PM-KISAN:ಪಿಎಂ ಕಿಸಾನ್(PM-KISAN) ಯೋಜನೆ ಹೊಸ ಪಟ್ಟಿ, ನಿಮ್ಮ ಹೆಸರಿದೆಯೇ ಎಂದು ಒಮ್ಮೆ ನೋಡಿಕೊಳ್ಳಿ.

PM-KISAN:ಪಿಎಂ ಕಿಸಾನ್(PM-KISAN) ಯೋಜನೆ ಹೊಸ ಪಟ್ಟಿ, ನಿಮ್ಮ ಹೆಸರಿದೆಯೇ ಎಂದು ಒಮ್ಮೆ ನೋಡಿಕೊಳ್ಳಿ.

PM-KISAN

  PM-KISAN (ಪಿಎಂಕಿಸಾನ್)ಯೋಜನೆಯಡಿ 20ನೇ  ಕಂತಿನ ಹಣ ಬಿಡುಗಡೆಗೆ ಸಂಭಾವ್ಯ ದಿನಾಂಕ ಹತ್ತಿರವಾಗುತ್ತಿದ್ದರೂ, ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. 2025ರ ಫೆಬ್ರವರಿ 24ರಂದು 19ನೇ ಕಂತಿನ  ಹಣ ಬಿಡುಗಡೆಗೊಂಡಿದ್ದು, 4 ತಿಂಗಳ ಅವಧಿಯಲ್ಲಿ ಇನ್ನೊಂದು ಕಂತಿನ ಹಣ ಜಮೆಯಾಗಬೇಕಾಗಿತ್ತು.
ಮಾಹಿತಿಗಳ ಪ್ರಕಾರ ಮೇ ಅಥವಾ ಜೂನ್‌ನಲ್ಲಿ ಈ ಹಣ ರೈತರ ಖಾತೆಗೆ ನೇರವಾಗಿ (Direct Transfer) ಜಮೆಯಾಗುವ ಸಾಧ್ಯತೆ ಇದೆ.

  ಈ ಬಾರಿ ಸಹ ಸುಮಾರು 9.8 ಕೋಟಿ ರೈತರು ಈ ಕಂತಿನ ಹಣ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಯಾರಿಗೂ ವಿಳಂಬ ಆಗದೆ ಹಣ ಸಿಗಬೇಕಾದರೆ ಕೆಲವು ಮಹತ್ವದ ಪ್ರಕ್ರಿಯೆಗಳು ಅಗತ್ಯ.

  ಎಲ್ಲಾ ರೈತರೂ ತಮ್ಮ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆ ಪಿಎಂ ಕಿಸಾನ್(PM-KISAN) ಪೋರ್ಟಲ್ ಬದಲಾಗಿ ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ (CSC) ಮೂಲಕ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಮಾಡಬಹುದು.

  ಅದೇ ರೀತಿ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು ಹಾಗೂ ಭೂಮಿ ದಾಖಲಾತಿಗಳು ಸರಿಯಾಗಿವೆಯೇ ಎಂಬುದನ್ನು ದೃಢೀಕರಿಸಬೇಕು. ಈ ಮಾಹಿತಿ ಸರಿಯಾಗಿ ಇರದಿದ್ದರೆ, ಪಾವತಿ ಹಣ ತಡವಾಗಬಹುದು ಹಾಗೂ ಬ್ಲಾಕ್ ಆಗಬಹುದು (Payment Failure).

  ನೀವು ಫಲಾನುಭವಿಗಳ ಪಟ್ಟಿಯಲ್ಲಿ ಇದ್ದೀರಾ ಎಂಬುದನ್ನು ಪರಿಶೀಲಿಸಲು pmkisan.gov.in ವೆಬ್‌ಸೈಟ್‌ಗೆ ಹೋಗಿ, ‘ಫಾರ್ಮರ್ಸ್ ಕಾರ್ನರ್’ ವಿಭಾಗದಲ್ಲಿ “Beneficiary List” ಅಥವಾ “Know Your Status” ಆಯ್ಕೆ ಮಾಡಿ. ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಗ್ರಾಮ ಆಯ್ಕೆ ಮಾಡಿದ ಬಳಿಕ “Get Report” ಕ್ಲಿಕ್ ಮಾಡಿದರೆ ಹೆಸರು ಬರುವುದು.

  ಯಾವುದೇ ಅನುಮಾನಗಳಿದ್ದರೆ ಪಿಎಂ ಕಿಸಾನ್ (PM-KISAN) ಸಹಾಯವಾಣಿ 155261 ಮತ್ತು 011-24300606 ಗೆ ಕರೆಮಾಡಬಹುದು, ಹಾಗೂ pmkisan-ict@gov.in ಗೆ ಇಮೇಲ್ ಮೂಲಕ ಸಂಪರ್ಕಿಸಬಹುದು. ನಿಮ್ಮ ದಾಖಲೆ ಸರಿಯಾಗಿದ್ದರೆ, ಪಾವತಿ ಸುಗಮವಾಗಿ ಜಮೆಯಾಗುತ್ತದೆ.

WhatsApp Group Join Now
Telegram Group Join Now