Fake Documents Ration Card Fine:ನಕಲಿ ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದವರಿಗೆ ಬಿತ್ತು 1.9 ಕೋಟಿ ರೂ. ದಂಡ! BPL ಕಾರ್ಡ್ ಅನರ್ಹತೆ ನಿಯಮಗಳೇನು?
Fake Documents Ration Card Fine: ನಕಲಿ ದಾಖಲಾತಿಗಳನ್ನು ನೀಡಿ ರೇಷನ್ ಕಾರ್ಡ್ ಪಡೆದವ ಪತ್ತೆ ಕಾರ್ಯಕ್ಕೆ ಆಹಾರ ಇಲಾಖೆ ಮುಂದಾಗಿದೆ. ದಾಖಲಾತಿಗಳನ್ನು ಪರಿಶೀಲನೆ ನಡೆದಿ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ನಕಲಿ ದಾಖಲೆ ನೀಡಿ ಕಾರ್ಡ್ ಪಡೆದವರಿಂದ 1.89 ಕೋಟಿ ದಂಡ ವಸೂಲಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ನಡೆಯುತ್ತಿದ್ದು, ನಕಲಿ ದಾಖಲೆ ನೀಡಿ ಕಾರ್ಡ್ ಪಡೆದವರಿಗೆ ದಂಡ ವಿಧಿಸಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 1.89 ಕೋಟಿ ರೂ. ದಂಡ ವಸೂಲಿ.
6 ತಿಂಗಳಿಂದ ಪಡಿತರ ಧಾನ್ಯ ಪಡೆದಿಲ್ಲವಾದರೆ ಕಾರ್ಡ್ ರದ್ದು.
Fake Documents Ration Card Fine:ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ನಡೆಯುತ್ತಿದ್ದು, ನಕಲಿ ದಾಖಲೆ ನೀಡಿ ಕಾರ್ಡ್ ಪಡೆದವರಿಗೆ ದಂಡ ವಿಧಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 1.89 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
ಬೆಳಗಾವಿ ಆರು ತಿಂಗಳಿಂದ ಪಡಿತರ ಪಡೆಯದ 19,969 ಚೀಟಿಗಳನ್ನು ರದ್ದು ಮಾಡಲಾಗಿದ್ದು, ನಕಲಿ ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ 1.89 ಕೋಟಿ ರೂ. ದಂಡ ಕೂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ರದ್ದು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ” ಜಿಲ್ಲೆಯಲ್ಲಿ 557 ಅಂತ್ಯೋದಯ, 19,412 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 19,969 ಪಡಿತರ ಚೀಟಿದಾರರು 6 ತಿಂಗಳಿಂದ ಪಡಿತರ ಧಾನ್ಯ ಪಡೆದಿಲ್ಲ. ಹೀಗಾಗಿ, ಈ ಎಲ್ಲಪಡಿತರ ಚೀಟಿಗಳನ್ನು 2024ರ ಜುಲೈ 29ರಂದು ರದ್ದುಪಡಿಸಲಾಗಿದೆ”, ಎಂದು ಮಾಹಿತಿ ನೀಡಿದ್ದಾರೆ.
“ಅಲ್ಲದೆ, ಸರಕಾರಿ ನೌಕರರು ಹಾಗೂ ಅನರ್ಹರು ಹೊಂದಿರುವ ಒಟ್ಟು 45,804 ಆದ್ಯತಾ ಪಡಿತರ ಚೀಟಿಗಳನ್ನು ‘ಆದ್ಯತೇತರ’ ಎಂದು ಪರಿವರ್ತಿಸಲಾಗಿದೆ. ಇಷ್ಟು ದಿನ ಆದ್ಯತಾ ಪಡಿತರ ಚೀಟಿ ಲಾಭ ಪಡೆದ ಕಾರಣ ಆ ಎಲ್ಲ ಪಡಿತರ ಚೀಟಿದಾರರಿಂದ ಒಟ್ಟು 1,88,75,946 ರೂ. ದಂಡ ವಸೂಲಿ ಮಾಡಲಾಗಿದೆ.
ಮೃತರ ಹೆಸರು ತೆರವು.
11,117 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರು, 1,421 ಆದ್ಯತೇತರ ಪಡಿತರ ಚೀಟಿದಾರರು ಸೇರಿ ಒಟ್ಟು 12,538 ಫಲಾನುಭವಿಗಳು ಮೃತಪಟ್ಟಿದ್ದು, ಅವರ ವಿವರವನ್ನು ಕುಟುಂಬ ದತ್ತಾಂಶದಿಂದ ತೆಗೆಯಲಾಗಿದೆ”, ಎಂದು ಡಿಸಿ ತಿಳಿಸಿದ್ದಾರೆ.
ಯಾರೆಲ್ಲಾ ಬಿಪಿಎಲ್ ಕಾರ್ಡ್ ಅನರ್ಹರು?
• ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ಸರ್ಕಾರಿ ನೌಕರರು. ಅಂದರೆ ಸರ್ಕಾರದ ಅಥವಾ ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
• ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು.
• ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
• ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
• ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.