Karnataka Teacher Exam 2027: ಕರ್ನಾಟಕ ಸರ್ಕಾರಿ ಶಿಕ್ಷಕರ ನೇಮಕಾತಿ 2027: PST / GPT / HS ಪರೀಕ್ಷಾ ದಿನಾಂಕ ಪ್ರಕಟ – ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

Karnataka Teacher Exam 2027: ಕರ್ನಾಟಕ ಸರ್ಕಾರಿ ಶಿಕ್ಷಕರ ನೇಮಕಾತಿ 2027: PST / GPT / HS ಪರೀಕ್ಷಾ ದಿನಾಂಕ ಪ್ರಕಟ – ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

Karnataka Teacher Exam 2027: ಕರ್ನಾಟಕ ರಾಜ್ಯದಲ್ಲಿ PST, GPT, HS ಶಿಕ್ಷಕರ ನೇಮಕಾತಿಯ ಪರೀಕ್ಷೆ ದಿನಾಂಕ ಪ್ರಕಟವಾಗಿದೆ. 2026-27ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆ ಜನವರಿ 18, 2027ರಿಂದ ಆರಂಭವಾಗಲಿದೆ. ಸಂಪೂರ್ಣ ಮಾಹಿತಿ ಮತ್ತು ವೇಳಾಪಟ್ಟಿ ವಿವರಗಳನ್ನು ಇಲ್ಲಿ ತಿಳಿಯಿರಿ…

Karnataka Teacher Exam 2027: PST / GPT / HS ಶಿಕ್ಷಕರ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ 2027 – ಜನವರಿ 18ರಿಂದ ಸ್ಪರ್ಧಾತ್ಮಕ ಪರೀಕ್ಷೆ ಆರಂಭ

ನಮ್ಮ ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗುವ ಕನಸು ಕಾಣುತ್ತಿರುವಂತಹ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. 2026-27ನೇ ಸಾಲಿನ ಸರ್ಕಾರಿ ಶಾಲಾ ಶಿಕ್ಷಕರ ವಿವಿಧ ವೃಂದಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಶಾಲಾ ಶಿಕ್ಷಣ ಇಲಾಖೆಯೂ ಪ್ರಕಟಿಸಿದೆ. PST / GPT / HS ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿರುವಂತಹ ಅಭ್ಯರ್ಥಿಗಳಿಗೆ ಈ ಪ್ರಕಟಣೆಯೂ ಮಹತ್ವದ ಮಾಹಿತಿಯಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ, ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು ಇವರ ವತಿಯಿಂದ ದಿನಾಂಕ 20-11-2026ರಂದು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯ ಪ್ರಕಾರ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ವಿವಿಧ ವೃಂದಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 18-01-2027ರಿಂದ ನಡೆಸಲು ಉದ್ದೇಶಿಸಲಾಗಿದೆ.

ಈ ಪರೀಕ್ಷೆಯ ಕುರಿತು ಸಂಪೂರ್ಣ ವೇಳಾಪಟ್ಟಿಯನ್ನು ಸೇರ್ಪಡೆ ಅಧಿಸೂಚನೆಯ ಮೂಲಕ ಪ್ರಕಟಿಸಲಾಗುವುದು ಎಂದು ಇಲಾಖೆಯೂ ತಿಳಿಸಿದೆ.

ಈ ಲೇಖನದಲ್ಲಿ ನಾವು PST, GPT ಮತ್ತು HS ಶಿಕ್ಷಕರ ನೇಮಕಾತಿ ಪರೀಕ್ಷೆಯ ದಿನಾಂಕ, ಅಧಿಕೃತ ಪ್ರಕಟಣೆಯ ವಿವರಗಳು, ಪರೀಕ್ಷಾ ವೇಳಾಪಟ್ಟಿ, ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು, ಪರೀಕ್ಷಾ ಸಿದ್ಧತೆ, ಪ್ರವೇಶ ಪತ್ರ, ಅಧಿಕೃತ ಅಧಿಸೂಚನೆ ಮತ್ತು ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ವಿವರವಾಗಿ ತಿಳಿದುಕೊಳ್ಳೋಣ.

PST / GPT / HS ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಮುಖ ಸುದ್ದಿ

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳ ವಿವಿಧ ಶಿಕ್ಷಕ ವೃಂದಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವು ಪ್ರಕಟವಾಗಿರುವುದು ಅಭ್ಯರ್ಥಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಈ ಹಿಂದೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಕುರಿತು ಮಾಹಿತಿ ನಿರೀಕ್ಷಿಸುತ್ತಿದ್ದ ಅಭ್ಯರ್ಥಿಗಳು ಇದೀಗ ಪರೀಕ್ಷೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸಿದ್ಧತೆಯನ್ನು ಚುರುಕುಗೊಳಿಸಬೇಕಾಗಿದೆ.

ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಜನವರಿ 18, 2027ರಿಂದ ಸ್ಪರ್ಧಾತ್ಮಕ ಪರೀಕ್ಷೆ ಆರಂಭವಾಗಲಿದೆ.

ಇದು ಪರೀಕ್ಷೆಯ ಆರಂಭದ ದಿನಾಂಕವಾಗಿದ್ದು, ಎಲ್ಲಾ ಅಭ್ಯರ್ಥಿಗಳ ಪರೀಕ್ಷೆಗಳು ಇದೇ ದಿನ ನಡೆಯುತ್ತವೆ ಎಂಬ ಅರ್ಥವಲ್ಲ. ಯಾವ ವೃಂದದ ಪರೀಕ್ಷೆ ಯಾವ ದಿನ ನಡೆಯಲಿದೆ ಎಂಬುದನ್ನು ವಿವರವಾದ ವೇಳಾಪಟ್ಟಿಯಲ್ಲಿ ತಿಳಿಸಲಾಗುತ್ತದೆ.

Karnataka Teacher Exam 2027: ಅಧಿಕೃತ ಪ್ರಕಟಣೆಯ ಸಂಪೂರ್ಣ ವಿವರ

ಈ ಶಿಕ್ಷಕರ ನೇಮಕಾತಿಯ ಪರೀಕ್ಷೆಯ ಕುರಿತು ಪ್ರಕಟಿಸಿರುವ ಮಾಹಿತಿಯ ವಿವರಗಳು ಈ ಕೆಳಗಿನಂತಿವೆ.

  ವಿವರ – ಮಾಹಿತಿ

  • ಇಲಾಖೆ – ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ
  • ಕಚೇರಿ – ಆಯುಕ್ತರ ಕಚೇರಿ
  • ವಿಭಾಗ – ಕೇಂದ್ರೀಕೃತ ದಾಖಲಾತಿ ಘಟಕ
  • ನೇಮಕಾತಿ ವರ್ಷ – 2026-27
  • ಹುದ್ದೆಗಳ ವರ್ಗ – PST / GPT / HS ಸೇರಿದಂತೆ ವಿವಿಧ ಶಿಕ್ಷಕ ವೃಂದಗಳು
  • ಪ್ರಕಟಣೆಯ ದಿನಾಂಕ – 20-11-2026
  • ಪತ್ರ ಸಂಖ್ಯೆ – ಸಿ.ಎ.ಸಿ/ಶಿ/ನೇಮಕಾತಿ-2026-2027
  • ಪರೀಕ್ಷೆಯ ಪ್ರಾರಂಭದ ದಿನಾಂಕ – 18-01-2027
  • ಪರೀಕ್ಷೆಯ ಸ್ವರೂಪ – ಸ್ಪರ್ಧಾತ್ಮಕ ಪರೀಕ್ಷೆ
  • ಪರೀಕ್ಷಾ ವೇಳಾಪಟ್ಟಿ – ಸೇರ್ಪಡೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು
  • ಪ್ರಕಟಣೆ ಹೊರಡಿಸಿದವರು – ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು

ಈ ಮೇಲಿನ ಮಾಹಿತಿಯೂ ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

PST / GPT / HS ಶಿಕ್ಷಕರ ನೇಮಕಾತಿ ಎಂದರೇನು?

ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿವಿಧ ಹಂತಗಳಲ್ಲಿ ಬೋಧನಾ ಕಾರ್ಯ ನಿರ್ವಹಿಸಲು ಶಿಕ್ಷಕರ ನೇಮಕಾತಿ ನಡೆಯುತ್ತದೆ.

ಶಾಲಾ ಶಿಕ್ಷಣ ಇಲಾಖೆಯೂ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಶಿಕ್ಷಕ ವೃಂದಗಳಿಗೆ ಸಂಬಂಧಿಸಿದಂತೆ ಹುದ್ದೆಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ.

PST, GPT ಮತ್ತು HS ಎಂಬ ಸಂಕ್ಷಿಪ್ತ ಹೆಸರುಗಳನ್ನು ಅಭ್ಯರ್ಥಿಗಳು ಈ ನೇಮಕಾತಿ ಅಧಿಸೂಚನೆಯಲ್ಲಿ ಗಮನಿಸಬೇಕು.

ಈ ವೃಂದಗಳಿಗೆ ಸಂಬಂಧಿಸಿದಂತೆ ಹುದ್ದೆಗಳ ನಿಖರ ಹೆಸರು, ಅರ್ಹತೆ, ವಿಷಯವಾರು ಹುದ್ದೆಗಳ ಸಂಖ್ಯೆ, ವಯೋಮಿತಿ, ಮೀಸಲಾತಿ, ಪರೀಕ್ಷಾ ವಿಧಾನ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಸಂಬಂಧಿತ ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿಯೇ ಪರಿಶೀಲಿಸಬೇಕು.

ಅಭ್ಯರ್ಥಿಗಳು ಕೇವಲ ಸಂಕ್ಷಿಪ್ತ ಹೆಸರುಗಳನ್ನು ಆಧರಿಸಿ ತಮ್ಮ ಅರ್ಹತೆಯನ್ನು ನಿರ್ಧರಿಸಬಾರದು.

ಜನವರಿ 18, 2027ರಿಂದ ಪರೀಕ್ಷೆ ಆರಂಭ – Karnataka Teacher Exam 2027

ಶಿಕ್ಷಕರ ನೇಮಕಾತಿ ಪರೀಕ್ಷೆಯ ದಿನಾಂಕ ಪ್ರಕಟವಾಗಿರುವುದು ಅಭ್ಯರ್ಥಿಗಳಿಗೆ ಸಿದ್ಧತೆಗಾಗಿ ಸ್ಪಷ್ಟವಾಗಿ ಗುರಿಯನ್ನು ನೀಡಿದೆ.

ಈ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ 18-01-2027ರಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಇದರಿಂದ ಅಭ್ಯರ್ಥಿಗಳು ತಮ್ಮ ಓದುವ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಅನುಕೂಲವಾಗುತ್ತದೆ.

ಪರೀಕ್ಷೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಈ ಕೆಳಗಿನ ಕಾರ್ಯಗಳನ್ನು ತಕ್ಷಣ ಪ್ರಾರಂಭಿಸಬೇಕು.

  1. ಈಗಾಗಲೇ ಓದಿರುವ ವಿಷಯಗಳ ಪುನರಾವರ್ತನೆ ಮಾಡುವುದು.
  2. ವಿಷಯವಾರು ಪ್ರಮುಖ ಅಂಶಗಳನ್ನು ಗುರುತಿಸುವುದು.
  3. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು.
  4. ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು.
  5. ಸಮಯ ನಿರ್ವಹಣೆಯ ಅಭ್ಯಾಸ ಮಾಡುವುದು.
  6. ದುರ್ಬಲ ವಿಷಯಗಳಿಗೆ ಹೆಚ್ಚಿನ ಸಮಯ ಮೀಸಲಿಡುವುದು.
  7. ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮವನ್ನು ಪರಿಶೀಲಿಸುವುದು.
  8. ಇಲಾಖೆಯ ಮುಂದಿನ ಅಧಿಸೂಚನೆಗಳನ್ನು ಗಮನಿಸುವುದು.

ಪರೀಕ್ಷೆಯ ದಿನಾಂಕವನ್ನು ಪ್ರಕಟವಾದ ಅನಂತರ ಅಭ್ಯರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವ್ಯವಸ್ಥಿತವಾಗಿ ಸಿದ್ಧತೆ ನಡೆಸುವುದು ಮುಖ್ಯ.

ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಯಾವಾಗ ಪ್ರಕಟವಾಗುತ್ತದೆ?

ಶಾಲಾ ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಸೇರ್ಪಡೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಹೀಗಾಗಿ ಪ್ರಸ್ತುತವಾಗಿ ಲಭ್ಯವಿರುವ ಪ್ರಕಟಣೆಯಿಂದ ಪರೀಕ್ಷೆಯ ಎಲ್ಲಾ ವಿಷಯಗಳ ದಿನಾಂಕ ಹಾಗೂ ಸಮಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.

ಸೇರ್ಪಡೆ ಅಧಿಸೂಚನೆ ಪ್ರಕಟವಾದ ನಂತರ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ಪರಿಶೀಲಿಸಬೇಕು.

  • PST ಪರೀಕ್ಷೆಯ ದಿನಾಂಕ.
  • GPT ಪರೀಕ್ಷೆಯ ದಿನಾಂಕ.
  • HS ಶಿಕ್ಷಕರ ಪರೀಕ್ಷೆಯ ದಿನಾಂಕ.
  • ವಿಷಯವಾರು ಪರೀಕ್ಷಾ ದಿನಾಂಕ.
  • ಪರೀಕ್ಷೆಯ ಆರಂಭದ ಸಮಯ.
  • ಪರೀಕ್ಷೆಯ ಮುಕ್ತಾಯದ ಸಮಯ.
  • ಪರೀಕ್ಷಾ ಕೇಂದ್ರದ ವಿವರಗಳು.
  • ಪರೀಕ್ಷಾ ಅವಧಿ.
  • ಅಭ್ಯರ್ಥಿಗಳಿಗೆ ನೀಡಿರುವ ವಿಶೇಷ ಸೂಚನೆಗಳು.

ವಿವರವಾದ ವೇಳಾಪಟ್ಟಿ ಪ್ರಕಟವಾದ ತಕ್ಷಣ ಅದನ್ನು ಪರಿಶೀಲಿಸಿ ತಮ್ಮ ತಮ್ಮ ಪರೀಕ್ಷೆಯ ದಿನಾಂಕವನ್ನು ಖಚಿತಪಡಿಸಿಕೊಳ್ಳಬೇಕು.

ಮುಖ್ಯ ಸೂಚನೆ: 18-01-2027 ಪರೀಕ್ಷೆಯ ಪ್ರಾರಂಭದ ದಿನಾಂಕ ಮಾತ್ರ. ಎಲ್ಲಾ ವೃಂದಗಳ ಪರೀಕ್ಷೆಯ ನಿಖರ ದಿನಾಂಕಗಳನ್ನು ಪ್ರತ್ಯೇಕ ವೇಳಾಪಟ್ಟಿಯ ಮೂಲಕ ಖಚಿತಪಡಿಸಿಕೊಳ್ಳಬೇಕು.

Karnataka Teacher Exam 2027: ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಅಭ್ಯರ್ಥಿಗಳು ಹೇಗೆ ಸಿದ್ಧತೆ ನಡೆಸಬೇಕು?

ಈ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆಯಲು ಕೇವಲ ಹೆಚ್ಚು ಗಂಟೆಗಳ ಕಾಲ ಓದುವುದಷ್ಟೇ ಸಾಕಾಗುವುದಿಲ್ಲ. ಸರಿಯಾದ ಅಧ್ಯಯನ ಯೋಜನೆ, ವಿಷಯದ ಸ್ಪಷ್ಟ ತಿಳುವಳಿಕೆ, ನಿರಂತರವಾಗಿ ಅಭ್ಯಾಸ ಮತ್ತು ಸಮಯ ನಿರ್ವಹಣೆ ಅತ್ಯಂತ ಮುಖ್ಯ.

ಅಧಿಕೃತ ಪಠ್ಯಕ್ರಮವನ್ನು ಮೊದಲು ಪರಿಶೀಲಿಸಿ

ಅಭ್ಯರ್ಥಿಗಳು ತಮ್ಮ ಹುದ್ದೆಗೆ ಸಂಬಂಧಿಸಿದಂತೆ ಅಧಿಕೃತವಾದ ಪಠ್ಯಕ್ರಮವನ್ನು ಮೊದಲು ನೀವು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಯಾವ ವಿಷಯಗಳಿಗೆ ಎಷ್ಟು ಮಹತ್ವ ನೀಡಲಾಗಿದೆ ಎಂಬುದನ್ನು ತಿಳಿದುಕೊಂಡು ಅಧ್ಯಯನ ಆರಂಭಿಸಬೇಕು.

ಪಠ್ಯಕ್ರಮದ ಹೊರಗಿನ ವಿಷಯಗಳಿಗೆ ಅನಗತ್ಯವಾಗಿ ಹೆಚ್ಚು ಸಮಯ ವ್ಯಯಿಸಬಾರದು.

ವಿಷಯವಾರು ಅಧ್ಯಯನ ಯೋಜನೆ ರೂಪಿಸಿ

ಪ್ರತಿದಿನ ಓದಬೇಕಾದ ವಿಷಯಗಳನ್ನು ಮೊದಲೇ ನಿರ್ಧರಿಸಿಕೊಳ್ಳಿ.

ಉದಾಹರಣೆಗೆ:

  • ಬೆಳಿಗ್ಗೆ: ಪ್ರಮುಖ ಸಿದ್ಧಾಂತಗಳ ಅಧ್ಯಯನ.
  • ಮಧ್ಯಾಹ್ನ: ವಿಷಯವಾರು ಪ್ರಶ್ನೆಗಳ ಅಭ್ಯಾಸ.
  • ಸಂಜೆ: ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ.
  • ರಾತ್ರಿ: ದಿನದ ಪಾಠಗಳ ಪುನರಾವರ್ತನೆ.

ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ವೇಳಾಪಟ್ಟಿಯನ್ನು ಬದಲಾಯಿಸಬಹುದು.

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ

ಈ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಭ್ಯಾಸವು ಪರೀಕ್ಷೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರಶ್ನೆಗಳನ್ನು ಬಿಡಿಸುವುದರ ಜೊತೆಗೆ ತಪ್ಪಾದ ಉತ್ತರಗಳ ಕಾರಣವನ್ನೂ ತಿಳಿದುಕೊಳ್ಳಬೇಕು.

ಒಂದೇ ರೀತಿಯ ತಪ್ಪುಗಳು ಮರುಕಳಿಸದಂತೆ ಗಮನಹರಿಸಬೇಕು.

ಮಾದರಿ ಪರೀಕ್ಷೆಗಳನ್ನು ಬರೆಯಿರಿ

ಪರೀಕ್ಷೆಗೆ ಮುನ್ನ Mock Test ಬರೆಯುವುದು ಉತ್ತಮವಾದ ಅಭ್ಯಾಸವಾಗಿದೆ.

ಇದರಿಂದ ಸಮಯ ನಿರ್ವಹಣೆ, ಪ್ರಶ್ನೆಗಳನ್ನು ಆಯ್ಕೆ ಮಾಡುವುದು ಹಾಗೂ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಹೆಚ್ಚುತ್ತದೆ.

ಪ್ರತಿದಿನ ಪುನರಾವರ್ತನೆ ಮಾಡಿ

ಹೊಸದಾಗಿ ಕಲಿಯುವುದಕ್ಕಿಂತ ಕಲಿತ ವಿಷಯಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳುವುದು ಕೂಡ ಮುಖ್ಯ.

ಪ್ರತಿದಿನ ಕನಿಷ್ಠ ಸ್ವಲ್ಪ ಸಮಯವನ್ನು ಹಿಂದಿನ ಪಾಠಗಳ ಪುನರಾವರ್ತನೆಗೆ ಮೀಸಲಿಡಿ.

PST / GPT / HS ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು – Karnataka Teacher Exam 2027

ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  1. ಪರೀಕ್ಷೆಯ ಅಧಿಕೃತ ವೇಳಾಪಟ್ಟಿಗಾಗಿ ಕಾಯಿರಿ.
  2. ಇಲಾಖೆಯ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಿರಿ.
  3. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದೃಢೀಕರಿಸದ ಮಾಹಿತಿಯನ್ನು ನಂಬಬೇಡಿ.
  4. ಪರೀಕ್ಷಾ ಪ್ರವೇಶ ಪತ್ರದ ಪ್ರಕಟಣೆಯನ್ನು ಗಮನಿಸಿ.
  5. ಅರ್ಜಿ ಸಲ್ಲಿಸುವಾಗ ನೀಡಿರುವ ವಿವರಗಳನ್ನು ಪರಿಶೀಲಿಸಿ.
  6. ಪರೀಕ್ಷೆಗೆ ಅಗತ್ಯವಿರುವ ಗುರುತಿನ ಚೀಟಿಯನ್ನು ಸಿದ್ಧವಾಗಿಟ್ಟುಕೊಳ್ಳಿ.
  7. ಪರೀಕ್ಷಾ ಕೇಂದ್ರದ ವಿಳಾಸವನ್ನು ಮುಂಚಿತವಾಗಿ ಪರಿಶೀಲಿಸಿ.
  8. ಪರೀಕ್ಷೆಯ ದಿನಾಂಕ ಹಾಗೂ ಸಮಯವನ್ನು ಸರಿಯಾಗಿ ದಾಖಲಿಸಿಕೊಳ್ಳಿ.
  9. ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಸಂಪೂರ್ಣವಾಗಿ ಓದಿ.
  10. ಕೊನೆಯ ಕ್ಷಣದವರೆಗೆ ಓದುವುದನ್ನು ಮುಂದೂಡಬೇಡಿ.

ಪರೀಕ್ಷಾ ಪ್ರವೇಶ ಪತ್ರ (Hall Ticket) ಯಾವಾಗ ಬಿಡುಗಡೆಯಾಗುತ್ತದೆ?

ಈ ಶಿಕ್ಷಕರ ನೇಮಕಾತಿಯ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರವೇಶ ಪತ್ರದ ಬಿಡುಗಡೆ ದಿನಾಂಕವನ್ನು ಪ್ರಸ್ತುತ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿಲ್ಲ.

ಸಾಮಾನ್ಯವಾಗಿ ಪರೀಕ್ಷೆಗೆ ಮುನ್ನ ಇಲಾಖೆಯೂ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಪ್ರವೇಶ ಪತ್ರ ಲಭ್ಯವಾದ ನಂತರ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಪರಿಶೀಲಿಸಬೇಕು.

  • ಅಭ್ಯರ್ಥಿಯ ಹೆಸರು.
  • ನೋಂದಣಿ ಸಂಖ್ಯೆ.
  • ಅರ್ಜಿ ಸಂಖ್ಯೆ.
  • ಪರೀಕ್ಷೆಯ ಹೆಸರು.
  • ಪರೀಕ್ಷೆಯ ದಿನಾಂಕ.
  • ಪರೀಕ್ಷೆಯ ಸಮಯ.
  • ಪರೀಕ್ಷಾ ಕೇಂದ್ರ.
  • ಅಭ್ಯರ್ಥಿಯ ಭಾವಚಿತ್ರ.
  • ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳು.

ಈ ಪ್ರವೇಶ ಪತ್ರದಲ್ಲಿ ಯಾವುದೇ ತಪ್ಪು ಕಂಡುಬಂದರೆ ಸಂಬಂಧಪಟ್ಟ ಇಲಾಖೆಯ ಮಾರ್ಗಸೂಚಿಯಂತೆ ತಕ್ಷಣ ಸಂಪರ್ಕಿಸಬೇಕು.

ಗಮನಿಸಿ: ಪ್ರವೇಶ ಪತ್ರ ಬಿಡುಗಡೆಯ ನಿಖರ ದಿನಾಂಕವನ್ನು ಇಲಾಖೆ ಇನ್ನೂ ಪ್ರಕಟಿಸಿಲ್ಲ.

Karnataka Teacher Exam 2027: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು ಮಾಡಬೇಕಾದ ಸಿದ್ಧತೆ

ಪರೀಕ್ಷೆಯ ದಿನ ಯಾವುದೇ ತೊಂದರೆ ಎದುರಾಗದಂತೆ ಅಭ್ಯರ್ಥಿಗಳು ಮುಂಚಿತವಾಗಿ ಸಿದ್ಧರಾಗಬೇಕು.

ಪರೀಕ್ಷೆಯ ಹಿಂದಿನ ದಿನವೇ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮವಾಗಿದೆ.

ಸಾಮಾನ್ಯವಾಗಿ ಅಭ್ಯರ್ಥಿಗಳು ಈ ಕೆಳಗಿನವುಗಳನ್ನು ಸಿದ್ಧವಾಗಿಟ್ಟುಕೊಳ್ಳಬಹುದು.

  • ಪರೀಕ್ಷಾ ಪ್ರವೇಶ ಪತ್ರ.
  • ಮಾನ್ಯ ಗುರುತಿನ ಚೀಟಿ.
  • ಇಲಾಖೆಯೂ ಸೂಚಿಸಿರುವ ಇತರೇ ದಾಖಲೆಗಳು.
  • ಅಗತ್ಯವಿರುವ ಬರವಣಿಗೆ ಸಾಮಗ್ರಿಗಳು.

ಯಾವುದೇ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅನುಮತಿ ಇದೆ ಎಂಬುದನ್ನು ಪ್ರವೇಶ ಪತ್ರದಲ್ಲಿರುವ ಸೂಚನೆಗಳ ಮೂಲಕ ಒಮ್ಮೆ ಖಚಿತಪಡಿಸಿಕೊಳ್ಳಬೇಕು.

ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬಾರದು.

ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಲು 30 ದಿನಗಳ ಅಧ್ಯಯನ ಯೋಜನೆ – Karnataka Teacher Exam 2027

ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಂತಹ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಒಂದು ಮಾದರಿ 30 ದಿನಗಳ ಅಧ್ಯಯನ ಯೋಜನೆಯನ್ನು ನಾವು ಇಲ್ಲಿ ನೀಡಲಾಗಿದೆ.

ಈ ಯೋಜನೆಯನ್ನು ಅಭ್ಯರ್ಥಿಗಳು ತಮ್ಮ ಅಧಿಕೃತ ಪಠ್ಯಕ್ರಮ ಹಾಗೂ ಸಿದ್ಧತೆಯ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು.

ಮೊದಲ 10 ದಿನಗಳು:

  • ಅಧಿಕೃತ ಪಠ್ಯಕ್ರಮದ ಸಂಪೂರ್ಣ ಪರಿಶೀಲನೆ.
  • ಪ್ರಮುಖ ವಿಷಯಗಳ ಅಧ್ಯಯನ.
  • ಕಠಿಣ ವಿಷಯಗಳಿಗೆ ಹೆಚ್ಚಿನ ಸಮಯ.
  • ವಿಷಯವಾರು ಟಿಪ್ಪಣಿಗಳ ತಯಾರಿ.
  • ಪ್ರಮುಖ ಅಂಶಗಳ ಪಟ್ಟಿ ಮಾಡುವುದು.

11ರಿಂದ 20ನೇ ದಿನದವರೆಗೆ:

  • ಅಧ್ಯಯನ ಮಾಡಿದ ವಿಷಯಗಳ ಪುನರಾವರ್ತನೆ.
  • ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಭ್ಯಾಸ.
  • ಮಾದರಿ ಪ್ರಶ್ನೆಗಳನ್ನು ಬಿಡಿಸುವುದು.
  • ತಪ್ಪು ಉತ್ತರಗಳ ವಿಶ್ಲೇಷಣೆ.
  • ಸಮಯ ನಿರ್ವಹಣೆಯ ಅಭ್ಯಾಸ.

21ರಿಂದ 30ನೇ ದಿನದವರೆಗೆ:

  • ಸಂಪೂರ್ಣ ಪಠ್ಯಕ್ರಮದ ಪುನರಾವರ್ತನೆ.
  • ಪ್ರತಿದಿನ ಮಾದರಿ ಪರೀಕ್ಷೆ.
  • ಪ್ರಮುಖ ಪ್ರಶ್ನೆಗಳ ಅಭ್ಯಾಸ.
  • ದುರ್ಬಲ ವಿಷಯಗಳ ಮರುಅಧ್ಯಯನ.
  • ಪರೀಕ್ಷೆಗೆ ಅಗತ್ಯ ದಾಖಲೆಗಳ ಸಿದ್ಧತೆ.

ಈ ಯೋಜನೆಯಾ ಮಾದರಿಯಾಗಿದ್ದು, ಅಭ್ಯರ್ಥಿಗಳು ತಮ್ಮ ಪರೀಕ್ಷೆಯ ನಿಜವಾದ ದಿನಾಂಕಕ್ಕೆ ಅನುಗುಣವಾಗಿ ಸಿದ್ಧತೆಯನ್ನು ರೂಪಿಸಿಕೊಳ್ಳಬೇಕು.

ಅಧಿಕೃತ ಅಧಿಸೂಚನೆ ಮತ್ತು ಮುಂದಿನ ಮಾಹಿತಿಯನ್ನು ಎಲ್ಲಿ ಪರಿಶೀಲಿಸಬೇಕು?

PST / GPT / HS ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಪ್ರಕಟಣೆಗಳನ್ನು ಗಮನಿಸುತ್ತಿರಬೇಕು.

ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವ ಅಧಿಸೂಚನೆಗಳು, ವೇಳಾಪಟ್ಟಿ, ಪ್ರವೇಶ ಪತ್ರ ಮತ್ತು ಇತರ ಸೂಚನೆಗಳನ್ನು ಪರಿಶೀಲಿಸಬಹುದು.

ಅಧಿಕೃತ ವೆಬ್‌ಸೈಟ್:

https://schooleducation.karnataka.gov.in/

ವಿಶೇಷವಾಗಿ ಸೇರ್ಪಡೆ ಅಧಿಸೂಚನೆ ಪ್ರಕಟವಾದಾಗ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಪರಿಶೀಲಿಸುವುದು ಅಗತ್ಯ.

Karnataka Teacher Exam 2027: ಅಭ್ಯರ್ಥಿಗಳಿಗೆ ನಮ್ಮ ವಿಶೇಷ ಸಲಹೆ

ಶಿಕ್ಷಕರಾಗುವುದು ಅನೇಕ ವಿದ್ಯಾವಂತರ ಕನಸಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ಈ ನೇಮಕಾತಿಯ ಪರೀಕ್ಷೆ ಮಹತ್ವದ ಅವಕಾಶವಾಗಿದೆ.

ಪರೀಕ್ಷೆಯ ದಿನಾಂಕ ಪ್ರಕಟವಾಗಿರುವುದರಿಂದ ಅಭ್ಯರ್ಥಿಗಳು ತಮ್ಮ ಸಿದ್ಧತೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು.

ಪರೀಕ್ಷೆಗೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಭಾವಿಸಿ ಅಧ್ಯಯನವನ್ನು ಮುಂದೂಡುವುದು ಸರಿಯಲ್ಲ.

ಪ್ರತಿದಿನ ನಿರ್ದಿಷ್ಟ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಿ. ಓದಿದ ವಿಷಯಗಳನ್ನು ಪುನರಾವರ್ತನೆ ಮಾಡಿ. ಪರೀಕ್ಷೆಯ ಸ್ವರೂಪಕ್ಕೆ ಅನುಗುಣವಾಗಿ ಮಾದರಿ ಪ್ರಶ್ನೆಗಳನ್ನು ಬಿಡಿಸಿ.

ಅತ್ಯಂತ ಮುಖ್ಯವಾಗಿ ಅಧಿಕೃತ ಪಠ್ಯಕ್ರಮ ಮತ್ತು ಇಲಾಖೆಯ ಸೂಚನೆಗಳನ್ನು ಆಧರಿಸಿ ಸಿದ್ಧತೆ ನಡೆಸಿ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನಧಿಕೃತವಾಗಿ ಪರೀಕ್ಷಾ ವೇಳಾಪಟ್ಟಿ, ಪ್ರಶ್ನೆಪತ್ರಿಕೆ ಮತ್ತು ಇತರ ಮಾಹಿತಿಗಳನ್ನು ಪರಿಶೀಲಿಸದೆ ನಂಬಬೇಡಿ.

PST / GPT / HS ಶಿಕ್ಷಕರ ನೇಮಕಾತಿ ಪರೀಕ್ಷೆ 2027 – ಪ್ರಮುಖ ಮಾಹಿತಿ ಸಂಕ್ಷಿಪ್ತವಾಗಿ

  ಪ್ರಮುಖ ಅಂಶ – ವಿವರ

  • ನೇಮಕಾತಿ – ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ
  • ವರ್ಷ – 2026-27
  • ಪರೀಕ್ಷೆಯ ಪ್ರಾರಂಭ – 18 ಜನವರಿ 2027
  • ಪ್ರಕಟಣೆ ದಿನಾಂಕ – 20 ನವೆಂಬರ್ 2026
  • ಪರೀಕ್ಷಾ ವಿಧಾನ – ಸ್ಪರ್ಧಾತ್ಮಕ ಪರೀಕ್ಷೆ
  • ವೇಳಾಪಟ್ಟಿ – ಸೇರ್ಪಡೆ ಅಧಿಸೂಚನೆಯಲ್ಲಿ ಪ್ರಕಟ
  • ಪ್ರವೇಶ ಪತ್ರ – ಬಿಡುಗಡೆ ದಿನಾಂಕ ಪ್ರಕಟವಾಗಿಲ್ಲ
  • ಅಧಿಕೃತ ಇಲಾಖೆ – ಶಾಲಾ ಶಿಕ್ಷಣ ಇಲಾಖೆ

Karnataka Teacher Exam 2027: Frequently Asked Questions (FAQ) – ಪದೇಪದೇ ಕೇಳಲಾಗುವ ಪ್ರಶ್ನೆಗಳು

ಪ್ರಶ್ನೆ 1: PST / GPT / HS ಶಿಕ್ಷಕರ ನೇಮಕಾತಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆಯೇ?

ಉತ್ತರ: ಹೌದು. ಶಾಲಾ ಶಿಕ್ಷಣ ಇಲಾಖೆಯೂ 20-11-2026ರಂದು ಪ್ರಕಟಣೆ ಹೊರಡಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನು 18-01-2027ರಿಂದ ನಡೆಸುವುದಾಗಿ ತಿಳಿಸಿದೆ.

ಪ್ರಶ್ನೆ 2: ಶಿಕ್ಷಕರ ನೇಮಕಾತಿ ಪರೀಕ್ಷೆ ಯಾವಾಗ ಆರಂಭವಾಗಲಿದೆ?

ಉತ್ತರ: 18 ಜನವರಿ 2027ರಿಂದ ಪರೀಕ್ಷೆ ಆರಂಭವಾಗಲಿದೆ.

ಪ್ರಶ್ನೆ 3: PST ಪರೀಕ್ಷೆಯ ದಿನಾಂಕ ಯಾವುದು?

ಉತ್ತರ: ಪ್ರಸ್ತುತ ಪ್ರಕಟಣೆಯಲ್ಲಿ ಎಲ್ಲಾ ವೃಂದಗಳ ಪ್ರತ್ಯೇಕ ಪರೀಕ್ಷಾ ದಿನಾಂಕಗಳನ್ನು ನೀಡಿಲ್ಲ. ವಿವರವಾದ ವೇಳಾಪಟ್ಟಿಯನ್ನು ಸೇರ್ಪಡೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.

ಪ್ರಶ್ನೆ 4: GPT ಶಿಕ್ಷಕರ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆಯೇ?

ಉತ್ತರ: ಪ್ರಸ್ತುತ ಪ್ರಕಟಣೆಯಲ್ಲಿ ಪ್ರತ್ಯೇಕ GPT ಪರೀಕ್ಷೆಯ ದಿನಾಂಕವನ್ನು ತಿಳಿಸಿಲ್ಲ. ಮುಂದಿನ ವೇಳಾಪಟ್ಟಿಯನ್ನು ಪರಿಶೀಲಿಸಬೇಕು.

ಪ್ರಶ್ನೆ 5: HS ಶಿಕ್ಷಕರ ನೇಮಕಾತಿ ಪರೀಕ್ಷೆ ಯಾವಾಗ ನಡೆಯಲಿದೆ?

ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳು 18-01-2027ರಿಂದ ಆರಂಭವಾಗಲಿವೆ. HS ಪರೀಕ್ಷೆಯ ನಿರ್ದಿಷ್ಟ ದಿನಾಂಕವನ್ನು ವಿವರವಾದ ವೇಳಾಪಟ್ಟಿಯಲ್ಲಿ ತಿಳಿಸಲಾಗುತ್ತದೆ.

ಪ್ರಶ್ನೆ 6: ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಯಾವಾಗ ಪ್ರಕಟವಾಗುತ್ತದೆ?

ಉತ್ತರ: ಸೇರ್ಪಡೆ ಅಧಿಸೂಚನೆಯಲ್ಲಿ ಪರೀಕ್ಷೆಯ ವಿವರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರಶ್ನೆ 7: ಪರೀಕ್ಷೆಯ ಪ್ರವೇಶ ಪತ್ರ ಯಾವಾಗ ಬಿಡುಗಡೆಯಾಗುತ್ತದೆ?

ಉತ್ತರ: ಪ್ರವೇಶ ಪತ್ರ ಬಿಡುಗಡೆ ದಿನಾಂಕವನ್ನು ಪ್ರಸ್ತುತ ಪ್ರಕಟಣೆಯಲ್ಲಿ ತಿಳಿಸಿಲ್ಲ. ಇಲಾಖೆಯ ಮುಂದಿನ ಪ್ರಕಟಣೆಯನ್ನು ಗಮನಿಸಬೇಕು.

ಪ್ರಶ್ನೆ 8: ಪರೀಕ್ಷೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಡೆಯುತ್ತದೆಯೇ?

ಉತ್ತರ: ಪ್ರಸ್ತುತ ಲಭ್ಯವಿರುವ ಪ್ರಕಟಣೆಯಲ್ಲಿ ಪರೀಕ್ಷೆಯ ಮಾಧ್ಯಮ ಅಥವಾ ವಿಧಾನವನ್ನು ಸ್ಪಷ್ಟಪಡಿಸಿಲ್ಲ. ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬೇಕು.

ಪ್ರಶ್ನೆ 9: ಪರೀಕ್ಷೆಗೆ ಯಾವ ಪಠ್ಯಕ್ರಮವನ್ನು ಓದಬೇಕು?

ಉತ್ತರ: ಅಭ್ಯರ್ಥಿಗಳು ತಮ್ಮ ಹುದ್ದೆಗೆ ಸಂಬಂಧಿಸಿದ ಅಧಿಕೃತ ಪಠ್ಯಕ್ರಮ ಹಾಗೂ ನೇಮಕಾತಿ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಬೇಕು.

ಪ್ರಶ್ನೆ 10: ಪರೀಕ್ಷೆಯ ದಿನಾಂಕ ಮುಂದೂಡಿಕೆಯಾಗಬಹುದೇ?

ಉತ್ತರ: ಪ್ರಸ್ತುತ ಪ್ರಕಟಣೆಯ ಪ್ರಕಾರ ಪರೀಕ್ಷೆಯನ್ನು 18-01-2027ರಿಂದ ನಡೆಸಲು ಉದ್ದೇಶಿಸಲಾಗಿದೆ. ಯಾವುದೇ ಬದಲಾವಣೆ ಇದ್ದಲ್ಲಿ ಇಲಾಖೆಯ ಅಧಿಕೃತ ಪ್ರಕಟಣೆಯೇ ಅಂತಿಮವಾಗಿರುತ್ತದೆ.

ಪ್ರಶ್ನೆ 11: ಪರೀಕ್ಷೆಯ ವಿಷಯವಾರು ವೇಳಾಪಟ್ಟಿ ಎಲ್ಲಿ ಸಿಗುತ್ತದೆ?

ಉತ್ತರ: ಶಾಲಾ ಶಿಕ್ಷಣ ಇಲಾಖೆಯೂ ಪ್ರಕಟಿಸುವ ಸೇರ್ಪಡೆ ಅಧಿಸೂಚನೆಯಲ್ಲಿ ವಿಷಯವಾರು ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

ಪ್ರಶ್ನೆ 12: ಅಭ್ಯರ್ಥಿಗಳು ಈಗ ಏನು ಮಾಡಬೇಕು?

ಉತ್ತರ: ಅಧಿಕೃತ ಪಠ್ಯಕ್ರಮವನ್ನು ಪರಿಶೀಲಿಸಿ, ವಿಷಯವಾರು ಅಧ್ಯಯನ ಯೋಜನೆ ರೂಪಿಸಿಕೊಂಡು ಪರೀಕ್ಷೆಗೆ ಸಿದ್ಧತೆ ಆರಂಭಿಸಬೇಕು.

ಕೊನೆಯ ಮಾತು

ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಸಿದ್ಧತೆ ನಡೆಸುತ್ತಿರುವಂತಹ PST / GPT / HS ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇದಾಗಿದೆ.

2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ವಿವಿಧ ವೃಂದಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು 18 ಜನವರಿ 2027ರಿಂದ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಿಸಿದೆ.

ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಸೇರ್ಪಡೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಸಿದ್ಧತೆ ಆರಂಭಿಸಿ. ಮುಂದಿನ ಅಧಿಕೃತ ಅಧಿಸೂಚನೆ, ಪರೀಕ್ಷಾ ವೇಳಾಪಟ್ಟಿ ಮತ್ತು ಪ್ರವೇಶ ಪತ್ರದ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಪ್ರಕಟಣೆಗಳನ್ನು ನಿಯಮಿತವಾಗಿ ಪರಿಶೀಲಿಸಿ.

ಈ ಮಾಹಿತಿಯನ್ನು ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆಸುತ್ತಿರುವಂತಹ ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಿ.

ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಶುಭವಾಗಲಿ.

Karnataka Teacher Exam 2027

👉 Karnataka Teacher Exam 2027 Notification Link – Click Here Download

👉Karnataka Teacher Exam 2027 website link – Click Here

WhatsApp Group Join Now
Telegram Group Join Now