National Painting Competition 2026: 5th ರಿಂದ 10th ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ ವಿದ್ಯುತ್ ಉಳಿತಾಯ ಚಿತ್ರಕಲೆ ಸ್ಪರ್ಧೆ(National Painting Competition) 2026
National Painting Competition 2026: ವಿದ್ಯುತ್ ಸಚಿವಾಲಯದ ವತಿಯಿಂದ ವಿದ್ಯುತ್ ಉಳಿತಾಯ ಕುರಿತ ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆ–2026 ಏರ್ಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ವಿದ್ಯುತ್ ಉಳಿತಾಯವನ್ನು ಮತ್ತು ಇಂಧನ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವ ಈ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
5th ರಿಂದ 10ನೇ ತರಗತಿವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಯನ್ನು ಚಿತ್ರಕಲೆಯ ಮೂಲಕ ಪ್ರದರ್ಶಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿಜೇತರನ್ನು ಆಯ್ಕೆ ಮಾಡಿ ಆಕರ್ಷಕ ನಗದು ಬಹುಮಾನ, ಪದಕ ಸೇರಿದಂತೆ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ.
ವಿದ್ಯುತ್ ಉಳಿತಾಯ ಚಿತ್ರಕಲೆ ಸ್ಪರ್ಧೆ(National Painting Competition) 2026
ವಿದ್ಯುತ್ ಉಳಿತಾಯವನ್ನು ಹಾಗೂ ಇಂಧನದ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪ್ರಮುಖವಾಗಿದೆ. ಈ ಸಂದೇಶವನ್ನು ವಿದ್ಯಾರ್ಥಿಗಳಲ್ಲಿ ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿ ತಲುಪಿಸುವದು ಈ ಉದ್ದೇಶದಿಂದ ರಾಷ್ಟ್ರೀಯ ಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ನಿಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಧರಿಸಿ ಚಿತ್ರ ರಚಿಸಬೇಕು.
ಚಿತ್ರಕಲೆಯ ವಿಷಯಗಳು
- ವಿಷಯ–1:- “ಶಾಲೆ ಮತ್ತು ಮನೆಯಲ್ಲಿ ವಿದ್ಯುತ್ ಉಳಿಸಿ”
- ವಿಷಯ–2:- “ಇಂಧನ ಭದ್ರತೆಗಾಗಿ ವಿದ್ಯುತ್ ಉಳಿತಾಯ ಪ್ರಮುಖವಾಗಿದೆ”
ವಿದ್ಯಾರ್ಥಿಗಳು ಈ ಮೇಲಿನ ವಿಷಯಗಳನ್ನು ಆಧರಿಸಿ ತಮ್ಮದೇ ಆದ ಸೃಜನಾತ್ಮಕ ಚಿತ್ರವನ್ನು ಸಿದ್ಧಪಡಿಸಬಹುದು.
ಯಾರು ಯಾರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು?
ಸ್ಪರ್ಧೆಯನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.
ಗುಂಪು – ತರಗತಿಗಳು
- ಎ ಗುಂಪು (Group A) – 5ನೇ, 6ನೇ ಮತ್ತು 7ನೇ ತರಗತಿ
- ಬಿ ಗುಂಪು (Group B) – 8ನೇ, 9ನೇ ಮತ್ತು 10ನೇ ತರಗತಿ
ಅಂದರೆ, 5th ತರಗತಿಯಿಂದ 10th ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಹೊಂದಿದ್ದಾರೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಬಹುಮಾನ
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ 2 ಗುಂಪುಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುತ್ತದೆ.
ಬಹುಮಾನದ ವರ್ಗ – ಎ ಗುಂಪು – ಬಿ ಗುಂಪು
- ಮೊದಲ ಬಹುಮಾನ – ಚಿನ್ನದ ಪದಕ – ₹50,000 – ₹50,000
- ಎರಡನೇ ಬಹುಮಾನ – ಬೆಳ್ಳಿ ಪದಕ – ₹30,000 – ₹30,000
- ಮೂರನೇ ಬಹುಮಾನ – ಕಂಚಿನ ಪದಕ – ₹20,000 – ₹20,000
- ಪ್ರಶಂಸಾ ಬಹುಮಾನ – 10 – ₹7,500 – ₹7,500
ಹೀಗಾಗಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಬಹುಮಾನ ಮತ್ತು ಪದಕಗಳನ್ನು ಪಡೆಯುವ ಅವಕಾಶವಿದೆ.
ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಚಿತ್ರಗಳಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಆಕರ್ಷಕವಾದ ಬಹುಮಾನಗಳನ್ನು ನೀಡಲಾಗುತ್ತದೆ.
ಬಹುಮಾನದ ವರ್ಗ – ಎ ಗುಂಪು – ಬಿ ಗುಂಪು
- ಮೊದಲ ಬಹುಮಾನ – ಚಿನ್ನದ ಪದಕ – ₹1,00,000 – ₹1,00,000
- ಎರಡನೇ ಬಹುಮಾನ – ಬೆಳ್ಳಿ ಪದಕ – ₹50,000 – ₹50,000
- ಮೂರನೇ ಬಹುಮಾನ – ಕಂಚಿನ ಪದಕ – ₹30,000 – ₹30,000
- ಪ್ರಶಂಸಾ ಬಹುಮಾನ – 10 – ₹15,000 – ₹15,000
ಮೊದಲ ಬಹುಮಾನ ಪಡೆಯುವಂತಹ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ನಗದು ರೂಪದಲ್ಲಿ ಬಹುಮಾನ ದೊರೆಯಲಿದೆ.
ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಪಡೆಯುವ ಅವಕಾಶ
ರಾಷ್ಟ್ರಮಟ್ಟದಲ್ಲಿ ವಿಜೇತರಾಗುವಂತಹ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಮಾತ್ರವಲ್ಲದೆ ಹೆಚ್ಚುವರಿ ಬಹುಮಾನಗಳೂ ದೊರೆಯಲಿವೆ.
ರಾಷ್ಟ್ರಮಟ್ಟದ ವಿಜೇತರು:
- ಲ್ಯಾಪ್‌ಟಾಪ್/ಟ್ಯಾಬ್ಲೆಟ್
- ಭಾರತದ ಅಧ್ಯಯನ ಪ್ರವಾಸದ ಅವಕಾಶ
- ಚಿನ್ನ/ಬೆಳ್ಳಿ/ಕಂಚಿನ ಪದಕ
- ನಗದು ಬಹುಮಾನ
ಮುಂತಾದ ಬಹುಮಾನಗಳನ್ನು ಪಡೆಯುವ ಅವಕಾಶ ಹೊಂದಿರುತ್ತಾರೆ.
ವಿದ್ಯಾರ್ಥಿಗಳು ಯಾವ ಯಾವ ವಿಷಯದ ಮೇಲೆ ಚಿತ್ರ ಬಿಡಿಸಬೇಕು?
ಈ ಸ್ಪರ್ಧೆಯ ಚಿತ್ರಕಲೆಯ ಪ್ರಮುಖವಾದ ಉದ್ದೇಶ ವಿದ್ಯುತ್ ಉಳಿತಾಯದ ಮಹತ್ವವನ್ನು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯ ಮೂಲಕ ತೋರಿಸುವುದಾಗಿದೆ.
ಚಿತ್ರ ಬಿಡಿಸುವಾಗ ವಿದ್ಯಾರ್ಥಿಗಳು ಯಾವ ರೀತಿಯ ಸಂದೇಶಗಳನ್ನು ಸೃಜನಾತ್ಮಕವಾಗಿ ಪ್ರದರ್ಶಿಸಬಹುದು:
- ಅಗತ್ಯವಿಲ್ಲದ ಸಮಯದಲ್ಲಿ ವಿದ್ಯುತ್ ದೀಪಗಳನ್ನು ಆಫ್ ಮಾಡುವ ಬಗ್ಗೆ
- ವಿದ್ಯುತ್ ಉಪಕರಣಗಳನ್ನು ಅಗತ್ಯವಿದ್ದಾಗ ಮಾತ್ರವೆ ಬಳಸುವುದು
- ಶಕ್ತಿಸಮರ್ಥ ವಿದ್ಯುತ್ ಉಪಕರಣಗಳ ಬಳಕೆ
- ಶಾಲೆಗಳಲ್ಲಿ ವಿದ್ಯುತ್ ಉಳಿತಾಯ
- ಮನೆಗಳಲ್ಲಿ ವಿದ್ಯುತ್ ಉಳಿತಾಯ
- ಭವಿಷ್ಯದ ಇಂಧನದ ಭದ್ರತೆ
- ವಿದ್ಯುತ್ ವ್ಯರ್ಥವಾಗುವುದನ್ನು ಹೇಗೆ ತಡೆಯುವುದು
- ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ
ವಿದ್ಯಾರ್ಥಿಗಳು ತಮ್ಮ ತಮ್ಮ ಕಲ್ಪನೆ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಈ ವಿಷಯಕ್ಕೆ ಸೂಕ್ತವಾದಂತಹ ಚಿತ್ರವನ್ನು ಸಿದ್ಧಪಡಿಸಬಹುದು.
ಕೊನೆಯ ದಿನಾಂಕ
ಚಿತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026
ಆದ್ದರಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವಂತಹ 5 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನವೆ ತಮ್ಮ ಚಿತ್ರಗಳನ್ನು ಸಿದ್ಧಪಡಿಸಿ ನಿಗದಿತ ವಿಧಾನದಲ್ಲಿ ಸಲ್ಲಿಸುವುದು ಅಗತ್ಯವಾಗಿದೆ.
ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಮಾಹಿತಿ
ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕರು ತಮ್ಮ ಶಾಲೆಯಲ್ಲಿ 5th ರಿಂದ 10th ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯ ಬಗ್ಗೆ ಕುರಿತು ಮಾಹಿತಿ ನೀಡಬಹುದು. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಮೂಲಕ ಅವರ ಚಿತ್ರಕಲೆ ಪ್ರತಿಭೆಯನ್ನು ಪ್ರದರ್ಶಿಸಲು ಇದು ಒಂದು ಉತ್ತಮವಾದ ವೇದಿಕೆಯನ್ನು ಒದಗಿಸಬಹುದು.
ವಿದ್ಯುತ್ ಉಳಿತಾಯದಂತಹ ಪ್ರಮುಖವಾದ ಹಲವಾರು ಸಾಮಾಜಿಕ ಸಂದೇಶವನ್ನು ಈ ಚಿತ್ರಕಲೆಯ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ ತಲುಪಿಸಲು ಈ ಸ್ಪರ್ಧೆ ಅಗತ್ಯವಾಗಿ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳು ಪ್ರಮುಖವಾಗಿ ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶಗಳು
- ಸ್ಪರ್ಧೆ: ರಾಷ್ಟ್ರೀಯ ವಿದ್ಯುತ್ ಉಳಿತಾಯ ಚಿತ್ರಕಲೆ ಸ್ಪರ್ಧೆ–2026
- ಆಯೋಜನೆ: ವಿದ್ಯುತ್ ಸಚಿವಾಲಯ (Ministry of Power)
- ಅರ್ಹ ತರಗತಿಗಳು: 5th ತರಗತಿಯಿಂದ 10th ತರಗತಿ
- ಎ ಗುಂಪು: 5, 6 ಮತ್ತು 7ನೇ ತರಗತಿ
- ಬಿ ಗುಂಪು: 8, 9 ಮತ್ತು 10ನೇ ತರಗತಿ
- ಚಿತ್ರಕಲೆಯ ವಿಷಯಗಳು: ವಿದ್ಯುತ್ ಉಳಿತಾಯ ಹಾಗೂ ಇಂಧನ ಭದ್ರತೆ
- ರಾಜ್ಯ ಮಟ್ಟದಲ್ಲಿ ಮೊದಲ ಬಹುಮಾನ: ₹50,000
- ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಹುಮಾನ: ₹1,00,000
- ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುವರಿ ಬಹುಮಾನ: ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಹಾಗೂ ಭಾರತ ಅಧ್ಯಯನ ಕುರಿತು ಪ್ರವಾಸದ ಅವಕಾಶ
- ಚಿತ್ರ ಕಲೆಯನ್ನು ಸಲ್ಲಿಸಲು ಕೊನೆಯ ದಿನಾಂಕ: 15-10-2026
FAQ – ವಿದ್ಯುತ್ ಉಳಿತಾಯ ಚಿತ್ರಕಲೆ ಸ್ಪರ್ಧೆ 2026
1. ವಿದ್ಯುತ್ ಉಳಿತಾಯ ಚಿತ್ರಕಲೆ ಸ್ಪರ್ಧೆ 2026 ಅನ್ನು ಯಾರು ಆಯೋಜಿಸಿದ್ದಾರೆ?
ವಿದ್ಯುತ್ ಸಚಿವಾಲಯದ (Ministry of Power) ವತಿಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
2. ಯಾವ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು?
5th ತರಗತಿಯಿಂದ 10th ತರಗತಿಯವರೆಗೆ ಓದುತ್ತಿರುವಂತಹ ವಿದ್ಯಾರ್ಥಿಗಳು ಭಾಗವಹಿಸಬಹುದು.
3. ಎ ಗುಂಪಿನಲ್ಲಿ ಯಾವ ಯಾವ ತರಗತಿಗಳಿವೆ?
5ನೇ, 6ನೇ ಮತ್ತು 7ನೇ ತರಗತಿಗಳು ಎ ಗುಂಪಿಗೆ ಸೇರಿವೆ.
4. ಬಿ ಗುಂಪಿನಲ್ಲಿ ಯಾವ ಯಾವ ತರಗತಿಗಳಿವೆ?
8ನೇ, 9ನೇ ಮತ್ತು 10ನೇ ತರಗತಿಗಳು ಬಿ ಗುಂಪಿಗೆ ಸೇರಿವೆ.
5. ಈ ಚಿತ್ರಕಲೆಯ ವಿಷಯಗಳು ಯಾವುವು?
ಶಾಲೆ ಮತ್ತು ಮನೆಯಲ್ಲಿ ವಿದ್ಯುತ್ ಉಳಿಸಿ ಮತ್ತು ಇಂಧನ ಭದ್ರತೆಗಾಗಿ ವಿದ್ಯುತ್ ಉಳಿತಾಯ ಪ್ರಮುಖವಾಗಿದೆ ಎಂಬ ವಿಷಯಗಳನ್ನು ನೀಡಲಾಗಿದೆ.
6. ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಹುಮಾನ ಎಷ್ಟು?
ಎರಡೂ ಗುಂಪುಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಹುಮಾನವಾಗಿ ₹1,00,000 ನೀಡಲಾಗುತ್ತದೆ.
7. ರಾಜ್ಯ ಮಟ್ಟದಲ್ಲಿ ಮೊದಲನೆಯ ಬಹುಮಾನ ಎಷ್ಟು?
ಎರಡೂ ಗುಂಪುಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮಟ್ಟದ ಮೊದಲ ಬಹುಮಾನವಾಗಿ ₹50,000 ನೀಡಲಾಗುತ್ತದೆ.
8. ರಾಷ್ಟ್ರೀಯ ವಿಜೇತರಿಗೆ ಲ್ಯಾಪ್‌ಟಾಪ್ ಸಿಗುತ್ತದೆಯೇ?
ಹೌದು. ಪ್ರಕಟಣೆಯ ಪ್ರಕಾರ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದವರಿಗೆ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್‌ಗಳ ಜೊತೆಗೆ ಭಾರತದ ಅಧ್ಯಯನ ಪ್ರವಾಸದ ಅವಕಾಶ ಪಡೆಯುತ್ತಾರೆ.
9. ಈ ಚಿತ್ರ ಕಲೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?
15 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿದೆ.
ಕೊನೆಯ ಮಾತು
ವಿದ್ಯುತ್ ಉಳಿತಾಯವು ಕೇವಲ ಮಾತ್ರ ಹಣದ ಉಳಿತಾಯಕ್ಕೆ ಸೀಮಿತವಾಗಿಲ್ಲ. ಇದು ಇಂಧನ ಭದ್ರತೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ವಿಚಾರವಾಗಿದೆ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯ ಮೂಲಕ ಈ ಸಂದೇಶವನ್ನು ಸಮಾಜಕ್ಕೆ ತಲುಪಿಸಲು ಈ ಚಿತ್ರಕಲೆ ಸ್ಪರ್ಧೆ ಉತ್ತಮ ಅವಕಾಶವಾಗಿದೆ.
5th ರಿಂದ 10th ತರಗತಿಯಲ್ಲಿನ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸಬಹುದಾಗಿದೆ. ಉತ್ತಮ ಚಿತ್ರಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕವಾದ ನಗದು ರೂಪದಲ್ಲಿ ಬಹುಮಾನಗಳ ಜೊತೆ ಜೊತೆಗೆ ಪದಕ, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಮತ್ತು ಅಧ್ಯಯನ ಪ್ರವಾಸದಂತಹ ಅವಕಾಶಗಳೂ ಸಹ ಲಭ್ಯವಿದೆ.
