Mysore Division Karnataka 2026: ಮೈಸೂರು ವಿಭಾಗ ಅಧ್ಯಾಯ 1.2 | GPSTR 1,2,3,5 ಅಂಕ ಪ್ರಶ್ನೋತ್ತರಗಳು

Mysore Division Karnataka 2026: ಮೈಸೂರಿನ ರಾಜಕೀಯ ಇತಿಹಾಸವು ಗಂಗ ವಂಶದ ಕಾಲದಿಂದ ಸ್ಪಷ್ಟವಾಗಿ ಆರಂಭವಾಗುತ್ತದೆ. ಗಂಗರ ರಾಜಧಾನಿ ತಲಕಾಡಾಗಿತ್ತು. ನಂತರ ಚೋಳರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದ ಅರಸರು ಮೈಸೂರು ಪ್ರದೇಶವನ್ನು ಆಳ್ವಿಕೆ ನಡೆಸಿದರು.

ಮೈಸೂರು ಹಲವು ಶತಮಾನಗಳ ಕಾಲ ಒಡೆಯರ್ ಮನೆತನದ ಆಡಳಿತದಲ್ಲಿತ್ತು. ಕೆಲವು ವರ್ಷಗಳ ಕಾಲ ಈ ಪ್ರದೇಶ ಹೈದರಾಲಿ ಮತ್ತು ಅವರ ಮಗ ಟಿಪ್ಪುಸುಲ್ತಾನ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ಇತಿಹಾಸ ಮತ್ತು ಪೌರಾಣಿಕ ಕತೆಗಳ ಪ್ರಕಾರ ಮೈಸೂರನ್ನು “ಮಹಿಷನಾಡು” ಎಂದು ಕರೆಯಲಾಗುತ್ತಿತ್ತು. ಪುರಾಣದ ಪ್ರಕಾರ ದೇವಿ ಪಾರ್ವತಿ ಚಾಮುಂಡೇಶ್ವರಿಯ ರೂಪದಲ್ಲಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಿದಳು. ಆ ಘಟನೆಯು ನಡೆದ ಸ್ಥಳವೇ ನಂತರ ಮೈಸೂರು ಎಂದು ಪ್ರಸಿದ್ಧಿಯಾಯಿತು.(Mysore Division Karnataka 2026)

ಒಡೆಯರ್ ಮನೆತನದ ಮೊದಲ ಅರಸನು ಯದುರಾಯ. ಚಿಕ್ಕದೇವರಾಜ ಒಡೆಯರ್ ಪ್ರಸಿದ್ಧ ಆಡಳಿತಗಾರರಾಗಿದ್ದರು. ಅವರ ನಂತರ ಸಿಂಹಾಸನಕ್ಕೆ ಬಂದ ಕೆಲ ಅರಸರು ದುರ್ಬಲರಾಗಿದ್ದರು. ಆ ಸಂದರ್ಭದಲ್ಲಿ ಸೇನಾಧಿಪತಿಯಾಗಿದ್ದ ಹೈದರಾಲಿ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡನು. ಹೈದರಾಲಿ ಮತ್ತು ಅವನ ಮಗ ಟಿಪ್ಪುಸುಲ್ತಾನ್ 1761ರಿಂದ 1799ರವರೆಗೆ ಮೈಸೂರು ರಾಜ್ಯವನ್ನು ಆಳಿದರು. ಟಿಪ್ಪುಸುಲ್ತಾನ್ ಬ್ರಿಟೀಷರ ವಿರುದ್ಧ ಅನೇಕ ಯುದ್ಧಗಳನ್ನು ನಡೆಸಿದರು. ಕೊನೆಗೆ 1799ರಲ್ಲಿ ಬ್ರಿಟೀಷರೊಂದಿಗೆ ನಡೆದ ಯುದ್ಧದಲ್ಲಿ ಟಿಪ್ಪುಸುಲ್ತಾನ್ ವೀರಮರಣ ಹೊಂದಿದರು.

Mysore Division Karnataka 2026: ಮೈಸೂರು ವಿಭಾಗ – GPSTR 1 ಅಂಕಗಳ ಪ್ರಶ್ನೋತ್ತರಗಳು

1. ಪ್ರಶ್ನೆ: ಮೈಸೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ?
ಉತ್ತರ: 8 ಜಿಲ್ಲೆಗಳು.

2. ಪ್ರಶ್ನೆ: ಮೈಸೂರು ವಿಭಾಗದ ಆಡಳಿತ ಕೇಂದ್ರ ಯಾವುದು?
ಉತ್ತರ: ಮೈಸೂರು.

3. ಪ್ರಶ್ನೆ: ಮೈಸೂರು ವಿಭಾಗದ ಒಂದು ಕರಾವಳಿ ಜಿಲ್ಲೆಯನ್ನು ಹೇಳಿ.
ಉತ್ತರ: ಉಡುಪಿ / ದಕ್ಷಿಣ ಕನ್ನಡ.

4. ಪ್ರಶ್ನೆ: ಗಂಗರ ರಾಜಧಾನಿ ಯಾವುದು?
ಉತ್ತರ: ತಲಕಾಡು.

5. ಪ್ರಶ್ನೆ: ಮೈಸೂರು ಪ್ರದೇಶವನ್ನು ಪುರಾಣಗಳಲ್ಲಿ ಏನೆಂದು ಕರೆಯಲಾಗುತ್ತಿತ್ತು?
ಉತ್ತರ: ಮಹಿಷನಾಡು.

6. ಪ್ರಶ್ನೆ: ಒಡೆಯರ್ ಮನೆತನದ ಮೊದಲ ಅರಸು ಯಾರು?
ಉತ್ತರ: ಯದುರಾಯ.

7. ಪ್ರಶ್ನೆ: ಮೈಸೂರಿನ ಪ್ರಸಿದ್ಧ ದೊರೆ ಯಾರು?
ಉತ್ತರ: ಚಿಕ್ಕದೇವರಾಜ ಒಡೆಯರ್.

8. ಪ್ರಶ್ನೆ: ಹೈದರಾಲಿಯ ಮಗ ಯಾರು?
ಉತ್ತರ: ಟಿಪ್ಪುಸುಲ್ತಾನ್.

9. ಪ್ರಶ್ನೆ: ಟಿಪ್ಪುಸುಲ್ತಾನ್ ಯಾವ ವರ್ಷದಲ್ಲಿ ಸಾವನ್ನಪ್ಪಿದರು?
ಉತ್ತರ: 1799.

10. ಪ್ರಶ್ನೆ: ಮೈಸೂರು ವಿಶ್ವವಿದ್ಯಾಲಯ ಯಾವ ವರ್ಷದಲ್ಲಿ ಸ್ಥಾಪಿತವಾಯಿತು?
ಉತ್ತರ: 1916.

11. ಪ್ರಶ್ನೆ: ಭಾರತದಲ್ಲಿ ಮೊದಲು ಕಾಫಿ ಬೆಳೆಯಲಾದ ಜಿಲ್ಲೆ ಯಾವುದು?
ಉತ್ತರ: ಚಿಕ್ಕಮಗಳೂರು.

12. ಪ್ರಶ್ನೆ: ಮೈಸೂರು ವಿಭಾಗದ ಪ್ರಮುಖ ನದಿ ಯಾವುದು?
ಉತ್ತರ: ಕಾವೇರಿ.

13. ಪ್ರಶ್ನೆ: ಕಾವೇರಿ ನದಿ ಯಾವ ಜಿಲ್ಲೆಯಲ್ಲಿ ಹುಟ್ಟುತ್ತದೆ?
ಉತ್ತರ: ಕೊಡಗು.

14. ಪ್ರಶ್ನೆ: ಮೈಸೂರು ವಿಭಾಗದ ಒಂದು ಪ್ರಸಿದ್ಧ ಜಲಪಾತ ಹೇಳಿ.
ಉತ್ತರ: ಗಗನಚುಕ್ಕಿ / ಭರಚುಕ್ಕಿ.

15. ಪ್ರಶ್ನೆ: ಮೈಸೂರು ವಿಭಾಗದ ಒಂದು ಪ್ರಸಿದ್ಧ ಬೆಟ್ಟ ಹೇಳಿ.
ಉತ್ತರ: ಚಾಮುಂಡಿ ಬೆಟ್ಟ.

16. ಪ್ರಶ್ನೆ: ಹುಲಿ ಸಂರಕ್ಷಣಾ ಪ್ರದೇಶದ ಒಂದು ಉದಾಹರಣೆ ಹೇಳಿ.
ಉತ್ತರ: ಬಂಡೀಪುರ.

17. ಪ್ರಶ್ನೆ: ನಾಗರಹೊಳೆ ಯಾವ ಪ್ರಕಾರದ ಪ್ರದೇಶವಾಗಿದೆ?
ಉತ್ತರ: ರಾಷ್ಟ್ರೀಯ ಉದ್ಯಾನ.

18. ಪ್ರಶ್ನೆ: ರಂಗನತಿಟ್ಟು ಯಾವ ರೀತಿಯ ಧಾಮವಾಗಿದೆ?
ಉತ್ತರ: ಪಕ್ಷಿಧಾಮ.

19. ಪ್ರಶ್ನೆ: ಮೈಸೂರು ಜಿಲ್ಲೆ ಯಾವ ಬೆಳೆಗಾಗಿ ಪ್ರಸಿದ್ಧ?
ಉತ್ತರ: ರೇಷ್ಮೆ.

20.ಪ್ರಶ್ನೆ: ಮಂಡ್ಯ ಜಿಲ್ಲೆ ಯಾವ ಬೆಳೆಗಾಗಿ ಪ್ರಸಿದ್ಧ?
ಉತ್ತರ: ಕಬ್ಬು.

21. ಪ್ರಶ್ನೆ: ಕೊಡಗು ಜಿಲ್ಲೆ ಯಾವ ಬೆಳೆಗೆ ಪ್ರಸಿದ್ಧ?
ಉತ್ತರ: ಕಾಫಿ.

22. ಪ್ರಶ್ನೆ: ಕರಾವಳಿ ಜಿಲ್ಲೆಗಳು ಯಾವ ಕಲೆಗೆ ಪ್ರಸಿದ್ಧ?
ಉತ್ತರ: ಯಕ್ಷಗಾನ.

23. ಪ್ರಶ್ನೆ: ಕರ್ನಾಟಕದ ರಾಷ್ಟ್ರಪ್ರಾಣಿ ಯಾವುದು?
ಉತ್ತರ: ಹುಲಿ.

24. ಪ್ರಶ್ನೆ: ಮೈಸೂರು ಅರಮನೆ ಯಾವ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿತು?
ಉತ್ತರ: ಕಲೆ ಮತ್ತು ಸಂಗೀತ.

25. ಪ್ರಶ್ನೆ: ಜ್ಞಾನಪೀಠ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡದ ಸಾಹಿತಿ ಯಾರು?
ಉತ್ತರ: ಶಿವರಾಮ ಕಾರಂತ.

26. ಪ್ರಶ್ನೆ: ಕನ್ನಡದ ಭಾವಗೀತೆಗಳ ಕವಿ ಯಾರು?
ಉತ್ತರ: ಕೆ.ಎಸ್. ನರಸಿಂಹಸ್ವಾಮಿ.

27. ಪ್ರಶ್ನೆ: ಶ್ರವಣಬೆಳಗೊಳ ಯಾವ ವಿಗ್ರಹಕ್ಕೆ ಪ್ರಸಿದ್ಧ?
ಉತ್ತರ: ಗೊಮ್ಮಟೇಶ್ವರ ವಿಗ್ರಹ.

28. ಪ್ರಶ್ನೆ: ಮೈಸೂರು ವಿಭಾಗದ ಪ್ರಸಿದ್ಧ ಉತ್ಸವ ಯಾವುದು?
ಉತ್ತರ: ಮೈಸೂರು ದಸರಾ.

29. ಪ್ರಶ್ನೆ: ಅತಿ ಹೆಚ್ಚು ಮಳೆಯಾಗುವ ಜಿಲ್ಲೆ ಯಾವುದು?
ಉತ್ತರ: ಉಡುಪಿ.

30. ಪ್ರಶ್ನೆ: ಅತಿ ಕಡಿಮೆ ಮಳೆಯಾಗುವ ಜಿಲ್ಲೆ ಯಾವುದು?
ಉತ್ತರ: ಮಂಡ್ಯ.

Mysore Division Karnataka 2026: ಮೈಸೂರು ವಿಭಾಗ – GPSTR 2 ಅಂಕಗಳ ಪ್ರಶ್ನೋತ್ತರಗಳು

1) ಮೈಸೂರು ವಿಭಾಗದ ಜಿಲ್ಲೆಗಳು ಯಾವುವು?
ಉತ್ತರ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕೊಡಗು.

2) ಮೈಸೂರು ವಿಭಾಗದ ಆಡಳಿತ ಕೇಂದ್ರ ಯಾವುದು?
ಉತ್ತರ: ಮೈಸೂರು ನಗರ ಮೈಸೂರು ವಿಭಾಗದ ಆಡಳಿತ ಕೇಂದ್ರವಾಗಿದೆ.

3) ಮೈಸೂರು ಪ್ರದೇಶವನ್ನು ಮಹಿಷನಾಡು ಎಂದು ಏಕೆ ಕರೆಯಲಾಗುತ್ತಿತ್ತು?
ಉತ್ತರ: ಪುರಾಣದ ಪ್ರಕಾರ ದೇವಿ ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹರಿಸಿದ ಸ್ಥಳವೇ ಮೈಸೂರು. ಆದ್ದರಿಂದ ಇದನ್ನು ಮಹಿಷನಾಡು ಎಂದು ಕರೆಯಲಾಗುತ್ತಿತ್ತು.

4) ಮೈಸೂರು ಸಂಸ್ಥಾನದ ಆಡಳಿತ ನಡೆಸಿದ ಪ್ರಮುಖ ಅರಸರು ಯಾರು?
ಉತ್ತರ: ಒಡೆಯರ್ ಮನೆತನದ ಅರಸರು, ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಮೈಸೂರು ಪ್ರದೇಶವನ್ನು ಆಳ್ವಿಕೆ ನಡೆಸಿದರು.

5) ಮೈಸೂರು ವಿಭಾಗದ ಪ್ರಮುಖ ನದಿಗಳನ್ನು ಹೇಳಿ.
ಉತ್ತರ: ಕಾವೇರಿ, ಹೇಮಾವತಿ, ಹಾರಂಗಿ, ನೇತ್ರಾವತಿ, ಕುಮಾರಧಾರ, ಕಪಿಲ ಮತ್ತು ಯಗಚಿ ಪ್ರಮುಖ ನದಿಗಳಾಗಿವೆ.

6) ಮೈಸೂರು ವಿಭಾಗದ ಪ್ರಮುಖ ಪರ್ವತಗಳನ್ನು ಹೇಳಿ.
ಉತ್ತರ: ಮುಳ್ಳಯ್ಯನಗಿರಿ, ಚಾಮುಂಡಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಸುಬ್ರಹ್ಮಣ್ಯ ಬೆಟ್ಟ ಮುಂತಾದವು ಪ್ರಮುಖ ಪರ್ವತಗಳು.

7) ಮೈಸೂರು ವಿಭಾಗದ ಪ್ರಸಿದ್ಧ ಜಲಪಾತಗಳನ್ನು ಹೇಳಿ.
ಉತ್ತರ: ಗಗನಚುಕ್ಕಿ–ಭರಚುಕ್ಕಿ ಜಲಪಾತ, ಅಬ್ಬೆ ಜಲಪಾತ, ಇರ್ಪು ಜಲಪಾತ, ಹೆಬ್ಬೆ ಜಲಪಾತ ಪ್ರಸಿದ್ಧವಾಗಿವೆ.

8) ಮೈಸೂರು ವಿಭಾಗದ ಪ್ರಮುಖ ಅರಣ್ಯ ಪ್ರದೇಶಗಳನ್ನು ಹೇಳಿ.
ಉತ್ತರ: ಬಂಡೀಪುರ, ನಾಗರಹೊಳೆ, ಪುಷ್ಪಗಿರಿ ಮತ್ತು ಮಲೈಮಹದೇಶ್ವರ ಬೆಟ್ಟ ಪ್ರಮುಖ ಅರಣ್ಯ ಪ್ರದೇಶಗಳಾಗಿವೆ.

9) ಮೈಸೂರು ವಿಭಾಗದಲ್ಲಿ ಬೆಳೆಯುವ ಪ್ರಮುಖ ಬೆಳೆಗಳನ್ನು ಹೇಳಿ.
ಉತ್ತರ: ಭತ್ತ, ರಾಗಿ, ಜೋಳ, ಉದ್ದು, ಹೆಸರು ಮುಖ್ಯ ಆಹಾರ ಬೆಳೆಗಳು. ಕಾಫಿ, ಕಬ್ಬು, ಅಡಕೆ, ತಂಬಾಕು, ಗೋಡಂಬಿ ಪ್ರಮುಖ ವಾಣಿಜ್ಯ ಬೆಳೆಗಳು.

10) ಮೈಸೂರು ವಿಭಾಗದ ಪ್ರಮುಖ ನೀರಾವರಿ ಯೋಜನೆಗಳನ್ನು ಹೇಳಿ.
ಉತ್ತರ: ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ನೀರಾವರಿ ಯೋಜನೆಗಳು ಪ್ರಮುಖವಾಗಿವೆ.

11) ಮೈಸೂರು ವಿಭಾಗದ ಪ್ರಸಿದ್ಧ ಕೈಗಾರಿಕಾ ಕೇಂದ್ರಗಳನ್ನು ಹೇಳಿ.
ಉತ್ತರ: ಮೈಸೂರು, ಮಂಗಳೂರು, ಹಾಸನ, ಚಿಕ್ಕಮಗಳೂರು, ಮಂಡ್ಯ ಮತ್ತು ಮಡಿಕೇರಿ ಪ್ರಮುಖ ಕೈಗಾರಿಕಾ ಕೇಂದ್ರಗಳಾಗಿವೆ.

12) ಮೈಸೂರು ವಿಭಾಗದ ಪ್ರಮುಖ ಜನಪದ ಕಲೆಗಳನ್ನು ಹೇಳಿ.
ಉತ್ತರ: ಯಕ್ಷಗಾನ, ಕಂಸಾಳೆ ಕುಣಿತ, ವೀರಗಾಸೆ ಕುಣಿತ, ಪಟ ಕುಣಿತ ಮುಂತಾದವು ಪ್ರಮುಖ ಜನಪದ ಕಲೆಗಳು.

13) ಮೈಸೂರು ವಿಭಾಗದ ಪ್ರಮುಖ ಪಕ್ಷಿಧಾಮವನ್ನು ಹೇಳಿ.
ಉತ್ತರ: ರಂಗನತಿಟ್ಟು ಪಕ್ಷಿಧಾಮ ಪ್ರಸಿದ್ಧವಾಗಿದೆ.

14) ಮೈಸೂರು ವಿಭಾಗದ ಪ್ರಮುಖ ರಾಷ್ಟ್ರೀಯ ಉದ್ಯಾನಗಳು ಯಾವುವು?
ಉತ್ತರ: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ಪ್ರಮುಖವಾಗಿವೆ.

15) ಮೈಸೂರು ವಿಭಾಗದ ಶಿಕ್ಷಣ ಕ್ಷೇತ್ರದ ಪ್ರಮುಖ ಸಂಸ್ಥೆಗಳನ್ನು ಹೇಳಿ.
ಉತ್ತರ: ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಸಿಎಫ್‌ಟಿಆರ್‌ಐ ಪ್ರಮುಖ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಾಗಿವೆ.

Mysore Division Karnataka 2026: ಮೈಸೂರು ವಿಭಾಗ – GPSTR 3 ಅಂಕಗಳ ಪ್ರಶ್ನೋತ್ತರಗಳು

1) ಮೈಸೂರು ವಿಭಾಗದ ಜಿಲ್ಲೆಗಳ ಬಗ್ಗೆ ಬರೆಯಿರಿ.

  ಉತ್ತರ: ಮೈಸೂರು ವಿಭಾಗವು ಕರ್ನಾಟಕದ ಪ್ರಮುಖ ಆಡಳಿತ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಟ್ಟು 8 ಜಿಲ್ಲೆಗಳಿವೆ. ಅವುಗಳು: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕೊಡಗು. ಈ ವಿಭಾಗದ ಆಡಳಿತ ಕೇಂದ್ರ ಮೈಸೂರು ನಗರವಾಗಿದೆ.

2) ಮೈಸೂರು ವಿಭಾಗದ ಚಾರಿತ್ರಿಕ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

  ಉತ್ತರ: ಮೈಸೂರು ಪ್ರದೇಶದ ಇತಿಹಾಸ ಗಂಗರ ಕಾಲದಿಂದ ಆರಂಭವಾಗುತ್ತದೆ. ತಲಕಾಡು ಗಂಗರ ರಾಜಧಾನಿಯಾಗಿತ್ತು. ನಂತರ ಚೋಳರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಅರಸರು ಆಡಳಿತ ನಡೆಸಿದರು. ಅನೇಕ ವರ್ಷಗಳ ಕಾಲ ಒಡೆಯರ್ ಮನೆತನವು ಮೈಸೂರನ್ನು ಆಳಿತು. ಕೆಲವು ವರ್ಷಗಳ ಕಾಲ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಆಡಳಿತ ನಡೆಸಿದರು. ಟಿಪ್ಪುಸುಲ್ತಾನ್ 1799ರಲ್ಲಿ ಬ್ರಿಟೀಷರ ವಿರುದ್ಧದ ಯುದ್ಧದಲ್ಲಿ ಸಾವನ್ನಪ್ಪಿದರು.

3) ಮೈಸೂರು ವಿಭಾಗದ ಪ್ರಾಕೃತಿಕ ಸಂಪನ್ಮೂಲಗಳನ್ನು ವಿವರಿಸಿ.

  ಉತ್ತರ: ಮೈಸೂರು ವಿಭಾಗವು ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾಗಿದೆ. ಇಲ್ಲಿ ಪರ್ವತಗಳು, ದಟ್ಟ ಅರಣ್ಯಗಳು, ನದಿಗಳು ಮತ್ತು ಕರಾವಳಿ ಪ್ರದೇಶಗಳಿವೆ. ಪ್ರಮುಖ ನದಿಗಳೆಂದರೆ ಕಾವೇರಿ, ಹೇಮಾವತಿ, ನೇತ್ರಾವತಿ, ಕುಮಾರಧಾರ ಮುಂತಾದವು. ಅರಣ್ಯಗಳಲ್ಲಿ ತೇಗ, ಶ್ರೀಗಂಧ, ಹೊಂಗೆ ಮುಂತಾದ ಮರಗಳು ಬೆಳೆಯುತ್ತವೆ. ಜೊತೆಗೆ ಬಾಕ್ಸೈಟ್, ಕ್ರೋಮೈಟ್, ಗ್ರಾನೈಟ್ ಮುಂತಾದ ಖನಿಜ ಸಂಪತ್ತು ದೊರೆಯುತ್ತದೆ.

4) ಮೈಸೂರು ವಿಭಾಗದ ಅರಣ್ಯ ಮತ್ತು ವನ್ಯಮೃಗಗಳ ಬಗ್ಗೆ ಬರೆಯಿರಿ.

  ಉತ್ತರ: ಮೈಸೂರು ವಿಭಾಗವು ದಟ್ಟ ಅರಣ್ಯಗಳಿಗೆ ಪ್ರಸಿದ್ಧವಾಗಿದೆ. ಕೊಡಗು, ಚಿಕ್ಕಮಗಳೂರು, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಶಾಲ ಅರಣ್ಯ ಪ್ರದೇಶಗಳಿವೆ. ಇಲ್ಲಿ ಹುಲಿ, ಆನೆ, ಚಿರತೆ, ಜಿಂಕೆ ಮುಂತಾದ ವನ್ಯಮೃಗಗಳು ಕಂಡುಬರುತ್ತವೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳು ಪ್ರಮುಖವಾಗಿವೆ. ರಂಗನತಿಟ್ಟು ಪ್ರಸಿದ್ಧ ಪಕ್ಷಿಧಾಮವಾಗಿದೆ.

5) ಮೈಸೂರು ವಿಭಾಗದ ಕೃಷಿಯ ಬಗ್ಗೆ ವಿವರಿಸಿ.

  ಉತ್ತರ: ಮೈಸೂರು ವಿಭಾಗದಲ್ಲಿ ಕೃಷಿಯು ಪ್ರಮುಖ ಉದ್ಯೋಗವಾಗಿದೆ. ಇಲ್ಲಿ ವಿವಿಧ ಹವಾಮಾನ ಇರುವುದರಿಂದ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಖ್ಯ ಆಹಾರ ಬೆಳೆಗಳೆಂದರೆ ಭತ್ತ, ರಾಗಿ, ಜೋಳ, ಉದ್ದು, ಹೆಸರು. ವಾಣಿಜ್ಯ ಬೆಳೆಗಳೆಂದರೆ ಕಾಫಿ, ಕಬ್ಬು, ಅಡಕೆ, ತಂಬಾಕು, ಗೋಡಂಬಿ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರತದಲ್ಲಿ ಮೊದಲು ಕಾಫಿ ಬೆಳೆಯಲಾಯಿತು.

6) ಮೈಸೂರು ವಿಭಾಗದ ಕಲೆ ಮತ್ತು ಸಂಸ್ಕೃತಿಯನ್ನು ವಿವರಿಸಿ.

  ಉತ್ತರ: ಮೈಸೂರು ವಿಭಾಗವು ಕಲೆ ಮತ್ತು ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಮೈಸೂರು ನಗರವನ್ನು ಕಲೆಯ ತವರೂರು ಎಂದು ಕರೆಯುತ್ತಾರೆ. ಕರಾವಳಿ ಜಿಲ್ಲೆಗಳು ಯಕ್ಷಗಾನ ಕಲೆಗೆ ಪ್ರಸಿದ್ಧವಾಗಿವೆ. ಕಂಸಾಳೆ ಕುಣಿತ, ವೀರಗಾಸೆ ಕುಣಿತ, ಪಟ ಕುಣಿತ ಮುಂತಾದ ಜನಪದ ಕಲೆಗಳು ಜನಪ್ರಿಯವಾಗಿವೆ. ಮೈಸೂರು ಅರಮನೆ ಸಂಗೀತ ಮತ್ತು ನೃತ್ಯಗಳಿಗೆ ಪ್ರೋತ್ಸಾಹ ನೀಡಿದೆ.

7) ಮೈಸೂರು ವಿಭಾಗದ ಶಿಕ್ಷಣ ಕ್ಷೇತ್ರದ ಬಗ್ಗೆ ಬರೆಯಿರಿ.

  ಉತ್ತರ: ಮೈಸೂರು ವಿಭಾಗವು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಮೈಸೂರು ವಿಶ್ವವಿದ್ಯಾಲಯ 1916ರಲ್ಲಿ ಸ್ಥಾಪನೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಮೈಸೂರು ನಗರದಲ್ಲಿ ಸಿಎಫ್‌ಟಿಆರ್‌ಐ ಎಂಬ ಆಹಾರ ಸಂಶೋಧನಾ ಸಂಸ್ಥೆಯಿದೆ.

8) ಮೈಸೂರು ವಿಭಾಗದ ಪ್ರವಾಸೋದ್ಯಮ ಮಹತ್ವವನ್ನು ವಿವರಿಸಿ.
 
ಉತ್ತರ: ಮೈಸೂರು ವಿಭಾಗವು ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿದೆ. ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ, ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತವೆ.

Mysore Division Karnataka 2026: ಮೈಸೂರು ವಿಭಾಗ – GPSTR 5 ಅಂಕಗಳ ಪ್ರಶ್ನೋತ್ತರಗಳು

1) ಮೈಸೂರು ವಿಭಾಗದ ಚಾರಿತ್ರಿಕ ಹಿನ್ನೆಲೆಯನ್ನು ವಿವರಿಸಿ.

  ಉತ್ತರ: ಮೈಸೂರು ವಿಭಾಗದ ಇತಿಹಾಸ ಗಂಗರ ಕಾಲದಿಂದ ಆರಂಭವಾಗುತ್ತದೆ. ತಲಕಾಡು ಗಂಗರ ರಾಜಧಾನಿಯಾಗಿತ್ತು. ನಂತರ ಚೋಳರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಅರಸರು ಈ ಪ್ರದೇಶವನ್ನು ಆಳ್ವಿಕೆ ನಡೆಸಿದರು. ಅನೇಕ ಶತಮಾನಗಳ ಕಾಲ ಮೈಸೂರು ಒಡೆಯರ್ ಮನೆತನದ ಆಡಳಿತದಲ್ಲಿತ್ತು. ಯದುರಾಯ ಒಡೆಯರ್ ಮನೆತನದ ಮೊದಲ ಅರಸನಾಗಿದ್ದರು. ಚಿಕ್ಕದೇವರಾಜ ಒಡೆಯರ್ ಪ್ರಸಿದ್ಧ ದೊರೆಯಾಗಿದ್ದರು.
ನಂತರ ಸೇನಾಧಿಪತಿಯಾಗಿದ್ದ ಹೈದರಾಲಿ ಮೈಸೂರಿನ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡನು. ಅವನ ನಂತರ ಅವನ ಮಗ ಟಿಪ್ಪುಸುಲ್ತಾನ್ ಆಡಳಿತ ನಡೆಸಿದರು. ಟಿಪ್ಪುಸುಲ್ತಾನ್ ಬ್ರಿಟೀಷರ ವಿರುದ್ಧ ಅನೇಕ ಯುದ್ಧಗಳನ್ನು ನಡೆಸಿ 1799ರಲ್ಲಿ ಯುದ್ಧದಲ್ಲಿ ಸಾವನ್ನಪ್ಪಿದರು. ನಂತರ ಮೈಸೂರು ಮತ್ತೆ ಒಡೆಯರ್ ಮನೆತನದ ಆಡಳಿತಕ್ಕೆ ಮರಳಿತು. ಬ್ರಿಟೀಷರು 1831ರಲ್ಲಿ ನೇರ ಆಡಳಿತ ನಡೆಸಿದರು. 1881ರಲ್ಲಿ ಮತ್ತೆ ಒಡೆಯರ್‌ಗಳಿಗೆ ಆಡಳಿತ ನೀಡಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬಂದಿತು. 1947ರಲ್ಲಿ ಸ್ವಾತಂತ್ರ್ಯ ನಂತರ ಮೈಸೂರು ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನವಾಯಿತು.

2) ಮೈಸೂರು ವಿಭಾಗದ ಪ್ರಾಕೃತಿಕ ಸಂಪನ್ಮೂಲಗಳನ್ನು ವಿವರಿಸಿ.

  ಉತ್ತರ: ಮೈಸೂರು ವಿಭಾಗವು ವಿವಿಧ ಪ್ರಾಕೃತಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಇಲ್ಲಿ ಪರ್ವತಗಳು, ದಟ್ಟ ಅರಣ್ಯಗಳು, ನದಿಗಳು ಮತ್ತು ಕರಾವಳಿ ಪ್ರದೇಶಗಳಿವೆ. ಈ ವಿಭಾಗದ ಪ್ರಮುಖ ನದಿಗಳೆಂದರೆ ಕಾವೇರಿ, ಹೇಮಾವತಿ, ಹಾರಂಗಿ, ನೇತ್ರಾವತಿ, ಕುಮಾರಧಾರ, ಕಪಿಲ ಮತ್ತು ಯಗಚಿ.
ಸುಬ್ರಹ್ಮಣ್ಯ ಬೆಟ್ಟ, ಮುಳ್ಳಯ್ಯನಗಿರಿ, ಚಾಮುಂಡಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಮುಂತಾದ ಪರ್ವತಗಳು ಇಲ್ಲಿ ಕಂಡುಬರುತ್ತವೆ. ಅರಣ್ಯಗಳಲ್ಲಿ ತೇಗ, ಶ್ರೀಗಂಧ, ಹೊಂಗೆ ಮುಂತಾದ ಮರಗಳು ಬೆಳೆಯುತ್ತವೆ. ಜೇನುತುಪ್ಪ, ಮೇಣ ಮತ್ತು ಗೋಂದು ಮುಂತಾದ ಕಿರು ಅರಣ್ಯ ಉತ್ಪನ್ನಗಳು ದೊರೆಯುತ್ತವೆ.
ಈ ವಿಭಾಗದಲ್ಲಿ ಬಾಕ್ಸೈಟ್, ಕ್ರೋಮೈಟ್, ಸುಣ್ಣಕಲ್ಲು, ಗ್ರಾನೈಟ್, ಮ್ಯಾಂಗನೀಸ್ ಮುಂತಾದ ಖನಿಜಗಳು ದೊರೆಯುತ್ತವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕರಾವಳಿ ಪ್ರದೇಶಗಳಾಗಿದ್ದು ಮೀನುಗಾರಿಕೆಗೆ ಪ್ರಸಿದ್ಧವಾಗಿವೆ.

3) ಮೈಸೂರು ವಿಭಾಗದ ಅರಣ್ಯಗಳು, ವನ್ಯಮೃಗಗಳು ಮತ್ತು ರಾಷ್ಟ್ರೀಯ ಉದ್ಯಾನಗಳನ್ನು ವಿವರಿಸಿ.

  ಉತ್ತರ: ಮೈಸೂರು ವಿಭಾಗವು ದಟ್ಟ ಅರಣ್ಯ ಪ್ರದೇಶಗಳಿಗೆ ಪ್ರಸಿದ್ಧವಾಗಿದೆ. ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಶಾಲ ಅರಣ್ಯ ಪ್ರದೇಶಗಳಿವೆ. ಬಂಡೀಪುರ, ನಾಗರಹೊಳೆ, ಮಲೈಮಹದೇಶ್ವರ ಬೆಟ್ಟ ಮತ್ತು ಪುಷ್ಪಗಿರಿ ಪ್ರಮುಖ ಅರಣ್ಯ ಪ್ರದೇಶಗಳಾಗಿವೆ.
ಈ ಅರಣ್ಯಗಳಲ್ಲಿ ಹುಲಿ, ಆನೆ, ಚಿರತೆ, ಜಿಂಕೆ, ಕಾಡೆಮ್ಮೆ ಮುಂತಾದ ವನ್ಯಮೃಗಗಳು ವಾಸಿಸುತ್ತವೆ. ಹುಲಿ ಸಂರಕ್ಷಣಾ ಯೋಜನೆಯಡಿಯಲ್ಲಿ ಬಂಡೀಪುರ, ನಾಗರಹೊಳೆ ಮತ್ತು ಭದ್ರಾ ಪ್ರದೇಶಗಳು ಹುಲಿ ಸಂರಕ್ಷಣಾ ಕೇಂದ್ರಗಳಾಗಿವೆ.
ಮೈಸೂರು ವಿಭಾಗದಲ್ಲಿ ಅನೇಕ ವನ್ಯಮೃಗ ಧಾಮಗಳು ಮತ್ತು ಪಕ್ಷಿಧಾಮಗಳಿವೆ. ರಂಗನತಿಟ್ಟು, ಗುಡವಿ ಮತ್ತು ಕೊಕ್ಕರೆಬೆಳ್ಳೂರು ಪ್ರಸಿದ್ಧ ಪಕ್ಷಿಧಾಮಗಳಾಗಿವೆ.

4) ಮೈಸೂರು ವಿಭಾಗದ ಕೃಷಿ ಮತ್ತು ಕೈಗಾರಿಕೆಗಳ ಬಗ್ಗೆ ವಿವರಿಸಿ.

  ಉತ್ತರ: ಮೈಸೂರು ವಿಭಾಗದಲ್ಲಿ ಕೃಷಿಯು ಪ್ರಮುಖ ಉದ್ಯೋಗವಾಗಿದೆ. ವಿವಿಧ ಹವಾಮಾನ ಮತ್ತು ಮಳೆಯ ಕಾರಣದಿಂದ ಇಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಖ್ಯ ಆಹಾರ ಬೆಳೆಗಳೆಂದರೆ ಭತ್ತ, ರಾಗಿ, ಜೋಳ, ಉದ್ದು, ಹೆಸರು ಮುಂತಾದವು.
ವಾಣಿಜ್ಯ ಬೆಳೆಗಳೆಂದರೆ ಕಾಫಿ, ಕಬ್ಬು, ತಂಬಾಕು, ಅಡಕೆ, ಗೋಡಂಬಿ, ತೆಂಗು ಮುಂತಾದವು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರತದಲ್ಲಿ ಮೊದಲು ಕಾಫಿ ಬೆಳೆಯಲಾಯಿತು.
ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಯೋಜನೆಗಳು ಕೃಷಿಗೆ ನೀರಾವರಿ ಒದಗಿಸುತ್ತವೆ.
ಮೈಸೂರು, ಮಂಗಳೂರು, ಹಾಸನ, ಮಂಡ್ಯ ಮತ್ತು ಚಿಕ್ಕಮಗಳೂರು ನಗರಗಳು ಕೈಗಾರಿಕಾ ಕೇಂದ್ರಗಳಾಗಿವೆ. ಸಕ್ಕರೆ ಕಾರ್ಖಾನೆ, ಆಹಾರ ಸಂಸ್ಕರಣಾ ಘಟಕಗಳು ಮತ್ತು ಪೆಟ್ರೋಲಿಯಂ ಸಂಸ್ಕರಣಾ ಘಟಕಗಳು ಇಲ್ಲಿವೆ.

5) ಮೈಸೂರು ವಿಭಾಗದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿವರಿಸಿ.

  ಉತ್ತರ: ಮೈಸೂರು ವಿಭಾಗವು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಮೈಸೂರು ನಗರವನ್ನು ಕಲೆಯ ತವರೂರು ಎಂದು ಕರೆಯುತ್ತಾರೆ. ಕರಾವಳಿ ಜಿಲ್ಲೆಗಳು ಯಕ್ಷಗಾನ ಬಯಲಾಟಕ್ಕೆ ಪ್ರಸಿದ್ಧವಾಗಿವೆ. ಕಂಸಾಳೆ ಕುಣಿತ, ವೀರಗಾಸೆ ಕುಣಿತ, ಪಟ ಕುಣಿತ ಮುಂತಾದ ಜನಪದ ಕಲೆಗಳು ಜನಪ್ರಿಯವಾಗಿವೆ.
ಕೊಡಗಿನ ಹುತ್ತರಿ ಹಬ್ಬ, ಕರಾವಳಿ ಪ್ರದೇಶದ ಕಂಬಳ ಮತ್ತು ಭೂತಾರಾಧನೆ ವಿಶೇಷ ಆಚರಣೆಗಳಾಗಿವೆ.
ಈ ವಿಭಾಗವು ಅನೇಕ ಪ್ರಸಿದ್ಧ ಸಾಹಿತ್ಯಿಕರನ್ನು ನೀಡಿದೆ. ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಎಸ್.ಎಲ್. ಭೈರಪ್ಪ, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರು ಪ್ರಸಿದ್ಧರು.
ಮೈಸೂರು ಅರಮನೆ ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ಪ್ರೋತ್ಸಾಹ ನೀಡಿದೆ.

WhatsApp Group Join Now
Telegram Group Join Now