SSLC Important Questions and Answers 2026-27: 10ನೇ ತರಗತಿಯ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಗಳು ಇಲ್ಲಿವೆ!
SSLC Important Questions and Answers 2026-27: SSLC 2026-27ನೇ ಶೈಕ್ಷಣಿಕ ಸಾಲಿನ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳು, ಪ್ರಮುಖ ಪ್ರಶ್ನೋತ್ತರಗಳು, ಹಿಂದಿನ ವರ್ಷದ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಮತ್ತು PDF ಡೌನ್ಲೋಡ್ ಮಾಹಿತಿ ಇಲ್ಲಿದೆ.
ಆತ್ಮೀಯ ವಿದ್ಯಾರ್ಥಿಗಳೇ, ಶಿಕ್ಷಕರೇ ಮತ್ತು ಪೋಷಕರೇ, ಎಲ್ಲರಿಗೂ ನಮಸ್ಕಾರ.
2026-27ನೇ ಶೈಕ್ಷಣಿಕ ಸಾಲಿನಲ್ಲಿ SSLC ಬೋರ್ಡ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಂತಹ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಶೈಕ್ಷಣಿಕ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ(SSLC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆಯಲು ಪಠ್ಯಪುಸ್ತಕಗಳ ಅಧ್ಯಯನದ ಜೊತೆ ಜೊತೆಗೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಮತ್ತು ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳು, ಪ್ರಮುಖ ಪ್ರಶ್ನೋತ್ತರಗಳು, ವಿಷಯವಾರು ಪ್ರಶ್ನೆಪತ್ರಿಕೆಗಳು ಮತ್ತು ಹಿಂದಿನ ವರ್ಷದ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಲು ಅನುಕೂಲವಾಗುವ ವೆಬ್ಸೈಟ್ನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಬಂಧಪಟ್ಟ ವೆಬ್ಸೈಟ್ಗೆ ಭೇಟಿ ನೀಡಬಹುದು. ಅಲ್ಲಿ ತಮ್ಮ ವಿಷಯವನ್ನು ಆಯ್ಕೆ ಮಾಡಿಕೊಂಡು ಲಭ್ಯವಿರುವ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು.
SSLC Important Questions and Answers 2026-27: SSLC 2026-27 ಬೋರ್ಡ್ ಪರೀಕ್ಷೆಗೆ ಮಾದರಿ ಪ್ರಶ್ನೆಪತ್ರಿಕೆಗಳು ಏಕೆ ಮುಖ್ಯ?
SSLC (ಎಸ್ಎಸ್ಎಲ್ಸಿ) ಪರೀಕ್ಷೆಯೂ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಮಹತ್ವದ ಘಟ್ಟವಾಗಿದೆ. 10ನೇ ತರಗತಿಯಲ್ಲಿನ ಫಲಿತಾಂಶವು ಮುಂದಿನ ವಿದ್ಯಾಭ್ಯಾಸದ ಆಯ್ಕೆಗಳಿಗೂ ಸಹಕಾರಿಯಾಗುತ್ತದೆ.
ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಕೊನೆಯ ಕ್ಷಣದಲ್ಲಿ ಮಾತ್ರ ಓದುವುದಕ್ಕಿಂತ ಶೈಕ್ಷಣಿಕ ವರ್ಷದ ಆರಂಭದಿಂದಲೇ ಕ್ರಮಬದ್ಧವಾಗಿ ಅಧ್ಯಯನ ಮಾಡುವುದು ಉತ್ತಮ.
ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳಿವೆ.
- ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸ್ವರೂಪವನ್ನು ತಿಳಿದುಕೊಳ್ಳಬಹುದು.
- ಯಾವ ವಿಷಯಗಳಿಂದ ಯಾವ ರೀತಿಯ ಪ್ರಶ್ನೆಗಳು ಕೇಳಬಹುದು ಎಂಬುದರ ಬಗ್ಗೆ ಅರಿವು ಮೂಡುತ್ತದೆ.
- ಪಠ್ಯಪುಸ್ತಕದಲ್ಲಿನ ಪ್ರಮುಖ ಅಧ್ಯಾಯಗಳನ್ನು ಗುರುತಿಸಬಹುದು.
- ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಲು ಕಲಿಯಬಹುದು.
- ಉತ್ತರಗಳನ್ನು ಸರಿಯಾದ ಕ್ರಮದಲ್ಲಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬಹುದು.
- ತಮ್ಮ ಕಲಿಕೆಯ ಸಾಮರ್ಥ್ಯ ಮತ್ತು ಸಿದ್ಧತೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಬಹುದು.
- ಕಷ್ಟಕರವಾದ ಪ್ರಶ್ನೆಗಳನ್ನು ಗುರುತಿಸಿ ಮತ್ತೊಮ್ಮೆ ಅಭ್ಯಾಸ ಮಾಡಬಹುದು.
- ಪರೀಕ್ಷೆಯ ಮೇಲಿನ ಭಯ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು.
- ಗಣಿತ ಮತ್ತು ವಿಜ್ಞಾನ ವಿಷಯಗಳ ಸಮಸ್ಯೆಗಳನ್ನು ಬಿಡಿಸುವ ವೇಗವನ್ನು ಹೆಚ್ಚಿಸಿಕೊಳ್ಳಬಹುದು.
- ಭಾಷಾ ವಿಷಯಗಳಲ್ಲಿ ವ್ಯಾಕರಣ, ಬರವಣಿಗೆ ಮತ್ತು ಗ್ರಹಿಕೆಯ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಬಹುದು.
SSLC Important Questions and Answers 2026-27: ಎಲ್ಲಾ ವಿಷಯಗಳ SSLC ಮಾದರಿ ಪ್ರಶ್ನೆಪತ್ರಿಕೆಗಳು ಇಲ್ಲಿ ಲಭ್ಯ
ಎಸ್ಎಸ್ಎಲ್ಸಿ(SSLC) ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕವಾಗಿ ಅಭ್ಯಾಸ ಮಾಡುವುದು ಅಗತ್ಯವಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಷಯವಾರು ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಪ್ರಮುಖ ಪ್ರಶ್ನೋತ್ತರಗಳನ್ನು ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.
1. ಪ್ರಥಮ ಭಾಷೆ (First Language)
ಪ್ರಥಮ ಭಾಷೆಯೂ ವಿದ್ಯಾರ್ಥಿಗಳ ಒಟ್ಟು ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕನ್ನಡ, ಇಂಗ್ಲಿಷ್ ಸೇರಿದಂತೆ ಆಯಾ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಪ್ರಥಮ ಭಾಷೆಯ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು.
ಪ್ರಥಮ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಈ ಕೆಳಗಿನ ಅಂಶಗಳಿಗೆ ಹೆಚ್ಚಿನ ಗಮನ ನೀಡಬೇಕು.
- ಗದ್ಯಭಾಗದ ಪ್ರಶ್ನೋತ್ತರಗಳು.
- ಪದ್ಯಭಾಗದ ಪ್ರಶ್ನೋತ್ತರಗಳು.
- ಕವಿ ಮತ್ತು ಕೃತಿಗಳ ಪರಿಚಯ.
- ಭಾವಾರ್ಥ ಮತ್ತು ಸಾರಾಂಶ.
- ವ್ಯಾಕರಣದ ಪ್ರಮುಖ ಅಂಶಗಳು.
- ಪತ್ರಲೇಖನ ಮತ್ತು ಪ್ರಬಂಧ.
- ಅಪಠಿತ ಗದ್ಯಭಾಗ.
- ಸಂದರ್ಭಸಹಿತ ಸ್ವಾರಸ್ಯ ವಿವರಣೆ.
2. ದ್ವಿತೀಯ ಭಾಷೆ ಕನ್ನಡ (Second Language Kannada)
ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಪಠ್ಯಪುಸ್ತಕದ ಪ್ರತಿಯೊಂದು ಪಾಠವನ್ನು ಸರಿಯಾಗಿ ಓದುವುದು ಮುಖ್ಯವಾಗಿದೆ.
ವಿದ್ಯಾರ್ಥಿಗಳು ಗದ್ಯ, ಪದ್ಯ, ವ್ಯಾಕರಣ ಮತ್ತು ಬರವಣಿಗೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು.
ಅಭ್ಯಾಸ ಮಾಡಬೇಕಾದ ಪ್ರಮುಖ ಅಂಶಗಳು:
- ಗದ್ಯ ಪಾಠಗಳ ಪ್ರಶ್ನೋತ್ತರಗಳು.
- ಪದ್ಯಗಳ ಭಾವಾರ್ಥ.
- ಕವಿ ಪರಿಚಯ.
- ಸಂದರ್ಭಸಹಿತ ಸ್ವಾರಸ್ಯ ವಿವರಣೆ.
- ವ್ಯಾಕರಣ.
- ಪತ್ರಲೇಖನ.
- ಪ್ರಬಂಧ ರಚನೆ.
- ಗಾದೆಗಳು ಮತ್ತು ನುಡಿಗಟ್ಟುಗಳು.
- ಭಾಷಾ ಕೌಶಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು.
3. ಇಂಗ್ಲಿಷ್ (English)
SSLC ಇಂಗ್ಲಿಷ್ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಲು ಪಠ್ಯಪುಸ್ತಕದ ಪಾಠಗಳ ಜೊತೆ ಜೊತೆಗೆ ವ್ಯಾಕರಣ ಮತ್ತು ಬರವಣಿಗೆ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು.
ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ಅಭ್ಯಾಸ ಮಾಡಬೇಕು.
- Prose Questions and Answers.
- Poetry Appreciation.
- Grammar.
- Vocabulary.
- Letter Writing.
- Essay Writing.
- Comprehension.
- Profile Writing.
- Reference to Context.
- Reading and Writing Skills.
ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದರಿಂದ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆಗಳ ಸ್ವರೂಪದ ಬಗ್ಗೆ ಉತ್ತಮ ಅರಿವು ಮೂಡುತ್ತದೆ.
4. ಹಿಂದಿ ಅಥವಾ ತೃತೀಯ ಭಾಷೆ (Third Language)
ತೃತೀಯ ಭಾಷೆಯಲ್ಲಿಯೂ ಉತ್ತಮವಾದ ಅಂಕಗಳನ್ನು ಪಡೆಯಲು ನಿರಂತರ ಅಭ್ಯಾಸ ಅಗತ್ಯ.
ವಿದ್ಯಾರ್ಥಿಗಳು ಆಯಾ ಪಠ್ಯಪುಸ್ತಕದಲ್ಲಿನ ಪಾಠಗಳು, ಪದ್ಯಗಳು, ವ್ಯಾಕರಣ ಹಾಗೂ ಬರವಣಿಗೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಬೇಕು.
ಪ್ರಮುಖವಾಗಿ:
- ಪಾಠಗಳ ಪ್ರಶ್ನೋತ್ತರಗಳು.
- ಪದ್ಯಗಳ ಅರ್ಥ.
- ವ್ಯಾಕರಣ.
- ಶಬ್ದಾರ್ಥ.
- ವಾಕ್ಯ ರಚನೆ.
- ಪತ್ರಲೇಖನ.
- ಪ್ರಬಂಧ.
- ಅನುವಾದ.
- ಅಪಠಿತ ಗದ್ಯಭಾಗ.
5. ಗಣಿತ (Mathematics)
ಈ ಗಣಿತ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಕೇವಲ ಸೂತ್ರಗಳನ್ನು ಕಂಠಪಾಠ ಮಾಡಿದರೆ ಸಾಕಾಗುವುದಿಲ್ಲಾ. ಅವುಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಬಿಡಿಸುವ ಅಭ್ಯಾಸ ಮಾಡಬೇಕು.
ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಕೆಲವು ಸಮಸ್ಯೆಗಳನ್ನು ಬಿಡಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಅಭ್ಯಾಸ ಮಾಡಬೇಕಾದ ಪ್ರಮುಖ ಅಧ್ಯಾಯಗಳು:
- ಸಂಖ್ಯಾಶಾಸ್ತ್ರ ಮತ್ತು ವಾಸ್ತವ ಸಂಖ್ಯೆಗಳು.
- ಬಹುಪದೋಕ್ತಿಗಳು.
- ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳು.
- ವರ್ಗ ಸಮೀಕರಣಗಳು.
- ಸಮಾಂತರ ಶ್ರೇಢಿಗಳು.
- ತ್ರಿಭುಜಗಳು.
- ನಿರ್ದೇಶಾಂಕ ರೇಖಾಗಣಿತ.
- ತ್ರಿಕೋನಮಿತಿ.
- ವೃತ್ತಗಳು.
- ರಚನೆಗಳು.
- ಮೇಲ್ಮೈ ವಿಸ್ತೀರ್ಣ ಮತ್ತು ಘನಫಲ.
- ಅಂಕಿಅಂಶಗಳು.
- ಸಂಭವನೀಯತೆ.
ಗಣಿತದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಮಯ ನಿಗದಿಪಡಿಸಿಕೊಂಡು ಬಿಡಿಸುವುದರಿಂದ ಪರೀಕ್ಷೆಯಲ್ಲಿ ವೇಗವಾಗಿ ಉತ್ತರಿಸುವ ಸಾಮರ್ಥ್ಯ ಹೆಚ್ಚುತ್ತದೆ.
6. ವಿಜ್ಞಾನ (Science)
ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ಅಭ್ಯಾಸ ಮಾಡುವುದು ಮುಖ್ಯವಾಗಿದೆ.
ವಿದ್ಯಾರ್ಥಿಗಳು ಈ ಕೆಳಗಿನ ಅಂಶಗಳಿಗೆ ಹೆಚ್ಚಿನ ಗಮನ ನೀಡಬೇಕು.
ಭೌತಶಾಸ್ತ್ರ:
- ಬೆಳಕು.
- ವಿದ್ಯುತ್.
- ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು.
- ಶಕ್ತಿಯ ಮೂಲಗಳು.
ರಸಾಯನಶಾಸ್ತ್ರ:
- ರಾಸಾಯನಿಕ ಕ್ರಿಯೆಗಳು.
- ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು.
- ಲೋಹಗಳು ಮತ್ತು ಅಲೋಹಗಳು.
- ಇಂಗಾಲ ಮತ್ತು ಅದರ ಸಂಯುಕ್ತಗಳು.
- ಧಾತುಗಳ ಆವರ್ತನೀಯ ವರ್ಗೀಕರಣ.
ಜೀವಶಾಸ್ತ್ರ:
- ಜೀವಿಗಳಲ್ಲಿ ಪೋಷಣೆ.
- ಉಸಿರಾಟ.
- ಸಾಗಣೆ.
- ವಿಸರ್ಜನೆ.
- ನಿಯಂತ್ರಣ ಮತ್ತು ಸಹಭಾಗಿತ್ವ.
- ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?
- ಅನುವಂಶೀಯತೆ ಮತ್ತು ಜೀವವಿಕಾಸ.
- ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳು.
ವಿಜ್ಞಾನ ವಿಷಯದಲ್ಲಿ ಚಿತ್ರಗಳು, ರಾಸಾಯನಿಕ ಸಮೀಕರಣಗಳು, ಸೂತ್ರಗಳು ಹಾಗೂ ವೈಜ್ಞಾನಿಕ ಕಾರಣಗಳನ್ನು ಬರೆಯುವ ಅಭ್ಯಾಸ ಮಾಡಬೇಕು.
7. ಸಮಾಜ ವಿಜ್ಞಾನ (Social Science)
ಸಮಾಜ ವಿಜ್ಞಾನವು ಇತಿಹಾಸ, ಭೂಗೋಳಶಾಸ್ತ್ರ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರದ ವಿವಿಧ ಅಂಶಗಳನ್ನು ಒಳಗೊಂಡಿದೆ.
ಈ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಪಠ್ಯಪುಸ್ತಕದ ಪ್ರತಿಯೊಂದು ಅಧ್ಯಾಯವನ್ನು ಓದಿ ಪ್ರಮುಖ ಅಂಶಗಳನ್ನು ಗುರುತಿಸಿಕೊಳ್ಳಬೇಕು.
ಪ್ರಮುಖವಾಗಿ ಅಭ್ಯಾಸ ಮಾಡಬೇಕಾದ ಅಂಶಗಳು:
- ಭಾರತದ ಇತಿಹಾಸ.
- ಕರ್ನಾಟಕದ ಇತಿಹಾಸ.
- ಸ್ವಾತಂತ್ರ್ಯ ಹೋರಾಟ.
- ಭೌಗೋಳಿಕ ಲಕ್ಷಣಗಳು.
- ಭಾರತದ ನೈಸರ್ಗಿಕ ಸಂಪನ್ಮೂಲಗಳು.
- ಭಾರತದ ಸಂವಿಧಾನ.
- ಪ್ರಜಾಪ್ರಭುತ್ವ.
- ಆಡಳಿತ ವ್ಯವಸ್ಥೆ.
- ಆರ್ಥಿಕ ಅಭಿವೃದ್ಧಿ.
- ಬ್ಯಾಂಕಿಂಗ್ ವ್ಯವಸ್ಥೆ.
- ಜಾಗತೀಕರಣ.
- ನಕ್ಷೆ ಕಾರ್ಯ.
- ಪ್ರಮುಖ ದಿನಾಂಕಗಳು ಮತ್ತು ಘಟನೆಗಳು.
ಸಮಾಜ ವಿಜ್ಞಾನದಲ್ಲಿ ನಕ್ಷೆ ಅಭ್ಯಾಸಕ್ಕೆ ವಿಶೇಷ ಗಮನ ನೀಡಬೇಕು.
SSLC Important Questions and Answers 2026-27: SSLC ಪ್ರಮುಖ ಪ್ರಶ್ನೋತ್ತರಗಳು ಹಾಗೂ ಉತ್ತರಗಳ ಅಭ್ಯಾಸ
ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಪ್ರಶ್ನೆಗಳನ್ನು ಓದುವುದರ ಜೊತೆಗೆ ಅವುಗಳಿಗೆ ಸರಿಯಾದ ಉತ್ತರಗಳನ್ನು ಬರೆಯುವ ಅಭ್ಯಾಸವೂ ಅಗತ್ಯವಾಗಿದೆ.
ವಿದ್ಯಾರ್ಥಿಗಳು ಪ್ರಮುಖ ಪ್ರಶ್ನೋತ್ತರಗಳನ್ನು ಅಭ್ಯಾಸ ಮಾಡುವಾಗ ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.
1. ಒಂದು ಅಂಕದ ಪ್ರಶ್ನೆಗಳು
ಪ್ರತಿಯೊಂದು ಅಧ್ಯಾಯದಲ್ಲಿರುವ ಪ್ರಮುಖ ಪದಗಳು, ವ್ಯಾಖ್ಯಾನಗಳು, ಹೆಸರುಗಳು, ವರ್ಷಗಳು ಹಾಗೂ ಸರಳ ಪರಿಕಲ್ಪನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಿ.
2. ಎರಡು ಅಂಕದ ಪ್ರಶ್ನೆಗಳು
ಸಂಕ್ಷಿಪ್ತವಾಗಿ ಉತ್ತರಿಸಬೇಕಾದ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ಬರೆಯುವ ಅಭ್ಯಾಸ ಮಾಡಿ.
3. ಮೂರು ಅಂಕದ ಪ್ರಶ್ನೆಗಳು
ಪ್ರಮುಖ ಅಂಶಗಳನ್ನು ಕ್ರಮಬದ್ಧವಾಗಿ ವಿವರಿಸುವುದನ್ನು ಕಲಿಯಿರಿ.
4. ನಾಲ್ಕು ಹಾಗೂ ಐದು ಅಂಕದ ಪ್ರಶ್ನೆಗಳು
ವಿವರಣಾತ್ಮಕ ಉತ್ತರಗಳನ್ನು ಬರೆಯುವಾಗ ಸೂಕ್ತವಾದ ಶೀರ್ಷಿಕೆಗಳು, ಮುಖ್ಯ ಅಂಶಗಳು ಮತ್ತು ಅಗತ್ಯವಿರುವ ಉದಾಹರಣೆಗಳನ್ನು ಬಳಸಿ.
5. ಚಿತ್ರ ಮತ್ತು ನಕ್ಷೆ ಆಧಾರಿತ ಪ್ರಶ್ನೆಗಳು
ವಿಜ್ಞಾನ ವಿಷಯದ ಚಿತ್ರಗಳು ಹಾಗೂ ಸಮಾಜ ವಿಜ್ಞಾನದ ನಕ್ಷೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ.
ಗಮನಿಸಿ: ಯಾವುದೇ ಪ್ರಶ್ನೆಯನ್ನು ಖಚಿತವಾಗಿ ಬೋರ್ಡ್ ಪರೀಕ್ಷೆಯಲ್ಲಿ ಕೇಳಲಾಗುತ್ತದೆ ಎಂದು ಭಾವಿಸಿ ಉಳಿದ ಪಾಠಗಳನ್ನು ನಿರ್ಲಕ್ಷಿಸಬಾರದು. ಪಠ್ಯಕ್ರಮದ ಎಲ್ಲಾ ಅಧ್ಯಾಯಗಳನ್ನು ಸಮಾನವಾಗಿ ಅಧ್ಯಯನ ಮಾಡುವುದು ಉತ್ತಮ.
SSLC ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳು
ಹಿಂದಿನ ವರ್ಷಗಳ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಭ್ಯಾಸ ಸಾಮಗ್ರಿಗಳಾಗಿವೆ.
ಇವುಗಳ ಮೂಲಕ ವಿದ್ಯಾರ್ಥಿಗಳು ಪ್ರಶ್ನೆಗಳ ಮಾದರಿ, ಪ್ರಶ್ನೆಗಳ ವೈವಿಧ್ಯ ಹಾಗೂ ತಮ್ಮ ಉತ್ತರ ಬರೆಯುವ ಸಾಮರ್ಥ್ಯವನ್ನು ಪರಿಶೀಲಿಸಿಕೊಳ್ಳಬಹುದು.
ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ:
- ಪರೀಕ್ಷೆಯ ಪ್ರಶ್ನೆಪತ್ರಿಕೆಯ ವಿನ್ಯಾಸ ತಿಳಿಯುತ್ತದೆ.
- ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬ ಅರಿವು ಮೂಡುತ್ತದೆ.
- ಪಠ್ಯಕ್ರಮದ ಪ್ರಮುಖ ಭಾಗಗಳನ್ನು ಪುನರಾವರ್ತನೆ ಮಾಡಬಹುದು.
- ಸಮಯ ನಿರ್ವಹಣೆಯ ಸಾಮರ್ಥ್ಯ ಹೆಚ್ಚುತ್ತದೆ.
- ಬರವಣಿಗೆಯ ವೇಗ ಸುಧಾರಿಸುತ್ತದೆ.
- ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ.
ಆದ್ದರಿಂದ ವಿದ್ಯಾರ್ಥಿಗಳು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಅಭ್ಯಾಸ ಮಾಡುವುದು ಉತ್ತಮ.
ಮಾದರಿ ಪ್ರಶ್ನೆಪತ್ರಿಕೆಗಳನ್ನು ಹೇಗೆ ಅಭ್ಯಾಸ ಮಾಡಬೇಕು?
ಮಾದರಿ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಕೇವಲ ಓದುವುದರಿಂದ ಪೂರ್ಣ ಪ್ರಯೋಜನ ದೊರೆಯುವುದಿಲ್ಲ. ಅವುಗಳನ್ನು ನೈಜ ಪರೀಕ್ಷೆಯ ರೀತಿಯಲ್ಲಿ ಬಿಡಿಸುವುದು ಹೆಚ್ಚು ಪರಿಣಾಮಕಾರಿ.
ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1: ಪರೀಕ್ಷೆಯ ವಾತಾವರಣ ಸೃಷ್ಟಿಸಿಕೊಳ್ಳಿ
ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಡಿಸುವಾಗ ಮೊಬೈಲ್ ಫೋನ್ ಮತ್ತು ಇತರ ಗಮನ ಬೇರೆಡೆ ಸೆಳೆಯುವ ವಸ್ತುಗಳನ್ನು ದೂರವಿಡಿ.
ಹಂತ 2: ನಿಗದಿತ ಸಮಯದಲ್ಲಿ ಉತ್ತರಿಸಿ
ಪ್ರಶ್ನೆಪತ್ರಿಕೆಯಲ್ಲಿ ಸೂಚಿಸಿರುವ ಸಮಯಕ್ಕೆ ಅನುಗುಣವಾಗಿ ಉತ್ತರಗಳನ್ನು ಬರೆಯಿರಿ.
ಹಂತ 3: ಎಲ್ಲಾ ಪ್ರಶ್ನೆಗಳಿಗೆ ಪ್ರಯತ್ನಿಸಿ
ನಿಮಗೆ ತಿಳಿದಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ. ನಂತರ ಕಷ್ಟಕರವಾದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.
ಹಂತ 4: ಉತ್ತರಗಳನ್ನು ಪರಿಶೀಲಿಸಿ
ಪ್ರಶ್ನೆಪತ್ರಿಕೆಯನ್ನು ಬಿಡಿಸಿದ ನಂತರ ಲಭ್ಯವಿರುವ ಅಧಿಕೃತ ಅಥವಾ ವಿಶ್ವಾಸಾರ್ಹ ಉತ್ತರ ಸೂಚಿಯೊಂದಿಗೆ ನಿಮ್ಮ ಉತ್ತರಗಳನ್ನು ಹೋಲಿಕೆ ಮಾಡಿ.
ಹಂತ 5: ತಪ್ಪುಗಳನ್ನು ಸರಿಪಡಿಸಿ
ತಪ್ಪಾದ ಉತ್ತರಗಳನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡು ಮತ್ತೊಮ್ಮೆ ಅಭ್ಯಾಸ ಮಾಡಿ.
ಹಂತ 6: ಪುನರಾವರ್ತನೆ ಮಾಡಿ
ಒಂದೇ ಪ್ರಶ್ನೆಪತ್ರಿಕೆಯನ್ನು ಮತ್ತೊಮ್ಮೆ ಬಿಡಿಸುವುದರ ಜೊತೆಗೆ ಬೇರೆ ಮಾದರಿ ಪ್ರಶ್ನೆಪತ್ರಿಕೆಗಳನ್ನೂ ಅಭ್ಯಾಸ ಮಾಡಿ.
SSLC 2026-27 ಪರೀಕ್ಷೆಗೆ ವಿದ್ಯಾರ್ಥಿಗಳಿಗಾಗಿ ವಿಶೇಷ ಅಧ್ಯಯನ ಸಲಹೆಗಳು
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೊನೆಯ ತಿಂಗಳವರೆಗೆ ಕಾಯದೆ ಪ್ರತಿದಿನ ಓದುವ ಅಭ್ಯಾಸ ಬೆಳೆಸಿಕೊಳ್ಳಿ.
- ಪ್ರತಿದಿನದ ಅಧ್ಯಯನಕ್ಕೆ ಒಂದು ವೇಳಾಪಟ್ಟಿ ರೂಪಿಸಿಕೊಳ್ಳಿ.
- ಕಷ್ಟಕರ ವಿಷಯಗಳಿಗೆ ಹೆಚ್ಚಿನ ಸಮಯ ಮೀಸಲಿಡಿ.
- ಗಣಿತದ ಸಮಸ್ಯೆಗಳನ್ನು ಪ್ರತಿದಿನ ಬಿಡಿಸಿ.
- ವಿಜ್ಞಾನದ ಸೂತ್ರಗಳು ಹಾಗೂ ಚಿತ್ರಗಳನ್ನು ಅಭ್ಯಾಸ ಮಾಡಿ.
- ಸಮಾಜ ವಿಜ್ಞಾನದ ಪ್ರಮುಖ ಅಂಶಗಳನ್ನು ಪುನರಾವರ್ತನೆ ಮಾಡಿ.
- ಭಾಷಾ ವಿಷಯಗಳಲ್ಲಿ ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಿ.
- ವಾರಕ್ಕೊಮ್ಮೆ ಒಂದು ಬಾರಿಯಾದರು ಪೂರ್ಣ ಮಾದರಿ ಪರೀಕ್ಷೆ ಬರೆಯಿರಿ.
- ಶಿಕ್ಷಕರಿಂದ ನಿಮ್ಮ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸಿಕೊಳ್ಳಿ.
- ಪರೀಕ್ಷೆಯ ಹಿಂದಿನ ದಿನ ಹೊಸ ವಿಷಯಗಳನ್ನು ಕಲಿಯುವುದಕ್ಕಿಂತ ಓದಿರುವ ವಿಷಯಗಳನ್ನು ಪುನರಾವರ್ತನೆ ಮಾಡಿ.
- ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯಿರಿ.
SSLC ಮಾದರಿ ಪ್ರಶ್ನೆಪತ್ರಿಕೆಗಳನ್ನು ಪಡೆಯುವುದು ಹೇಗೆ?
ವಿದ್ಯಾರ್ಥಿಗಳೇ, ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳು, ಪ್ರಮುಖ ಉತ್ತರಗಳು ಮತ್ತು ಪ್ರಶ್ನೆಪತ್ರಿಕೆಗಳನ್ನು ವೀಕ್ಷಿಸಲು ಕೆಳಗಿನ ಲಿಂಕ್ ಬಳಸಿ.
ಮಾದರಿ ಪ್ರಶ್ನೆಪತ್ರಿಕೆಗಳನ್ನು ಪಡೆಯುವ ವಿಧಾನ:
- ಮೊದಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಸಂಬಂಧಪಟ್ಟ ವೆಬ್ಸೈಟ್ ತೆರೆಯುತ್ತದೆ.
- ವೆಬ್ಸೈಟ್ನಲ್ಲಿ SSLC ಮಾದರಿ ಪ್ರಶ್ನೆಪತ್ರಿಕೆಗಳ ವಿಭಾಗವನ್ನು ತೆರೆಯಿರಿ.
- ನಿಮಗೆ ಅಗತ್ಯವಿರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ.
- ಆಯಾ ವಿಷಯದ ಮಾದರಿ ಪ್ರಶ್ನೆಪತ್ರಿಕೆ ಮತ್ತು ಲಭ್ಯವಿರುವ ಉತ್ತರಗಳನ್ನು ವೀಕ್ಷಿಸಿ.
- ಅಗತ್ಯವಿದ್ದಲ್ಲಿ PDF ರೂಪದಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಪಡೆಯಿರಿ.
- ಪರೀಕ್ಷೆಯ ಸಿದ್ಧತೆಗಾಗಿ ಅವುಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ.
SSLC Important Questions and Answers 2026-27: ಪೋಷಕರು ಹಾಗೂ ಶಿಕ್ಷಕರಿಗೆ ವಿಶೇಷ ಸೂಚನೆ
SSLC (10ನೇ ತರಗತಿ) ಪರೀಕ್ಷೆಯ ಸಿದ್ಧತೆಯಲ್ಲಿ ಇರುವ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಹಾಗೂ ಶಿಕ್ಷಕರ ಪಾತ್ರವೂ ಬಹಳ ಮುಖ್ಯವಾಗಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಅಧ್ಯಯನದ ಜೊತೆಗೆ ಈ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಅವಕಾಶ ನೀಡಬೇಕು.
ವಿದ್ಯಾರ್ಥಿಗಳು ಉತ್ತರಗಳನ್ನು ಬರೆಯುವಾಗ ಅವರ ತಪ್ಪುಗಳನ್ನು ಗುರುತಿಸಿ ಸರಿಪಡಿಸಲು ಸರಿಯಾದ ಮಾರ್ಗದರ್ಶನವನ್ನು ನೀಡಬೇಕು.
ಪೋಷಕರು ಮಕ್ಕಳ ಮೇಲೆ ಅನಗತ್ಯವಾಗಿ ಹೆಚ್ಚಿನ ಒತ್ತಡವನ್ನು ಹೇರದೆ ಅವರಿಗೆ ಉತ್ತಮ ಅಧ್ಯಯನ ವಾತಾವರಣವನ್ನು ಕಲ್ಪಿಸಿಕೊಡಬೇಕು.
ವಿದ್ಯಾರ್ಥಿಗಳು ದಿನನಿತ್ಯ ಓದಿದ ವಿಷಯಗಳನ್ನು ಪುನರಾವರ್ತನೆ ಮಾಡುತ್ತಿದ್ದಾರೆಯೇ ಎಂಬುದನ್ನು ಸದಾ ಗಮನಿಸಬೇಕು.
ಪರೀಕ್ಷೆಯ ಸಮಯದಲ್ಲಿ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಪ್ರೋತ್ಸಾಹ ನೀಡಬೇಕು.
SSLC ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು
SSLC ಬೋರ್ಡ್ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಕೇವಲ ಮಾದರಿ ಪ್ರಶ್ನೆಪತ್ರಿಕೆಗಳ ಮೇಲೆ ಅವಲಂಬಿತರಾಗಬಾರದು.
ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಇರುವ ಅಧಿಕೃತ ಪಠ್ಯಕ್ರಮವನ್ನು ಅನುಸರಿಸಿ.
- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸುವ ಅಧಿಕೃತ ಸೂಚನೆಗಳನ್ನು ಗಮನಿಸಿ.
- ವಿಷಯವಾರು ಬ್ಲೂಪ್ರಿಂಟ್ ಲಭ್ಯವಿದ್ದರೆ ಅದನ್ನು ಪರಿಶೀಲಿಸಿ.
- ಅಧಿಕೃತ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ.
- ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳನ್ನು ಓದಿ.
- ಪರೀಕ್ಷೆಯ ನಿಯಮಗಳು ಹಾಗೂ ಸೂಚನೆಗಳನ್ನು ತಿಳಿದುಕೊಳ್ಳಿ.
- ಪ್ರಶ್ನೆಪತ್ರಿಕೆಯಲ್ಲಿ ನೀಡಿರುವ ಅಂಕಗಳಿಗನುಗುಣವಾಗಿ ಉತ್ತರ ಬರೆಯಿರಿ.
- ಉತ್ತರಪತ್ರಿಕೆಯನ್ನು ಸ್ವಚ್ಛವಾಗಿ ಹಾಗೂ ಕ್ರಮಬದ್ಧವಾಗಿ ಬರೆಯಿರಿ.
ವಿದ್ಯಾರ್ಥಿಗಳೇ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!
ಪ್ರಸುತ್ತ 2026-27ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ(SSLC) ಬೋರ್ಡ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳು ಈ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಳಸಿಕೊಂಡು ತಮ್ಮ ಅಧ್ಯಯನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಬಹುದು.
ಪ್ರತಿಯೊಂದು ವಿಷಯದಲ್ಲಿಯೂ ಉತ್ತಮವಾದ ಹೆಚ್ಚಿನ ಅಂಕಗಳನ್ನು ಪಡೆಯುವ ಗುರಿಯೊಂದಿಗೆ ಅಭ್ಯಾಸ ಮಾಡಿ. ಕೇವಲ ಪ್ರಮುಖ ಪ್ರಶ್ನೆಗಳನ್ನು ಮಾತ್ರ ಓದದೆ ಪಠ್ಯಪುಸ್ತಕದ ಎಲ್ಲಾ ಪಾಠಗಳನ್ನು ಅಧ್ಯಯನ ಮಾಡಿ.
ಮಾದರಿ ಪ್ರಶ್ನೆಪತ್ರಿಕೆಗಳು ನಿಮ್ಮ ಪರೀಕ್ಷಾ ಸಿದ್ಧತೆಯನ್ನು ಅಳೆಯಲು ಸಹಾಯ ಮಾಡುವ ಸಾಧನಗಳಾಗಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು.
ನಿಮ್ಮ ಸ್ನೇಹಿತರು, ಸಹಪಾಠಿಗಳು ಮತ್ತು SSLC (ಎಸ್ಎಸ್ಎಲ್ಸಿ) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಎಲ್ಲಾ ವಿದ್ಯಾರ್ಥಿಗಳಿಗೂ ಎಸ್ಎಸ್ಎಲ್ಸಿ(SSLC) ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇವೆ.
- Read more…
ವಿದ್ಯಾರ್ಥಿಗಳೇ ಮಿಸ್ ಮಾಡಬೇಡಿ! SSLC ಬೋರ್ಡ್ ಪರೀಕ್ಷೆ 2026-27ರ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳು ಇಲ್ಲಿವೆ
Frequently Asked Questions (FAQ)
1. SSLC 2026-27 ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳು ಎಲ್ಲಿ ಲಭ್ಯವಿವೆ?
ವಿದ್ಯಾರ್ಥಿಗಳು ಈ ಲೇಖನದಲ್ಲಿ ನೀಡಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಷಯವಾರು ಮಾದರಿ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಬಹುದು.
2. ಮಾದರಿ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಬಹುದೇ?
ವೆಬ್ಸೈಟ್ನಲ್ಲಿ PDF ಡೌನ್ಲೋಡ್ ಸೌಲಭ್ಯ ಲಭ್ಯವಿದ್ದಲ್ಲಿ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಬಹುದು.
3. ಎಲ್ಲಾ ವಿಷಯಗಳ ಪ್ರಶ್ನೆಪತ್ರಿಕೆಗಳು ಲಭ್ಯವಿವೆಯೇ?
ವೆಬ್ಸೈಟ್ನಲ್ಲಿ ಲಭ್ಯವಿರುವ ವಿಷಯವಾರು ವಿಭಾಗಗಳನ್ನು ಪರಿಶೀಲಿಸಿ ಅಗತ್ಯವಿರುವ ಪ್ರಶ್ನೆಪತ್ರಿಕೆಗಳನ್ನು ಪಡೆಯಬಹುದು.
4. SSLC ಪರೀಕ್ಷೆಗೆ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು ಉಪಯುಕ್ತವೇ?
ಹೌದು. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಸ್ವರೂಪ ಹಾಗೂ ಪ್ರಶ್ನೆಗಳ ಮಾದರಿಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
5. ಮಾದರಿ ಪ್ರಶ್ನೆಪತ್ರಿಕೆಗಳ ಉತ್ತರಗಳು ಲಭ್ಯವಿವೆಯೇ?
ಸಂಬಂಧಪಟ್ಟ ವೆಬ್ಸೈಟ್ನಲ್ಲಿ ಉತ್ತರ ಸೂಚಿಗಳು ಅಥವಾ ಪ್ರಮುಖ ಉತ್ತರಗಳು ಲಭ್ಯವಿದ್ದರೆ ಅವುಗಳನ್ನು ಬಳಸಿಕೊಂಡು ನಿಮ್ಮ ಉತ್ತರಗಳನ್ನು ಪರಿಶೀಲಿಸಬಹುದು.
6. ಮಾದರಿ ಪ್ರಶ್ನೆಪತ್ರಿಕೆಗಳನ್ನು ಎಷ್ಟು ಬಾರಿ ಬಿಡಿಸಬೇಕು?
ಪ್ರತಿಯೊಂದು ವಿಷಯದ ಕನಿಷ್ಠ ಎರಡು ಅಥವಾ ಮೂರು ವಿಭಿನ್ನ ಮಾದರಿ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯದಲ್ಲಿ ಬಿಡಿಸುವುದು ಉತ್ತಮ ಅಭ್ಯಾಸವಾಗಿದೆ.
7. ಮಾದರಿ ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಗಳೇ ಬೋರ್ಡ್ ಪರೀಕ್ಷೆಯಲ್ಲಿ ಬರುತ್ತವೆಯೇ?
ಅಗತ್ಯವಿಲ್ಲ. ಮಾದರಿ ಪ್ರಶ್ನೆಪತ್ರಿಕೆಗಳು ಪರೀಕ್ಷೆಯ ಸ್ವರೂಪ ಹಾಗೂ ಅಭ್ಯಾಸಕ್ಕಾಗಿ ನೀಡಲಾಗುತ್ತವೆ. ಆದ್ದರಿಂದ ಸಂಪೂರ್ಣ ಪಠ್ಯಕ್ರಮವನ್ನು ಓದಬೇಕು.
8. SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಏನು ಮಾಡಬೇಕು?
ನಿಯಮಿತ ಅಧ್ಯಯನ, ಪಠ್ಯಪುಸ್ತಕದ ಪುನರಾವರ್ತನೆ, ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮತ್ತು ಸಮಯ ನಿರ್ವಹಣೆ ಅತ್ಯಂತ ಮುಖ್ಯ.
9. ಶಿಕ್ಷಕರು ಈ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಬಹುದೇ?
ಹೌದು. ಲಭ್ಯವಿರುವ ಶೈಕ್ಷಣಿಕ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಶಿಕ್ಷಕರು ಬಳಸಬಹುದು. ಸಂಬಂಧಪಟ್ಟ ಸಂಪನ್ಮೂಲಗಳ ಬಳಕೆಯ ನಿಯಮಗಳನ್ನು ಪಾಲಿಸಬೇಕು.
10. SSLC ಮಾದರಿ ಪ್ರಶ್ನೆಪತ್ರಿಕೆಗಳು ಉಚಿತವೇ?
ಇದು ಸಂಬಂಧಪಟ್ಟ ವೆಬ್ಸೈಟ್ನ ನಿಯಮಗಳನ್ನು ಅವಲಂಬಿಸಿರುತ್ತದೆ. ವೆಬ್ಸೈಟ್ನಲ್ಲಿ ಉಚಿತವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು.
