Veterinary Officer Recruitment: 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ; ಶುಲ್ಕ, ಅರ್ಹತೆಯ ಮಾಹಿತಿ ಇಲ್ಲಿದೆ-2024.
Veterinary Officer Recruitment: 400 ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಆಗಸ್ಟ್ 12ರಿಂದ ಕೆಪಿಎಸ್ಸಿ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಬಿ.ವಿ.ಎಸ್ಸಿ, ಬಿ.ವಿ.ಎಸ್ಸಿ & ಎಎಚ್ ಪದವೀಧರರು ಅರ್ಹರಾಗಿದ್ದು, ವಯೋಮಿತಿ, ಶುಲ್ಕ ಸೇರಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದಲ್ಲಿನ ಗ್ರೂಪ್-ಎ ದರ್ಜೆಯ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ (veterinary officer recruitment) ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 12ರಿಂದ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಗೆ ಬೇಕಾದ ಅರ್ಹತೆಗಳು, ಶುಲ್ಕ ಸೇರಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಹುದ್ದೆಯ ಹೆಸರು: ಪಶು ವೈದ್ಯಾಧಿಕಾರಿ
ಹುದ್ದೆಗಳ ಸಂಖ್ಯೆ: 342 (ಉಳಿಕೆ ಮೂಲ ವೃಂದ) + 58 (ಬ್ಯಾಕ್ಲಾಗ್)
ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 12
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆ.12.
ವಿದ್ಯಾರ್ಹತೆ:-
ಪಶು ವೈದ್ಯಕೀಯ ವಿಜ್ಞಾನ (BVSc), ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ (B.V.Sc. & AH) ಪದವೀಧರರು ಅರ್ಜಿ ಸಲ್ಲಿಸಬಹುದು. (ಕೆವಿಸಿ/ಐವಿಸಿಯಲ್ಲಿ ನೋಂದಣಿಯಾಗಿರಬೇಕು)
ವಯೋಮಿತಿ:-
ಅರ್ಜಿ ಸಲ್ಲಿ..ಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ – 18 ವರ್ಷಗಳ ವಯೋಮಾನದವರಾಗಿರಬೇಕು ಹಾಗೂ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ಸಾಮಾನ್ಯ ಅರ್ಹತೆ: 35 ವರ್ಷ
ಒಬಿಸಿ (2ಎ, 2ಬಿ, 3ಎ, 3ಬಿ): 38 ವರ್ಷ
ಎಸ್ಸಿ, ಎಸ್ಟಿ, ಪ್ರವರ್ಗ-1: 40 ವರ್ಷ
ಅರ್ಜಿ ಶುಲ್ಕ:-
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: 600 ರೂ.
ಒಬಿಸಿ (2ಎ, 2ಬಿ, 3ಎ, 3ಬಿ): 300 ರೂ.
ಮಾಜಿ ಸೈನಿಕರಿಗೆ : 50 ರೂ.
ಎಸ್ಸಿ, ಎಸ್ಟಿ, ಪ್ರವರ್ಗ-1, ವಿಶೇಷ ಚೇತನರು: ಶುಲ್ಕ ಪಾವತಿಯಿಂದ ವಿನಾಯಿತಿ.
ಆಯ್ಕೆ ವಿಧಾನ
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:-
ಈ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರ ನಿಯಮ ಉಪ ನಿಯಮ-7 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ, ಯಾರೇ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ.. ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುವುದು.
ವಿಶೇಷ ಸೂಚನೆ:-
ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರನ್ವಯ ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ: 29-11-2022ರಂದು ಮತ್ತು ಆ ನಂತರದಲ್ಲಿ ನಡೆಸಿರುವ ಕನ್ನಡ ಭಾಷಾ ಪರೀಕ್ಷೆಗಳಿಗೆ ಹಾಜರಾಗಿ ಉರ್ತೀರ್ಣರಾಗಿದ್ದಲ್ಲಿ ಅದರ ಫಲಿತಾಂಶವನ್ನು ಈ ಅಧಿಸೂಚನೆಯಲ್ಲಿನ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೂ ಪರಿಗಣಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆನ್ ಲೈನ್ ಅರ್ಜಿಯಲ್ಲಿನ ನಿಗದಿತ ಅಂಕಣದಲ್ಲಿ ಕನ್ನಡ ಭಾಷಾ ಪರೀಕ್ಷೆ ಕುರಿತಂತೆ ಕೇಳಿರುವ ಮಾಹಿತಿಯನ್ನು ತಪ್ಪದೇ ನಮೂದಿಸಬೇಕು.
ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಈ ಪರೀಕ್ಷೆಯು ತಲಾ 300 ಅಂಕಗಳ ಎರಡು ಲಿಖಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ವಸ್ತು ನಿಮ್ಮ ಬಹು ಆಯ್ಕೆ ಮಾದರಿಯಲ್ಲಿ ಇರುತ್ತವೆ. ಪ್ರತಿಯೊಂದು ಪ್ರಶ್ನೆಯು ಋಣಾತ್ಮಕ (Negative) ಅಂಕದ ಸ್ವರೂಪದ್ದಾಗಿದ್ದು, ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು(1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
Paper 1- ಸಾಮಾನ್ಯ ಪತ್ರಿಕೆ(General Paper): 300 ಅಂಕ
Paper 2- ನಿರ್ದಿಷ್ಟ ಪತ್ರಿಕೆ(Specific Paper): 300 ಅಂಕ