Bengaluru DUDC Recruitment 2026: ಬೆಂಗಳೂರು ಜಿಲ್ಲೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 142 ಹುದ್ದೆಗಳ ನೇಮಕಾತಿ, ವಿದ್ಯಾರ್ಹತೆ ಬೇಡ – ಕೂಡಲೇ ಅರ್ಜಿ ಸಲ್ಲಿಸಿ!

Bengaluru DUDC Recruitment 2026: ಬೆಂಗಳೂರು ಜಿಲ್ಲೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 142 ಹುದ್ದೆಗಳ ನೇಮಕಾತಿ, ವಿದ್ಯಾರ್ಹತೆ ಬೇಡ – ಕೂಡಲೇ ಅರ್ಜಿ ಸಲ್ಲಿಸಿ!

Bengaluru DUDC Recruitment 2026: ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ (DUDC), ಬೆಂಗಳೂರು ವತಿಯಿಂದ ಮಾದನಾಯಕನಹಳ್ಳಿ ಮತ್ತು ಹೆಬ್ಬಗೋಡಿ ನಗರಸಭೆಗಳಲ್ಲಿ ಒಟ್ಟು 142 ನೇರಪಾವತಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ವಿದ್ಯಾರ್ಹತೆ ಕಡ್ಡಾಯವಿಲ್ಲ ಎಂಬುದು ಪ್ರಮುಖ ಆಕರ್ಷಣೆಯಾಗಿದೆ.

ಮುಖ್ಯಾಂಶಗಳು

  • ಸಂಸ್ಥೆ: ಜಿಲ್ಲಾ ನಗರಾಭಿವೃದ್ಧಿ ಕೋಶ (DUDC), ಬೆಂಗಳೂರು
  • ಉದ್ಯೋಗ ಸ್ಥಳ: ಬೆಂಗಳೂರು ನಗರ ಜಿಲ್ಲೆ
  • ಒಟ್ಟು ಹುದ್ದೆಗಳು: 142
  • ಮಾದನಾಯಕನಹಳ್ಳಿ ನಗರಸಭೆ: 62 ಹುದ್ದೆಗಳು
  • ಹೆಬ್ಬಗೋಡಿ ನಗರಸಭೆ: 80 ಹುದ್ದೆಗಳು
  • ಉದ್ಯೋಗ ಪ್ರಕಾರ: ನೇರಪಾವತಿ ಹುದ್ದೆಗಳು

ಯಾವ ಹುದ್ದೆಗಳಿಗೆ ನೇಮಕಾತಿ?

ಈ ನೇಮಕಾತಿಯಲ್ಲಿ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

  • ಯುಜಿಡಿ ಹೆಲ್ಪರ್ಸ್ (UGD Helpers)
  • ಕ್ಲೀನರ್ಸ್ (Cleaners)
  • ಹೆಲ್ಪರ್ಸ್ (Helpers)

ಅರ್ಜಿ ಸಲ್ಲಿಸಲು ಯಾರು ಅರ್ಹರು?

ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  • ವಿದ್ಯಾರ್ಹತೆ ಕಡ್ಡಾಯವಿಲ್ಲ.
  • ಕನ್ನಡ ಮಾತನಾಡಲು ತಿಳಿದಿರಬೇಕು.
  • ವಯಸ್ಸು 18 ರಿಂದ 50 ವರ್ಷಗಳೊಳಗೆ ಇರಬೇಕು.
  • ಕನಿಷ್ಠ ಒಂದು ವರ್ಷ ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ಆಧಾರದ ಮೇಲೆ UGD Helper, Cleaner ಅಥವಾ Helper ಆಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸುವ ದಿನಾಂಕ
  • ಅರ್ಜಿ ಆರಂಭ: 22 ಜುಲೈ 2026
  • ಕೊನೆಯ ದಿನಾಂಕ: 21 ಆಗಸ್ಟ್ 2026
ಅರ್ಜಿ ನಮೂನೆ ಎಲ್ಲಿ ಸಿಗುತ್ತದೆ?

ಅರ್ಜಿ ನಮೂನೆಯನ್ನು ಈ ಕಚೇರಿಗಳಲ್ಲಿ ಪಡೆಯಬಹುದು.

  • ಮಾದನಾಯಕನಹಳ್ಳಿ ನಗರಸಭೆ ಕಚೇರಿ
  • ಹೆಬ್ಬಗೋಡಿ ನಗರಸಭೆ ಕಚೇರಿ
ಅರ್ಜಿ ಸಲ್ಲಿಸಬಹುದಾದ ವರ್ಗಗಳು

ಈ ಕೆಳಗಿನ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಪರಿಶಿಷ್ಟ ಜಾತಿ (SC)
  • ಪರಿಶಿಷ್ಟ ಪಂಗಡ (ST)
  • ಪ್ರವರ್ಗ-1
  • 2A
  • 2B
  • 3A
  • 3B
  • ಸಾಮಾನ್ಯ ವರ್ಗ
  • ಇತರೆ ಅರ್ಹ ಅಭ್ಯರ್ಥಿಗಳು
ಆಯ್ಕೆ ಪ್ರಕ್ರಿಯೆ

ಅಧಿಸೂಚನೆಯಲ್ಲಿ ತಿಳಿಸಿರುವ ನಿಯಮಗಳು ಮತ್ತು ಅರ್ಹತೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅಗತ್ಯ ದಾಖಲೆಗಳು(Important Documents)

ಅರ್ಜಿ ಸಲ್ಲಿಸುವಾಗ ಸಾಮಾನ್ಯವಾಗಿ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

  • ಆಧಾರ್ ಕಾರ್ಡ್
  • ವಯಸ್ಸಿನ ದಾಖಲೆ
  • ಅನುಭವ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಪಾಸ್‌ಪೋರ್ಟ್ ಗಾತ್ರದ ಫೋಟೋ
ಪ್ರಮುಖ ಸೂಚನೆ(Important Notis)

ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರವೇ ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

Notification Link – Click Here Download
Website Link – Click Here
WhatsApp Group Join Now
Telegram Group Join Now