Swami Dayanand India Scholarship 2026: ಸ್ವಾಮಿ ದಯಾನಂದ್ ಇಂಡಿಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.
Swami Dayanand India Scholarship 2026: ಭಾರತದಲ್ಲಿ ಪದವಿ ಹಂತದಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಿದೆ.
Swami Dayanand India Scholarship 2026 ಅರ್ಹತೆ(Qualification)
ಭಾರತದಲ್ಲಿ ಪೂರ್ಣಕಾಲಿಕ ವೃತ್ತಿಪರ ಪದವಿ ಕೋರ್ಸ್‌ಗಳಿಗೆ ದಾಖಲಾಗಿ, ಮೊದಲನೆ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. 12ನೇ ತರಗತಿಯಲ್ಲಿ ಕನಿಷ್ಠ ಶೇ 80ರಷ್ಟು ಅಂಕಗಳನ್ನು ಪಡೆದಿರಬೇಕು. ಕುಟುಂಬದ ಒಟ್ಟು ವಾರ್ಷಿಕ ಆದಾಯ ₹12ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ, ನರ್ಸಿಂಗ್, ಫಾರ್ಮಸಿ, ವಾಸ್ತುಶಿಲ್ಪ ಮತ್ತು ಪಶುವೈದ್ಯಕೀಯ ಸೇರಿವೆ.
ಆರ್ಥಿಕ ನೆರವು
- ಪ್ರತಿ ಶೈಕ್ಷಣಿಕ ವರ್ಷಕ್ಕೆ 50000 ಸಾವಿರ ರೂಪಾಯಿಗಳು
ಅರ್ಜಿಸಲ್ಲಿಸಲು ಕೊನೆಯ ದಿನ
- 31-10-2026
FAQ – ಸ್ವಾಮಿ ದಯಾನಂದ್ ಇಂಡಿಯಾ ವಿದ್ಯಾರ್ಥಿವೇತನ(Swami Dayanand India Scholarship)
1. ಸ್ವಾಮಿ ದಯಾನಂದ್ ಇಂಡಿಯಾ ವಿದ್ಯಾರ್ಥಿವೇತನ ಎಂದರೇನು?
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ನೆರವು ನೀಡುವ ಸಲುವಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದೆ.
2. ವಿದ್ಯಾರ್ಥಿವೇತನಕ್ಕೆ ಯಾರು ಯಾರು ಅರ್ಜಿ ಸಲ್ಲಿಸಬಹುದು?
ಈ ಅಧಿಕೃತ ಪ್ರಕಟಣೆಯಲ್ಲಿ ನಿಗದಿಪಡಿಸಿರುವಂತಹ ಶೈಕ್ಷಣಿಕ ಮತ್ತು ಆರ್ಥಿಕ ಅರ್ಹತೆಗಳನ್ನು ಪೂರೈಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
3. ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದೇ?
ಹೌದು, ಅರ್ಜಿಯನ್ನು ಪ್ರಕ್ರಿಯೆಯನ್ನು ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
4. ಕುಟುಂಬದ ಆದಾಯವನ್ನು ಪರಿಗಣಿಸಲಾಗುತ್ತದೆಯೇ?
ಹೌದು. ವಿದ್ಯಾರ್ಥಿವೇತನದ ಅರ್ಹತಾ ನಿಯಮಗಳ ಪ್ರಕಾರ ಕುಟುಂಬದ ಒಟ್ಟು ಆದಾಯವನ್ನು ಪರಿಗಣಿಸಬಹುದು.
5. ಅರ್ಜಿ ಸಲ್ಲಿಸಲು ನಿಮ್ಮ ಅಂಕಪಟ್ಟಿ ಅಗತ್ಯವೇ?
ಅರ್ಜಿಯನ್ನು ನಿಯಮಗಳ ಪ್ರಕಾರ ಈ ಹಿಂದಿನ ಪರೀಕ್ಷೆಯ ಅಂಕಪಟ್ಟಿಯನ್ನು ಸಲ್ಲಿಸಬೇಕಾಗಬಹುದು.
6. ವಿದ್ಯಾರ್ಥಿವೇತನದ ಹಣವನ್ನು ನೀವು ಹೇಗೆ ಪಡೆಯಬಹುದು?
ಅರ್ಹತೆ ಮತ್ತು ಪರಿಶೀಲನೆ ಪೂರ್ಣಗೊಂಡ ಅನಂತರ ನಿಯಮಾನುಸಾರ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿವೇತನದ ಮೊತ್ತವನ್ನು ವರ್ಗಾಯಿಸಬಹುದು.
7. ಅರ್ಜಿ ಸಲ್ಲಿಸುವ ಮೊದಲು ನೀವು ಏನು ಪರಿಶೀಲಿಸಬೇಕು?
ಅರ್ಹತೆ, ಆದಾಯ ಮಿತಿ, ಕೋರ್ಸ್, ಅಗತ್ಯವಾದ ದಾಖಲೆಗಳು ಮತ್ತು ಅರ್ಜಿ ಕೊನೆಯ ದಿನಾಂಕವನ್ನು ಪರಿಶೀಲಿಸಬೇಕು.
8. ಅರ್ಜಿ ಸಲ್ಲಿಸಿದ ನಂತರ ನೀವು Application ID ಉಳಿಸಬೇಕೇ?
ಹೌದು. ಅರ್ಜಿಯನ್ನು ಸ್ಥಿತಿ ಪರಿಶೀಲಿಸಲು Application ID ಅಥವಾ Acknowledgement Number ಅಗತ್ಯವಾಗಬಹುದು.
