ಈಜಿಪ್ತಿನ(Egyptian) ನಾಗರಿಕತೆ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ನೋಟ್ಸ್ 2024-2025.

ಈಜಿಪ್ತಿನ(Egyptian) ನಾಗರಿಕತೆ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ನೋಟ್ಸ್ 2024-2025.

Egyptian

  ಈಜಿಪ್ತಿನ(Egyptian) ನಾಗರಿಕತೆ: ಬಹುಶಃ ಜಗತ್ತಿನ ಮೊದಲ ನಾಗರಿಕತೆ ಈಜಿಪ್ಟ್ ದೇಶದ ನೈಲ್ ನದಿಯ ತೀರದಲ್ಲಿ ಬೆಳಯಿತು. ಈಜಿಪ್ ಆಫ್ರಿಕಾ ಖಂಡದಲ್ಲಿದ್ದು, ವಿಷ್ಯಾ ಹಾಗೂ ಯುರೋಪ್‌ಗಳೊಂದಿಗೆ ಭೌಗೋಳಿಕ ನಿಕಟತೆಯನ್ನು ಹೊಂದಿದೆ. ಭೇದಿಸಲಸಾಧ್ಯವಾದ ಮರುಭೂಮಿ, ಪೂರ್ವ, ಪಶ್ಚಿಮ ಮತ್ತು ದಕ್ಷಿಣಕ್ಕಿದ್ದು ಉತ್ತರಕ್ಕೆ ಮೆಡಿಟರೇನಿಯನ್ ಸಮುದ್ರವಿದ್ದು, ಇದು ಈಜಿಪ್ಟ್ಗೆ ನೈಸರ್ಗಿಕ ಭದ್ರತೆಯನ್ನು ಒದಗಿಸಿದೆ. ಹೀಗಾಗಿ ಈಜಿಪ್ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಿಸಲ್ಪಟ್ಟಿದೆ. ಈ ಕಾರಣಕ್ಕಾಗಿಯೇ ಬಾಹ್ಯ ಶತ್ರುಗಳ ದಾಳಿಯಿಂದ ಅಸಾಮಾನ್ಯ ರಕ್ಷಣೆಯ ಲಾಭ ಹೊಂದಿದೆ. ಹೀಗಾಗಿ ಅಲ್ಲಿ ವಿಶಿಷ್ಟ ನಾಗರಿಕತೆಯೊಂದು ಬೆಳೆಯಿತು. ಈಜಿಪ್ತಿನ ನಾಗರಿಕತೆಯು ಜಗತ್ತಿನಲ್ಲಿ ದೀರ್ಘ ಕಾಲ ಬಾಳಿದ ಹಾಗೂ ಶ್ರೀಮಂತ ನಾಗರಿಕತೆಗಳಲ್ಲೊಂದಾಗಿದೆ.

ಈಜಿಪ್ಟ್(Egyptian) ನೈಲ್ ನದಿಯ ವರಪ್ರಸಾದ.

Egyptian

  ಈಜಿಪ್‌ನಲ್ಲಿ ಉತ್ತರಾಭಿಮುಖವಾಗಿ ಹರಿಯುವ ನೈಲ್ ನದಿಯು ತನ್ನ ಇಕ್ಕೆಲಗಳಲ್ಲಿ 15-20 ಕಿ ಮೀ ವರೆಗೆ ಅತ್ಯಂತ ಫಲವತ್ತಾದ ಬಯಲನ್ನು ನಿರ್ಮಿಸಿದೆ. ನೈಲ್ ನದಿಯಿಂದಾಗಿ ಅಲ್ಲಿನ ಜನತೆಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಮತ್ತು ಸಾಕು ಪ್ರಾಣಿಗಳಿಗೆ ಮೇವು ಮತ್ತು ನಿರಂತರ ನೀರು ಸರಬರಾಜು ಸಾಧ್ಯವಾಯಿತು. ಮಾನವನಿಗೆ ದೊರೆತ ಆಹಾರದ ಭದ್ರತೆ ತನ್ಮೂಲಕ ಸಿಕ್ಕ ಹೆಚ್ಚಿನ ವಿರಾಮದ ಸಮಯದಿಂದಾಗಿ ನಾಗರಿಕತೆಯ ಬೆಳವಣಿಗೆಗೆ ಸಹಾಯವಾಯಿತು. ನೈಲ್ ನದಿಯು ಆಫ್ರಿಕಾದ ದಟ್ಟವಾದ ಭೂಮಧ್ಯವೃತ್ತದ ಕಾಡುಗಳಲ್ಲಿ ಹುಟ್ಟುತ್ತದೆ. ವರ್ಷವಿಡೀ ತುಂಬಿ ಹರಿಯುತ್ತದೆ. ನೈಲ್ ನದಿಯು ಇಲ್ಲದೇ ಹೋಗಿದ್ದರೆ ಈಜಿಪ್ತಿನ ನಾಗರಿಕತೆಯು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಈಜಿಪ್ತಿನ್ನು ನೈಲ್ ನದಿಯ ವರಪ್ರಸಾದ ಅಥವಾ ಕೊಡುಗೆ ಎಂದು ಕರೆಯುತ್ತೇವೆ.
ಈಜಿಪ್ತನಲ್ಲಿ ನಾಗರಿಕತೆಯ ಬೆಳವಣಿಗೆಯ ಮೊದಲು ಸಾವಿರಾರು ವರ್ಷಗಳವರೆಗೆ ಆದಿಮಾನವರು ವಾಸಿಸುತ್ತಿದ್ದರು. ಅವರು ಮೂಲತಃ ಬೇಟೆಗಾರರು ಮತ್ತು ಆಹಾರ ಸಂಗ್ರಾಹಕರು ಆಗಿದ್ದರು. ನಿಸರ್ಗದ ಬಹಳಷ್ಟು ಅವಲೋಕನದಿಂದ ಹಸಿ ಮಣ್ಣಿನಲ್ಲಿ ಬೀಜ ಬಿತ್ತಿ, ಬೆಳೆ ಬೆಳೆಯುವ ಉಪಾಯವನ್ನು ಅವರು ಕಲಿತಿರಬಹುದಾಗಿದೆ. ಇದು ಕೃಷಿಯ ಪ್ರಾರಂಭವಾಗಿದೆ. ಈ ವೃತ್ತಿಯು ಮಣ್ಣಿನೊಂದಿಗೆ ಮನುಷ್ಯನ ಸಂಬಂಧ ಏರ್ಪಡಿಸಿತು. ಇಲ್ಲಿನ ಜನರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಇವರು ಕಕೇಷಿಯನ್ ಅಥವಾ ಬಿಳಿ ಜನಾಂಗಕ್ಕೆ ಸೇರಿದ ಜನ ಸಮೂಹವೆಂದು ಸಾಮಾನ್ಯವಾಗಿ ನಂಬಲಾಗಿದೆ. ಇವರು ಉತ್ತರ ಯುರೋಪಿನಿಂದ ವಲಸೆ ಬಂದರೆಂದೂ ನಂಬಲಾಗಿದೆ.

ಈಜಿಪ್ತಿನ(Egyptian) ನಾಗರಿಕತೆಯ ಮೂಲಾಧಾರಗಳು.

  ಈ ಮಹಾನ್ ನಾಗರಿಕತೆಯು ಸುಮಾರು 7,000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಇದು 3,000 ವರ್ಷಗಳಿಗೂ ಹೆಚ್ಚು ಕಾಲ ಮುಂದುವರೆಯಿತು. ಆ ಕಾಲದ ವಿವಿಧ ಪುರಾತತ್ವ ಮತ್ತು ಸಾಹಿತ್ಯಕ ಆಧಾರಗಳು ನಮಗೆ ಲಭ್ಯವಾಗಿವೆ. ಅವು ಆ ಕಾಲದ ಇತಿಹಾಸವನ್ನು ಪುನರ್ ರಚಿಸಲು ಸಹಾಯಕವಾಗಿವೆ. ಪಿರಾಮಿಡ್ಡುಗಳು, ದೇವಾಲಯಗಳು, ಪಿರಾಮಿಡ್ಡುಗಳಲ್ಲಿ ಇಟ್ಟಿರುವ ಅಸಂಖ್ಯಾತ ಮೂರ್ತಿಗಳು, ಸ್ಪಿಂಕ್ಸ್ ಮೂರ್ತಿಶಿಲ್ಪ, ಚಿತ್ರ ಕಲಾಕೃತಿಗಳು, ಹಲವು ರೀತಿಯ ಸಾಧನ ಹಾಗೂ ಸಲಕರಣೆಗಳು, ಆಭರಣಗಳು, ಪ್ಯಾಪಿರಸ್ ಎಲೆಯ ಮೇಲೆ ಹೈರೋಗ್ಲಿಫಿಕ್ ಲಿಪಿಯಲ್ಲಿ ಬರೆದ ಗ್ರಂಥಗಳು, ರೊಸೆಟ್ಟಾ ಶಿಲಾಶಾಸನ ಮುಂತಾದವು ಪ್ರಮುಖ ಆಧಾರಗಳಾಗಿವೆ. ಕ್ರಿ ಶ 1798- 1802 ರ ಅವಧಿಯಲ್ಲಿ ನೆಪೋಲಿಯನ್ನನು ಈಜಿಪ್ತಿನ ಮೇಲೆ ದಾಳಿ ಮಾಡಿದನು. ಅದಾದನಂತರ ಈಜಿಪ್ತಿನ ಇತಿಹಾಸದ ಅಧ್ಯಯನವು ವೇಗ ಪಡೆದುಕೊಂಡಿತು.

ಫೆರೋಗಳು:

Egyptian

  ಈಜಿಪ್ತಿನ ರಾಜರನ್ನು ‘ಫೆರೋ’ಗಳೆಂದು ಕರೆಯಲಾಗುತ್ತಿತ್ತು. ಅವರನ್ನು ಭೂಮಿಯ ಮೇಲೆ ದೇವರ ಪ್ರತಿನಿಧಿಗಳೆಂದು ಭಾವಿಸಲಾಗಿತ್ತು. ಆ ಕಾರಣಕ್ಕಾಗಿಯೇ ಅವರು ಅಪರಿಮಿತ ಅಧಿಕಾರವನ್ನು ಅನುಭವಿಸುತ್ತಿದ್ದರು. ‘ಫರೋ’ ಮೀನು ಉತ್ತರ ಮತ್ತು ದಕ್ಷಿಣದ ಈಜಿಪ್ಟ್ಗಳನ್ನು ಸಾ.ಶ.ಪೂ 3000ರಲ್ಲಿ ಒಂದುಗೂಡಿಸಿದನು. ಮತ್ತು ಮೆಂಫಿಸ್‌ನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಫೆರೋ ಸಂಸ್ಥೆಯು ಎಷ್ಟೊಂದು ಬಲಿಷ್ಠವಾಗಿತ್ತೆಂದರೆ, ಅದರಲ್ಲಿ ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳೆರಡೂ ಅಡಕವಾಗಿದ್ದವು. ಬಲಿಷ್ಠವಾದ ಕೇಂದ್ರ ಸರ್ಕಾರ, ಪರಮಾಧಿಕಾರಿ ರಾಜ್ಯ ಸತ್ತೆ, ಸುನಿಯಂತ್ರಿತ ಆಡಳಿತ ಮತ್ತು ಕಟ್ಟುನಿಟ್ಟಿನ ಕಾನೂನು ಪಾಲನೆ ಇವು ಈಜಿಪ್ತಿನ ರಾಜ್ಯ ವ್ಯವಸ್ಥೆಯ ಮೂಲ ಲಕ್ಷಣಗಳಾಗಿದ್ದವು.

ರಾಜ ಮನೆತನಗಳ ಆಳ್ವಿಕೆಯ ಕಾಲವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.

Egyptian

1) ಹಳೆಯ ರಾಜ ಮನೆತನಗಳ ಕಾಲ
2) ಮಧ್ಯ ರಾಜ ಮನೆತನಗಳ ಕಾಲ
3) ಹೊಸ ರಾಜ ಮನೆತನಗಳ ಕಾಲ.

1. ಹಳೆಯ ರಾಜ ಮನೆತನಗಳ ಕಾಲ:


  ಇದನ್ನು ಪಿರಾಮಿಡ್ಗಗಳ ಕಾಲವೆಂದು ಕರೆಯುತ್ತಾರೆ. ಈ ಕಾಲದ ಫೆರೋಗಳು ಅತ್ಯಂತ ಬಲಿಷ್ಠರಾಗಿದ್ದರು. ರಾಜನಿಗೆ ಸಲಹೆ ನೀಡಲು ಹಿರಿಯರ ಸಭೆಯೊಂದಿತ್ತು. ಆದರೆ ಅದರ ಸಲಹೆ ರಾಜನಿಗೆ ಕಡ್ಡಾಯವಾಗಿರಲಿಲ್ಲ. ಫೆರೋ ‘ವಿಝೀರ’ನನ್ನು ನೇಮಿಸುತ್ತಿದ್ದ. ಆತ ಪ್ರಧಾನ ಮಂತ್ರಿಯಾಗಿದ್ದು, ಆಡಳಿತ, ನ್ಯಾಯ ಮತ್ತು ಖಜಾನೆಗಳ ಮುಖ್ಯಸ್ಥನಾಗಿದ್ದನು. ವಿ ೕರನಿಗೆ ಸಹಾಯ ಮಾಡಲು ಸ್ಥಳೀಯ ಮತ್ತು ಕೇಂದ್ರಿಯ ಅಧಿಕಾರಿಗಳಿದ್ದರು. ಸ್ಥಳೀಯ ಅಧಿಕಾರಿಗಳು ತೆರಿಗೆ ಸಂಗ್ರಹಿಸುವದರೊಂದಿಗೆ ಕಾನೂನು ಸುವ್ಯವಸ್ಥೆಯ ಪಾಲನೆ ಮಾಡುತ್ತಿದ್ದರು. ಕೇಂದ್ರಿಯ ಅಧಿಕಾರಿಗಳು ದಾಖಲೆ ಮತ್ತು ಲೆಕ್ಕ ಪತ್ರಗಳನ್ನು ಇಡುತ್ತಿದ್ದರು.

2.ಮಧ್ಯ ರಾಜ ಮನೆತನಗಳ ಕಾಲ:


  ಇದನ್ನು ಭೂ ಮಾಲೀಕರ ಕಾಲವೆಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಜಮೀನ್ದಾರರು ಮತ್ತು ಸರದಾರರು ಫೆರೋಗಳಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾದರು. ಇದರಿಂದ ಅನೇಕ ಆಂತರಿಕ ಯುದ್ಧಗಳಾಗಿ ಆರಾಜಕತೆ ಉಂಟಾಯಿತು. 1ನೇ ಆಮೆನ್ ಹೊಟಪ್ ಎಂಬ ಫೆರೋ, ಫೆರೋಗಳ ಪ್ರಭುತ್ವವನ್ನು ಮರು ಸ್ಥಾಪಿಸಿದನು.

3. ಹೊಸ ರಾಜ್ಯಗಳ ಕಾಲ:

   ಈ ಕಾಲದಲ್ಲಿ ರಾಜರು ಬಲಿಷ್ಠವಾದ ಸೈನ್ಯವನ್ನು ಸಂಘಟಿಸಿದರು ಮತ್ತು
ಬಲವಾದ ಸಾಮ್ರಾಜ್ಯವನ್ನು ಕಟ್ಟಿದರು. 1ನೇ ಥಟ್ ಮೋಸನ್ನು ಹೊಸ ಪ್ರದೇಶಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅವನ ಮಗಳಾದ ಹನ್ಸೆಪ್ಪುಟ್‌ಳು ಅವನ ಉತ್ತರಾಧಿಕಾರಿಯಾದಳು. ಹಾಗೂ 21 ವರ್ಷಗಳ ಕಾಲ ಆಳ್ವಿಕೆ ಮಾಡಿದಳು. ಇವಳನ್ನು ಜಾಗತಿಕ ಇತಿಹಾಸದ ಪ್ರಥಮ ಸಾಮಾಜ್ಞೆಯೆಂದು ಗುರುತಿಸಲಾಗಿದೆ.

Egyptian Civilization, Free Notes for All Competitive Exams 2024-2025.

Egyptian Civilization: Perhaps the world’s first civilization grew on the banks of the Nile River in Egypt. Egypt is located on the continent of Africa and geographically close to the West and Europe. Bounded by impenetrable deserts to the east, west and south, and the Mediterranean Sea to the north, this provided natural security for Egypt. Thus Egypt was isolated from the rest of the world. It is for this reason that it has the advantage of extraordinary protection from the attacks of external enemies. Thus a unique civilization developed there. The Egyptian civilization is one of the longest-lasting and richest civilizations in the world.

Egypt (Egyptian) Nile River Varaprasada.

 

The Nile, which flows northwards in Egypt, has created a very fertile plain for 15-20 km along its banks. The Nile provided sufficient food and fodder for livestock and a constant water supply for the people there. The greater leisure time provided by the increased food security for humans helped the development of civilization. The Nile originates in the dense equatorial forests of Africa. overflows throughout the year. Egyptian civilization could not have developed without the Nile River. Hence Egypt is called the boon or gift of the Nile.
Ancient humans lived in Egypt for thousands of years before the development of civilization. They were originally hunters and food gatherers. He might have learned the idea of ​​sowing seeds in raw soil and growing crops through much observation of nature. This is the beginning of agriculture. This profession established man’s relationship with the soil. Historians have different opinions about the origin of the people here. They are generally believed to be a Caucasian or white race. They are also believed to have migrated from Northern Europe.

Foundations of Egyptian Civilization.

This great civilization started about 7,000 years ago. It continued for more than 3,000 years. Various archeological and literary sources of that period are available to us. They are helpful in reconstructing the history of that period. Pyramids, temples, innumerable statues placed in pyramids, sphinx sculpture, pictorial artefacts, various kinds of tools and equipments, ornaments, texts written in hieroglyphic script on papyrus leaf, Rosetta inscription etc. are important sources. Napoleon attacked Egypt during 1798-1802 AD. After that the study of Egyptian history gained momentum.

Ferros:

The kings of Egypt were known as ‘Pharaohs’. They were thought to be God’s representatives on earth. That is why he enjoyed unlimited power. The ‘Pharaoh’ Fish united Northern and Southern Egypt around 3000 BC. and made Memphis his capital. The Pharoah institution was so powerful that it contained both political and religious powers. A strong central government, an authoritarian state, autocratic administration and strict rule of law were the basic features of the Egyptian state system.

The reigns of the royal families can be divided into three parts.

1) Period of old royal families
2) Period of the Middle Kingdoms
3) Period of new dynasties.

 

1. Period of Old Royal Dynasties:

This is known as the Age of Pyramids. The pharaohs of this period were very powerful. There was an assembly of elders to advise the king. But its advice was not binding on the king. Fero used to appoint a ‘Vizier’. He was the Prime Minister and headed the Administration, Justice and Treasury. There were local and central officials to assist V. Local officials were responsible for collecting taxes and maintaining law and order. Central officials used to keep records and accounts.

2. Period of Middle Dynasties:

It is also known as the period of land owners. During this period the zamindars and sardars became more powerful than the pharaohs. This led to many internal wars and anarchy. The 1st pharaoh, Amenhotep, reestablished the rule of the pharaohs.

3. Period of New Kingdoms:

During this period the kings organized a strong army and
Built a strong empire. 1st Thut Moannu conquered new territories and expanded his empire. His daughter Hansepput succeeded him. And she ruled for 21 years. She is recognized as the first woman in global history.

WhatsApp Group Join Now
Telegram Group Join Now

Leave a Comment