ಭಾಗ್ಯಲಕ್ಷ್ಮೀ ಯೋಜನೆ: 2.30 ಲಕ್ಷ ಜನರಿಗೆ ಗುಡ್‌ನ್ಯೂಸ್‌ !-2024.

ಭಾಗ್ಯಲಕ್ಷ್ಮೀ ಯೋಜನೆ: 2.30 ಲಕ್ಷ ಜನರಿಗೆ ಗುಡ್‌ನ್ಯೂಸ್‌ !-2024.

ಭಾಗ್ಯಲಕ್ಷ್ಮೀ ಯೋಜನೆ:

 

ಭಾಗ್ಯಲಕ್ಷ್ಮೀ ಯೋಜನೆ: ಬಡಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ನೀಡುವ ಭಾಗ್ಯಲಕ್ಷ್ಮೀ ಯೋಜನೆ ಅಥವಾ ಭಾಗ್ಯಲಕ್ಷ್ಮೀ ಸುಕನ್ಯಾ ಯೋಜನೆಗೆ 18 ವರ್ಷ ತುಂಬಿದ್ದು, 2.30 ಲಕ್ಷ ಮಂದಿಗೆ ಮೆಚ್ಯೂರಿಟಿ ಹಣ ಕೈ ಸೇರಲಿದೆ. ಮಾಜಿ ಸಿಎಂ ಯಡಿಯೂರಪ್ಪ 2006-7 ರಲ್ಲಿ ಆರಂಭಿಸಿದ ಯೋಜನೆ ಇದಾಗಿದೆ. ಆರಂಭದಲ್ಲಿ ಎಲ್‌ಐಸಿಯೊಂದಿಗೆ ಆರಂಭಿಸಿದ ಯೋಜನೆ 2020 ರ ಬಳಿಕ ಅಂಚೆ ಕಚೇರಿಗೆ ವರ್ಗ ಆಗಿದೆ. ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಪಡೆದವರು 34.50 ಲಕ್ಷ ಮಂದಿ ಇದ್ದಾರೆ.

    ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭರವಸೆಯಾಗಿರುವ ಬಿ.ಎಸ್‌. ಯಡಿಯೂರಪ್ಪನವರ ಕನಸಿನ ಕೂಸು ‘ಭಾಗ್ಯಲಕ್ಷ್ಮೀ’ಗೆ ಭರ್ತಿ 18 ವರ್ಷ. ಈ ಯೋಜನೆಯಡಿ ಆರಂಭಿಕ ವರ್ಷದಲ್ಲಿಹೆಸರು ನೋಂದಾಯಿಸಿದ ಸುಮಾರು 2.30 ಲಕ್ಷ ಫಲಾನುಭವಿಗಳಿಗೆ ಶೀಘ್ರದಲ್ಲೇ ಮೆಚ್ಯುರಿಟಿ ಹಣ ಸಿಗಲಿದೆ.

     ಏಪ್ರಿಲ್‌ ಮತ್ತು ಮೇ ತಿಂಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿಟಿಗೆ ಅರ್ಹರಾಗಿದ್ದಾರೆ. ಹೀಗಾಗಿ, ಇವರೆಲ್ಲರಿಗೂ ಆದ್ಯತೆ ಮೇರೆಗೆ ಶೀಘ್ರದಲ್ಲೇ ಹಣ ತಮ್ಮ ಖಾತೆಗಳಿಗೆ ಜಮೆ ಮಾಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

    ಇದೀಗ ಯೋಜನೆಯು ಅಂಚೆ ಇಲಾಖೆಯ ವ್ಯಾಪ್ತಿಯಲ್ಲಿದೆ. ಅಂಚೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಅರ್ಹ ಫಲಾನುಭವಿಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಎಲ್ಲಾ ತಾಲೂಕುಗಳ ಸಿಡಿಪಿಒಗಳ ಮೂಲಕ ಅರ್ಹರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಇಲಾಖೆ ಸೂಚಿಸಿದೆ.

    ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕೆ ನೆರವಾಗುವಂತೆ 2006-07ರಲ್ಲಿಅಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರಕಾರ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿತ್ತು. ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮಪಡಿಸಿ ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಬಡ ಕುಟುಂಬಗಳಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಸರಕಾರವು ನಿಶ್ಚಿತ ಠೇವಣಿ ಹೂಡಿ, ಈ ಮಗುವಿಗೆ ಹದಿನೆಂಟು ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಸದುದ್ದೇಶದಿಂದ ಆರಂಭಗೊಂಡಿದ್ದ ಯೋಜನೆ ಇದಾಗಿದೆ.

ಹಣ ಪಡೆಯಲು ಯಾರು ಅರ್ಹರು?:

   ಈ ಯೋಜನೆಯ ಹಣ ಪಡೆಯಲು ಬಿಪಿಎಲ್‌ ಕಾರ್ಡ್‌ ಕಡ್ಡಾಯವಾಗಿ ಹೊಂದಿರಬೇಕು. ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರದಂತಿರಬೇಕು. ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ

ಏನೇನು ದಾಖಲೆಗಳು ಬೇಕು?:

    ಫಲಾನುಭವಿಗಳು ಚಾಲ್ತಿಯಲ್ಲಿನ ಬ್ಯಾಂಕ್‌ ಖಾತೆ ಸಂಖ್ಯೆ, ಐಎಸ್‌ಎಫ್‌ಸಿ ಕೋಡ್‌, ಆಧಾರ್‌ ಕಾರ್ಡ್‌ ಸಂಖ್ಯೆ, ಯೋಜನೆಯ ಒರಿಜಿನಲ್‌ ಬಾಂಡ್‌, ಮಗುವಿನ ಜನನ ಪ್ರಮಾಣ ಪತ್ರ, ತಂದೆ, ತಾಯಿ, ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್ರ, ಬಾಂಡ್‌ ಕಳೆದಿದ್ದರೆ ಬಾಂಡ್‌ ನಕಲು ಪ್ರತಿ ಜತೆ ಎಫ್‌ಐಆರ್‌ ಪ್ರತಿ, ದತ್ತು ಮಕ್ಕಳಾಗಿದ್ದಲ್ಲಿಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು. ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಂದ ಈಗಾಗಲೇ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅರ್ಜಿದಾರ ಮಗುವಿನ ಜನ್ಮ ದಿನಾಂಕದಿಂದ ಹದಿನೆಂಟು ವರ್ಷ ಮೀರಿದ ಹೆಣ್ಣು ಮಕ್ಕಳಿಗೆ ಈ ಪರಿಪಕ್ವ ಹಣ ನೀಡಲಾಗುತ್ತದೆ

ಎಲ್‌ಐಸಿಯಿಂದ ಅಂಚೆಗೇಕೆ ವರ್ಗವಾಯ್ತು?:

   ‘ಭಾಗ್ಯಲಕ್ಷ್ಮೀ ಯೋಜನೆ’ಯು ಆರಂಭದಲ್ಲಿ ಜೀವವಿಮಾ ನಿಗಮದಲ್ಲಿತ್ತು. ಇದೀಗ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ‘ಭಾಗ್ಯಲಕ್ಷ್ಮೀ ಸುಕನ್ಯಾ ಯೋಜನೆ’ ಎಂದು ಹೆಸರು ಕೂಡ ಬದಲಿಸಲಾಗಿದೆ. ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯನ್ನೂ ಅಂಚೆ ಇಲಾಖೆಯೇ ನಿರ್ವಹಿಸುತ್ತಿರುವುದಿಂದ ಭಾಗ್ಯಲಕ್ಷ್ಮಿಯನ್ನು ಅಂಚೆ ಇಲಾಖೆಗೆ ವಹಿಸಿ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಸೇರಿಸಲಾಯಿತು.

   ಯೋಜನೆಗೆ ಸರಕಾರವೇ ಹಣ ತುಂಬಿಸಿ ಆ ಮಕ್ಕಳಿಗೆ 18 ವರ್ಷ ತುಂಬಿದಾಗ ಎಲ್‌ಐಸಿ ವತಿಯಿಂದ ಒಂದು ಲಕ್ಷ ರೂ. ಮೆಚ್ಯೂರಿಟಿ ಹಣ ನೀಡುವುದಾಗಿ ಒಪ್ಪಂದ ನಡೆದಿತ್ತು. ಆದರೆ, ಕ್ರಮೇಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಠೇವಣಿ ಮೊತ್ತಕ್ಕೂ, 18 ವರ್ಷ ತುಂಬಿದ ನಂತರ ಆ ಫಲಾನುಭವಿಗಳಿಗೆ ಒಂದು ಲಕ್ಷ ರೂ. ನೀಡುವುದಕ್ಕೂ ವ್ಯತ್ಯಾಸವಾಗಲಿದೆ ಎಂದು ಎಲ್‌ಐಸಿ ಈ ಯೋಜನೆಯಿಂದ ಹಿಂದೆ ಸರಿದ ಪರಿಣಾಮ ಭಾಗ್ಯಲಕ್ಷ್ಮಿಯನ್ನು 2020ರಲ್ಲಿ ಅಂಚೆ ಇಲಾಖೆಗೆ ವರ್ಗಾಯಿಸಲಾಯಿತು. 2020ರ ಏಪ್ರಿಲ್‌ನಿಂದ ಯಾರೆಲ್ಲಾ ಭಾಗ್ಯಲಕ್ಷ್ಮಿ ಬಾಂಡ್‌ ಮಾಡಿಸಿದ್ದಾರೋ ಅವರಿಗೆ ‘ಭಾಗ್ಯಲಕ್ಷ್ಮಿ ಸುಕನ್ಯಾ ಯೋಜನೆ’ ಎಂದು ಬದಲಾಗಿ ಮುಂದುವರಿದಿದೆ. ಇವರಿಗೆ ಅಂಚೆ ಇಲಾಖೆಯಿಂದ ಹಣ ಸಿಗಲಿದೆ. 2006-07 ರಿಂದ 20219-20ರವರೆಗಿನ ಫಲಾನುಭವಿಗಳಿಗೆ ಎಲ್‌ಐಸಿಯೇ ಮೆಚ್ಯುರಿಟಿ ಹಣ ನೀಡಲಿದೆ.

ರಾಜ್ಯದಲ್ಲಿ 34.50 ಲಕ್ಷ ಬಾಂಡ್‌ದಾರರು:

  ರಾಜ್ಯದಲ್ಲಿಆರಂಭದಿಂದ ಈವರೆಗೆ ಸುಮಾರು 34.50 ಲಕ್ಷ ಮಂದಿ ಭಾಗ್ಯಲಕ್ಷ್ಮಿ ಬಾಂಡ್‌ ಪಡೆದಿದ್ದಾರೆ. ಈ ಪೈಕಿ ‘ಭಾಗ್ಯಲಕ್ಷ್ಮಿ ಸುಕನ್ಯಾ’ ಹೆಸರಿನಲ್ಲಿ 4.30 ಲಕ್ಷ ಮಂದಿ ಬಾಂಡ್‌ ಪಡೆದಿದ್ದಾರೆ. ಯೋಜನೆಯ ಆರಂಭಿಕ ವರ್ಷದಲ್ಲಿ ನೋಂದಣಿಯಾದವರು ಸುಮಾರು 30 ಲಕ್ಷ ಇದ್ದಾರೆ.

  ಭಾಗ್ಯಲಕ್ಷ್ಮೀ ಬಾಂಡ್‌ ಪಡೆದು 18 ವರ್ಷ ಪೂರೈಸಿದ ಹೆಣ್ಣು ಮಕ್ಕಳಿಗೆ ಷರತ್ತುಗಳನ್ವಯ ಮೆಚ್ಯುರಿಟಿ ಹಣವನ್ನು ಖಾತೆಗೆ ವರ್ಗಾಯಿಸಲಾಗುವುದು. ಈ ಸಂಬಂಧ ಅನುಸರಿಸಬೇಕಾದ ನಿಯಮಗಳ ಕುರಿತು ಈಗಾಗಲೇ ಅಂಚೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಆದಷ್ಟು ಶೀಘ್ರ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಲಿದೆ ಎಂದು ಸಿದ್ದೇಶ್ವರ್‌, ನಿರ್ದೇಶಕರು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ತಿಳಿಸಿದ್ದಾರೆ.

 ಧನ್ಯವಾದಗಳು…….

WhatsApp Group Join Now
Telegram Group Join Now