Teachers: ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.
Teachers:ನಮ್ಮ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಯಲ್ಲಿ ವಯೋನಿವೃತ್ತಿ ಹಾಗೂ ಪದೋನ್ನತಿಯಿಂದ ಖಾಲಿ ಇರುವ 02 ಸಹಶಿಕ್ಷಕರ(Teachers) ಹುದ್ದೆಗಳನ್ನು ಭರ್ತಿ ಮಾಡಲು ಮಾನ್ಯ ಅಪರ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಇವರ ಆದೇಶಲಾಗಿದೆ.
ಅರ್ಜಿ ಸಲ್ಲಿಸುವವರು ಅಧ್ಯಕ್ಷರು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ನಿಯಮಿತ ಹುಲಕೋಟಿ ಗದಗ ಇದರ ಹೆಸರಿನಲ್ಲಿ ರೂ.1000/-ರೂಪಾಯಿಗಳ ಬೇಡಿಕೆ ಹುಂಡಿಯನ್ನು (ಡಿಡಿ) ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದು ಸ್ವಯಂದೃಢೀಕೃತ ಅಗತ್ಯ ವಿದ್ಯಾರ್ಹತೆ ಹಾಗೂ ಮೀಸಲಾತಿ ಪ್ರಮಾಣ ಪತ್ರಗಳನ್ನು ಪ್ರಕಟಣೆಗೊಂಡ 21 ದಿನದೊಳಗಾಗಿ ಅಧ್ಯಕ್ಷರು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ, ನಿಯಮಿತ ಗದಗ ಕೆ.ಎಚ್. ಪಾಟೀಲ್ ಕ್ರೀಡಾಂಗಣ ಹತ್ತಿರ-582101 ಈ ವಿಳಾಸಕ್ಕೆ ಕಳಿಸುವುದು ಸದರ ಅರ್ಜಿಯ ಒಂದು ಪ್ರತಿಯನ್ನು ಉಪನೀರ್ದೆಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇಲ್ಲಿಗೆ ಒಂದು ಪ್ರತಿಯನ್ನು ಕಳಿಸಲು ತಿಳಿಸಿದೆ. ಅನುಭವಸ್ತರಿಗೆ ಪ್ರಾಶ್ಯಸ್ತ್ರ ನೀಡಲಾಗುವುದು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲಾ.