Winnie Sun Scholarship 2026-27: 70% ಅಂಕ + ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದವರು ₹65,000 Winnie Sun ಸ್ಕಾಲರ್‌ಷಿಪ್ ಅರ್ಜಿ ಸಲ್ಲಿಸಬಹುದು
Winnie Sun Scholarship 2026-27: ನಮ್ಮ ರಾಜ್ಯದಲ್ಲಿ ಹಿಂದುಳಿದ ಕುಟುಂಬಗಳಲ್ಲಿ ಆರ್ಥಿಕವಾಗಿ ಪ್ರತಿಭಾವಂತ ಬಾಲಕಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಈ ವಿದ್ಯಾರ್ಥಿ ವೇತನವು ಪ್ರಮುಖವಾಗಿ ನೆರವಾಗುತ್ತದೆ. ಅತ್ಯಂತ ಪ್ರಮುಖವಾಗಿ ವೈದ್ಯಕೀಯ ಶಿಕ್ಷಣದಂತಹ ಹೆಚ್ಚಿನ ಹಣದ ಕೋರ್ಸುಗಳನ್ನ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮಗೆ ಆರ್ಥಿಕವಾಗಿ ಸಹಾಯವಾಗುವಂತೆ ಶುಲ್ಕ, ಪುಸ್ತಕಗಳು, ವಸತಿ, ಅಧ್ಯಯನ ಸಾಮಗ್ರಿಗಳು ಹಾಗೂ ಇತರೆ ಶೈಕ್ಷಣಿಕ ಖರ್ಚುಗಳನ್ನು ನಿಬಾಹಿಸಲು ಸಹಾಯಕವಾಗುತ್ತದೆ.
2026-2027ನೇ ಶೈಕ್ಷಣಿಕ ಸಾಲಿನ ಲೋಟಸ್ ಪೆಟಲ್ ಫೌಂಡೇಶನ್ ವಲೆಯಿಂದ MBBS ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕೀಯರಿಗೆ(Winnie Sun Scholarship 2026-27) ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನ ಕರೆಯಲಾಗಿದೆ.
ಈ ವಿದ್ಯಾರ್ಥಿ ವೇತನವು ಅರ್ಹತೆಯನ್ನು ಹೊಂದಿರುವ ಬಾಲಕಿಯರಿಗೆ ಎಂಬಿಬಿಎಸ್ ಕೋರ್ಸ್ ಅವಧಿಯವರೆಗೂ ಪ್ರತಿ ವರ್ಷವೂ 65,000ಗಳು ಆರ್ಥಿಕವಾಗಿ ನೆರವು ನೀಡಲು ಈ ಪ್ರಕಟಣೆಯಲ್ಲಿ ನೀಡಲಾಗಿದೆ.
ನಾವು ಇಲ್ಲಿ ಈ ಲೇಖನದಲ್ಲಿ Winnie Sun Scholarship 2026-27 ಸಾಲಿನ ಶೈಕ್ಷಣಿಕವಾಗಿ ಸಂಬಂಧಿಸಿದಂತೆ ಅರ್ಹತೆ, ಅಂಕಗಳು, ಕುಟುಂಬದ ಆದಾಯದ ಮಿತಿ, ವಿದ್ಯಾರ್ಥಿ ವೇತನದ ಮೊತ್ತ, ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆನ್ಲೈನ್ ಅರ್ಜಿ ವಿಧಾನ ಪ್ರಮುಖವಾದ ದಾಖಲೆಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಪ್ರಮುಖವಾದ ಅಂಶಗಳು ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.
Winnie Sun Scholarship 2026-27 ಅಂದರೆ ಏನು ?
Winnie Sun Scholarship 2026-27 ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಲ್ಲಿ ಇರುವ ಮತ್ತು MBBS ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಿರುವಂತಹ ಬಡ ಹೆಣ್ಣುಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗುವಂತೆ ಈ ಉದ್ದೇಶ ಹೊಂದಿರುವ ಈ ವಿದ್ಯಾರ್ಥಿವೇತನ ಯೋಜನೆಯಾಗಿದೆ.
ಉನ್ನತ ವೈದ್ಯಕೀಯ ಶಿಕ್ಷಣದ ವೆಚ್ಚ ಹೆಚ್ಚಾಗಿರುವ ಕಾರಣ ಅರ್ಹತೆ ಹೊಂದಿರುವ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಯಾವುದೇ ತೊಂದರೆ ಇಲ್ಲದೇ ಆರ್ಥಿಕ ಮುಂದುವರಿಸಲು ಈ ರೀತಿಯ ವಿದ್ಯಾರ್ಥಿವೇತನಗಳು ಸಹಾಯಕವಾಗುತ್ತವೆ.
2026-27ನೇ ಶೈಕ್ಷಣಿಕ ಸಾಲಿನಲ್ಲಿ MBBS ಕೋರ್ಸ್‌ಗೆ ಪ್ರವೇಶವನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನೂ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದರೆ ಆನ್‌ಲೈನ್ ಮೂಲಕವೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾರೆಲ್ಲಾ ಈ Winnie Sun ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿಯ ವೇತನವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲು ಬರುವುದಿಲ್ಲಾ. ಈ ಪ್ರಕಟಣೆಯಲ್ಲಿ ನೀಡಿರುವಂತೆ ಅರ್ಹತಾ ಮಾನದಂಡಗಳನ್ನು ಹೊಂದಿರುವ ಹೆಣ್ಣು ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬೇಕು.
ಈ ಕೆಳಗಿನ ಪ್ರಮುಖವಾದ ಅಂಶಗಳನ್ನು ಗಮನಿಸಬೇಕು:
- ಅರ್ಜಿದಾರ ಮಾತ್ರ ಹೆಣ್ಣು ವಿದ್ಯಾರ್ಥಿನಿಯಾಗಿರಬೇಕು.
- 2026-27ನೇ ಶೈಕ್ಷಣಿಕ ಸಾಲಿನಲ್ಲಿ ಮಾತ್ರ MBBS ಕೋರ್ಸ್‌ಗೆ ದಾಖಲಾಗಿರಬೇಕು.
- SSLC ಪರೀಕ್ಷೆಯಲ್ಲಿ ಅಗತ್ಯವಿರುವ ಅಂಕಗಳನ್ನು ಪಡೆದಿರಬೇಕು.
- 12ನೇ ತರಗತಿ ಪರೀಕ್ಷೆಯಲ್ಲಿಯೂ ನಿಗದಿತ ಅಂಕಗಳನ್ನು ಪಡೆದಿರಬೇಕು.
- ಸಾಮಾನ್ಯ ವರ್ಗದ ಅರ್ಜಿದಾರರು 10ನೇ ಹಾಗೂ 12ನೇ ತರಗತಿಯಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
- SC, ST ಮತ್ತು OBC ವಿದ್ಯಾರ್ಥಿನಿಯರಿಗೆ ಕನಿಷ್ಠ 60% ಅಂಕಗಳ ಮಾನದಂಡ ನೀಡಲಾಗಿದೆ.
- ತಮ್ಮ ಕುಟುಂಬದ ವಾರ್ಷಿಕವಾಗಿ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಹೊಂದಿರಬೇಕು.
- ನೀವುಗಳು ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.
- ಅರ್ಜಿಗಳನ್ನು ಸಲ್ಲಿಸುವ ಮೊದಲು ಅಧಿಕೃತ ಅರ್ಜಿ ಪೋರ್ಟಲ್‌ನಲ್ಲಿ ನೀಡಿರುವಂತಹ ಪ್ರಸ್ತುತ ನಿಯಮಗಳನ್ನು ಅಗತ್ಯವಾಗಿ ಗಮನಿಸಬೇಕು.
SSLC ಮತ್ತು 2nd PUC ಅಂಕಗಳ ಅರ್ಹತೆ
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯ ಶೈಕ್ಷಣಿಕ ಸಾಧನೆಯನ್ನೂ ಪರಿಗಣಿಸಲಾಗುತ್ತದೆ.
ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರಿಗೆ
- 10ನೇ ತರಗತಿ ಹಾಗೂ 2 PUC ಪರೀಕ್ಷೆಗಳಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ OBC ವಿದ್ಯಾರ್ಥಿನಿಯರಿಗೆ
- SC, ST ಹಾಗೂ OBC ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರಿಗೆ ಕನಿಷ್ಠ 60% ಅಂಕಗಳ ಮಾನದಂಡವನ್ನು ಕೋಡಲಾಗಿದೆ.
ವಾರ್ಷಿಕವಾಗಿ ಕುಟುಂಬದ ಆದಾಯದ ಮಿತಿ ಎಷ್ಟು ಇರಬೇಕು?
Winnie Sun ಸ್ಕಾಲರ್‌ಷಿಪ್‌ನಲ್ಲಿ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಗೂ ಮಹತ್ವ ನೀಡಲಾಗಿದೆ.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ:
- ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಇದು ಪ್ರಮುಖ ಅರ್ಹತಾ ಷರತ್ತಾಗಿದೆ.
ನೀವು ಅರ್ಜಿಯ ಸಂದರ್ಭದಲ್ಲಿ ಕುಟುಂಬದ ಆದಾಯವನ್ನು ದೃಢೀಕರಿಸುವ ದಾಖಲೆ ಅಥವಾ ಆದಾಯ ಪ್ರಮಾಣಪತ್ರವನ್ನು ಸಲ್ಲಿಸುವ ಅಗತ್ಯವಿರಬಹುದು. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ನಿವು ನಿಮ್ಮ ಸೂಕ್ತವಾದ ಆದಾಯಕ್ಕೆ ಸಂಬಂಧಿತ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.
Winnie Sun Scholarship 2026-27 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
Winnie Sun Scholarship ಅರ್ಜಿ ಸಲ್ಲಿಸಲು – 30 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವವರು ಕೊನೆಯ ದಿನಾಂಕದವರೆಗೆ ತಡ ಮಾಡದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
ಕೊನೆಯ ದಿನಾಂಕದ ದಿನ ವೆಬ್‌ಸೈಟ್‌ನಲ್ಲಿ ಹಲವಾರು ತಾಂತ್ರಿಕ ಸಮಸ್ಯೆ, OTP ಸಮಸ್ಯೆ, ದಾಖಲೆ ಅಪ್‌ಲೋಡ್ ಸಮಸ್ಯೆ ಅಥವಾ ಸರ್ವರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರಬಹುದು ಆದ್ದರಿಂದ ಅರ್ಜಿಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಸೂಕ್ತ.
FAQ – ವಿನ್ನಿಸನ್ ಸ್ಕಾಲರ್‌ಷಿಪ್ 2026-27
1. ವಿನ್ನಿಸನ್ ಸ್ಕಾಲರ್‌ಷಿಪ್ ಎಂದರೇನು?
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ MBBS ವಿದ್ಯಾರ್ಥಿನಿಯರಿಗೆ ನೀಡಲಾಗುವ ಒಂದು ಪ್ರಮುಖವಾದ ವಿದ್ಯಾರ್ಥಿವೇತನ ಈ ಯೋಜನೆಯಾಗಿದೆ.
2. ಈ ವಿದ್ಯಾರ್ಥಿವೇತನವನ್ನು ಯಾರು ನೀಡುತ್ತಿದ್ದಾರೆ?
ಲೋಟಸ್ ಪೆಟಲ್ ಫೌಂಡೇಷನ್ ವತಿಯಿಂದ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ನೀಡಲಾಗಿದೆ.
3. ವಿದ್ಯಾರ್ಥಿವೇತನ ಯಾರಿಗೆ?
MBBS ಕೋರ್ಸ್ ಮಾಡುತ್ತಿರುವ ಅರ್ಹತೆಯನ್ನು ಹೊಂದಿರುವ ಹೆಣ್ಣು ವಿದ್ಯಾರ್ಥಿನಿಯರಿಗೆ.
4. 2026-27ರಲ್ಲಿ MBBS ಪ್ರವೇಶ ಪಡೆದಿರಬೇಕೇ?
ಹೌದು, ಈ ಪ್ರಕಟಣೆಯ ಪ್ರಕಾರ 2026-27ನೇ ಶೈಕ್ಷಣಿಕ ಸಾಲಿನಲ್ಲಿ MBBS ಕೋರ್ಸ್‌ಗೆ ದಾಖಲಾಗಿರಬೇಕು.
5. 10ನೇ ತರಗತಿಯಲ್ಲಿ ಎಷ್ಟು ಅಂಕ ಬೇಕು?
ಸಾಮಾನ್ಯ ವರ್ಗದ ಅರ್ಜಿದಾರರಿಗೆ ಕನಿಷ್ಠ 70% ಅಂಕಗಳು ಪಡೆದಿರಬೇಕು.
6. PUC ಯಲ್ಲಿ ಎಷ್ಟು ಅಂಕ ಬೇಕು?
ಸಾಮಾನ್ಯ ವರ್ಗದ ಅರ್ಜಿದಾರರಿಗೆ ಕನಿಷ್ಠ 70% ಅಂಕಗಳನ್ನು ಹೊಂದಿರಬೇಕು
7. SC(ಪರಿಶಿಷ್ಟ ಜಾತಿ) ವಿದ್ಯಾರ್ಥಿನಿಯರಿಗೆ ಎಷ್ಟು ಅಂಕ ಬೇಕು?
SC ವಿದ್ಯಾರ್ಥಿನಿಯರಿಗೆ ಕನಿಷ್ಠ 60% ಅಂಕಗಳ ಹೊಂದಿರಬೇಕು.
8. ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿನಿಯರಿಗೆ ಎಷ್ಟು ಅಂಕ ಬೇಕು?
ST ವಿದ್ಯಾರ್ಥಿನಿಯರಿಗೆ ಕನಿಷ್ಠ 60% ಅಂಕಗಳ ಮಾನದಂಡ ನೀಡಲಾಗಿದೆ.
9. OBC ವಿದ್ಯಾರ್ಥಿನಿಯರಿಗೆ ಎಷ್ಟು ಅಂಕ ಬೇಕು?
OBC ವಿದ್ಯಾರ್ಥಿನಿಯರಿಗೆ ಕನಿಷ್ಠ 60% ಅಂಕಗಳ ಪಡೆದಿರಬೇಕು.
10. ಒಟ್ಟು ಕುಟುಂಬದ ವಾರ್ಷಿಕ ಆದಾಯ ಮಿತಿ ಎಷ್ಟು?
ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.
11. ವಿದ್ಯಾರ್ಥಿವೇತನದ ಮೊತ್ತ ಎಷ್ಟು?
ಪ್ರತಿ ವರ್ಷ ₹65,000.
12. ಈ ವಿದ್ಯಾರ್ಥಿವೇತನ ಎಷ್ಟು ವರ್ಷಗಳವರೆಗೆ ಸಿಗುತ್ತದೆ?
ಈ ಪ್ರಕಟಣೆಯ ಪ್ರಕಾರ MBBS ಕೋರ್ಸ್ ಅವಧಿಯವರೆಗೆ.
13. ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
14. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
30-10-2026.
15. ಅರ್ಜಿ ಲಿಂಕ್ ಯಾವುದು?
ಈ ಪ್ರಕಟಣೆಯಲ್ಲಿ ನೀಡಿರುವ ಚಿಕ್ಕ URL: www.b4s.in/praja/WISS2
16. ಪುರುಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಈ ಪ್ರಕಟಣೆಯ ಪ್ರಕಾರ ವಿದ್ಯಾರ್ಥಿವೇತನವು ಹೆಣ್ಣು ವಿದ್ಯಾರ್ಥಿನಿಯರಿಗೆ ಮಾತ್ರ.
17. MBBS ಹೊರತುಪಡಿಸಿ ಬೇರೆ ಯಾವ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದೇ?
ನೀಡಿರುವ ಮಾಹಿತಿಯ ಪ್ರಕಾರ ಈ ವಿದ್ಯಾರ್ಥಿವೇತನ MBBS ವಿದ್ಯಾರ್ಥಿನಿಯರಿಗಾಗಿ ಮಾತ್ರ.
18. ಕುಟುಂಬದ ಆದಾಯ ₹5 ಲಕ್ಷಕ್ಕಿಂತ ಹೆಚ್ಚಿದ್ದರೆ ಅರ್ಜಿ ಸಲ್ಲಿಸಬಹುದೇ?
ಇಲ್ಲಿ ನೀಡಿರುವ ಅರ್ಹತಾ ಮಾಹಿತಿಯ ಪ್ರಕಾರ ಕುಟುಂಬದ ಒಟ್ಟು ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.
19. ಅರ್ಜಿ ಆಫ್‌ಲೈನ್‌ನಲ್ಲಿಯೂ ಸಲ್ಲಿಸಬಹುದೇ?
ಅರ್ಜಿಯ ವಿಧಾನ ಆನ್‌ಲೈನ್ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
20. ಅರ್ಜಿ ಸಲ್ಲಿಸುವ ಮೊದಲು ನಾವು ಏನು ಮಾಡಬೇಕು?
ಅರ್ಹತಾ ಷರತ್ತುಗಳು ಮತ್ತು ಪೋರ್ಟಲ್‌ನಲ್ಲಿರುವ ಅಧಿಕೃತ ಸೂಚನೆಗಳನ್ನು ಓದಬೇಕು.