀಕ್ಷಾ ಪ್ರಾಧಿಕಾರ : ಕೇಂದ್ರ ಲೋಕಸೇವಾ ಆಯೋಗ( UPSC).
• ಪರೀಕ್ಷೆ ಹೆಸರು : UPSC ಸಿವಿಲ್ ಸರ್ವೀಸೆಸ್ ಪ್ರಿಲಿಮ್ಸ್‌ ಪರೀಕ್ಷೆ 2025.
• ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ: 979.

ಶೈಕ್ಷಣಿಕ ವಿದ್ಯಾರ್ಹತೆ.

ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಯಾವುದೇ ವಿಷಯ / ವಿಭಾಗದಲ್ಲಿ ಪದವಿ ಪಾಸ್ ಮಾಡಿರಬೇಕು. ಅಂತಿಮ ಪದವಿ ಓದುತ್ತಿರುವವರು ಸಹ ಅರ್ಜಿ ಹಾಕಬಹುದು. ಆದರೆ ಮೇನ್ಸ್‌ ಪರೀಕ್ಷೆ ಅರ್ಜಿ ವೇಳೆ ಪದವಿ ಪಾಸ್‌ ಸರ್ಟಿಫಿಕೇಟ್‌ ಸಬ್‌ಮಿಟ್‌ ಮಾಡಬೇಕಿರುತ್ತದೆ.

ವಯೋಮಿತಿ.

ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
• ಇತರೆ ಹಿಂದುಳಿದ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಅನ್ವಯಿಸಲಿದೆ.

UPSC ಸಿಎಸ್‌ಇ ಪೂರ್ವಭಾವಿ ಪರೀಕ್ಷೆ 2025 ಸಂಬಂಧಿತ ಪ್ರಮುಖ ದಿನಾಂಕಗಳು.

• ಸಿಎಸ್‌ಇ ಪೂರ್ವಭಾವಿ ಪರೀಕ್ಷೆ 2025 ಅಧಿಸೂಚನೆ ದಿನಾಂಕ – 22-01-2025.
• ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ –22-01-2025.
• ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 11-02-2025 (18-00 PM).
• ಅರ್ಜಿ ತಿದ್ದುಪಡಿಗೆ ಅವಕಾಶ –12-02-2025 ರಿಂದ 18-02-2025
• UPSC ಪೂರ್ವಭಾವಿ ಪರೀಕ್ಷೆ 2025 ದಿನಾಂಕ – 25-05-2025.

ಅರ್ಜಿ ಶುಲ್ಕ.

• UPSC ಪೂರ್ವಭಾವಿ ಪರೀಕ್ಷೆ 2025 ರಿಜಿಸ್ಟ್ರೇಷನ್‌ ಶುಲ್ಕ ರೂ.100.
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಹಿಳಾ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

UPSC ಸಿಎಸ್‌ಇ ಪರೀಕ್ಷೆಗಳನ್ನು ಯಾವ ಕೆಟಗರಿಯವರು ಎಷ್ಟು ಬಾರಿ ಬರೆಯಬಹುದು ಎಂಬುದರ ಮಾಹಿತಿ ಕೆಳಗಿನಂತಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು : 6
• ಹಿಂದುಳಿದ ವರ್ಗಗಳ ಅಭ್ಯರ್ಥಿಗಳು: 9
• ಪರಿಶಿಷ್ಟ ಜಾತಿ ಅಭ್ಯರ್ಥಿಗಳು: ಗರಿಷ್ಠ ವಯೋಮಿತಿ ವರೆಗೆ ಅನಿಯಮಿತ.
• ಪರಿಶಿಷ್ಟ ಪಂಗಡ ಅಭ್ಯರ್ಥಿಗಳು: ಗರಿಷ್ಠ ವಯೋಮಿತಿ ವರೆಗೆ ಅನಿಯಮಿತ
• ರಕ್ಷಣಾ ಸೇವೆಗಳ ಸಿಬ್ಬಂದಿಗಳು: 9
• ಮಾಜಿ ಸೈನಿಕ ಅಭ್ಯರ್ಥಿಗಳು: 9
• ದಿವ್ಯಾಂಗ ಅಭ್ಯರ್ಥಿಗಳು: 9

WEBSITE LINK – CLICK HERE.

WhatsApp Group Join Now
Telegram Group Join Now