Illegal-legal land: ಅಕ್ರಮ -ಸಕ್ರಮ ಜಮೀನು ಕರ್ನಾಟಕ ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ-2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
Illegal-legal land: ಸೆಪ್ಟೆಂಬರ್ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ಅನೇಕ ದಿನಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ವೇಗವಾಗಿ ನೆಡೆಯುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಎಲ್ಲಾ ಅಧಿಕಾರಿಗಳೊಂದಿಗೆ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು ಮಾತನಾಡಿದರೂ.
“ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ 10 ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು ಬಹುತೇಕ ರೈತರಿಗೆ ಇನ್ನೂ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೊಂದರೆಗೆ ಸಿಲುಕಿದ್ದು, ಸೆಪ್ಟೆಂಬರ್ 2 ರಿಂದ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು, ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಸೂಚಿಸಿದರು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ರೈತರ ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಕಾರಣಕ್ಕೆ, ಬಾಕಿಯಿರುವ ಕಂದಾಯ ಇಲಾಖೆ ದುರಸ್ಥಿ ಪ್ರಕರಣಗಳ ವಿಲೇವಾರಿಗೆ ವ್ಯವಸ್ಥಿತವಾದ ಯೋಜನೆ ಆರಂಭಿಸಿದೆ” ಎಂದು ಮಾಹಿತಿ ನೀಡಿದರು.