HRMS-2.0 2027-28 Appendix-B Salary Estimate: ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ HRMS 2.0ನಲ್ಲಿ Appendix-B ವೇತನ ಅಂದಾಜು ಸಿದ್ಧಪಡಿಸಲು ಹೊಸ ಸೂಚನೆಗಳು ಪ್ರಕಟ
HRMS-2.0 2027-28 Appendix-B Salary Estimate: HRMS 2.0 2027-28 Appendix-B ವೇತನ ಅಂದಾಜಿಗೆ ಆರ್ಥಿಕ ಇಲಾಖೆಯೂ ಹೊಸ ಸುತ್ತೋಲೆ ಪ್ರಕಟ. DDOಗಳು ಪರಿಶೀಲಿಸಬೇಕಾದ ಮಾಹಿತಿ, Post Mapping, Organogram ಅಪ್ಡೇಟ್ ಹಾಗೂ 30-11-2026 ಕೊನೆಯ ದಿನಾಂಕದ ಸಂಪೂರ್ಣ ವಿವರ ಇಲ್ಲಿದೆ…
ಕರ್ನಾಟಕ ರಾಜ್ಯದ ಸರ್ಕಾರಿ ನೌಕರರು, ವಿವಿಧ ಇಲಾಖೆಗಳ DDOಗಳು, ಆಡಳಿತಾಧಿಕಾರಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ಪ್ರಮುಖ ಮಾಹಿತಿಯೊಂದು ಪ್ರಕಟವಾಗಿದೆ. ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯೂ 2027-28ನೇ ಆರ್ಥಿಕ ಶೈಕ್ಷಣಿಕ ಸಾಲಿನಲ್ಲಿ ಆಯವ್ಯಯ ತಯಾರಿಕೆಗಾಗಿ HRMS-2.0 ತಂತ್ರಾಂಶದ ಮೂಲಕ ಅನುಬಂಧ-ಬಿ (Appendix-B) ವೇತನ ಅಂದಾಜು ಸಿದ್ಧಪಡಿಸುವ ಕುರಿತು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಈ ಸುತ್ತೋಲೆಯ ಪ್ರಕಾರ ರಾಜ್ಯದ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿರುವ ಮಂಜೂರಾದ ಹುದ್ದೆಗಳು, ಕಾರ್ಯನಿರತ ಸಿಬ್ಬಂದಿ ಬಲ, ಖಾಲಿ ಹುದ್ದೆಗಳು, ಹೊಸದಾಗಿ ಸೃಜಿಸಲಾದ ಹುದ್ದೆಗಳು, ರದ್ದುಗೊಂಡ ಹುದ್ದೆಗಳು, ಗುತ್ತಿಗೆ ಮತ್ತು ಹೊರಗುತ್ತಿಗೆ ಹುದ್ದೆಗಳು ಮತ್ತು ಇತರೇ ಸಿಬ್ಬಂದಿ ಸಂಬಂಧಿತ ಮಾಹಿತಿಗಳನ್ನು HRMS-2.0 Organogram ಅಪ್ಲಿಕೇಶನ್ನಲ್ಲಿ ಸರಿಯಾಗಿ ದಾಖಲಿಸಿ ನವೀಕರಿಸಬೇಕು.
2027-28ನೇ ಶೈಕ್ಷಣಿಕ ಸಾಲಿನಲ್ಲಿ ಅನುಬಂಧ-ಬಿ ವೇತನ ಅಂದಾಜು ತಯಾರಿಸುವಾಗ ಆರ್ಥಿಕ ಇಲಾಖೆಯೂ HRMS-2.0 Organogram ಮಾಡ್ಯೂಲ್ನಲ್ಲಿ ಲಭ್ಯವಿರುವ ಮಂಜೂರಾತಿ ಬಲದ ಅಂಕಿ-ಅಂಶಗಳನ್ನು ಮಾತ್ರ ಆಧಾರವಾಗಿ ಪರಿಗಣಿಸಲಿದೆ. ಇಲಾಖೆಗಳು ಪ್ರತ್ಯೇಕವಾಗಿ ಸಲ್ಲಿಸುವ ಲಿಖಿತ ಮಾಹಿತಿಯನ್ನು ಆಧರಿಸಿ ವೇತನ ಅಂದಾಜು ಮಾಡುವುದಿಲ್ಲ ಎಂಬುದು ಈ ಸುತ್ತೋಲೆಯ ಪ್ರಮುಖ ಅಂಶವಾಗಿದೆ.
ಆದ್ದರಿಂದ ಪ್ರತಿಯೊಂದು ಇಲಾಖೆಯು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಕಚೇರಿಗಳು, DDOಗಳು, ಮಂಜೂರಾದ ಹುದ್ದೆಗಳು ಹಾಗೂ ಸಿಬ್ಬಂದಿ ವಿವರಗಳನ್ನು ಪರಿಶೀಲಿಸುವುದು ಅತ್ಯಂತ ಅವಶ್ಯಕವಾಗಿದೆ.
ಈ ಲೇಖನದಲ್ಲಿ ನಾವು HRMS-2.0 2027-28 Appendix-B Salary Estimate ಕುರಿತು ಹೊರಡಿಸಿರುವ ಸುತ್ತೋಲೆಯ ಸಂಪೂರ್ಣ ವಿವರಗಳು, DDOಗಳು ಕೈಗೊಳ್ಳಬೇಕಾದ ಕ್ರಮಗಳು, Organogram ಅಪ್ಲಿಕೇಶನ್ ಬಳಕೆ, Post Mapping, Post Remapping, Contract ಹಾಗೂ Outsource ಹುದ್ದೆಗಳ ಮಾಹಿತಿ ದಾಖಲಿಸುವ ವಿಧಾನ, ಡಿಜಿಟಲ್ ಸಹಿ ಹಾಗೂ ಪ್ರಮುಖ ಕೊನೆಯ ದಿನಾಂಕಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
HRMS-2.0 2027-28 Appendix-B Salary Estimate: HRMS-2.0 2027-28 Appendix-B ಎಂದರೇನು?
HRMS ಎಂದರೆ Human Resource Management System. ಇದು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಸೇವಾ ವಿವರಗಳು, ಹುದ್ದೆಗಳ ಮಾಹಿತಿ, ವೇತನ ಸಂಬಂಧಿತ ದಾಖಲೆಗಳು ಮತ್ತು ಆಡಳಿತಾತ್ಮಕ ಮಾಹಿತಿಗಳನ್ನು ನಿರ್ವಹಿಸಲು ಬಳಸುವ ತಂತ್ರಾಂಶವಾಗಿದೆ.
ಪ್ರಸ್ತುತ ಕರ್ನಾಟಕ ಸರ್ಕಾರವು HRMS-2.0 ವ್ಯವಸ್ಥೆಯ ಮೂಲಕ ಸರ್ಕಾರಿ ನೌಕರರ ಹಾಗೂ ವಿವಿಧ ಇಲಾಖೆಗಳ ಮಂಜೂರಾದ ಹುದ್ದೆಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುತ್ತಿದೆ.
ಪ್ರತಿ ವರ್ಷ ಸರ್ಕಾರವು ಮುಂದಿನ ಆರ್ಥಿಕ ಸಾಲಿನ ಆಯವ್ಯಯವನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ವಿವಿಧ ಇಲಾಖೆಗಳ ವೇತನ ವೆಚ್ಚವನ್ನು ಅಂದಾಜು ಮಾಡಬೇಕಾಗುತ್ತದೆ.
ಇದಕ್ಕಾಗಿ ಆಯಾ ಇಲಾಖೆಗಳಲ್ಲಿರುವ:
- ಒಟ್ಟು ಮಂಜೂರಾದ ಹುದ್ದೆಗಳು.
- ಕಾರ್ಯನಿರತ ನೌಕರರ ಸಂಖ್ಯೆ.
- ಖಾಲಿ ಇರುವ ಹುದ್ದೆಗಳು.
- ಹೊಸದಾಗಿ ಸೃಜಿಸಲಾದ ಹುದ್ದೆಗಳು.
- ರದ್ದುಗೊಳಿಸಲಾದ ಹುದ್ದೆಗಳು.
- ಪದೋನ್ನತಿ ಮೂಲಕ ಭರ್ತಿಯಾಗುವ ಹುದ್ದೆಗಳು.
- ನೇರ ನೇಮಕಾತಿ ಮೂಲಕ ಭರ್ತಿಯಾಗುವ ಹುದ್ದೆಗಳು.
- ಗುತ್ತಿಗೆ ಆಧಾರಿತ ಹುದ್ದೆಗಳು.
- ಹೊರಗುತ್ತಿಗೆ ಆಧಾರಿತ ಹುದ್ದೆಗಳು.
- ಅಧಿಸಂಖ್ಯಾತ ಹುದ್ದೆಗಳು.
- ಲೆಕ್ಕ ಶೀರ್ಷಿಕೆವಾರು ಮಂಜೂರಾತಿ ಬಲ.
ಮುಂತಾದ ಮಾಹಿತಿಗಳನ್ನು ಪರಿಗಣಿಸಲಾಗುತ್ತದೆ.
ಈ ಮಾಹಿತಿಗಳ ಆಧಾರದ ಮೇಲೆ 2027-28ನೇ ಸಾಲಿನ ವೇತನ ವೆಚ್ಚವನ್ನು ಅಂದಾಜು ಮಾಡುವುದು ಪ್ರಕ್ರಿಯೆಯೇ Appendix-B Salary Estimate ಆಗಿದೆ.
HRMS-2.0 2027-28 Appendix-B Salary Estimate: ಆರ್ಥಿಕ ಇಲಾಖೆಯ ಹೊಸ ಸುತ್ತೋಲೆಯ ಪ್ರಮುಖ ಉದ್ದೇಶ
2027-28ನೇ ಸಾಲಿನ ಆಯವ್ಯಯ ಸಿದ್ಧಪಡಿಸುವ ಸಂದರ್ಭದಲ್ಲಿ ಇಲಾಖೆಗಳ ಸಿಬ್ಬಂದಿ ಬಲದ ಮಾಹಿತಿಯಲ್ಲಿ ಯಾವುದೇ ಲೋಪದೋಷಗಳು ಇರಬಾರದು ಎಂಬ ಉದ್ದೇಶದಿಂದ ಆರ್ಥಿಕ ಇಲಾಖೆಯೂ ಈ ಸುತ್ತೋಲೆಯನ್ನು ಹೊರಡಿಸಿದೆ.
2015-16ನೇ ಆರ್ಥಿಕ ಸಾಲಿನಿಂದ HRMS ಕಾರ್ಯಬಲದ ಅಂಕಿ-ಅಂಶಗಳನ್ನು ಬಳಸಿಕೊಂಡು ಅನುಬಂಧ-ಬಿ ವೇತನ ಅಂದಾಜು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.
ಆದರೆ ಮಂಜೂರಾದ ಹುದ್ದೆಗಳ ವಿವರಗಳನ್ನು ನಿಖರವಾಗಿ ಪಡೆಯಲು HRMS-2.0 Organogram ಮಾಡ್ಯೂಲ್ ಬಳಸಲಾಗುತ್ತಿದೆ.
2027-28ನೇ ಸಾಲಿಗೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ.
ಅಂದರೆ, HRMS-2.0 Organogram ಅಪ್ಲಿಕೇಶನ್ನಲ್ಲಿ ಇಲಾಖೆಗಳು ದಾಖಲಿಸಿರುವ ಮಂಜೂರಾತಿ ಬಲದ ಅಂಕಿ-ಅಂಶಗಳನ್ನೇ ಆರ್ಥಿಕ ಇಲಾಖೆಯೂ ವೇತನ ಅಂದಾಜು ಮಾಡಲು ಬಳಸಿಕೊಳ್ಳಲಿದೆ.
ಇಲಾಖೆಗಳು ಪ್ರತ್ಯೇಕವಾಗಿ ಲಿಖಿತ ರೂಪದಲ್ಲಿ ಸಲ್ಲಿಸುವ ಮಾಹಿತಿಯನ್ನು ಪಡೆದು ವೇತನ ಅಂದಾಜು ಮಾಡುವುದಿಲ್ಲ.
ಹೀಗಾಗಿ Organogramನಲ್ಲಿ ತಪ್ಪಾದ ಮಾಹಿತಿ ಇದ್ದರೆ ಅಥವಾ ಹಲವು ಹುದ್ದೆಗಳ ವಿವರಗಳು ದಾಖಲಾಗದೇ ಇದ್ದರೆ, ವೇತನ ಅಂದಾಜಿನಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಪ್ರತಿಯೊಂದು ಇಲಾಖೆಯೂ ತನ್ನ ಮಂಜೂರಾತಿ ಬಲದ ವಿವರಗಳನ್ನು ಸರಿಯಾಗಿ ಪರಿಶೀಲಿಸಬೇಕು.
HRMS-2.0 2027-28 Appendix-B Salary Estimate: HRMS-2.0 Organogram ಪೋರ್ಟಲ್ ಲಿಂಕ್
2027-28ನೇ ಶೈಕ್ಷಣಿಕ ಸಾಲಿನ Appendix-B ವೇತನ ಅಂದಾಜಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಗಳನ್ನು HRMS-2.0 Organogram ಅಪ್ಲಿಕೇಶನ್ ಮೂಲಕವೇ ಪರಿಶೀಲಿಸಿ ನವೀಕರಿಸಬೇಕಾಗಿದೆ.
ಅಧಿಕೃತ ಪೋರ್ಟಲ್:
HRMS-2.0 Organogram Login
https://hrms2org.karnataka.gov.in
ಈ ಪೋರ್ಟಲ್ಗೆ ಸಂಬಂಧಿಸಿದ ಇಲಾಖೆಯ ಅಧಿಕೃತ ಲಾಗಿನ್ ವಿವರಗಳನ್ನು ಬಳಸಿಕೊಂಡು ಪ್ರವೇಶಿಸಬಹುದು.
ಈ ಪೋರ್ಟಲ್ನಲ್ಲಿ DDOಗಳು, ಇಲಾಖಾ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ತಮ್ಮ ಅಧಿಕಾರ ವ್ಯಾಪ್ತಿಗೆ ಅನುಗುಣವಾಗಿ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಬೇಕು.
HRMS-2.0 2027-28 Appendix-B Salary Estimate: DDOಗಳು ಕಡ್ಡಾಯವಾಗಿ ಕೈಗೊಳ್ಳಬೇಕಾದ ಕ್ರಮಗಳು
ಆರ್ಥಿಕ ಇಲಾಖೆಯ ಸುತ್ತೋಲೆಯ ಪ್ರಕಾರ ಪ್ರತಿಯೊಬ್ಬ DDO ತಮ್ಮ ಕಚೇರಿ ಮತ್ತು ತಮ್ಮ ತಮ್ಮ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉಪಕಚೇರಿಗಳ ವಿವರಗಳನ್ನು HRMS-2.0 Organogram ಅಪ್ಲಿಕೇಶನ್ನಲ್ಲಿ ಪರಿಶೀಲಿಸಬೇಕು.
ಇದಕ್ಕಾಗಿ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
- ಹಂತ 1: HRMS-2.0 Organogram ಅಧಿಕೃತ ವೆಬ್ಸೈಟ್ ತೆರೆಯಿರಿ.
- ಹಂತ 2: ಸಂಬಂಧಪಟ್ಟ ಅಧಿಕೃತ ಲಾಗಿನ್ ವಿವರಗಳನ್ನು ಬಳಸಿ ಅಪ್ಲಿಕೇಶನ್ಗೆ ಪ್ರವೇಶಿಸಿ.
- ಹಂತ 3: ನಿಮ್ಮ ಕಚೇರಿಗೆ ಸಂಬಂಧಿಸಿದ Organogram ವಿವರಗಳನ್ನು ಪರಿಶೀಲಿಸಿ.
- ಹಂತ 4: ನಿಮ್ಮ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಎಲ್ಲಾ ಉಪಕಚೇರಿಗಳ ಪಟ್ಟಿಯನ್ನು ಪರಿಶೀಲಿಸಿ.
- ಹಂತ 5: ಕಚೇರಿಗಳ ಹೆಸರು, ವಿಳಾಸ, DDO ವಿವರಗಳು ಮತ್ತು ಇತರೇ ಮಾಹಿತಿಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
- ಹಂತ 6: ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳಿ.
DDOಗಳು ಕೇವಲ ತಮ್ಮ ಮುಖ್ಯ ಕಚೇರಿಯ ಮಾಹಿತಿಯನ್ನು ಮಾತ್ರ ಪರಿಶೀಲಿಸದೆ, ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ಉಪಕಚೇರಿಗಳ ವಿವರಗಳನ್ನೂ ಪರಿಶೀಲಿಸಬೇಕು.
HRMS-2.0 2027-28 Appendix-B Salary Estimate: ಹೊಸ ಹುದ್ದೆಗಳ ಸೃಜನೆ, ರದ್ದತಿ ಹಾಗೂ ಹುದ್ದೆಗಳ ಬದಲಾವಣೆ
ಕಳೆದ ವರ್ಷ ಇಲಾಖೆಗಳು ಸಲ್ಲಿಸಿರುವಂತಹ ಸಿಬ್ಬಂದಿ ಮಂಜೂರಾತಿ ಬಲದ ಮಾಹಿತಿಯಲ್ಲಿ ನಂತರ ಯಾವುದೇ ಬದಲಾವಣೆಗಳಾಗಿದ್ದರೆ ಅವುಗಳನ್ನು HRMS-2.0 Organogram ಅಪ್ಲಿಕೇಶನ್ನಲ್ಲಿ ನವೀಕರಿಸಬೇಕು.
ಉದಾಹರಣೆಗೆ:
- ಹೊಸದಾಗಿ ಹುದ್ದೆಗಳನ್ನು ಸೃಜಿಸಿರುವುದು.
- ಈಗಾಗಲೇ ಮಂಜೂರಾಗಿರುವ ಹುದ್ದೆಗಳನ್ನು ರದ್ದುಗೊಳಿಸಿರುವುದು.
- ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸಿರುವುದು.
- ಹುದ್ದೆಗಳನ್ನು ಕೆಳದರ್ಜೆಗೆ ಇಳಿಸಿರುವುದು.
- ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಹುದ್ದೆಗಳನ್ನು ವರ್ಗಾಯಿಸಿರುವುದು.
- ಒಂದು ಲೆಕ್ಕ ಶೀರ್ಷಿಕೆಯಿಂದ ಮತ್ತೊಂದು ಲೆಕ್ಕ ಶೀರ್ಷಿಕೆಗೆ ಹುದ್ದೆಗಳನ್ನು ವರ್ಗಾಯಿಸಿರುವುದು.
ಈ ರೀತಿಯ ಬದಲಾವಣೆಗಳು ನಡೆದಿದ್ದರೆ, ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಸೂಕ್ತ ದಾಖಲೆಗಳೊಂದಿಗೆ Organogram ಅಪ್ಲಿಕೇಶನ್ ಮೂಲಕ ಸಲ್ಲಿಸಬೇಕು.
ಗಮನಿಸಿ: ಹುದ್ದೆಗಳ ಸೃಜನೆ, ರದ್ದತಿ ಅಥವಾ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳಿದ್ದರೆ ಅವುಗಳನ್ನು ಕೋರಿಕೆಯೊಂದಿಗೆ ಅಪ್ಲೋಡ್ ಮಾಡುವುದು ಅಗತ್ಯವಾಗಿದೆ.
HRMS-2.0 2027-28 Appendix-B Salary Estimate – HRMS Admin ಅನುಮೋದನೆ ಮತ್ತು Post Mapping ಪ್ರಕ್ರಿಯೆ
ಇಲಾಖೆಗಳು HRMS-2.0 Organogram ಅಪ್ಲಿಕೇಶನ್ ಮೂಲಕ ಸಲ್ಲಿಸುವ ಹುದ್ದೆಗಳ ಬದಲಾವಣೆ ಅಥವಾ ತಿದ್ದುಪಡಿ ಕೋರಿಕೆಗಳನ್ನು HRMS Admin ಪರಿಶೀಲಿಸುತ್ತಾರೆ.
ಸಂಬಂಧಪಟ್ಟ ಕೋರಿಕೆಗಳಿಗೆ ಅನುಮೋದನೆ ದೊರೆತ ಅನಂತರ ಇಲಾಖೆಗಳು ಮುಂದಿನ ಹಂತದ ಕಾರ್ಯಗಳನ್ನು ಕೈಗೊಳ್ಳಬಹುದು.
ಮುಖ್ಯವಾಗಿ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಬಹುದು.
- ಹೊಸದಾಗಿ ಸೇರಿಸಲಾದ ಹುದ್ದೆಗಳನ್ನು ಮ್ಯಾಪಿಂಗ್ ಮಾಡುವುದು.
- ಹುದ್ದೆಗಳನ್ನು ಸಂಬಂಧಪಟ್ಟ DDOಗೆ ಮ್ಯಾಪ್ ಮಾಡುವುದು.
- ಹುದ್ದೆಗಳನ್ನು ಸೂಕ್ತ ಲೆಕ್ಕ ಶೀರ್ಷಿಕೆಗೆ ಮ್ಯಾಪ್ ಮಾಡುವುದು.
- ಹುದ್ದೆಯ ವೇತನ ಶ್ರೇಣಿಯನ್ನು ದಾಖಲಿಸುವುದು.
- ಈಗಾಗಲೇ ಮ್ಯಾಪ್ ಆಗಿರುವ ಹುದ್ದೆಗಳನ್ನು ಅಗತ್ಯವಿದ್ದಲ್ಲಿ ಮರುಮ್ಯಾಪ್ ಮಾಡುವುದು.
ಒಂದು ವೇಳೆ HRMS Admin ಕೋರಿಕೆಯನ್ನು ತಿರಸ್ಕರಿಸಿದರೆ, ಆ ಕುರಿತು ಅಗತ್ಯ ವಿವರಣೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು HRMS-2.0 ನಿರ್ದೇಶನಾಲಯಕ್ಕೆ ಒದಗಿಸಬೇಕು.
Post Mapping ಹಾಗೂ Post Remapping ಎಂದರೇನು?
HRMS-2.0 Organogram ವ್ಯವಸ್ಥೆಯಲ್ಲಿ Post Mapping ಮತ್ತು Post Remapping ಪ್ರಮುಖ ಪ್ರಕ್ರಿಯೆಗಳಾಗಿವೆ.
Post Mapping:
ಮಂಜೂರಾದ ಹುದ್ದೆಯನ್ನು ಸಂಬಂಧಪಟ್ಟ DDO ಕಚೇರಿ ಹಾಗೂ ಲೆಕ್ಕ ಶೀರ್ಷಿಕೆಗೆ ಜೋಡಿಸುವ ಪ್ರಕ್ರಿಯೆಯಾಗಿದೆ.
ಉದಾಹರಣೆಗೆ, ಒಂದು ಕಚೇರಿಗೆ 10 ಹುದ್ದೆಗಳು ಮಂಜೂರಾಗಿದ್ದರೆ, ಆ ಹುದ್ದೆಗಳನ್ನು ಸೂಕ್ತ DDO ಹಾಗೂ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಗೆ ಮ್ಯಾಪ್ ಮಾಡಬೇಕು.
ಇದರೊಂದಿಗೆ ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿಯ ವಿವರಗಳನ್ನೂ ದಾಖಲಿಸಬೇಕಾಗುತ್ತದೆ.
Post Remapping:
ಈಗಾಗಲೇ ಒಂದು DDO ಅಥವಾ ಲೆಕ್ಕ ಶೀರ್ಷಿಕೆಗೆ ಮ್ಯಾಪ್ ಆಗಿರುವ ಹುದ್ದೆಯನ್ನು ಅನಂತರ ಮತ್ತೊಂದು DDO ಅಥವಾ ಲೆಕ್ಕ ಶೀರ್ಷಿಕೆಗೆ ವರ್ಗಾಯಿಸಿದಾಗ ಮರುಮ್ಯಾಪಿಂಗ್ ಮಾಡಬೇಕಾಗುತ್ತದೆ.
ಉದಾಹರಣೆಗೆ:
- ಒಂದು DDO ಕಚೇರಿಯಿಂದ ಮತ್ತೊಂದು DDO ಕಚೇರಿಗೆ ಹುದ್ದೆ ವರ್ಗಾವಣೆ.
- ಒಂದು ಲೆಕ್ಕ ಶೀರ್ಷಿಕೆಯಿಂದ ಮತ್ತೊಂದು ಲೆಕ್ಕ ಶೀರ್ಷಿಕೆಗೆ ಹುದ್ದೆ ವರ್ಗಾವಣೆ.
ಇಂತಹ ಸಂದರ್ಭದಲ್ಲಿ HRMS-2.0 Organogram ಅಪ್ಲಿಕೇಶನ್ನಲ್ಲಿ ಈಗಾಗಲೇ ಮ್ಯಾಪ್ ಮಾಡಿರುವ ದಾಖಲೆಗಳನ್ನು ಮರುಮ್ಯಾಪ್ ಮಾಡಬಹುದು.
ಮ್ಯಾಪಿಂಗ್ ಹಾಗೂ ಮರುಮ್ಯಾಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಂಡ ನಂತರ ಇಲಾಖಾ ಮುಖ್ಯಸ್ಥರು ಅಗತ್ಯ ಪ್ರಮಾಣಪತ್ರವನ್ನು ತಂತ್ರಾಂಶದಲ್ಲಿ ಸೃಜಿಸಬೇಕು.
HRMS-2.0 2027-28 Appendix-B Salary Estimate: ಇಲಾಖಾ ಮುಖ್ಯಸ್ಥರು ಡಿಜಿಟಲ್ ಸಹಿ ಮಾಡುವುದು ಕಡ್ಡಾಯ
Organogram ಅಪ್ಲಿಕೇಶನ್ನಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ದಾಖಲಿಸಿ ಪರಿಶೀಲಿಸಿದ ಅನಂತರ ಇಲಾಖಾ ಮುಖ್ಯಸ್ಥರು ವರದಿಗಳಿಗೆ ಡಿಜಿಟಲ್ ಸಹಿ ಮಾಡಬೇಕು.
ಡಿಜಿಟಲ್ ಸಹಿ ಮಾಡಲು ಎರಡು ವಿಧಾನಗಳನ್ನು ಬಳಸಬಹುದು.
1. DSC ಮೂಲಕ ಸಹಿ
ಖಜಾನೆಯಿಂದ ಇಲಾಖಾ ಮುಖ್ಯಸ್ಥರಿಗೆ ವಿತರಿಸಲಾಗಿರುವ DSC (Digital Signature Certificate) ಕೀ ಬಳಸಿ ವರದಿಗೆ ಡಿಜಿಟಲ್ ಸಹಿ ಮಾಡಬಹುದು.
2. ಆಧಾರ್ ಇ-ಸಹಿ
ಆಧಾರ್ ಆಧಾರಿತ e-Sign ಸೌಲಭ್ಯವನ್ನು ಬಳಸಿಕೊಂಡು ವರದಿಗಳಿಗೆ ಡಿಜಿಟಲ್ ಸಹಿ ಮಾಡಬಹುದು.
ಡಿಜಿಟಲ್ ಸಹಿ ಮಾಡಿದ ವರದಿಗಳನ್ನು ಆರ್ಥಿಕ ಇಲಾಖೆಗೆ ವಿದ್ಯುನ್ಮಾನ ರೂಪದಲ್ಲಿ ಕಳುಹಿಸಬೇಕು.
ಡಿಜಿಟಲ್ ಸಹಿ ಮಾಡದ ವರದಿಗಳನ್ನು ಅಧಿಕೃತ ವರದಿಗಳೆಂದು ಪರಿಗಣಿಸಲಾಗುವುದಿಲ್ಲ.
ಕಚೇರಿಗಳ Hierarchy ಮತ್ತು ವಿಳಾಸ ಪರಿಶೀಲನೆ HRMS-2.0 2027-28 Appendix-B Salary Estimate
HRMS-2.0 Organogram ಅಪ್ಲಿಕೇಶನ್ನಲ್ಲಿ ಪ್ರದರ್ಶಿಸಲಾದ ಕಚೇರಿಗಳ ಶ್ರೇಣಿ ವ್ಯವಸ್ಥೆಯನ್ನು (Office Hierarchy) ಇಲಾಖಾ ಮುಖ್ಯಸ್ಥರು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ಪ್ರತಿಯೊಂದು ಇಲಾಖೆಯ ವ್ಯಾಪ್ತಿಯಲ್ಲಿರುವ ಕಚೇರಿಗಳ ಪಟ್ಟಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ವಿಶೇಷವಾಗಿ:
- ರಾಜ್ಯ ಮಟ್ಟದ ಕಚೇರಿಗಳು.
- ಜಿಲ್ಲಾ ಮಟ್ಟದ ಕಚೇರಿಗಳು.
- ತಾಲೂಕು ಮಟ್ಟದ ಕಚೇರಿಗಳು.
- ಉಪಕಚೇರಿಗಳು.
- DDO ಕಚೇರಿಗಳು.
- ಇತರೇ ಆಡಳಿತಾತ್ಮಕ ಘಟಕಗಳು.
ಇವುಗಳ ವಿವರಗಳನ್ನು ಪರಿಶೀಲಿಸಬೇಕು.
ಕಚೇರಿಗಳ ಹೆಸರು ಹಾಗೂ ವಿಳಾಸದ ವಿವರಗಳು ಸರಿಯಾಗಿರಬೇಕು.
ಹೊಸದಾಗಿ ಸೇರಿಸಬೇಕಾದ ಕಚೇರಿಗಳನ್ನು ಸಂಬಂಧಪಟ್ಟ ರಾಜ್ಯ ಇಲಾಖಾ ಮುಖ್ಯಸ್ಥರ (State HOD) ಲಾಗಿನ್ ಮೂಲಕ ಮಾತ್ರ ಸೇರಿಸಬೇಕು.
ಆದ್ದರಿಂದ DDOಗಳು ತಮ್ಮ ಕಚೇರಿಗಳ ಮಾಹಿತಿಯನ್ನು ಇಲಾಖಾ ಮುಖ್ಯಸ್ಥರೊಂದಿಗೆ ಸಮನ್ವಯ ಮಾಡಿಕೊಂಡು ಪರಿಶೀಲಿಸಬೇಕು.
HRMS-2.0 2027-28 Appendix-B Salary Estimate: ಹೊಸ ಮತ್ತು ಅಸ್ತಿತ್ವದಲ್ಲಿರುವ ಉಪಕಚೇರಿಗಳನ್ನು DDOಗೆ ಮ್ಯಾಪಿಂಗ್ ಮಾಡುವುದು
ಸುತ್ತೋಲೆಯ ಪ್ರಕಾರ ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಸೃಜಿಸಲಾದ ಉಪಕಚೇರಿಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ DDO ಕಚೇರಿಗೆ ಮ್ಯಾಪಿಂಗ್ ಮಾಡಬೇಕು.
ಇದು ಅತ್ಯಂತ ಪ್ರಮುಖವಾದ ಅಂಶವಾಗಿದೆ.
ಏಕೆಂದರೆ Organogramನಲ್ಲಿರುವ ಕಚೇರಿ ವಿವರಗಳು ನಿಖರವಾಗಿದ್ದರೆ ಮಾತ್ರ ನೌಕರರು ಹಾಗೂ ಹುದ್ದೆಗಳ ಮ್ಯಾಪಿಂಗ್ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಇದರ ಜೊತೆಗೆ ಇತ್ತೀಚಿನ ನೇಮಕಾತಿ ಮತ್ತು ಸೇವಾ ನಿಯಮಗಳಿಗೆ (C&R Rules) ಅನುಗುಣವಾಗಿ ಕಚೇರಿ ವಿವರಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.
ಅಲ್ಲದೆ KAAMS ವ್ಯವಸ್ಥೆಯ ಅಗತ್ಯತೆಗಳನ್ನು ಪೂರೈಸಲು ಸಹ ಈ ಪ್ರಕ್ರಿಯೆ ಮಹತ್ವದ್ದಾಗಿದೆ.
ಆದ್ದರಿಂದ ಯಾವುದೇ ಉಪಕಚೇರಿಯು ಮ್ಯಾಪಿಂಗ್ ಆಗದೆ ಉಳಿಯದಂತೆ ಇಲಾಖೆಗಳು ಕ್ರಮ ಕೈಗೊಳ್ಳಬೇಕು.
HRMS-2.0 2027-28 Appendix-B Salary Estimate – C&R Rules ಹಾಗೂ ಆರ್ಥಿಕ ಇಲಾಖೆಯ ಆದೇಶಗಳನ್ನು ಅಪ್ಲೋಡ್ ಮಾಡುವುದು
ಹುದ್ದೆಗಳ ಮಂಜೂರಾತಿ ಅಥವಾ ಬದಲಾವಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು HRMS-2.0 Organogram ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡುವುದು ಅಗತ್ಯವಾಗಿದೆ.
ವಿಶೇಷವಾಗಿ:
- ವೃಂದ ಹಾಗೂ ನೇಮಕಾತಿ ನಿಯಮಗಳು (Cadre and Recruitment Rules).
- C&R Rules ತಿದ್ದುಪಡಿ ಆದೇಶಗಳು.
- ಆರ್ಥಿಕ ಇಲಾಖೆಯ ಅನುಮೋದನೆ ಆದೇಶಗಳು.
- ಹುದ್ದೆಗಳ ಸೃಜನೆಗೆ ಸಂಬಂಧಿಸಿದ ಆದೇಶಗಳು.
- ಹುದ್ದೆಗಳ ರದ್ದತಿ ಅಥವಾ ವರ್ಗಾವಣೆಗೆ ಸಂಬಂಧಿಸಿದ ಆದೇಶಗಳು.
ಇವುಗಳನ್ನು ಸೂಕ್ತವಾಗಿ ಅಪ್ಲೋಡ್ ಮಾಡಬೇಕು.
ಒಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳು ಮತ್ತು ತಿದ್ದುಪಡಿ ಆದೇಶಗಳನ್ನು ಅಪ್ಲೋಡ್ ಮಾಡಿದ ನಂತರ ಅವು HRMS-2.0 Organogram ತಂತ್ರಾಂಶದಲ್ಲಿ ಲಭ್ಯವಿರುತ್ತವೆ ಮತ್ತು ವೀಕ್ಷಿಸಬಹುದು.
ಇದರಿಂದ ಮುಂದಿನ ದಿನಗಳಲ್ಲಿ ಹುದ್ದೆಗಳ ವಿವರಗಳನ್ನು ಪರಿಶೀಲಿಸಲು ಅನುಕೂಲವಾಗುತ್ತದೆ.
Post In-Take Distributionನಲ್ಲಿ ಶೇಕಡಾವಾರು ಪ್ರಮಾಣ ದಾಖಲಿಸುವುದು – HRMS-2.0 2027-28 Appendix-B Salary Estimate
ವೃಂದ (Cadre) ಹಾಗೂ ಹುದ್ದೆಗಳನ್ನು (Posts) ಅಂತಿಮಗೊಳಿಸಿದ ನಂತರ ರಾಜ್ಯ ಇಲಾಖಾ ಮುಖ್ಯಸ್ಥರು ಮತ್ತೊಂದು ಪ್ರಮುಖ ಕಾರ್ಯವನ್ನು ನಿರ್ವಹಿಸಬೇಕು.
HRMS-2.0 ಅಪ್ಲಿಕೇಶನ್ನ Post Management ಮೆನುವಿನ ಅಡಿಯಲ್ಲಿ ಲಭ್ಯವಿರುವ Post In-Take Distribution ಪರದೆಯಲ್ಲಿ ಹುದ್ದೆಗಳ ನೇಮಕಾತಿ ವಿಧಾನಕ್ಕೆ ಸಂಬಂಧಿಸಿದ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ದಾಖಲಿಸಬೇಕು.
ಅಂದರೆ:
- ನೇರ ನೇಮಕಾತಿ (Direct Recruitment).
- ಪದೋನ್ನತಿ (Promotion).
ಈ ಎರಡು ವಿಧಾನಗಳ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳ ಶೇಕಡಾವಾರು ಪ್ರಮಾಣವನ್ನು ನಮೂದಿಸಬೇಕು.
ಉದಾಹರಣೆಗೆ, ಒಂದು ವೃಂದದಲ್ಲಿ ನೇರ ನೇಮಕಾತಿಗೆ 50% ಹಾಗೂ ಪದೋನ್ನತಿಗೆ 50% ಹುದ್ದೆಗಳನ್ನು ನಿಗದಿಪಡಿಸಿದ್ದರೆ, ಸಂಬಂಧಪಟ್ಟ ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ಈ ವಿವರಗಳನ್ನು ದಾಖಲಿಸಬೇಕು.
ಇಲ್ಲಿ ನಿಗದಿಪಡಿಸುವ ಶೇಕಡಾವಾರು ಪ್ರಮಾಣವು ಆಯಾ ವೃಂದದ ನೈಜ C&R Rules ಆಧಾರಿತವಾಗಿರಬೇಕು.
HRMS-2.0 2027-28 Appendix-B Salary Estimate: Contract ಮತ್ತು Outsource ಹುದ್ದೆಗಳ ವಿವರ ದಾಖಲಿಸುವುದು
ಗುತ್ತಿಗೆ (Contract) ಮತ್ತು ಹೊರಗುತ್ತಿಗೆ (Outsource) ಆಧಾರಿತ ಮಂಜೂರಾದ ಹುದ್ದೆಗಳನ್ನು ಹೊಂದಿರುವ ಎಲ್ಲಾ ಇಲಾಖೆಗಳು ಅಂತಹ ಹುದ್ದೆಗಳ ವಿವರಗಳನ್ನು HRMS-2.0 Organogramನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುತ್ತೋಲೆಯಲ್ಲಿ ಮೂರು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.
A – ಈಗಾಗಲೇ ಸಲ್ಲಿಸಿರುವ Contract/Outsource ಹುದ್ದೆಗಳ ಮಾಹಿತಿ
ಈ ಹಿಂದೆ ಇಲಾಖೆಗಳು ಸಲ್ಲಿಸಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ಹುದ್ದೆಗಳ ಮಾಹಿತಿಯು Other Strength Estimates ಮೆನುವಿನ ಅಡಿಯಲ್ಲಿ ಲಭ್ಯವಿರುವ Contract/Outsource ಉಪಮೆನುವಿನಲ್ಲಿ ಪ್ರದರ್ಶಿಸಲಾಗುತ್ತದೆ.
ಅಲ್ಲಿ Edit ಬಟನ್ ಕ್ಲಿಕ್ ಮಾಡುವ ಮೂಲಕ ಹುದ್ದೆಗಳ ವಿವರಗಳನ್ನು ಪರಿಶೀಲಿಸಬಹುದು.
ಮಂಜೂರಾದ ಹುದ್ದೆಗಳನ್ನು ಈ ಕೆಳಗಿನಂತೆ ಪ್ರತ್ಯೇಕವಾಗಿ ಗುರುತಿಸಬೇಕು.
- ತಾತ್ಕಾಲಿಕ ಹುದ್ದೆಗಳು (Temporary Posts).
- ಶಾಶ್ವತ ಹುದ್ದೆಗಳು (Permanent Posts).
B – ಹೊಸ Contract/Outsource ಹುದ್ದೆಗಳನ್ನು ಸೇರಿಸುವುದು
ಹೊಸದಾಗಿ ಮಂಜೂರಾದ ಗುತ್ತಿಗೆ ಅಥವಾ ಹೊರಗುತ್ತಿಗೆ ಹುದ್ದೆಗಳ ವಿವರಗಳನ್ನು ಸೇರಿಸಲು Add Record ಬಟನ್ ಬಳಸಬೇಕು.
ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ದಾಖಲಿಸಿ ಸಲ್ಲಿಸಬೇಕು.
C – ತಾತ್ಕಾಲಿಕ ಹುದ್ದೆಗಳ End Date ನಮೂದಿಸುವುದು
ತಾತ್ಕಾಲಿಕ ಹುದ್ದೆಗಳಿಗೆ ಮಂಜೂರಾತಿ ನೀಡಿದ್ದರೆ ಅವುಗಳ ಅಂತಿಮ ದಿನಾಂಕವನ್ನು (End Date) ಕಡ್ಡಾಯವಾಗಿ ನಮೂದಿಸಬೇಕು.
ಈ ದಿನಾಂಕದ ವಿವರಗಳನ್ನು ದಾಖಲಿಸದೆ ಬಿಡಬಾರದು.
ಗುತ್ತಿಗೆ ಹಾಗೂ ಹೊರಗುತ್ತಿಗೆ ಹುದ್ದೆಗಳ ಮಾಹಿತಿಯೂ 2027-28ನೇ ಸಾಲಿನ ಸಿಬ್ಬಂದಿ ಬಲದ ಅಂದಾಜಿನಲ್ಲಿ ಪ್ರಮುಖವಾಗಿರುವುದರಿಂದ ಸಂಬಂಧಪಟ್ಟ ಇಲಾಖೆಗಳು ಇದನ್ನು ನಿರ್ಲಕ್ಷಿಸಬಾರದು.
Supernumerary Posts ವಿವರ ದಾಖಲಿಸುವುದು – HRMS-2.0 2027-28 Appendix-B Salary Estimate
ಈ ಸುತ್ತೋಲೆಯಲ್ಲಿ ಮತ್ತೊಂದು ಪ್ರಮುಖ ಸೂಚನೆಯನ್ನು ನೀಡಲಾಗಿದೆ.
ಯಾವುದೇ ಇಲಾಖೆಯ ವ್ಯಾಪ್ತಿಯಲ್ಲಿ ಅಧಿಸಂಖ್ಯಾತ ಹುದ್ದೆಗಳು ಅಥವಾ ಸಂಖ್ಯಾತಿರಿಕ್ತ ಹುದ್ದೆಗಳು (Supernumerary Posts) ಅಸ್ತಿತ್ವದಲ್ಲಿದ್ದರೆ ಅವುಗಳ ವಿವರಗಳನ್ನು HRMS-2.0 Organogram ಅಪ್ಲಿಕೇಶನ್ನಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.
Supernumerary Posts ಎಂದರೆ ಸಾಮಾನ್ಯ ಮಂಜೂರಾತಿ ಹುದ್ದೆಗಳ ಸಂಖ್ಯೆಗೆ ಹೆಚ್ಚುವರಿಯಾಗಿ ನಿರ್ದಿಷ್ಟ ಆಡಳಿತಾತ್ಮಕವಾಗಿ ಅಥವಾ ಸೇವಾ ಸಂಬಂಧಿತ ಕಾರಣಗಳಿಗಾಗಿ ಸೃಜಿಸಲಾದ ಹುದ್ದೆಗಳು.
ಇಂತಹ ಹುದ್ದೆಗಳು ಇಲಾಖೆಯಲ್ಲಿ ಅಸ್ತಿತ್ವದಲ್ಲಿದ್ದರೆ ಅವುಗಳ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ದಾಖಲಿಸಬೇಕು.
ಇದರಿಂದ ಇಲಾಖೆಯ ಒಟ್ಟು ಸಿಬ್ಬಂದಿ ಬಲದ ಅಂದಾಜು ನಿಖರವಾಗಿರಲು ಸಾಧ್ಯವಾಗುತ್ತದೆ.
HRMS-2.0 2027-28 Appendix-B Salary Estimate – ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ಹುದ್ದೆಗಳ ವೇತನ ಅಂದಾಜು
2027-28ನೇ ಶೈಕ್ಷಣಿಕ ಸಾಲಿನಲ್ಲಿ ವೇತನವನ್ನು ಅಂದಾಜು ಮಾಡುವಾಗ 2026-27ನೇ ಸಾಲಿನಲ್ಲಿ ನೇಮಕಾತಿ ನಡೆದಿರುವ ಅಥವಾ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ಹುದ್ದೆಗಳನ್ನು ವಿಶೇಷವಾಗಿ ಪರಿಗಣಿಸಬೇಕು.
ಉದಾಹರಣೆಗೆ, 2026-27ನೇ ಸಾಲಿನಲ್ಲಿ ಒಂದು ಇಲಾಖೆಯಲ್ಲಿ 500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅವುಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪೂರ್ಣಗೊಂಡಿದ್ದರೆ, ಮುಂದಿನ 2027-28ನೇ ಸಾಲಿನಲ್ಲಿ ಕಾರ್ಯನಿರತ ಸಿಬ್ಬಂದಿ ಬಲ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇದರಿಂದ ಸರ್ಕಾರದ ವೇತನ ವೆಚ್ಚದಲ್ಲಿಯೂ ಬದಲಾವಣೆ ಉಂಟಾಗುತ್ತದೆ.
ಆದ್ದರಿಂದ 2027-28ನೇ ಸಾಲಿನಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗುವ ನಿರೀಕ್ಷೆಯಿದ್ದರೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಅಗತ್ಯ ಮಾಹಿತಿಯನ್ನು ಅನುಬಂಧ-1ರ ನಮೂನೆಯಂತೆ ಸಿದ್ಧಪಡಿಸಬೇಕು.
ಈ ಮಾಹಿತಿಯನ್ನು ಆರ್ಥಿಕ ಇಲಾಖೆಗೆ ಪ್ರತ್ಯೇಕವಾಗಿ ಭೌತಿಕ ರೂಪದಲ್ಲಿ ಸಲ್ಲಿಸಬೇಕು.
ಮಾಹಿತಿ ಸಲ್ಲಿಸಲು ಕೊನೆಯ ದಿನಾಂಕ: 30-11-2026.
ಈ ದಿನಾಂಕವನ್ನು ಇಲಾಖಾ ಮುಖ್ಯಸ್ಥರು ವಿಶೇಷವಾಗಿ ಗಮನಿಸಬೇಕು.
ಸಹಾಯಾನುದಾನಿತ ಸಂಸ್ಥೆಗಳ (Grant-in-Aid) ಸಿಬ್ಬಂದಿ ಬಲ ಪರಿಶೀಲನೆ HRMS-2.0 2027-28 Appendix-B Salary Estimate
ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಸಹಾಯಾನುದಾನಿತ ಸಂಸ್ಥೆಗಳು (Grant-in-Aid Institutions) ಸಹ ಈ ಸುತ್ತೋಲೆಯ ಸೂಚನೆಗಳನ್ನು ಪಾಲಿಸಬೇಕು.
ಇಂತಹ ಸಂಸ್ಥೆಗಳು HRMSನಲ್ಲಿ ಲಭ್ಯವಿರುವ ಲೆಕ್ಕ ಶೀರ್ಷಿಕೆ ಮಂಜೂರಾತಿ ಬಲದ ವಿವರಗಳನ್ನು ಸಲ್ಲಿಸಬೇಕು.
ಇದಕ್ಕಾಗಿ ಕೆಳಗಿನ ಮೆನುವನ್ನು ಬಳಸಬೇಕು.
HRMS Menu:
Account Head Sanctioned Strength Verification/Assessment (GIA)
ಈ ಉಪಮೆನುವಿನ ಮೂಲಕ ಸಂಸ್ಥೆಗಳು ತಮ್ಮ ಲೆಕ್ಕ ಶೀರ್ಷಿಕೆವಾರು ಮಂಜೂರಾದ ಹುದ್ದೆಗಳ ವಿವರಗಳನ್ನು ಪರಿಶೀಲಿಸಬೇಕು.
2026-27ನೇ ಸಾಲಿನಲ್ಲಿ ಇಲಾಖೆಗಳು ಪಡೆದುಕೊಂಡಿರುವ ಲೆಕ್ಕ ಶೀರ್ಷಿಕೆವಾರು ಮಂಜೂರಾತಿ ಬಲದ ಅಂಕಿ-ಅಂಶಗಳು ಪರದೆಯ ಮೇಲೆ ಗೋಚರಿಸುತ್ತವೆ.
ಅಂದಾಜಿಸುವ ಅಧಿಕಾರಿ ಅಥವಾ ಇಲಾಖಾ ಮುಖ್ಯಸ್ಥರು ಪ್ರದರ್ಶಿತವಾಗಿರುವ ಮಂಜೂರಾದ ಬಲದ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು.
ಅಗತ್ಯ ಪರಿಶೀಲನೆಯ ಅನಂತರ 2027-28ನೇ ಸಾಲಿನ Appendix-B ಅಂದಾಜು ಸಿದ್ಧಪಡಿಸಲು ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.
ಡಿಜಿಟಲ್ ಸಹಿ ಮಾಡುವ ಮೊದಲು ಪರಿಶೀಲಿಸಬೇಕಾದ ಅಂಶಗಳು
HRMS-2.0 Organogramನಲ್ಲಿ ಮಾಹಿತಿಯನ್ನು ದಾಖಲಿಸಿದ ನಂತರ ವರದಿಗಳಿಗೆ ಡಿಜಿಟಲ್ ಸಹಿ ಮಾಡುವ ಮೊದಲು ರಾಜ್ಯ ಇಲಾಖಾ ಮುಖ್ಯಸ್ಥರು ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು.
ವಿಶೇಷವಾಗಿ:
- ಇಲಾಖೆಯ ಎಲ್ಲಾ ಕಚೇರಿಗಳ ವಿವರಗಳು ದಾಖಲಾಗಿವೆಯೇ?
- ಎಲ್ಲಾ DDO ಕಚೇರಿಗಳು ಸರಿಯಾಗಿ ಮ್ಯಾಪ್ ಆಗಿವೆಯೇ?
- ಉಪಕಚೇರಿಗಳ ವಿವರಗಳು ಪೂರ್ಣವಾಗಿವೆಯೇ?
- ಮಂಜೂರಾದ ಹುದ್ದೆಗಳ ಸಂಖ್ಯೆ ಸರಿಯಾಗಿದೆಯೇ?
- ಖಾಲಿ ಹುದ್ದೆಗಳ ವಿವರಗಳು ಸರಿಯಾಗಿವೆಯೇ?
- ಹೊಸದಾಗಿ ಸೃಜಿಸಲಾದ ಹುದ್ದೆಗಳು ದಾಖಲಾಗಿವೆಯೇ?
- ರದ್ದುಗೊಂಡ ಹುದ್ದೆಗಳ ವಿವರಗಳನ್ನು ತಿದ್ದುಪಡಿ ಮಾಡಲಾಗಿದೆಯೇ?
- ಹುದ್ದೆಗಳ ವರ್ಗಾವಣೆ ವಿವರಗಳು ನವೀಕರಿಸಲಾಗಿದೆಯೇ?
- Contract ಮತ್ತು Outsource ಹುದ್ದೆಗಳ ಮಾಹಿತಿ ಸರಿಯಾಗಿದೆಯೇ?
- Supernumerary Posts ವಿವರಗಳು ದಾಖಲಾಗಿವೆಯೇ?
- Direct Recruitment ಮತ್ತು Promotion ಶೇಕಡಾವಾರು ವಿವರಗಳು ನಮೂದಾಗಿವೆಯೇ?
- ಸಂಬಂಧಪಟ್ಟ ಸರ್ಕಾರದ ಆದೇಶಗಳನ್ನು ಅಪ್ಲೋಡ್ ಮಾಡಲಾಗಿದೆಯೇ?
ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಆನಂತರವೇ ಅಂತಿಮವಾಗಿ ವರದಿಯನ್ನು ಡಿಜಿಟಲ್ ಸಹಿ ಮಾಡಬೇಕು.
ಸಿಸ್ಟಂನಿಂದ ಸೃಜಿಸಲಾದ ಹಾಗೂ ಡಿಜಿಟಲ್ ಸಹಿ ಮಾಡಲಾದ ವರದಿಗಳನ್ನು ಮಾತ್ರ ಅಧಿಕೃತವೆಂದು ಪರಿಗಣಿಸಲಾಗುತ್ತದೆ.
ಆರ್ಥಿಕ ಇಲಾಖೆಯು 2027-28ನೇ ಶೈಕ್ಷಣಿಕ ಸಾಲಿನ ಹುದ್ದೆಗಳು ಮತ್ತು ವೇತನಕ್ಕೆ ಸಂಬಂಧಿಸಿದ ಅಂದಾಜು ಮತ್ತು ವಿಶ್ಲೇಷಣೆಗಳನ್ನು ಸಿದ್ಧಪಡಿಸಲು ಈ ವರದಿಗಳನ್ನು ಬಳಸಿಕೊಳ್ಳುತ್ತದೆ.
ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾಹಿತಿಯ ನಿಖರತೆಗೆ ಇಲಾಖಾ ಮುಖ್ಯಸ್ಥರೇ ಜವಾಬ್ದಾರರು
HRMS-2.0ನಲ್ಲಿ ನಮೂದಿಸಲಾದ ಮಾಹಿತಿಗಳ ಸಂಪೂರ್ಣತೆ ಮತ್ತು ನಿಖರತೆಗೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರೇ ಜವಾಬ್ದಾರರಾಗಿರುತ್ತಾರೆ.
ಈ ಜವಾಬ್ದಾರಿಯು ರಾಜ್ಯ ಹಾಗೂ ಜಿಲ್ಲಾ ವಲಯಗಳೆರಡಕ್ಕೂ ಅನ್ವಯಿಸುತ್ತದೆ.
ಪ್ರತಿ ಇಲಾಖೆಯಲ್ಲಿ ನೇಮಕಗೊಂಡಿರುವ HRMS ನೋಡಲ್ ಅಧಿಕಾರಿಗಳ ಸಹಾಯದಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕು.
ಜಿಲ್ಲಾ ಪಂಚಾಯತ್ಗಳ ಮುಖ್ಯ ಲೆಕ್ಕಾಧಿಕಾರಿಗಳು (CAO) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (CEO) ಸಮನ್ವಯ ಸಾಧಿಸಬೇಕು.
ಅವರ ಅಧಿಕಾರ ವ್ಯಾಪ್ತಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳು ಸಂಪೂರ್ಣವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಯಾವುದೇ ಜಿಲ್ಲೆಯ ಅಥವಾ ಕಚೇರಿಯ ಸಿಬ್ಬಂದಿ ಬಲದ ವಿವರಗಳು ಅಪೂರ್ಣವಾಗದಂತೆ ನೋಡಿಕೊಳ್ಳುವುದು ಇಲಾಖಾ ಮುಖ್ಯಸ್ಥರ ಜವಾಬ್ದಾರಿಯಾಗಿದೆ.
ಹೊಸದಾಗಿ ರಚನೆಯಾದ ಇಲಾಖೆ, ಜಿಲ್ಲೆ ಮತ್ತು ಇತರೇ ಆಡಳಿತ ಘಟಕಗಳ ಸೇರ್ಪಡೆ
ಕಳೆದ ವರ್ಷ Appendix-B ಅಂತಿಮಗೊಳಿಸಿದ ನಂತರ ಯಾವುದೇ ಹೊಸ ಆಡಳಿತ ಘಟಕಗಳು ಅಸ್ತಿತ್ವಕ್ಕೆ ಬಂದಿದ್ದರೆ ಅವುಗಳ ಮಾಹಿತಿಯನ್ನೂ 2027-28ನೇ ಸಾಲಿನ Appendix-B ಪ್ರಕ್ರಿಯೆಯಲ್ಲಿ ಸೇರಿಸಬೇಕು.
ಉದಾಹರಣೆಗೆ:
- ಹೊಸದಾಗಿ ರಚನೆಯಾದ ಇಲಾಖೆ.
- ಹೊಸ ಕಂದಾಯ ಜಿಲ್ಲೆ.
- ಹೊಸ ಜಿಲ್ಲಾ ಪಂಚಾಯತ್.
- ಹೊಸ ತಾಲೂಕು ಪಂಚಾಯತ್.
- ಹೊಸ ಸಹಾಯಾನುದಾನಿತ ಸಂಸ್ಥೆ.
ಇಂತಹ ಹೊಸ ಹೊಸ ಘಟಕಗಳು ಅಸ್ತಿತ್ವಕ್ಕೆ ಬಂದಿದ್ದರೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಮಾಹಿತಿಯನ್ನು HRMS-2.0ನಲ್ಲಿ ಸೇರಿಸಬೇಕು.
ಈ ಕುರಿತು ಯಾವುದೇ ಸಮಸ್ಯೆಗಳಿದ್ದರೆ ರಾಜ್ಯ ಇಲಾಖಾ ಮುಖ್ಯಸ್ಥರು ಯೋಜನಾ ನಿರ್ದೇಶಕರು, HRMS-2.0 ಕಾರ್ಯಾಲಯವನ್ನು ಸಂಪರ್ಕಿಸಬಹುದು.
ಸಂಪರ್ಕಿಸಲು ಕೊನೆಯ ದಿನಾಂಕ: 21-11-2026.
HRMS-2.0 2027-28 Appendix-B Salary Estimate: HRMS-2.0 ಮಾಸ್ಟರ್ಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಏನು ಮಾಡಬೇಕು?
Organogram ಅಪ್ಲಿಕೇಶನ್ನಲ್ಲಿ ಕೆಲವು ಮಾಸ್ಟರ್ ವಿವರಗಳು ಲಭ್ಯವಿಲ್ಲದಿದ್ದರೆ ಅಥವಾ ಈಗಿರುವಂತಹ ಮಾಹಿತಿಯಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಸಂಬಂಧಪಟ್ಟ ಇಲಾಖೆಗಳು HRMS-2.0 ನಿರ್ದೇಶನಾಲಯವನ್ನು ಸಂಪರ್ಕಿಸಬೇಕು.
ವಿಶೇಷವಾಗಿ:
- ಇಲಾಖೆಗಳ ಮಾಸ್ಟರ್ ವಿವರಗಳು.
- ಕಚೇರಿಗಳ ವಿವರಗಳು.
- ಲೆಕ್ಕ ಶೀರ್ಷಿಕೆಗಳ ವಿವರಗಳು.
- DDO ಸಂಬಂಧಿತ ಮಾಹಿತಿ.
- ವೃಂದ ಹಾಗೂ ಹುದ್ದೆಗಳ ವಿವರಗಳು.
- ಇತರೇ ಅಗತ್ಯ ಆಡಳಿತಾತ್ಮಕ ದಾಖಲೆಗಳು.
ಇವುಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಗಮನಕ್ಕೆ ತರಬೇಕು.
HRMSಗೆ ಅಗತ್ಯ ಮಾಹಿತಿಗಳನ್ನು ಒದಗಿಸಲು ಕೊನೆಯ ದಿನಾಂಕ: 25-11-2026.
ಈ ಗಡುವಿನೊಳಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸುವುದು ಇಲಾಖೆಗಳ ಜವಾಬ್ದಾರಿಯಾಗಿದೆ.
HRMS-2.0 2027-28 Appendix-B ಪ್ರಮುಖ ದಿನಾಂಕಗಳು
ಈ ಸುತ್ತೋಲೆಯಲ್ಲಿ ವಿವಿಧ ಕಾರ್ಯಗಳಿಗೆ ಪ್ರತ್ಯೇಕ ಕೊನೆಯ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಕಾರ್ಯದ ವಿವರ – ಕೊನೆಯ ದಿನಾಂಕ
- ಹೊಸ ಇಲಾಖೆ, ಜಿಲ್ಲೆ, ಜಿ.ಪಂ., ತಾ.ಪಂ. ಅಥವಾ GIA ಸಂಸ್ಥೆಗಳ ಸೇರ್ಪಡೆ ಕುರಿತು HRMS ಯೋಜನಾ ನಿರ್ದೇಶಕರನ್ನು ಸಂಪರ್ಕಿಸುವುದು – 21-11-2026
- HRMS ಮಾಸ್ಟರ್ಗಳ ಸಮಸ್ಯೆ ಹಾಗೂ ತಿದ್ದುಪಡಿಗಳ ಮಾಹಿತಿ ಸಲ್ಲಿಸುವುದು – 25-11-2026
- HRMS-2.0 Organogramನಲ್ಲಿ ಅಗತ್ಯ ಮಾಹಿತಿ ನವೀಕರಿಸಿ ಡಿಜಿಟಲ್ ಸಹಿಯಾದ ವರದಿಗಳನ್ನು ಸಲ್ಲಿಸುವುದು – 30-11-2026
- ಈ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ಹುದ್ದೆಗಳ ಮಾಹಿತಿಯನ್ನು ಅನುಬಂಧ-1ರಂತೆ ಆರ್ಥಿಕ ಇಲಾಖೆಗೆ ಭೌತಿಕವಾಗಿ ಸಲ್ಲಿಸುವುದು – 30-11-2026
ಮುಖ್ಯ ಸೂಚನೆ: ಈ ಮೇಲಿನ ದಿನಾಂಕಗಳು ಸುತ್ತೋಲೆಯಲ್ಲಿ ನಮೂದಿಸಿರುವ ಗಡುವುಗಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವುದು ಸೂಕ್ತ.
HRMS-2.0 Organogram ಪ್ರಕ್ರಿಯೆಯಲ್ಲಿ DDOಗಳು ಗಮನಿಸಬೇಕಾದ ಪ್ರಮುಖ ಅಂಶಗಳು – HRMS-2.0 2027-28 Appendix-B Salary Estimate
DDOಗಳು ಈ ಕೆಳಗಿನ ಅಂಶಗಳನ್ನು ವಿಶೇಷವಾಗಿ ಗಮನಿಸಬೇಕು.
- ನಿಮ್ಮ ಕಚೇರಿಯ Organogram ವಿವರಗಳನ್ನು ಪರಿಶೀಲಿಸಿ.
- ನಿಮ್ಮ ಆಡಳಿತ ವ್ಯಾಪ್ತಿಯಲ್ಲಿರುವ ಎಲ್ಲಾ ಉಪಕಚೇರಿಗಳ ಪಟ್ಟಿಯನ್ನು ಪರಿಶೀಲಿಸಿ.
- ಹೊಸದಾಗಿ ಸೃಜಿಸಲಾದ ಕಚೇರಿಗಳ ವಿವರಗಳನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಗಮನಕ್ಕೆ ತನ್ನಿ.
- ಮಂಜೂರಾದ ಹುದ್ದೆಗಳ ಸಂಖ್ಯೆಯನ್ನು ಪರಿಶೀಲಿಸಿ.
- ಹುದ್ದೆಗಳ ಸೃಜನೆ ಹಾಗೂ ರದ್ದತಿ ಆದೇಶಗಳನ್ನು ಪರಿಶೀಲಿಸಿ.
- ಹುದ್ದೆಗಳ DDO Mapping ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಲೆಕ್ಕ ಶೀರ್ಷಿಕೆ Mapping ಸರಿಯಾಗಿದೆಯೇ ಎಂದು ಪರಿಶೀಲಿಸಿ.
- ವರ್ಗಾವಣೆಗೊಂಡ ಹುದ್ದೆಗಳನ್ನು ಅಗತ್ಯವಿದ್ದಲ್ಲಿ Remapping ಮಾಡಿ.
- Contract ಹಾಗೂ Outsource ಹುದ್ದೆಗಳ ವಿವರಗಳನ್ನು ಪರಿಶೀಲಿಸಿ.
- ತಾತ್ಕಾಲಿಕ ಹುದ್ದೆಗಳ End Date ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ.
- ಎಲ್ಲಾ ಉಪಕಚೇರಿಗಳನ್ನು ಸಂಬಂಧಪಟ್ಟ DDOಗೆ ಮ್ಯಾಪ್ ಮಾಡಿ.
- C&R Rules ಹಾಗೂ ಸಂಬಂಧಪಟ್ಟ ಆದೇಶಗಳನ್ನು ಅಪ್ಲೋಡ್ ಮಾಡಿ.
ಈ ಸುತ್ತೋಲೆಯು ಸರ್ಕಾರಿ ನೌಕರರಿಗೆ ಏಕೆ ಮುಖ್ಯ?
ಸಾಮಾನ್ಯವಾಗಿ HRMS-2.0 Organogram ಪ್ರಕ್ರಿಯೆಯು ಇಲಾಖಾ ಮುಖ್ಯಸ್ಥರು ಹಾಗೂ DDOಗಳಿಗೆ ಸಂಬಂಧಿಸಿದೆ ಎಂದು ಭಾವಿಸಬಹುದು.
ಆದರೆ ಈ ಪ್ರಕ್ರಿಯೆಯು ಸರ್ಕಾರಿ ನೌಕರರ ವೇತನ ಮತ್ತು ಭವಿಷ್ಯದ ಸಿಬ್ಬಂದಿ ನಿರ್ವಹಣೆಯ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುವ ಮಹತ್ವದ ಕಾರ್ಯವಾಗಿದೆ.
ಕಾರಣ, 2027-28ನೇ ಸಾಲಿನ ವೇತನ ವೆಚ್ಚವನ್ನು ಅಂದಾಜು ಮಾಡುವಾಗ HRMS-2.0ನಲ್ಲಿ ಲಭ್ಯವಿರುವ ಹುದ್ದೆಗಳ ಮಂಜೂರಾತಿ ಬಲದ ಮಾಹಿತಿಯನ್ನು ಆರ್ಥಿಕ ಇಲಾಖೆ ಬಳಸುತ್ತದೆ.
ಒಂದು ವೇಳೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಕಡಿಮೆಯಾಗಿ ದಾಖಲಾಗಿದ್ದರೆ ಅಥವಾ ಕೆಲವು ಹುದ್ದೆಗಳು Organogramನಲ್ಲಿ ಕಾಣಿಸದಿದ್ದರೆ ವೇತನ ವೆಚ್ಚದ ಅಂದಾಜು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಅದೇ ರೀತಿ ತಪ್ಪಾದ ಅಥವಾ ಹಳೆಯ ಮಾಹಿತಿಯನ್ನು ಬಳಸಿದರೆ ಆಯವ್ಯಯ ಅಂದಾಜಿನಲ್ಲಿ ವ್ಯತ್ಯಾಸ ಉಂಟಾಗಬಹುದು.
ಆದ್ದರಿಂದ ಸರ್ಕಾರಿ ನೌಕರರು ತಮ್ಮ ಕಚೇರಿಯ DDO ಮತ್ತು ಸಂಬಂಧಪಟ್ಟ ಆಡಳಿತಾಧಿಕಾರಿಗಳ ಗಮನಕ್ಕೆ ಯಾವುದೇ ಹುದ್ದೆಗಳ ಸಂಬಂಧಿತ ವ್ಯತ್ಯಾಸಗಳಿದ್ದರೆ ತರಬಹುದು.
HRMS-2.0 2027-28 Appendix-B Salary Estimate: HRMS-2.0 2027-28 Appendix-B ಪ್ರಕ್ರಿಯೆಯ ಪ್ರಯೋಜನಗಳು
ಈ ಪ್ರಕ್ರಿಯೆಯನ್ನು ಸರಿಯಾಗಿ ಅನುಷ್ಠಾನಗೊಳಿಸುವುದರಿಂದ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಲವು ಪ್ರಯೋಜನಗಳಿವೆ.
1. ನಿಖರವಾದ ಸಿಬ್ಬಂದಿ ಬಲದ ಮಾಹಿತಿ
ಪ್ರತಿ ಇಲಾಖೆಯ ಮಂಜೂರಾದ ಹುದ್ದೆಗಳು ಹಾಗು ಕಾರ್ಯನಿರತ ಸಿಬ್ಬಂದಿಯ ವಿವರಗಳನ್ನು ನಿಖರವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
2. ವೇತನ ವೆಚ್ಚದ ಸರಿಯಾದ ಅಂದಾಜು
ಮುಂದಿನ ಆರ್ಥಿಕ ಸಾಲಿನ ವೇತನ ವೆಚ್ಚವನ್ನು ವಾಸ್ತವಿಕ ಮಾಹಿತಿಗಳ ಆಧಾರದ ಮೇಲೆ ಅಂದಾಜು ಮಾಡಲು ಸಾಧ್ಯವಾಗುತ್ತದೆ.
3. ಹುದ್ದೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ
ಹೊಸದಾಗಿ ಸೃಜಿಸಲಾದ, ರದ್ದುಗೊಳಿಸಲಾದ ಹಾಗೂ ವರ್ಗಾವಣೆಗೊಂಡ ಹುದ್ದೆಗಳ ವಿವರಗಳನ್ನು ಒಂದೇ ವ್ಯವಸ್ಥೆಯಲ್ಲಿ ನಿರ್ವಹಿಸಬಹುದು.
4. DDO ಕಚೇರಿಗಳ ಸರಿಯಾದ ಮ್ಯಾಪಿಂಗ್
ಎಲ್ಲಾ ಕಚೇರಿಗಳು ಮತ್ತು ಉಪಕಚೇರಿಗಳನ್ನು ಸೂಕ್ತ DDOಗೆ ಜೋಡಿಸುವುದರಿಂದ ಆಡಳಿತಾತ್ಮಕ ಕಾರ್ಯಗಳು ಸುಗಮವಾಗುತ್ತವೆ.
5. ಡಿಜಿಟಲ್ ದಾಖಲೆಗಳ ನಿರ್ವಹಣೆ
ಸರ್ಕಾರದ ಆದೇಶಗಳು, C&R Rules ಹಾಗೂ ಇತರ ದಾಖಲೆಗಳನ್ನು ಆನ್ಲೈನ್ನಲ್ಲಿ ಸಂಗ್ರಹಿಸಬಹುದು.
6. ಭವಿಷ್ಯದ ನೇಮಕಾತಿ ಯೋಜನೆಗೆ ಸಹಾಯ
ನೇರ ನೇಮಕಾತಿ ಮತ್ತು ಪದೋನ್ನತಿ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳ ಪ್ರಮಾಣವನ್ನು ದಾಖಲಿಸುವುದರಿಂದ ಸಿಬ್ಬಂದಿ ನಿರ್ವಹಣೆಗೆ ಅನುಕೂಲವಾಗುತ್ತದೆ.
ಇಲಾಖೆಗಳು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದರೆ ಏನಾಗಬಹುದು?
ಆರ್ಥಿಕ ಇಲಾಖೆಯು ಸ್ಪಷ್ಟವಾಗಿ HRMS-2.0 Organogramನಲ್ಲಿ ಲಭ್ಯವಿರುವ ಮಂಜೂರಾತಿ ಬಲದ ಅಂಕಿ-ಅಂಶಗಳನ್ನು ಮಾತ್ರ Appendix-B ವೇತನ ಅಂದಾಜಿಗೆ ಬಳಸುವುದಾಗಿ ತಿಳಿಸಿದೆ.
ಹೀಗಾಗಿ ಇಲಾಖೆಗಳು ತಮ್ಮ ಮಾಹಿತಿಯನ್ನು ಸರಿಯಾಗಿ ನವೀಕರಿಸದಿದ್ದರೆ ಕೆಲವು ಸಮಸ್ಯೆಗಳು ಎದುರಾಗಬಹುದು.
- ಮಂಜೂರಾದ ಹುದ್ದೆಗಳ ಸಂಖ್ಯೆ ತಪ್ಪಾಗಿ ದಾಖಲಾಗಬಹುದು.
- ಖಾಲಿ ಹುದ್ದೆಗಳ ವಿವರಗಳು ಸರಿಯಾಗಿ ಪ್ರತಿಬಿಂಬಿಸದಿರಬಹುದು.
- ಹೊಸದಾಗಿ ಸೃಜಿಸಲಾದ ಹುದ್ದೆಗಳು ಅಂದಾಜಿನಲ್ಲಿ ಸೇರದೇ ಉಳಿಯಬಹುದು.
- ಹುದ್ದೆಗಳ ವೇತನ ಶ್ರೇಣಿಯಲ್ಲಿ ವ್ಯತ್ಯಾಸ ಉಂಟಾಗಬಹುದು.
- DDO ಮತ್ತು ಲೆಕ್ಕ ಶೀರ್ಷಿಕೆ ಮ್ಯಾಪಿಂಗ್ನಲ್ಲಿ ಸಮಸ್ಯೆಯಾಗಬಹುದು.
- ಮುಂದಿನ ಆರ್ಥಿಕ ಸಾಲಿನ ವೇತನ ವೆಚ್ಚದ ಅಂದಾಜು ಕಡಿಮೆಯಾಗಬಹುದು.
- ಇಲಾಖೆಯ ಸಿಬ್ಬಂದಿ ಬಲದ ಕುರಿತು ತಪ್ಪಾದ ವರದಿ ಸಿದ್ಧವಾಗಬಹುದು.
ಆದ್ದರಿಂದ ಪ್ರತಿಯೊಂದು ಇಲಾಖೆಯೂ ನಿಗದಿತ ಸಮಯದೊಳಗೆ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ ನವೀಕರಿಸುವುದು ಅತ್ಯಗತ್ಯವಾಗಿದೆ.
HRMS-2.0 ಅಧಿಕೃತ ವೆಬ್ಸೈಟ್ ಮತ್ತು ಸುತ್ತೋಲೆ ಎಲ್ಲಿ ಲಭ್ಯ?
2027-28ನೇ ಶೈಕ್ಷಣಿಕ ಸಾಲಿನ Appendix-B ವೇತನ ಅಂದಾಜಿಗೆ ಸಂಬಂಧಿಸಿದ ಈ ಸುತ್ತೋಲೆ ಹಾಗೂ ಅದರ ಅನುಬಂಧಗಳು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಧಿಕೃತ ವೆಬ್ಸೈಟ್ಗಳು:
1. HRMS-2.0 Organogram Portal
https://hrms2org.karnataka.gov.in
2. ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ
https://finance.karnataka.gov.in
ಸಂಬಂಧಪಟ್ಟ ಅಧಿಕಾರಿಗಳು ಅಧಿಕೃತ ಪೋರ್ಟಲ್ಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಬಹುದು.
ಕೊನೆಯ ಮಾತು
ಕರ್ನಾಟಕ ಸರ್ಕಾರದ 2027-28ನೇ ಸಾಲಿನಲ್ಲಿ ಆಯವ್ಯಯ ತಯಾರಿಕೆಯ ಹಿನ್ನೆಲೆಯಲ್ಲಿ HRMS-2.0 Organogram ಮೂಲಕ Appendix-B ವೇತನ ಅಂದಾಜು ಸಿದ್ಧಪಡಿಸುವ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದೆ.
ಈ ಪ್ರಕ್ರಿಯೆಯಲ್ಲಿ ಇಲಾಖಾ ಮುಖ್ಯಸ್ಥರು, DDOಗಳು, HRMS ನೋಡಲ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಆಡಳಿತಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ವಿಶೇಷವಾಗಿ ಮಂಜೂರಾದ ಹುದ್ದೆಗಳ ಸಂಖ್ಯೆ, ಕಚೇರಿಗಳ ವಿವರಗಳು, DDO Mapping, Account Head Mapping, Contract/Outsource ಹುದ್ದೆಗಳು, Supernumerary Posts ಮತ್ತು ಹೊಸದಾಗಿ ಸೃಜಿಸಲಾದ ಹುದ್ದೆಗಳ ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕು.
ಡಿಜಿಟಲ್ ಸಹಿ ಮಾಡಲಾದ ವರದಿಗಳನ್ನು ಮಾತ್ರ ಅಧಿಕೃತವೆಂದು ಪರಿಗಣಿಸಲಾಗುವುದರಿಂದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿದ ಅನಂತರವೇ ಅಂತಿಮವಾಗಿ ವರದಿಯನ್ನು ಸಲ್ಲಿಸಬೇಕು.
ಪ್ರಮುಖವಾಗಿ ನೆನಪಿಡಿ: 2027-28ನೇ ಸಾಲಿನ Appendix-B ವೇತನ ಅಂದಾಜಿಗೆ HRMS-2.0 Organogramನಲ್ಲಿ ಲಭ್ಯವಿರುವ ಮಂಜೂರಾತಿ ಬಲದ ಅಂಕಿ-ಅಂಶಗಳೇ ಆಧಾರವಾಗಿರುತ್ತವೆ. ಆದ್ದರಿಂದ ಯಾವುದೇ ತಪ್ಪು ಅಥವಾ ಅಪೂರ್ಣ ಮಾಹಿತಿಯನ್ನು ಉಳಿಸದೆ ನಿಗದಿತ ದಿನಾಂಕದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ.
ಈ ಮಾಹಿತಿಯು ಎಲ್ಲಾ ಸರ್ಕಾರಿ ಇಲಾಖೆಗಳ DDOಗಳು, ಮುಖ್ಯಸ್ಥರು, HRMS ನೋಡಲ್ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಉಪಯುಕ್ತವಾಗಲಿದೆ ಎಂದು ಆಶಿಸುತ್ತೇವೆ.
- Read more…
ಕರ್ತವ್ಯ (KAAMS) ಅಪ್ಲಿಕೇಶನ್ನಲ್ಲಿ OOD ದಾಖಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮತ್ತು ವಿಡಿಯೋ!
HRMS-2.0 2027-28 Appendix-B Salary Estimate Frequently Asked Questions (FAQ) – ಪದೇಪದೇ ಕೇಳಲಾಗುವ ಪ್ರಶ್ನೆಗಳು
1. HRMS-2.0 2027-28 Appendix-B ಎಂದರೇನು?
2027-28ನೇ ಆರ್ಥಿಕ ಸಾಲಿನ ರಾಜ್ಯ ಆಯವ್ಯಯ ಸಿದ್ಧಪಡಿಸಲು ವಿವಿಧ ಇಲಾಖೆಗಳ ಮಂಜೂರಾದ ಹುದ್ದೆಗಳು ಮತ್ತು ವೇತನ ವೆಚ್ಚದ ಅಂದಾಜು ಮಾಡುವ ಪ್ರಕ್ರಿಯೆಯಾಗಿದೆ.
2. Appendix-B ವೇತನ ಅಂದಾಜಿಗೆ ಯಾವ ಮಾಹಿತಿಯನ್ನು ಬಳಸಲಾಗುತ್ತದೆ?
HRMS-2.0 Organogram ಮಾಡ್ಯೂಲ್ನಲ್ಲಿ ದಾಖಲಾಗಿರುವ ಮಂಜೂರಾತಿ ಬಲದ ಅಂಕಿ-ಅಂಶಗಳನ್ನು ಬಳಸಲಾಗುತ್ತದೆ.
3. HRMS-2.0 Organogram ಅಧಿಕೃತ ವೆಬ್ಸೈಟ್ ಯಾವುದು?
https://hrms2org.karnataka.gov.in
4. DDOಗಳು ಯಾವ ಮಾಹಿತಿಯನ್ನು ಪರಿಶೀಲಿಸಬೇಕು?
ತಮ್ಮ ಕಚೇರಿ ಹಾಗೂ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಎಲ್ಲಾ ಉಪಕಚೇರಿಗಳ ವಿವರಗಳು, ಹುದ್ದೆಗಳ ಮಂಜೂರಾತಿ ಬಲ ಹಾಗೂ DDO Mapping ಮಾಹಿತಿಯನ್ನು ಪರಿಶೀಲಿಸಬೇಕು.
5. ಹೊಸದಾಗಿ ಸೃಜಿಸಲಾದ ಹುದ್ದೆಗಳನ್ನು ಹೇಗೆ ದಾಖಲಿಸಬೇಕು?
ಸಂಬಂಧಪಟ್ಟ ಸರ್ಕಾರದ ಆದೇಶಗಳೊಂದಿಗೆ HRMS-2.0 Organogram ಅಪ್ಲಿಕೇಶನ್ ಮೂಲಕ ಕೋರಿಕೆ ಸಲ್ಲಿಸಬೇಕು.
6. HRMS Admin ಅನುಮೋದನೆ ನಂತರ ಏನು ಮಾಡಬೇಕು?
ಹೊಸದಾಗಿ ಸೇರಿಸಲಾದ ಹುದ್ದೆಗಳನ್ನು ಸಂಬಂಧಪಟ್ಟ DDO ಮತ್ತು ಲೆಕ್ಕ ಶೀರ್ಷಿಕೆಗೆ ವೇತನ ಶ್ರೇಣಿಯೊಂದಿಗೆ ಮ್ಯಾಪ್ ಮಾಡಬೇಕು.
7. Post Remapping ಎಂದರೇನು?
ಒಂದು DDO ಅಥವಾ ಲೆಕ್ಕ ಶೀರ್ಷಿಕೆಗೆ ಮ್ಯಾಪ್ ಆಗಿರುವ ಹುದ್ದೆಯನ್ನು ಮತ್ತೊಂದು DDO ಅಥವಾ ಲೆಕ್ಕ ಶೀರ್ಷಿಕೆಗೆ ವರ್ಗಾಯಿಸಿದಾಗ ಮರುಮ್ಯಾಪಿಂಗ್ ಮಾಡುವ ಪ್ರಕ್ರಿಯೆಯಾಗಿದೆ.
8. ವರದಿಗೆ ಡಿಜಿಟಲ್ ಸಹಿ ಮಾಡುವುದು ಕಡ್ಡಾಯವೇ?
ಹೌದು. ವರದಿಗಳಿಗೆ ಖಜಾನೆಯಿಂದ ವಿತರಿಸಿದ DSC ಕೀ ಅಥವಾ ಆಧಾರ್ ಇ-ಸಹಿ ಮೂಲಕ ಡಿಜಿಟಲ್ ಸಹಿ ಮಾಡಬೇಕು.
9. Contract ಹಾಗೂ Outsource ಹುದ್ದೆಗಳ ವಿವರಗಳನ್ನು ದಾಖಲಿಸಬೇಕೇ?
ಹೌದು. ಎಲ್ಲಾ ಇಲಾಖೆಗಳು ಮಂಜೂರಾದ ಗುತ್ತಿಗೆ ಹಾಗೂ ಹೊರಗುತ್ತಿಗೆ ಹುದ್ದೆಗಳ ವಿವರಗಳನ್ನು Organogramನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
10. ತಾತ್ಕಾಲಿಕ Contract/Outsource ಹುದ್ದೆಗಳಿಗೆ ಏನು ಮಾಡಬೇಕು?
ಅವುಗಳನ್ನು ತಾತ್ಕಾಲಿಕ ಹುದ್ದೆಗಳೆಂದು ಗುರುತಿಸಿ ಅಂತಿಮ ದಿನಾಂಕವನ್ನು (End Date) ನಮೂದಿಸಬೇಕು.
11. Supernumerary Posts ವಿವರಗಳನ್ನು ಸಲ್ಲಿಸಬೇಕೇ?
ಹೌದು. ಇಲಾಖೆಗಳ ವ್ಯಾಪ್ತಿಯಲ್ಲಿರುವ ಅಧಿಸಂಖ್ಯಾತ ಅಥವಾ ಸಂಖ್ಯಾತಿರಿಕ್ತ ಹುದ್ದೆಗಳ ವಿವರಗಳನ್ನು HRMS-2.0 Organogramನಲ್ಲಿ ದಾಖಲಿಸಬೇಕು.
12. ಹೊಸ ಉಪಕಚೇರಿಗಳನ್ನು ಯಾರು ಸೇರಿಸಬೇಕು?
ಹೊಸ ಕಚೇರಿಗಳನ್ನು ಸಂಬಂಧಪಟ್ಟ ರಾಜ್ಯ ಇಲಾಖಾ ಮುಖ್ಯಸ್ಥರ (State HOD) ಲಾಗಿನ್ ಮೂಲಕ ಮಾತ್ರ ಸೇರಿಸಬೇಕು.
13. ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ಹುದ್ದೆಗಳ ಮಾಹಿತಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅನುಬಂಧ-1ರ ಪ್ರಕಾರ ಅಗತ್ಯ ಮಾಹಿತಿಯನ್ನು 30-11-2026ರೊಳಗೆ ಆರ್ಥಿಕ ಇಲಾಖೆಗೆ ಭೌತಿಕ ರೂಪದಲ್ಲಿ ಸಲ್ಲಿಸಬೇಕು.
14. HRMS ಮಾಸ್ಟರ್ಗಳ ತಿದ್ದುಪಡಿಗೆ ಕೊನೆಯ ದಿನಾಂಕ ಯಾವುದು?
25-11-2026.
15. ಹೊಸ ಇಲಾಖೆ ಅಥವಾ ಜಿಲ್ಲೆಗಳ ಸೇರ್ಪಡೆ ಕುರಿತು ಸಂಪರ್ಕಿಸಲು ಕೊನೆಯ ದಿನಾಂಕ ಯಾವುದು?
21-11-2026.
16. ಅಂತಿಮ ಡಿಜಿಟಲ್ ಸಹಿ ಮಾಡಿದ ವರದಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?
30-11-2026.
17. Grant-in-Aid ಸಂಸ್ಥೆಗಳು ಯಾವ ಮೆನುವನ್ನು ಬಳಸಬೇಕು?
Account Head Sanctioned Strength Verification/Assessment (GIA) ಉಪಮೆನುವನ್ನು ಬಳಸಬೇಕು.
18. ಸುತ್ತೋಲೆ ಎಲ್ಲಿ ಲಭ್ಯವಿರುತ್ತದೆ?
ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ವೆಬ್ಸೈಟ್ https://finance.karnataka.gov.in ನಲ್ಲಿ ಲಭ್ಯವಿರುತ್ತದೆ.
