NHM Recruitment 2026 Karnataka: ಬೆಂಗಳೂರು NHM ನೇಮಕಾತಿ 2026: ನೇರ ಸಂದರ್ಶನದ ಮೂಲಕ ವೈದ್ಯಾಧಿಕಾರಿ, ನರ್ಸ್ ಸೇರಿ ಹಲವು ಹುದ್ದೆಗಳ ಭರ್ತಿ!
ಬೆಂಗಳೂರು ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ – NHM ನೇಮಕಾತಿ 2026
NHM Recruitment 2026 Karnataka: ಬೆಂಗಳೂರು ನಗರ ಜಿಲ್ಲೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಉತ್ತಮವಾದ ಅವಕಾಶ ಒದಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (National Health Mission – NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ PM-ABHIM ಕಾರ್ಯಕ್ರಮದ “ನಮ್ಮ ಕ್ಲಿನಿಕ್” ಯೋಜನೆಗೆ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.
ಈ ನೇಮಕಾತಿಯನ್ನು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆ ನಡೆಸುತ್ತಿದೆ. ವೈದ್ಯಾಧಿಕಾರಿ, ಶುಶ್ರೂಷಣಾಧಿಕಾರಿ, ಪ್ರಯೋಗಶಾಲಾ ತಂತ್ರಜ್ಞರು ಮತ್ತು ಕಿರಿಯ ಆರೋಗ್ಯ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.
ಈ ಅವಕಾಶ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ವಲಯದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ.
NHM Recruitment 2026 Karnataka: ಹುದ್ದೆಗಳ ಸಂಪೂರ್ಣ ವಿವರ
1) ವೈದ್ಯಾಧಿಕಾರಿ (Medical Officer)
ವಿದ್ಯಾರ್ಹತೆ
- MBBS ಪದವಿ ಪೂರ್ಣಗೊಳಿಸಿರಬೇಕು.
- ಕಡ್ಡಾಯ Internship
- KMC ನೋಂದಣಿ ಹೊಂದಿರಬೇಕು
ವೇತನ
- ₹60,000 ಪ್ರತಿ ತಿಂಗಳು
ಗರಿಷ್ಠ ವಯೋಮಿತಿ
- 60 ವರ್ಷ ಒಳಗಿರಬೇಕು
2) ಶುಶ್ರೂಷಣಾಧಿಕಾರಿ (Staff Nurse)
ವಿದ್ಯಾರ್ಹತೆ
- B.Sc Nursing ಅಥವಾ GNM ಕೋರ್ಸ್ ಪೂರೈಸಿರಬೇಕು.
- KNC ನೋಂದಣಿ ಕಡ್ಡಾಯ.
- ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ
- ₹20,594 ಪ್ರತಿ ತಿಂಗಳು
ವಯೋಮಿತಿ
- ಸಾಮಾನ್ಯ ವರ್ಗ:- 35 ವರ್ಷ
- OBC:- 38 ವರ್ಷ
- SC/ST/Cat-1:- 40 ವರ್ಷ
3) ಪ್ರಯೋಗಶಾಲಾ ತಂತ್ರಜ್ಞರು (Lab Technician)
ವಿದ್ಯಾರ್ಹತೆ
ಅಭ್ಯರ್ಥಿಗಳು ಕೆಳಗಿನ ಯಾವುದಾದರೂ ಅರ್ಹತೆಯನ್ನು ಹೊಂದಿರಬೇಕು:
- SSLC ಪಾಸ್ ಆಗಿ ಕರ್ನಾಟಕ ಅರೆವೈದ್ಯಕೀಯ ಮಂಡಳಿ ನಡೆಸುವ 3 ವರ್ಷದ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಪೂರೈಸಿರಬೇಕು.
ಅಥವಾ
- PUC ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿ 2 ವರ್ಷದ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಪೂರೈಸಿರಬೇಕು
ಹೆಚ್ಚುವರಿ ಅರ್ಹತೆ
- ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಕಡ್ಡಾಯ.
ವೇತನ
- ₹20,594 ಪ್ರತಿ ತಿಂಗಳು
ವಯೋಮಿತಿ
- ಸಾಮಾನ್ಯ ವರ್ಗ:- 35 ವರ್ಷ
- OBC:- 38 ವರ್ಷ
- SC/ST:- 40 ವರ್ಷ
4) ಕಿರಿಯ ಆರೋಗ್ಯ ಸಹಾಯಕರು (Junior Health Assistant)
ವಿದ್ಯಾರ್ಹತೆ
ಕೆಳಗಿನ ಯಾವುದಾದರೂ ಅರ್ಹತೆ ಹೊಂದಿರಬೇಕು:
- SSLC ಪಾಸ್ ಆಗಿ Multi Purpose Health Worker ತರಬೇತಿ ಪಡೆದಿರಬೇಕು.
ಅಥವಾ
- ಆರೋಗ್ಯ ನಿರೀಕ್ಷಕರ 3 ವರ್ಷದ ಡಿಪ್ಲೊಮಾ
ಅಥವಾ
- PUC ವಿಜ್ಞಾನ ವಿಭಾಗ ಪಾಸ್ ಆಗಿ 2 ವರ್ಷದ Health Inspector Diploma ಪೂರೈಸಿರಬೇಕು.
ವೇತನ
- ₹20,404 ಪ್ರತಿ ತಿಂಗಳು
• NHM Recruitment 2026 Karnataka Notification Link – Click Here
NHM Recruitment 2026 Karnataka: ಆಯ್ಕೆ ವಿಧಾನ ಹೇಗಿರುತ್ತದೆ?
ಈ ನೇಮಕಾತಿಯಲ್ಲಿ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ದಾಖಲೆ ಪರಿಶೀಲನೆ
- ವಿದ್ಯಾರ್ಹತೆ ಪರಿಶೀಲನೆ
- ಅನುಭವ ಪರಿಶೀಲನೆ
- ನೇರ ಸಂದರ್ಶನ
NHM ಮಾರ್ಗಸೂಚಿಗಳ ಪ್ರಕಾರ ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ನೇರ ಸಂದರ್ಶನ ದಿನಾಂಕ ಮತ್ತು ಸಮಯ
ಸಂದರ್ಶನ ದಿನಾಂಕ
- 09 ಜೂನ್ 2026
ಸಮಯ
- ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:00 ರವರೆಗೆ
ಸಂದರ್ಶನ ನಡೆಯುವ ಸ್ಥಳ
ಜಿಲ್ಲಾ RCH ಅಧಿಕಾರಿಗಳ ಕಚೇರಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ
ಹಳೇ ಟಿ.ಬಿ ಆಸ್ಪತ್ರೆ
ಹಳೇ ಮದ್ರಾಸ್ ರಸ್ತೆ
ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ
ಇಂದಿರಾನಗರ, ಬೆಂಗಳೂರು – 560038
ಅಭ್ಯರ್ಥಿಗಳು ತರಬೇಕಾದ ದಾಖಲೆಗಳು
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು:
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಪದವಿ ಪ್ರಮಾಣ ಪತ್ರ
- Internship Completion Certificate
- KMC / KNC Registration Certificate
- ಅನುಭವ ಪ್ರಮಾಣ ಪತ್ರ (ಇದ್ದರೆ)
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋಗಳು
- ಮೂಲ ದಾಖಲೆಗಳು
- 1 ಸೆಟ್ ಜೆರಾಕ್ಸ್ ಪ್ರತಿಗಳು
NHM Recruitment 2026 ಯಾಕೆ ವಿಶೇಷ?
ಈ ನೇಮಕಾತಿಯ ಪ್ರಮುಖ ವಿಶೇಷತೆಗಳು:
- ನೇರ ಸಂದರ್ಶನದ ಮೂಲಕ ಆಯ್ಕೆ
- ಸರ್ಕಾರಿ ಆರೋಗ್ಯ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ.
- ಬೆಂಗಳೂರು ನಗರದಲ್ಲಿ ಉದ್ಯೋಗ
- ಉತ್ತಮ ಮಾಸಿಕ ವೇತನ
- ಅನುಭವ ಹೊಂದಿದವರಿಗೆ ಹೆಚ್ಚಿನ ಅವಕಾಶ.
- ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಅನುಭವ ಪಡೆಯುವ ಅವಕಾಶ.
ನಮ್ಮ ಕ್ಲಿನಿಕ್ ಯೋಜನೆ ಎಂದರೇನು?
“ನಮ್ಮ ಕ್ಲಿನಿಕ್” ಯೋಜನೆಯೂ ಕರ್ನಾಟಕ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಪ್ರಮುಖ ಆರೋಗ್ಯ ಸೇವಾ ಯೋಜನೆಗಳಲ್ಲಿ ಒಂದಾಗಿದೆ.
ಈ ಯೋಜನೆಯ ಉದ್ದೇಶ:
- ನಗರ ಪ್ರದೇಶದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ
- ಉಚಿತ ಚಿಕಿತ್ಸೆ
- ಉಚಿತ ಪರೀಕ್ಷೆಗಳು
- ತಾಯಿ-ಮಗು ಆರೋಗ್ಯ ಸೇವೆ
- ರೋಗ ನಿರೋಧಕ ಕಾರ್ಯಕ್ರಮಗಳು
ಈ ಯೋಜನೆಯಡಿಯಲ್ಲಿ ಹಲವಾರು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ.
ವೇತನ ವಿವರ
ಹುದ್ದೆ – ಮಾಸಿಕ ವೇತನ
- ವೈದ್ಯಾಧಿಕಾರಿ – ₹60,000
- ಶುಶ್ರೂಷಣಾಧಿಕಾರಿ – ₹20,594
- ಪ್ರಯೋಗಶಾಲಾ ತಂತ್ರಜ್ಞರು – ₹20,594
- ಕಿರಿಯ ಆರೋಗ್ಯ ಸಹಾಯಕರು – ₹20,404
ಪ್ರಮುಖ ಸೂಚನೆಗಳು
- ನೇಮಕಾತಿ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ.
- ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ.
- ಅರ್ಹ ಅಭ್ಯರ್ಥಿಗಳು ಮಾತ್ರ ಸಂದರ್ಶನಕ್ಕೆ ಹಾಜರಾಗಬೇಕು.
- ತಡವಾಗಿ ಬರುವ ಅಭ್ಯರ್ಥಿಗಳಿಗೆ ಅವಕಾಶ ಇರದು.
- ಮೂಲ ದಾಖಲೆಗಳಿಲ್ಲದೆ ಅವಕಾಶ ನೀಡಲಾಗುವುದಿಲ್ಲ.
ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ
ಬೆಂಗಳೂರು ನಗರ ಆರೋಗ್ಯ ಇಲಾಖೆಯ ಈ ನೇಮಕಾತಿಯೂ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ವಿಶೇಷವಾಗಿ Staff Nurse, Lab Technician ಹಾಗೂ Health Assistant ಅಭ್ಯರ್ಥಿಗಳಿಗೆ ಸರ್ಕಾರಿ ಯೋಜನೆಯಲ್ಲಿ ಅನುಭವ ಪಡೆಯಲು ಇದು ನೆರವಾಗಲಿದೆ.
ಕೊನೆಯ ಮಾತು
ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ನೇಮಕಾತಿ ಆರೋಗ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ವಿಶೇಷವಾಗಿ ಸರ್ಕಾರಿ ಯೋಜನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.
ಜೂನ್ 9ರಂದು ನಡೆಯುವ ನೇರ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ.
ಇಂತಹ ಸರ್ಕಾರಿ ಉದ್ಯೋಗ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಪ್ರತಿದಿನ ಭೇಟಿ ಮಾಡಿ.