Free English Learning Courses 2026 : ಉಚಿತವಾಗಿ ಇಂಗ್ಲಿಷ್ ಕಲಿಯಲು ಕೇಂದ್ರ ಸರ್ಕಾರದಿಂದ ಅವಕಾಶ! SWAYAM, eSkill India ಮೂಲಕ ಕಲಿಕೆ ಆರಂಭಿಸಿ

Free English Learning Courses 2026 : ಉಚಿತವಾಗಿ ಇಂಗ್ಲಿಷ್ ಕಲಿಯಲು ಕೇಂದ್ರ ಸರ್ಕಾರದಿಂದ ಅವಕಾಶ! SWAYAM, eSkill India ಮೂಲಕ ಕಲಿಕೆ ಆರಂಭಿಸಿ

Free English Learning Courses 2026 : ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಉಚಿತವಾಗಿ ನೀವು ಇಂಗ್ಲಿಷ್ ಕಲಿಯಿರಿ. SWAYAM, eSkill India ಹಾಗೂ Skill India Digital Hub ಮೂಲಕ Spoken English, Communication Skills ಮತ್ತು ಪ್ರಮಾಣಪತ್ರ ಪಡೆಯುವ ವಿಧಾನ ತಿಳಿಯಿರಿ…

Free English Learning Courses 2026: ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಉಚಿತವಾಗಿ ಇಂಗ್ಲಿಷ್ ಕಲಿಯಲು ಕೇಂದ್ರ ಸರ್ಕಾರದ 3 ಡಿಜಿಟಲ್ ವೇದಿಕೆಗಳು – ನೋಂದಣಿ ವಿಧಾನ, ಕೋರ್ಸ್‌ಗಳು ಹಾಗೂ ಪ್ರಮಾಣಪತ್ರದ ಸಂಪೂರ್ಣ ಮಾಹಿತಿ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಮಹತ್ವದ್ದು ಮತ್ತು ಅಗತ್ಯವಾದ ಕೌಶಲವಾಗಿದೆ. ಶಾಲಾ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣ, ಉದ್ಯೋಗ, ಸಂದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿಪರ ಜೀವನ ಮತ್ತು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವವರೆಗೆ ಇಂಗ್ಲಿಷ್ ಭಾಷೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ವಿದ್ಯಾರ್ಥಿಗಳು ಪಠ್ಯಪುಸ್ತಕಗಳಲ್ಲಿರುವಂತಹ ವಿಷಯಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಂಡಿದ್ದರೂ ಇಂಗ್ಲಿಷ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಹಿಂಜರಿಯುವುದು ಸಾಮಾನ್ಯವಾಗಿದೆ. ಕೆಲವರಿಗೆ ಇಂಗ್ಲಿಷ್ ವ್ಯಾಕರಣ ತಿಳಿದಿರುತ್ತದೆ. ಆದರೆ ಸರಿಯಾದ ವಾಕ್ಯಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ಇಂಗ್ಲಿಷ್ ಓದಲು ಹಾಗೂ ಬರೆಯಲು ಸಾಧ್ಯವಾದರೂ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲು ಕಷ್ಟವಾಗುತ್ತದೆ.

ಇಂಗ್ಲಿಷ್ ಕಲಿಯಲು ದುಬಾರಿ ತರಬೇತಿ ಸಂಸ್ಥೆಗಳಿಗೆ ಸೇರಬೇಕೆಂಬ ಅನಿವಾರ್ಯತೆ ಇಲ್ಲ. ಕೇಂದ್ರ ಸರ್ಕಾರದ ವಿವಿಧ ಡಿಜಿಟಲ್ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ವೇದಿಕೆಗಳ ಮೂಲಕ ಮನೆಯಲ್ಲಿಯೇ ಕುಳಿತು ಇಂಗ್ಲಿಷ್ ಭಾಷೆ, ಸಂವಹನ ಕೌಶಲ, ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಕಲಿಯಬಹುದು.

ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವಂತಹ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಈ ಡಿಜಿಟಲ್ ವೇದಿಕೆಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ.

ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದ ಪ್ರಮುಖ ಮೂರು ಡಿಜಿಟಲ್ ಕಲಿಕಾ ವೇದಿಕೆಗಳಾದ SWAYAM, eSkill India ಮತ್ತು Skill India Digital Hub ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

Free English Learning Courses 2026 : ಇಂಗ್ಲಿಷ್ ಭಾಷೆ ಕಲಿಯುವುದು ಏಕೆ ಮುಖ್ಯ?

ಇಂಗ್ಲಿಷ್ ಕೇವಲ ಒಂದು ಭಾಷೆಯಲ್ಲ. ಅದು ಶಿಕ್ಷಣ, ಉದ್ಯೋಗ, ಸಂವಹನ ಹಾಗೂ ಜಾಗತಿಕ ಸಂಪರ್ಕಕ್ಕೆ ನೆರವಾಗುವ ಪ್ರಮುಖ ಸಾಧನವಾಗಿದೆ.

ಪ್ರಸ್ತುತ ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಭಾಷೆಯ ಬಳಕೆ ಹೆಚ್ಚಾಗಿದೆ. ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಎಂಜಿನಿಯರಿಂಗ್, ನಿರ್ವಹಣಾ ಅಧ್ಯಯನ, ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಇಂಗ್ಲಿಷ್ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ.

ಇಂಗ್ಲಿಷ್ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಮುಖ ಪ್ರಯೋಜನಗಳು:

  1. ಉನ್ನತ ಶಿಕ್ಷಣದ ಅವಕಾಶಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು.
  2. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಹಾಯವಾಗುತ್ತದೆ.
  3. ಉದ್ಯೋಗ ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದ ಉತ್ತರಿಸಬಹುದು.
  4. ಕಂಪ್ಯೂಟರ್ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
  5. ವಿವಿಧ ದೇಶಗಳ ಜನರೊಂದಿಗೆ ಸಂವಹನ ನಡೆಸಬಹುದು.
  6. ಇಂಗ್ಲಿಷ್ ಪುಸ್ತಕಗಳು, ಲೇಖನಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಓದಬಹುದು.
  7. ಗುಂಪು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು.
  8. ಪ್ರಾಜೆಕ್ಟ್ ಪ್ರೆಸೆಂಟೇಷನ್ ಹಾಗೂ ಸೆಮಿನಾರ್‌ಗಳನ್ನು ಪರಿಣಾಮಕಾರಿಯಾಗಿ ನಡೆಸಬಹುದು.
  9. ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಪರ ಸಂವಹನ ಕೌಶಲ ಬೆಳೆಸಿಕೊಳ್ಳಬಹುದು.
  10. ಸ್ವಂತ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು.

ಆದ್ದರಿಂದ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಕಲಿಯಲು ಪ್ರಯತ್ನಿಸಬೇಕು.

ಕೇಂದ್ರ ಸರ್ಕಾರದ ಉಚಿತ ಡಿಜಿಟಲ್ ಕಲಿಕಾ ವೇದಿಕೆಗಳು

ಇಂಗ್ಲಿಷ್ ಕಲಿಯಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಡಿಜಿಟಲ್ ವೇದಿಕೆಗಳು ಸಹಾಯಕವಾಗಿವೆ.

ಪ್ರಮುಖವಾಗಿ ಈ ಕೆಳಗಿನ ಮೂರು ವೇದಿಕೆಗಳನ್ನು ಬಳಸಿಕೊಳ್ಳಬಹುದು.

  1. SWAYAM – ಆನ್‌ಲೈನ್ ಶಿಕ್ಷಣ ವೇದಿಕೆ.
  2. eSkill India – ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಡಿಜಿಟಲ್ ಕಲಿಕಾ ವೇದಿಕೆ.
  3. Skill India Digital Hub (SIDH) – ಕೌಶಲ ತರಬೇತಿ, ಪ್ರಮಾಣೀಕರಣ ಮತ್ತು ಉದ್ಯೋಗಾವಕಾಶಗಳ ಮಾಹಿತಿ ಒದಗಿಸುವ ವೇದಿಕೆ.

ಈ ವೇದಿಕೆಗಳಲ್ಲಿ ಲಭ್ಯವಿರುವ ಕೋರ್ಸ್‌ಗಳ ಆಧಾರದ ಮೇಲೆ ಇಂಗ್ಲಿಷ್ ಭಾಷೆ, ಸಂವಹನ ಕೌಶಲ, ವೃತ್ತಿಪರ ಸಂವಹನ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ತರಬೇತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಎಲ್ಲಾ ಕೋರ್ಸ್‌ಗಳು ಉಚಿತವಾಗಿರುವುದಿಲ್ಲ. ಆದ್ದರಿಂದ ಕೋರ್ಸ್‌ಗೆ ನೋಂದಣಿ ಮಾಡುವ ಮೊದಲು ಶುಲ್ಕ ಮತ್ತು ಪ್ರಮಾಣಪತ್ರದ ವಿವರಗಳನ್ನು ಪರಿಶೀಲಿಸುವುದು ಮುಖ್ಯ.

SWAYAM – ಮನೆಯಲ್ಲಿಯೇ ಕುಳಿತು ಉಚಿತವಾಗಿ ಆನ್‌ಲೈನ್ ಶಿಕ್ಷಣ ಪಡೆಯಿರಿ

SWAYAM ಎಂದರೆ Study Webs of Active Learning for Young Aspiring Minds.

ಇದು ಒಂದು ಕೇಂದ್ರ ಶಿಕ್ಷಣ ಸಚಿವಾಲಯದ ವತಿಯಿಂದ ನಡೆಸಲಾಗುತ್ತಿರುವಂತಹ ಪ್ರಮುಖ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದೆ.

ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣವನ್ನು ಡಿಜಿಟಲ್ ಮೂಲಕ ತಲುಪಿಸುವ ಉದ್ದೇಶದಿಂದ ಈ ವೇದಿಕೆಯನ್ನು ರೂಪಿಸಲಾಗಿದೆ.

ದೇಶದ ವಿವಿಧ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪರಿಣತ ಶಿಕ್ಷಕರು ಸಿದ್ಧಪಡಿಸಿರುವ ಆನ್‌ಲೈನ್ ಕೋರ್ಸ್‌ಗಳು ಇಲ್ಲಿ ಲಭ್ಯವಿವೆ.

ಶಾಲಾ ಶಿಕ್ಷಣದಿಂದ ಹಿಡಿದು ಪದವಿ, ಸ್ನಾತಕೋತ್ತರ ಶಿಕ್ಷಣ ಮತ್ತು ಕೌಶಲಾಧಾರಿತ ತರಬೇತಿಗಳವರೆಗೆ ವಿವಿಧ ವಿಷಯಗಳನ್ನು ಇಲ್ಲಿ ಕಲಿಯಬಹುದು.

SWAYAM ವೇದಿಕೆಯಲ್ಲಿ ಏನೆಲ್ಲ ಕಲಿಯಬಹುದು?

ಈ ವೇದಿಕೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಮತ್ತು ಅಗತ್ಯಕ್ಕೆ ಅನುಗುಣವಾಗಿ ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಪ್ರಮುಖ ವಿಷಯಗಳು:

  • English Language
  • English Communication
  • Spoken English
  • Business Communication
  • Professional Communication
  • Personality Development
  • Academic Writing
  • Communication Skills
  • Soft Skills
  • Computer Skills
  • Digital Learning
  • Higher Education Courses

ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕೋರ್ಸ್‌ಗಳನ್ನು ಹುಡುಕಬಹುದು.

SWAYAM ಮೂಲಕ ಇಂಗ್ಲಿಷ್ ಕಲಿಯುವುದು ಹೇಗೆ?

SWAYAM ಪೋರ್ಟಲ್‌ನಲ್ಲಿ ಇಂಗ್ಲಿಷ್ ಕಲಿಯಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಹಂತ 1: ಮೊದಲಿಗೆ SWAYAM ಅಧಿಕೃತ ವೆಬ್‌ಸೈಟ್ ತೆರೆಯಿರಿ.
  • ಹಂತ 2: ವೆಬ್‌ಸೈಟ್‌ನಲ್ಲಿರುವ Register as Student ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 3: ಅಗತ್ಯವಿರುವಂತಹ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಖಾತೆ ತೆರೆಯಿರಿ.
  • ಹಂತ 4: ನಿಮ್ಮ ಖಾತೆಗೆ ಲಾಗಿನ್ ಆಗಿ.
  • ಹಂತ 5: Courses ವಿಭಾಗಕ್ಕೆ ಭೇಟಿ ನೀಡಿ.
  • ಹಂತ 6: ಹುಡುಕಾಟ ವಿಭಾಗದಲ್ಲಿ English, English Communication, Spoken English ಅಥವಾ Communication Skills ಎಂದು ನಮೂದಿಸಿ.
  • ಹಂತ 7: ಲಭ್ಯವಿರುವ ಕೋರ್ಸ್‌ಗಳ ಪಟ್ಟಿಯನ್ನು ಪರಿಶೀಲಿಸಿ.
  • ಹಂತ 8: ನಿಮಗೆ ಸೂಕ್ತವಾದ ಕೋರ್ಸ್ ಆಯ್ಕೆ ಮಾಡಿಕೊಂಡು ಅದರ ವಿವರಗಳನ್ನು ಓದಿ.
  • ಹಂತ 9: Enroll ಅಥವಾ Join ಆಯ್ಕೆಯನ್ನು ಬಳಸಿಕೊಂಡು ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಿ.
  • ಹಂತ 10: ಕೋರ್ಸ್‌ನಲ್ಲಿರುವ ವಿಡಿಯೋ ಪಾಠಗಳು, ಅಧ್ಯಯನ ಸಾಮಗ್ರಿಗಳು ಹಾಗೂ ಅಭ್ಯಾಸ ಪ್ರಶ್ನೆಗಳ ಮೂಲಕ ಕಲಿಕೆಯನ್ನು ಆರಂಭಿಸಿ.

SWAYAM ಕೋರ್ಸ್‌ಗಳ ಪ್ರಮುಖ ವೈಶಿಷ್ಟ್ಯಗಳು

SWAYAM ವೇದಿಕೆಯ ಪ್ರಮುಖ ವೈಶಿಷ್ಟ್ಯವೆಂದರೆ ಕಲಿಯುವವರಿಗೆ ಕೋರ್ಸ್‌ಗಳ ಪಾಠಗಳನ್ನು ಉಚಿತವಾಗಿ ಪಡೆಯುವ ಅವಕಾಶವಿದೆ.

ಇಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಕಲಿಕಾ ಸೌಲಭ್ಯಗಳು ಲಭ್ಯವಿರುತ್ತವೆ.

  1. ವಿಡಿಯೋ ಉಪನ್ಯಾಸಗಳು.
  2. ಡೌನ್‌ಲೋಡ್ ಮಾಡಬಹುದಾದ ಅಧ್ಯಯನ ಸಾಮಗ್ರಿಗಳು.
  3. ಆನ್‌ಲೈನ್ ಪರೀಕ್ಷೆಗಳು ಮತ್ತು ರಸಪ್ರಶ್ನೆಗಳು.
  4. ಅಸೈನ್‌ಮೆಂಟ್‌ಗಳು.
  5. ಚರ್ಚಾ ವೇದಿಕೆ.
  6. ವಿಷಯ ತಜ್ಞರಿಂದ ಸಿದ್ಧಪಡಿಸಿದ ಪಾಠಗಳು.

SWAYAM ಮೂಲಕ ಪ್ರಮಾಣಪತ್ರ ಪಡೆಯುವುದು ಹೇಗೆ?

SWAYAM ನಲ್ಲಿ ಕೋರ್ಸ್ ಕಲಿಯುವುದು ಹಾಗೂ ಪ್ರಮಾಣಪತ್ರ ಪಡೆಯುವುದು ಎರಡು ವಿಭಿನ್ನ ಪ್ರಕ್ರಿಯೆಗಳಾಗಿವೆ.

ಕೋರ್ಸ್‌ನ ಪಾಠಗಳನ್ನು ಕಲಿಯಲು ಸಾಮಾನ್ಯವಾಗಿ ಶುಲ್ಕ ಇರುವುದಿಲ್ಲ. ಆದರೆ ಅಧಿಕೃತ ಪ್ರಮಾಣಪತ್ರ ಪಡೆಯಲು ಕೆಲವು ಕೋರ್ಸ್‌ಗಳಲ್ಲಿ ಅಂತಿಮ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕು.

ಪ್ರಮಾಣಪತ್ರ ಪಡೆಯಲು ಸಾಮಾನ್ಯವಾಗಿ ಈ ಕ್ರಮ ಅನುಸರಿಸಬೇಕಾಗುತ್ತದೆ.

  1. ಆಯ್ಕೆ ಮಾಡಿಕೊಂಡ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಬೇಕು.
  2. ನಿಗದಿತ ಅವಧಿಯಲ್ಲಿ ಎಲ್ಲಾ ಪಾಠಗಳನ್ನು ಪೂರ್ಣಗೊಳಿಸಬೇಕು.
  3. ವಾರದ ಅಸೈನ್‌ಮೆಂಟ್‌ಗಳನ್ನು ಸಲ್ಲಿಸಬೇಕು.
  4. ಅಂತಿಮ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕು.
  5. ಅನ್ವಯಿಸುವ ಪರೀಕ್ಷಾ ಶುಲ್ಕ ಪಾವತಿಸಬೇಕು.
  6. ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕು.
  7. ಕೋರ್ಸ್‌ನ ಉತ್ತೀರ್ಣತಾ ಮಾನದಂಡಗಳನ್ನು ಪೂರೈಸಬೇಕು.

ಈ ಎಲ್ಲಾ ಷರತ್ತುಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಂಸ್ಥೆಯು ಪ್ರಮಾಣಪತ್ರ ನೀಡುತ್ತದೆ.

ಗಮನಿಸಿ: ಪ್ರತಿಯೊಂದು ಕೋರ್ಸ್‌ನ ಪ್ರಮಾಣಪತ್ರದ ನಿಯಮಗಳು ವಿಭಿನ್ನವಾಗಿರಬಹುದು. ಆದ್ದರಿಂದ ಕೋರ್ಸ್ ಆಯ್ಕೆ ಮಾಡುವ ಮೊದಲು ಅದರ ಅಧಿಕೃತ ವಿವರಗಳನ್ನು ಓದಬೇಕು.

eSkill India – ಇಂಗ್ಲಿಷ್ ಮತ್ತು ಉದ್ಯೋಗ ಕೌಶಲಗಳನ್ನು ಬೆಳೆಸಿಕೊಳ್ಳಲು ಉತ್ತಮ ವೇದಿಕೆ

eSkill India ಎಂಬುದು National Skill Development Corporation (NSDC) ಅಂದರೆ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಡಿಜಿಟಲ್ ಕಲಿಕಾ ಉಪಕ್ರಮವಾಗಿದೆ.

ಯುವಜನರಿಗೆ ಡಿಜಿಟಲ್ ಮೂಲಕ ಕೌಶಲ ತರಬೇತಿ ಒದಗಿಸುವುದು ಈ ವೇದಿಕೆಯ ಪ್ರಮುಖ ಉದ್ದೇಶವಾಗಿದೆ.

ಈ ವೇದಿಕೆಯಲ್ಲಿ ವಿವಿಧ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ಅನೇಕ ಆನ್‌ಲೈನ್ ಕೋರ್ಸ್‌ಗಳನ್ನು ಒದಗಿಸಲಾಗುತ್ತದೆ.

ಇಂಗ್ಲಿಷ್ ಭಾಷೆಯ ಜೊತೆಗೆ ಉದ್ಯೋಗಕ್ಕೆ ಅಗತ್ಯವಾದ ಸಂವಹನ ಕೌಶಲ, ತಾಂತ್ರಿಕ ಜ್ಞಾನ, ಡಿಜಿಟಲ್ ಕೌಶಲ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಹುಡುಕಬಹುದು.

eSkill India ವೇದಿಕೆಯಲ್ಲಿ ಲಭ್ಯವಿರುವ ಕೋರ್ಸ್‌ಗಳು

ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಹುಡುಕಬಹುದು.

ಪ್ರಮುಖವಾಗಿ:

  • English Communication
  • Communication Skills
  • Spoken English
  • Digital Skills
  • Computer Knowledge
  • Financial Literacy
  • Employability Skills
  • Professional Development
  • Technical Skills
  • Business Skills
  • Entrepreneurship
  • Personality Development

ಇಂಗ್ಲಿಷ್ ಕಲಿಯಲು ಬಯಸುವವರು English Skills ಹಾಗೂ Communication Skills ಎಂಬ ಪದಗಳನ್ನು ಬಳಸಿ ಸಂಬಂಧಿಸಿದ ಕೋರ್ಸ್‌ಗಳನ್ನು ಹುಡುಕಬಹುದು.

eSkill India ಮೂಲಕ ಇಂಗ್ಲಿಷ್ ಕಲಿಯುವುದು ಹೇಗೆ?

  • ಹಂತ 1: eSkill India ಅಧಿಕೃತ ವೆಬ್‌ಸೈಟ್ ತೆರೆಯಿರಿ.
  • ಹಂತ 2: ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಂದಣಿ ಅಥವಾ Sign Up ಆಯ್ಕೆಯನ್ನು ಆರಿಸಿಕೊಳ್ಳಿ.
  • ಹಂತ 3: ಅಗತ್ಯವಿರುವ ವಿವರಗಳನ್ನು ನೀಡಿ ಖಾತೆ ತೆರೆಯಿರಿ.
  • ಹಂತ 4: ಖಾತೆಗೆ ಲಾಗಿನ್ ಆಗಿ.
  • ಹಂತ 5: Courses ಅಥವಾ Search ವಿಭಾಗಕ್ಕೆ ಭೇಟಿ ನೀಡಿ.
  • ಹಂತ 6: English, Spoken English, Communication Skills ಎಂದು ಹುಡುಕಿ.
  • ಹಂತ 7: ಲಭ್ಯವಿರುವ ಕೋರ್ಸ್‌ಗಳ ಪಟ್ಟಿಯನ್ನು ಪರಿಶೀಲಿಸಿ.
  • ಹಂತ 8: ಕೋರ್ಸ್‌ನ ಅವಧಿ, ಭಾಷೆ, ಕಲಿಕಾ ವಿಧಾನ ಹಾಗೂ ಶುಲ್ಕದ ವಿವರಗಳನ್ನು ಗಮನಿಸಿ.
  • ಹಂತ 9: ನಿಮಗೆ ಸೂಕ್ತವಾದ ಕೋರ್ಸ್ ಆಯ್ಕೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಿ.
  • ಹಂತ 10: ಆನ್‌ಲೈನ್ ಮೂಲಕ ಪಾಠಗಳನ್ನು ಕಲಿಯಲು ಪ್ರಾರಂಭಿಸಿ.

eSkill India ವೇದಿಕೆಯ ವಿಶೇಷತೆಗಳು

eSkill India ವೇದಿಕೆಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆನ್‌ಲೈನ್ ಕಲಿಕಾ ಸಂಪನ್ಮೂಲಗಳನ್ನು ಒದಗಿಸಲಾಗುತ್ತದೆ.

ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬಹುದು.

ಪ್ರಮುಖ ಪ್ರಯೋಜನಗಳು:

  1. ಮನೆಯಲ್ಲಿಯೇ ಕುಳಿತು ಕಲಿಯಬಹುದು
  2. ವಿವಿಧ ಕ್ಷೇತ್ರಗಳ ಕೋರ್ಸ್‌ಗಳನ್ನು ಹುಡುಕಬಹುದು.
  3. ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಬಹುದು.
  4. ಸಂವಹನ ಕೌಶಲ ಸುಧಾರಿಸಿಕೊಳ್ಳಬಹುದು.
  5. ಡಿಜಿಟಲ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
  6. ತಮ್ಮ ಅನುಕೂಲಕ್ಕೆ ತಕ್ಕಂತೆ ಕಲಿಕೆಗೆ ಸಮಯ ಮೀಸಲಿಡಬಹುದು.

eSkill India ಕೋರ್ಸ್‌ಗಳಿಗೆ ಪ್ರಮಾಣಪತ್ರ ಸಿಗುತ್ತದೆಯೇ?

ಈ ವೇದಿಕೆಯಲ್ಲಿ ವಿವಿಧ ಪಾಲುದಾರ ಸಂಸ್ಥೆಗಳು ಕೋರ್ಸ್‌ಗಳನ್ನು ಒದಗಿಸುವುದರಿಂದ ಪ್ರಮಾಣಪತ್ರದ ನಿಯಮಗಳು ಒಂದೇ ರೀತಿಯಾಗಿರುವುದಿಲ್ಲ.

ಕೆಲವು ಕೋರ್ಸ್‌ಗಳು ಉಚಿತವಾಗಿರಬಹುದು. ಕೆಲವು ಕೋರ್ಸ್‌ಗಳಿಗೆ ಶುಲ್ಕ ಇರಬಹುದು.

ಅದೇ ರೀತಿ ಕೆಲವು ಕೋರ್ಸ್‌ಗಳಲ್ಲಿ ಪ್ರಮಾಣಪತ್ರ ಲಭ್ಯವಿರಬಹುದು. ಇನ್ನು ಕೆಲವು ಕೋರ್ಸ್‌ಗಳಲ್ಲಿ ಪ್ರಮಾಣಪತ್ರ ಪಡೆಯಲು ಪ್ರತ್ಯೇಕ ಶುಲ್ಕ ಅಥವಾ ಪರೀಕ್ಷೆ ಇರಬಹುದು.

ಆದ್ದರಿಂದ ಕೋರ್ಸ್ ಆಯ್ಕೆ ಮಾಡುವ ಮೊದಲು ಕೆಳಗಿನ ಅಂಶಗಳನ್ನು ಪರಿಶೀಲಿಸಬೇಕು.

  • ಕೋರ್ಸ್ ಸಂಪೂರ್ಣ ಉಚಿತವೇ?
  • ತರಬೇತಿ ಆನ್‌ಲೈನ್‌ನಲ್ಲಿಯೇ ನಡೆಯುತ್ತದೆಯೇ?
  • ಕೋರ್ಸ್ ಪೂರ್ಣಗೊಳಿಸಲು ಎಷ್ಟು ಸಮಯ ಬೇಕು?
  • ಪ್ರಮಾಣಪತ್ರ ಲಭ್ಯವಿದೆಯೇ?
  • ಪ್ರಮಾಣಪತ್ರಕ್ಕೆ ಪ್ರತ್ಯೇಕ ಶುಲ್ಕವಿದೆಯೇ?
  • ಪರೀಕ್ಷೆ ಅಥವಾ ಅಸೈನ್‌ಮೆಂಟ್ ಕಡ್ಡಾಯವೇ?

Free English Learning Courses 2026 : Skill India Digital Hub (SIDH) – ಕೇಂದ್ರ ಸರ್ಕಾರದ ಡಿಜಿಟಲ್ ಕೌಶಲ ವೇದಿಕೆ

Skill India Digital Hub (SIDH) ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಡಿಜಿಟಲ್ ವೇದಿಕೆಯಾಗಿದೆ.

ದೇಶದ ಯುವಜನರಿಗೆ ಕೌಶಲ ತರಬೇತಿ, ಪ್ರಮಾಣೀಕರಣ, ಉದ್ಯೋಗಾವಕಾಶ ಮತ್ತು ವಿವಿಧ ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ವೇದಿಕೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಹಾಗೂ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಕೋರ್ಸ್‌ಗಳನ್ನು ಹುಡುಕಬಹುದು.

ಇದು ಕೇವಲ ಇಂಗ್ಲಿಷ್ ಕಲಿಕೆಗೆ ಮಾತ್ರ ಸೀಮಿತವಾಗಿಲ್ಲ. ತಾಂತ್ರಿಕ ಶಿಕ್ಷಣ, ಡಿಜಿಟಲ್ ಕೌಶಲ, ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ವಿವಿಧ ತರಬೇತಿಗಳನ್ನೂ ಇಲ್ಲಿ ಅನ್ವೇಷಿಸಬಹುದು.

Skill India Digital Hub ನಲ್ಲಿ ಏನೆಲ್ಲ ಅವಕಾಶಗಳಿವೆ?

ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಕೌಶಲ ತರಬೇತಿಗಳನ್ನು ಹುಡುಕಬಹುದು.

ಪ್ರಮುಖ ವಿಭಾಗಗಳು:

  1. Skill Courses
  2. Digital Skills
  3. Communication Skills
  4. Employability Skills
  5. Technical Training
  6. Entrepreneurship
  7. Computer Skills
  8. Artificial Intelligence
  9. Data Science
  10. Personality Development
  11. Job Opportunities
  12. Apprenticeship Opportunities

ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Skill India Digital Hub ನಲ್ಲಿ ಇಂಗ್ಲಿಷ್ ಕೋರ್ಸ್ ಹುಡುಕುವುದು ಹೇಗೆ?

  • ಹಂತ 1: Skill India Digital Hub ಅಧಿಕೃತ ವೆಬ್‌ಸೈಟ್ ತೆರೆಯಿರಿ.
  • ಹಂತ 2: Register ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಹಂತ 4: ಮೊಬೈಲ್‌ಗೆ ಬರುವ OTP ನಮೂದಿಸಿ ಪರಿಶೀಲನೆ ಪೂರ್ಣಗೊಳಿಸಿ.
  • ಹಂತ 5: ಅಗತ್ಯವಿದ್ದಲ್ಲಿ ಖಾತೆಗೆ Password ಅಥವಾ PIN ಹೊಂದಿಸಿ.
  • ಹಂತ 6: ಪೋರ್ಟಲ್ ಸೂಚಿಸುವ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ಹಂತ 7: ನಿಮ್ಮ ಖಾತೆಗೆ Login ಆಗಿ.
  • ಹಂತ 8: Dashboard ಅಥವಾ Skill Courses ವಿಭಾಗಕ್ಕೆ ಭೇಟಿ ನೀಡಿ.
  • ಹಂತ 9: English Skills, Introduction to English Skills, Communication Skills ಅಥವಾ Spoken English ಎಂದು ಹುಡುಕಿ.
  • ಹಂತ 10: ಲಭ್ಯವಿರುವ ಕೋರ್ಸ್‌ಗಳ ಪಟ್ಟಿಯನ್ನು ಪರಿಶೀಲಿಸಿ.
  • ಹಂತ 11: ಕೋರ್ಸ್‌ನ ವಿವರ, ತರಬೇತಿ ಸಂಸ್ಥೆ, ಅವಧಿ, ಶುಲ್ಕ ಮತ್ತು ಪ್ರಮಾಣಪತ್ರದ ಮಾಹಿತಿಯನ್ನು ಓದಿ.
  • ಹಂತ 12: ನಿಮಗೆ ಸೂಕ್ತವಾದ ಕೋರ್ಸ್ ಆಯ್ಕೆ ಮಾಡಿಕೊಂಡು Apply ಅಥವಾ Enroll ಆಯ್ಕೆಯ ಮೂಲಕ ಮುಂದುವರಿಯಿರಿ.

ಗಮನಿಸಿ: ನೋಂದಣಿ ಮತ್ತು e-KYC ಪ್ರಕ್ರಿಯೆಯಲ್ಲಿ ಪೋರ್ಟಲ್ ಸೂಚಿಸುವ ಪ್ರಸ್ತುತ ನಿಯಮಗಳನ್ನು ಅನುಸರಿಸಬೇಕು. ಆಧಾರ್ ಆಧಾರಿತ ಪರಿಶೀಲನೆ ಅಗತ್ಯವಿದ್ದರೆ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರಬಹುದು.

Skill India Digital Hub ನಲ್ಲಿ ಪ್ರಮಾಣಪತ್ರ ಪಡೆಯುವುದು ಹೇಗೆ?

SIDH ವೇದಿಕೆಯಲ್ಲಿ ಕೋರ್ಸ್‌ನ ಸ್ವರೂಪ ಹಾಗೂ ತರಬೇತಿ ಸಂಸ್ಥೆಗೆ ಅನುಗುಣವಾಗಿ ಪ್ರಮಾಣಪತ್ರದ ನಿಯಮಗಳು ಬದಲಾಗುತ್ತವೆ.

ಕೆಲವು ಕೋರ್ಸ್‌ಗಳಲ್ಲಿ ತರಬೇತಿ ಪೂರ್ಣಗೊಳಿಸಿದ ಅನಂತರ ಮೌಲ್ಯಮಾಪನ ಅಥವಾ ಪರೀಕ್ಷೆ ನಡೆಸಬಹುದು.

ಅರ್ಹತಾ ಮಾನದಂಡಗಳನ್ನು ಪೂರೈಸಿದವರಿಗೆ ಸಂಬಂಧಿಸಿದ ನಿಯಮಗಳ ಪ್ರಕಾರ ಪ್ರಮಾಣಪತ್ರ ದೊರೆಯಬಹುದು.

ಪ್ರಮಾಣಪತ್ರ ಪಡೆಯಲು:

  1. ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಿ.
  2. ಎಲ್ಲಾ ತರಬೇತಿ ಘಟಕಗಳನ್ನು ಪೂರ್ಣಗೊಳಿಸಿ.
  3. ಅಗತ್ಯವಿರುವ ಅಭ್ಯಾಸ ಹಾಗೂ ಅಸೈನ್‌ಮೆಂಟ್‌ಗಳನ್ನು ಮಾಡಿ.
  4. ನಿಗದಿತ ಮೌಲ್ಯಮಾಪನಕ್ಕೆ ಹಾಜರಾಗಿ.
  5. ಉತ್ತೀರ್ಣತಾ ಮಾನದಂಡಗಳನ್ನು ಪೂರೈಸಿ.
  6. ಪೋರ್ಟಲ್‌ನಲ್ಲಿ ಪ್ರಮಾಣಪತ್ರದ ಲಭ್ಯತೆ ಪರಿಶೀಲಿಸಿ.

ಪ್ರಮಾಣಪತ್ರದ ಮಾನ್ಯತೆ ಹಾಗೂ ಬಳಕೆಯ ಕುರಿತು ಕೋರ್ಸ್ ಒದಗಿಸುವ ಸಂಸ್ಥೆಯ ಮಾಹಿತಿಯನ್ನು ಪರಿಶೀಲಿಸುವುದು ಅಗತ್ಯ.

ವಿದ್ಯಾರ್ಥಿಗಳಿಗೆ ಯಾವ ರೀತಿಯ ಇಂಗ್ಲಿಷ್ ಕೋರ್ಸ್ ಹೆಚ್ಚು ಉಪಯುಕ್ತ?

ಇಂಗ್ಲಿಷ್ ಕಲಿಯಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ತಮ್ಮ ಪ್ರಸ್ತುತವಾಗಿ ಜ್ಞಾನಮಟ್ಟಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲರಿಗೂ ಒಂದೇ ರೀತಿಯ ತರಬೇತಿ ಸೂಕ್ತವಾಗುವುದಿಲ್ಲ.

ಉದಾಹರಣೆಗೆ, ಇಂಗ್ಲಿಷ್‌ನ ಮೂಲಭೂತ ಜ್ಞಾನವೂ ಇಲ್ಲದ ವಿದ್ಯಾರ್ಥಿಗಳು ಆರಂಭಿಕ ಹಂತದ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು.

ಈಗಾಗಲೇ ಇಂಗ್ಲಿಷ್ ಓದಲು ಮತ್ತು ಬರೆಯಲು ಬರುವ ವಿದ್ಯಾರ್ಥಿಗಳು Spoken English ಹಾಗೂ Communication Skills ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

1. Basic English

ಇಂಗ್ಲಿಷ್ ಕಲಿಕೆಯನ್ನು ಆರಂಭಿಸುವ ವಿದ್ಯಾರ್ಥಿಗಳಿಗೆ ಈ ತರಬೇತಿ ಸಹಾಯಕವಾಗಿದೆ.

ಇದರಲ್ಲಿ:

  • English Alphabets
  • Basic Words
  • Simple Sentences
  • Nouns
  • Pronouns
  • Verbs
  • Adjectives
  • Basic Grammar
  • Everyday English

ಮುಂತಾದ ವಿಷಯಗಳನ್ನು ಕಲಿಯಬಹುದು.

2. Spoken English

ಇಂಗ್ಲಿಷ್‌ನಲ್ಲಿ ಮಾತನಾಡಲು ಬಯಸುವವರಿಗೆ Spoken English ತರಬೇತಿ ಹೆಚ್ಚು ಉಪಯುಕ್ತವಾಗಿದೆ.

ಇದರಲ್ಲಿ:

  • ದೈನಂದಿನ ಸಂಭಾಷಣೆ.
  • ಪರಿಚಯ ಮಾಡಿಕೊಳ್ಳುವುದು.
  • ಪ್ರಶ್ನೆ ಕೇಳುವುದು.
  • ಉತ್ತರ ನೀಡುವುದು.
  • ಸರಳ ವಾಕ್ಯ ರಚನೆ.
  • ಸಂಭಾಷಣೆಯ ಅಭ್ಯಾಸ.
  • ಉಚ್ಚಾರಣೆ ಸುಧಾರಣೆ.
  • ಆತ್ಮವಿಶ್ವಾಸದಿಂದ ಮಾತನಾಡುವುದು.

ಮುಂತಾದ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ.

3. English Communication Skills

ಇಂಗ್ಲಿಷ್‌ನಲ್ಲಿ ಇತರರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಈ ತರಬೇತಿ ನೆರವಾಗುತ್ತದೆ.

ಇದರಲ್ಲಿ:

  • Listening Skills
  • Speaking Skills
  • Reading Skills
  • Writing Skills
  • Group Discussion
  • Public Speaking
  • Presentation Skills

ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಬಹುದು.

4. Business English

ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ Business English ಉಪಯುಕ್ತವಾಗಿದೆ.

ಇದರಲ್ಲಿ:

  • ಅಧಿಕೃತ ಇಮೇಲ್ ಬರೆಯುವುದು.
  • ಕಚೇರಿ ಸಂವಹನ.
  • ಸಭೆಗಳಲ್ಲಿ ಮಾತನಾಡುವುದು.
  • ವರದಿ ಸಿದ್ಧಪಡಿಸುವುದು.
  • ಸಂದರ್ಶನ ಎದುರಿಸುವುದು.
  • ವೃತ್ತಿಪರ ಸಂವಹನ.

ಮುಂತಾದ ವಿಷಯಗಳನ್ನು ಕಲಿಯಬಹುದು.

5. Personality Development

ವ್ಯಕ್ತಿತ್ವ ವಿಕಸನವು ವಿದ್ಯಾರ್ಥಿಗಳ ಒಟ್ಟಾರೆ ಬೆಳವಣಿಗೆಗೆ ಸಹಾಯಕವಾಗಿದೆ.

ಇದರಲ್ಲಿ:

  • ಆತ್ಮವಿಶ್ವಾಸ ಬೆಳೆಸುವುದು.
  • ನಾಯಕತ್ವ ಗುಣ.
  • ಸಮಯ ನಿರ್ವಹಣೆ.
  • ಸಂವಹನ ಕೌಶಲ.
  • ಸಮಸ್ಯೆ ಪರಿಹಾರ.
  • ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ.
  • ತಂಡದೊಂದಿಗೆ ಕೆಲಸ ಮಾಡುವುದು.

ಮುಂತಾದ ಕೌಶಲಗಳನ್ನು ಕಲಿಯಬಹುದು.

ಇಂಗ್ಲಿಷ್ ಕಲಿಕೆಯಲ್ಲಿ ನಾಲ್ಕು ಪ್ರಮುಖ ಕೌಶಲಗಳು

ಇಂಗ್ಲಿಷ್ ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾದರೆ ನಾಲ್ಕು ಪ್ರಮುಖ ಕೌಶಲಗಳಿಗೆ ಸಮಾನ ಆದ್ಯತೆ ನೀಡಬೇಕು.

ಅವುಗಳೆಂದರೆ:

  • Listening
  • Speaking
  • Reading
  • Writing

ಇವುಗಳನ್ನು LSRW Skills ಎಂದು ಕರೆಯಲಾಗುತ್ತದೆ.

Listening – ಆಲಿಸುವ ಕೌಶಲ

ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಮೊದಲು ನೀವು ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಇಂಗ್ಲಿಷ್ ಮಾತನಾಡುವ ವ್ಯಕ್ತಿಗಳು ಬಳಸುವ ಪದಗಳು, ವಾಕ್ಯಗಳು ಹಾಗೂ ಉಚ್ಚಾರಣೆಯನ್ನು ಗಮನವಿಟ್ಟು ಕೇಳಬೇಕು.

ಪ್ರತಿದಿನ ಇಂಗ್ಲಿಷ್ ಆಡಿಯೋ, ವಿಡಿಯೋ ಪಾಠಗಳು ಮತ್ತು ಸಂಭಾಷಣೆಗಳನ್ನು ಆಲಿಸುವ ಅಭ್ಯಾಸ ಮಾಡಬೇಕು.

Speaking – ಮಾತನಾಡುವ ಕೌಶಲ

ಇಂಗ್ಲಿಷ್‌ನಲ್ಲಿ ಮಾತನಾಡಲು ಹಿಂಜರಿಯಬಾರದು.

ಮೊದಲಿಗೆ ಸರಳ ವಾಕ್ಯಗಳಿಂದ ಪ್ರಾರಂಭಿಸಬೇಕು.

ಉದಾಹರಣೆಗೆ:

My name is Ramesh.

I am a student.

I live in Karnataka.

I like reading books.

I want to learn English.

ಈ ರೀತಿಯ ಸರಳ ವಾಕ್ಯಗಳನ್ನು ಪ್ರತಿದಿನ ಮಾತನಾಡುವ ಅಭ್ಯಾಸ ಮಾಡಬೇಕು.

Reading – ಓದುವ ಕೌಶಲ

ಪ್ರತಿದಿನ ಇಂಗ್ಲಿಷ್ ಪತ್ರಿಕೆಗಳು, ಸಣ್ಣ ಕಥೆಗಳು, ಮಕ್ಕಳ ಪುಸ್ತಕಗಳು ಮತ್ತು ಸರಳ ಲೇಖನಗಳನ್ನು ಓದಬೇಕು.

ಹೊಸ ಪದಗಳು ಎದುರಾದಾಗ ಅವುಗಳ ಅರ್ಥ ತಿಳಿದುಕೊಳ್ಳಬೇಕು.

ಪ್ರತಿದಿನ ಕನಿಷ್ಠ 10 ಹೊಸ ಪದಗಳನ್ನು ಕಲಿಯಲು ಪ್ರಯತ್ನಿಸಬೇಕು.

Writing – ಬರೆಯುವ ಕೌಶಲ

ಇಂಗ್ಲಿಷ್‌ನಲ್ಲಿ ಬರೆಯುವ ಅಭ್ಯಾಸವೂ ಅತ್ಯಂತ ಮುಖ್ಯ.

ಪ್ರತಿದಿನ ನಿಮ್ಮ ದಿನಚರಿಯನ್ನು ಐದು ಅಥವಾ ಹತ್ತು ವಾಕ್ಯಗಳಲ್ಲಿ ಇಂಗ್ಲಿಷ್‌ನಲ್ಲಿ ಬರೆಯಿರಿ.

ನಂತರ ವ್ಯಾಕರಣದ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಿ.

ಈ ನಾಲ್ಕು ಕೌಶಲಗಳನ್ನು ಒಟ್ಟಿಗೆ ಅಭ್ಯಾಸ ಮಾಡಿದರೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಸುಧಾರಿಸುತ್ತದೆ.

Free English Learning Courses 2026 : ವಿದ್ಯಾರ್ಥಿಗಳು ಪ್ರತಿದಿನ ಅನುಸರಿಸಬಹುದಾದ 30 ದಿನಗಳ ಇಂಗ್ಲಿಷ್ ಕಲಿಕಾ ಯೋಜನೆ

ಇಂಗ್ಲಿಷ್ ಕಲಿಯಲು ದುಬಾರಿ ತರಬೇತಿಯ ಜೊತೆಗೆ ನಿರಂತರ ಅಭ್ಯಾಸವೂ ಅಗತ್ಯ.

ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 30 ರಿಂದ 60 ನಿಮಿಷಗಳ ಕಾಲ ಇಂಗ್ಲಿಷ್ ಕಲಿಕೆಗೆ ಮೀಸಲಿಡಬಹುದು.

ಕೆಳಗಿನ 30 ದಿನಗಳ ಸರಳ ಯೋಜನೆಯನ್ನು ಅನುಸರಿಸಬಹುದು.

ಮೊದಲ ವಾರ – ಮೂಲಭೂತ ಇಂಗ್ಲಿಷ್

ದಿನ 1: English Alphabets ಮತ್ತು ಉಚ್ಚಾರಣೆ.

ದಿನ 2: ದಿನನಿತ್ಯ ಬಳಸುವ 20 ಇಂಗ್ಲಿಷ್ ಪದಗಳು.

ದಿನ 3: Noun ಮತ್ತು Pronoun.

ದಿನ 4: Verb ಮತ್ತು Adjective.

ದಿನ 5: ಸರಳ ವಾಕ್ಯ ರಚನೆ.

ದಿನ 6: ದಿನನಿತ್ಯದ ಸಂಭಾಷಣೆಯ ವಾಕ್ಯಗಳು.

ದಿನ 7: ಮೊದಲ ವಾರದ ವಿಷಯಗಳ ಪುನರಾವರ್ತನೆ.

ಎರಡನೇ ವಾರ – ವ್ಯಾಕರಣ ಮತ್ತು ವಾಕ್ಯ ರಚನೆ

ದಿನ 8: Present Tense.

ದಿನ 9: Past Tense.

ದಿನ 10: Future Tense.

ದಿನ 11: Articles – A, An, The.

ದಿನ 12: Prepositions.

ದಿನ 13: ಪ್ರಶ್ನೆಗಳನ್ನು ರಚಿಸುವ ವಿಧಾನ.

ದಿನ 14: ವ್ಯಾಕರಣದ ಅಭ್ಯಾಸ ಪರೀಕ್ಷೆ.

ಮೂರನೇ ವಾರ – Spoken English

ದಿನ 15: ಸ್ವಯಂ ಪರಿಚಯ ಮಾಡಿಕೊಳ್ಳುವುದು.

ದಿನ 16: ಕುಟುಂಬದ ಬಗ್ಗೆ ಮಾತನಾಡುವುದು.

ದಿನ 17: ಸ್ನೇಹಿತರೊಂದಿಗೆ ಸಂಭಾಷಣೆ.

ದಿನ 18: ಶಾಲೆ ಮತ್ತು ಕಾಲೇಜಿನ ಬಗ್ಗೆ ಮಾತನಾಡುವುದು.

ದಿನ 19: ಮಾರುಕಟ್ಟೆಯಲ್ಲಿ ಬಳಸುವ ಇಂಗ್ಲಿಷ್.

ದಿನ 20: ದೂರವಾಣಿ ಸಂಭಾಷಣೆ.

ದಿನ 21: ಇಂಗ್ಲಿಷ್‌ನಲ್ಲಿ ಐದು ನಿಮಿಷ ಮಾತನಾಡುವ ಅಭ್ಯಾಸ.

ನಾಲ್ಕನೇ ವಾರ – ಆತ್ಮವಿಶ್ವಾಸ ಮತ್ತು ಸಂವಹನ

ದಿನ 22: ಇಂಗ್ಲಿಷ್ ಕಥೆ ಓದುವುದು.

ದಿನ 23: ಇಂಗ್ಲಿಷ್ ವಿಡಿಯೋ ಆಲಿಸುವುದು.

ದಿನ 24: ಸಣ್ಣ ಇಮೇಲ್ ಬರೆಯುವುದು.

ದಿನ 25: ನಿಮ್ಮ ಅಭಿಪ್ರಾಯವನ್ನು ಇಂಗ್ಲಿಷ್‌ನಲ್ಲಿ ಹೇಳುವುದು.

ದಿನ 26: ಗುಂಪು ಚರ್ಚೆಯ ಅಭ್ಯಾಸ.

ದಿನ 27: ಸಣ್ಣ ಭಾಷಣ ಸಿದ್ಧಪಡಿಸುವುದು.

ದಿನ 28: ಉದ್ಯೋಗ ಸಂದರ್ಶನದ ಸಾಮಾನ್ಯ ಪ್ರಶ್ನೆಗಳು.

ದಿನ 29: ಇಂಗ್ಲಿಷ್‌ನಲ್ಲಿ 10 ನಿಮಿಷ ಮಾತನಾಡುವುದು.

ದಿನ 30: ಕಲಿತ ವಿಷಯಗಳ ಮೌಲ್ಯಮಾಪನ.

ಈ ಯೋಜನೆಯನ್ನು ವಿದ್ಯಾರ್ಥಿಗಳು ತಮ್ಮ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು.

ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಯಲು ಶಿಕ್ಷಕರು ನೀಡಬಹುದಾದ ಸಲಹೆಗಳು

ಶಾಲಾ ಹಂತದಲ್ಲಿಯೇ ಇಂಗ್ಲಿಷ್ ಭಾಷೆಯ ಮೇಲೆ ಆಸಕ್ತಿ ಮೂಡಿಸುವುದು ಅತ್ಯಂತ ಮುಖ್ಯ.

ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿಯೇ ಇಂಗ್ಲಿಷ್ ಮಾತನಾಡುವ ವಾತಾವರಣ ನಿರ್ಮಿಸುವುದು ಉತ್ತಮ ಫಲಿತಾಂಶ ನೀಡಬಹುದು.

ಶಿಕ್ಷಕರು ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಬಹುದು.

  1. ಪ್ರತಿದಿನ ಒಂದು ಹೊಸ ಇಂಗ್ಲಿಷ್ ಪದ ಕಲಿಸುವುದು.
  2. ವಾರಕ್ಕೊಮ್ಮೆ English Speaking Activity ನಡೆಸುವುದು.
  3. ವಿದ್ಯಾರ್ಥಿಗಳಿಂದ ಸ್ವಯಂ ಪರಿಚಯ ಮಾಡಿಸುವುದು.
  4. ಇಂಗ್ಲಿಷ್ ಕಥೆಗಳನ್ನು ಓದಿಸುವುದು.
  5. ಸರಳ ಸಂಭಾಷಣೆಗಳನ್ನು ಅಭ್ಯಾಸ ಮಾಡಿಸುವುದು.
  6. ತರಗತಿಯಲ್ಲಿ English Word Wall ನಿರ್ಮಿಸುವುದು.
  7. ವಾರಕ್ಕೊಮ್ಮೆ ಭಾಷಣ ಸ್ಪರ್ಧೆ ಆಯೋಜಿಸುವುದು.
  8. ಗುಂಪು ಚರ್ಚೆ ನಡೆಸುವುದು.
  9. ಇಂಗ್ಲಿಷ್ ಕ್ವಿಜ್ ಸ್ಪರ್ಧೆ ನಡೆಸುವುದು.
  10. ಡಿಜಿಟಲ್ ಪಾಠಗಳ ಮೂಲಕ ಕಲಿಕೆಯನ್ನು ಆಸಕ್ತಿದಾಯಕವಾಗಿಸುವುದು.

ಶಿಕ್ಷಕರು SWAYAM ಮತ್ತು ಇತರೇ ಡಿಜಿಟಲ್ ವೇದಿಕೆಗಳಲ್ಲಿರುವ ಸೂಕ್ತ ಕಲಿಕಾ ಸಂಪನ್ಮೂಲಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಇಂಗ್ಲಿಷ್ ಕಲಿಕೆಯ ಪ್ರಯೋಜನಗಳು

ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಯುವ ಆಸಕ್ತಿ ಇದ್ದರೂ ಸೂಕ್ತ ತರಬೇತಿ ಕೇಂದ್ರಗಳು ಲಭ್ಯವಿರುವುದಿಲ್ಲ.

ಕೆಲವು ಕಡೆ ತರಬೇತಿ ಸಂಸ್ಥೆಗಳು ಇದ್ದರೂ ಅವುಗಳ ಶುಲ್ಕ ಸಾಮಾನ್ಯ ಕುಟುಂಬಗಳಿಗೆ ಹೊರೆಯಾಗಬಹುದು.

ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಕಲಿಕಾ ವೇದಿಕೆಗಳು ಉತ್ತಮ ಪರ್ಯಾಯವಾಗಬಹುದು.

ಗ್ರಾಮೀಣ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಮುಖ ಪ್ರಯೋಜನಗಳು:

  • ಮನೆಯಿಂದಲೇ ಕಲಿಯಬಹುದು.
  • ಪ್ರಯಾಣದ ವೆಚ್ಚ ಉಳಿಸಬಹುದು.
  • ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ಹೊಂದಿಸಬಹುದು.
  • ವಿವಿಧ ಸಂಸ್ಥೆಗಳ ಕೋರ್ಸ್‌ಗಳನ್ನು ಅನ್ವೇಷಿಸಬಹುದು.
  • ಇಂಗ್ಲಿಷ್ ಜೊತೆಗೆ ಇತರೇ ಕೌಶಲಗಳನ್ನು ಕಲಿಯಬಹುದು.
  • ಡಿಜಿಟಲ್ ತಂತ್ರಜ್ಞಾನ ಬಳಕೆಯ ಅನುಭವ ಪಡೆಯಬಹುದು.
  • ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಕೌಶಲ ಬೆಳೆಸಿಕೊಳ್ಳಬಹುದು.

ಆದರೆ ಉತ್ತಮ ಇಂಟರ್ನೆಟ್ ಸಂಪರ್ಕ ಹಾಗೂ ಡಿಜಿಟಲ್ ಸಾಧನಗಳ ಲಭ್ಯತೆ ಅಗತ್ಯವಾಗಿರುತ್ತದೆ.

ಸ್ಮಾರ್ಟ್‌ಫೋನ್ ಮೂಲಕವೂ ಅನೇಕ ಆನ್‌ಲೈನ್ ಕೋರ್ಸ್‌ಗಳನ್ನು ಕಲಿಯಲು ಸಾಧ್ಯವಿದೆ.

ಇಂಗ್ಲಿಷ್ ಕಲಿಯುವಾಗ ವಿದ್ಯಾರ್ಥಿಗಳು ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು

ಇಂಗ್ಲಿಷ್ ಕಲಿಯುವ ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳು ಕೆಲವು ತಪ್ಪುಗಳನ್ನು ಮಾಡುವುದು ಸಹಜ.

ಆದರೆ ಅವುಗಳನ್ನು ಸರಿಪಡಿಸಿಕೊಂಡರೆ ಕಲಿಕೆ ಸುಲಭವಾಗುತ್ತದೆ.

1. ವ್ಯಾಕರಣಕ್ಕೆ ಮಾತ್ರ ಆದ್ಯತೆ ನೀಡುವುದು

ವ್ಯಾಕರಣ ಕಲಿಯುವುದು ಮುಖ್ಯ. ಆದರೆ ವ್ಯಾಕರಣವನ್ನು ಕಲಿಯುವುದರ ಜೊತೆಗೆ ಮಾತನಾಡುವ ಅಭ್ಯಾಸವೂ ಇರಬೇಕು.

2. ತಪ್ಪು ಮಾತನಾಡುವ ಭಯ

ತಪ್ಪು ಮಾತನಾಡುತ್ತೇನೆ ಎಂಬ ಭಯದಿಂದ ಇಂಗ್ಲಿಷ್ ಮಾತನಾಡುವುದನ್ನು ನಿಲ್ಲಿಸಬಾರದು.

ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕವೇ ಭಾಷಾ ಕೌಶಲ ಬೆಳೆಯುತ್ತದೆ.

3. ಹೊಸ ಪದಗಳನ್ನು ಅಭ್ಯಾಸ ಮಾಡದಿರುವುದು

ಹೊಸ ಪದಗಳನ್ನು ಕಲಿತ ಅನಂತರ ಅವುಗಳನ್ನು ವಾಕ್ಯಗಳಲ್ಲಿ ಬಳಸಬೇಕು.

4. ಕೇವಲ ವಿಡಿಯೋ ನೋಡುವುದು

ವಿಡಿಯೋ ಪಾಠಗಳನ್ನು ನೋಡುವುದರಿಂದ ಮಾತ್ರ ಇಂಗ್ಲಿಷ್‌ನಲ್ಲಿ ಪರಿಣತಿ ಪಡೆಯಲು ಸಾಧ್ಯವಿಲ್ಲ.

ಆಲಿಸುವುದು, ಮಾತನಾಡುವುದು, ಓದುವುದು ಹಾಗೂ ಬರೆಯುವುದು ಎಲ್ಲವೂ ಅಗತ್ಯ.

5. ನಿರಂತರ ಅಭ್ಯಾಸದ ಕೊರತೆ

ಒಂದು ದಿನ ಕಲಿತು ಹಲವಾರು ದಿನ ಬಿಡುವುದರಿಂದ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಪ್ರತಿದಿನ ಸ್ವಲ್ಪ ಸಮಯ ಅಭ್ಯಾಸ ಮಾಡುವುದು ಹೆಚ್ಚು ಪರಿಣಾಮಕಾರಿ.

Free English Learning Courses 2026 : ಉಚಿತ ಕೋರ್ಸ್ ಆಯ್ಕೆ ಮಾಡುವ ಮೊದಲು ಗಮನಿಸಬೇಕಾದ ಅಂಶಗಳು

ಡಿಜಿಟಲ್ ವೇದಿಕೆಗಳಲ್ಲಿ ಅನೇಕ ಕೋರ್ಸ್‌ಗಳು ಲಭ್ಯವಿದ್ದರೂ ಪ್ರತಿಯೊಂದು ಕೋರ್ಸ್ ಕೂಡ ವಿದ್ಯಾರ್ಥಿಗಳ ಅಗತ್ಯಕ್ಕೆ ಸರಿಹೊಂದುವುದಿಲ್ಲ.

ಆದ್ದರಿಂದ ನೋಂದಣಿ ಮಾಡುವ ಮೊದಲು ಕೆಲವು ವಿಷಯಗಳನ್ನು ಪರಿಶೀಲಿಸಬೇಕು.

  1. ಕೋರ್ಸ್ ಒದಗಿಸುವ ಸಂಸ್ಥೆಯ ಹೆಸರು.
  2. ಕೋರ್ಸ್‌ನ ಉದ್ದೇಶ.
  3. ತರಬೇತಿ ನೀಡುವ ಭಾಷೆ.
  4. ಕೋರ್ಸ್‌ನ ಒಟ್ಟು ಅವಧಿ.
  5. ಕೋರ್ಸ್ ಆರಂಭ ಮತ್ತು ಮುಕ್ತಾಯ ದಿನಾಂಕ.
  6. ಕಲಿಕಾ ವಿಧಾನ.
  7. ಪರೀಕ್ಷೆಯ ವಿವರ.
  8. ಪ್ರಮಾಣಪತ್ರದ ಲಭ್ಯತೆ.
  9. ಪ್ರಮಾಣಪತ್ರಕ್ಕೆ ಇರುವ ಶುಲ್ಕ.
  10. ಕೋರ್ಸ್ ಪೂರ್ಣಗೊಳಿಸಲು ಬೇಕಾದ ಅರ್ಹತೆ.

ವಿಶೇಷವಾಗಿ ಉಚಿತ ಕೋರ್ಸ್ ಎಂದು ಹೇಳಿದ ಮಾತ್ರಕ್ಕೆ ಪ್ರಮಾಣಪತ್ರವೂ ಉಚಿತವಾಗಿರುತ್ತದೆ ಎಂದು ಭಾವಿಸಬಾರದು.

ಕೆಲವು ಕೋರ್ಸ್‌ಗಳಲ್ಲಿ ಕಲಿಕೆ ಉಚಿತವಾಗಿದ್ದರೂ ಅಂತಿಮ ಪರೀಕ್ಷೆ ಅಥವಾ ಪ್ರಮಾಣಪತ್ರಕ್ಕೆ ಶುಲ್ಕ ಇರಬಹುದು.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪ್ರಮುಖವಾದ ಸಲಹೆಗಳು

ಇಂಗ್ಲಿಷ್ ಭಾಷಾ ಜ್ಞಾನವನ್ನು ಬೆಳೆಸಿಕೊಳ್ಳುವುದು ಒಂದು ದಿನದಲ್ಲಿ ಸಾಧ್ಯವಾಗುವ ಕೆಲಸವಲ್ಲ.

ಇದಕ್ಕೆ ನಿರಂತರವಾದ ಪ್ರಯತ್ನ, ಅಭ್ಯಾಸ ಮತ್ತು ತಾಳ್ಮೆ ಅಗತ್ಯ.

ಪೋಷಕರು ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಪ್ರೋತ್ಸಾಹ ನೀಡಬೇಕು.

ಮಕ್ಕಳು ಇಂಗ್ಲಿಷ್ ಮಾತನಾಡುವಾಗ ತಪ್ಪು ಮಾಡಿದರೆ ಅವರನ್ನು ಹೀಯಾಳಿಸಬಾರದು. ಬದಲಾಗಿ ಸರಿಯಾದ ವಾಕ್ಯಗಳನ್ನು ಕಲಿಸಿ ಪ್ರೋತ್ಸಾಹಿಸಬೇಕು.

ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿದಿನ ಮಾತನಾಡುವ ಅವಕಾಶ ನೀಡಬೇಕು.

ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಕೇವಲ ಮನರಂಜನೆಗೆ ಬಳಸದೆ ಕಲಿಕೆಗೂ ಬಳಸಿಕೊಳ್ಳಬೇಕು.

ಪ್ರತಿದಿನ ಹೊಸ ಪದಗಳನ್ನು ಕಲಿಯುವುದು, ಇಂಗ್ಲಿಷ್ ಕಥೆಗಳನ್ನು ಓದುವುದು ಹಾಗೂ ಸರಳ ಸಂಭಾಷಣೆಗಳನ್ನು ಅಭ್ಯಾಸ ಮಾಡುವುದು ಉತ್ತಮ ಅಭ್ಯಾಸವಾಗಿದೆ.

ಇಂಗ್ಲಿಷ್ ಕಲಿಕೆಗೆ ಸಂಬಂಧಿಸಿದ ಪ್ರಮುಖ ಅಧಿಕೃತ ವೆಬ್‌ಸೈಟ್‌ಗಳು

ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

1. SWAYAM ಅಧಿಕೃತ ಪೋರ್ಟಲ್

ವೆಬ್‌ಸೈಟ್: www.swayam.gov.in

2. eSkill India ಅಧಿಕೃತ ಪೋರ್ಟಲ್

ವೆಬ್‌ಸೈಟ್: nsdcindia.org/e-skill-india

3. Skill India Digital Hub

ವೆಬ್‌ಸೈಟ್: www.skillindiadigital.gov.in

4. SWAYAM Plus

ವೆಬ್‌ಸೈಟ್: swayamplus.education.gov.in

ಈ ಪೋರ್ಟಲ್‌ಗಳಲ್ಲಿ ಲಭ್ಯವಿರುವ ಕೋರ್ಸ್‌ಗಳ ವಿವರ, ನೋಂದಣಿ ವಿಧಾನ ಹಾಗೂ ಪ್ರಮಾಣಪತ್ರದ ನಿಯಮಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಕಲಿಕೆಯನ್ನು ಆರಂಭಿಸಬಹುದು.

ವಿದ್ಯಾರ್ಥಿಗಳು ಇಂದಿನಿಂದಲೇ ಇಂಗ್ಲಿಷ್ ಕಲಿಕೆ ಆರಂಭಿಸಿ

ಇಂಗ್ಲಿಷ್ ಭಾಷೆಯನ್ನು ಕಲಿಯಲು ಶ್ರೀಮಂತ ಕುಟುಂಬದಲ್ಲಿ ಮಾತ್ರ ಜನಿಸಬೇಕೆಂದಿಲ್ಲ. ದುಬಾರಿ ತರಬೇತಿ ಸಂಸ್ಥೆಗಳಿಗೆ ಸೇರಬೇಕೆಂಬ ಕಡ್ಡಾಯವೂ ಸಹ ಇಲ್ಲ.

ಕಲಿಯುವ ಆಸಕ್ತಿ, ಸೂಕ್ತ ಮಾರ್ಗದರ್ಶನ, ಡಿಜಿಟಲ್ ಸಂಪನ್ಮೂಲಗಳು ಮತ್ತು ನಿರಂತರವಾದ ಅಭ್ಯಾಸ ಇದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಇಂಗ್ಲಿಷ್ ಭಾಷಾ ಕೌಶಲವನ್ನು ಸುಧಾರಿಸಿಕೊಳ್ಳಬಹುದು.

ಕೇಂದ್ರ ಸರ್ಕಾರದ SWAYAM, eSkill India ಹಾಗೂ Skill India Digital Hub ಮುಂತಾದ ವೇದಿಕೆಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡರೆ ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನೂ ಬೆಳೆಸಿಕೊಳ್ಳಬಹುದು.

ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ಯುವಜನರು ಮತ್ತು ಕಾಲೇಜು ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ಇಂಗ್ಲಿಷ್ ಕಲಿಯುವುದನ್ನು ಇಂದೇ ಆರಂಭಿಸಿ. ಪ್ರತಿದಿನ ಕನಿಷ್ಠ 30 ನಿಮಿಷ ಅಭ್ಯಾಸ ಮಾಡಿ. ಹೊಸ ಪದಗಳನ್ನು ಕಲಿಯಿರಿ. ಸರಳ ವಾಕ್ಯಗಳನ್ನು ಮಾತನಾಡಿ. ತಪ್ಪುಗಳಿಂದ ಕಲಿಯಿರಿ. ನಿಧಾನವಾಗಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ.

ನೆನಪಿಡಿ: ಇಂಗ್ಲಿಷ್ ಕಲಿಯುವುದು ಕಷ್ಟವಲ್ಲ. ಕಲಿಯುವ ಆಸಕ್ತಿ ಮತ್ತು ಪ್ರತಿದಿನದ ಅಭ್ಯಾಸವೇ ಯಶಸ್ಸಿನ ಗುಟ್ಟು

Free English Learning Courses 2026 – Frequently Asked Questions (FAQ)

1. ವಿದ್ಯಾರ್ಥಿಗಳು ಉಚಿತವಾಗಿ ಇಂಗ್ಲಿಷ್ ಕಲಿಯಬಹುದೇ?

ಹೌದು. SWAYAM, eSkill India ಮತ್ತು Skill India Digital Hub ಮುಂತಾದ ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಿರುವ ಉಚಿತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಇಂಗ್ಲಿಷ್ ಮತ್ತು ಸಂವಹನ ಕೌಶಲಗಳನ್ನು ಕಲಿಯಬಹುದು.

2. SWAYAM ಮೂಲಕ Spoken English ಕಲಿಯಬಹುದೇ?

SWAYAM ನಲ್ಲಿ English Language, Communication Skills ಮತ್ತು ಸಂಬಂಧಿತ ವಿಷಯಗಳ ಕೋರ್ಸ್‌ಗಳನ್ನು ಹುಡುಕಬಹುದು. ಲಭ್ಯವಿರುವ ಕೋರ್ಸ್‌ಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬಹುದು.

3. SWAYAM ಕೋರ್ಸ್‌ಗಳಿಗೆ ಶುಲ್ಕ ಇದೆಯೇ?

SWAYAM ಕೋರ್ಸ್‌ಗಳ ಕಲಿಕಾ ಸಾಮಗ್ರಿಗಳು ಸಾಮಾನ್ಯವಾಗಿ ಉಚಿತವಾಗಿರುತ್ತವೆ. ಆದರೆ ಅಧಿಕೃತ ಪ್ರಮಾಣಪತ್ರ ಪಡೆಯಲು ಅಂತಿಮ ಪರೀಕ್ಷೆಗೆ ಶುಲ್ಕ ಪಾವತಿಸಬೇಕಾಗಬಹುದು.

4. eSkill India ಯಾರಿಗಾಗಿ ಉಪಯುಕ್ತವಾಗಿದೆ?

ವಿದ್ಯಾರ್ಥಿಗಳು, ಯುವಜನರು, ಉದ್ಯೋಗಾಕಾಂಕ್ಷಿಗಳು ಮತ್ತು ತಮ್ಮ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಈ ವೇದಿಕೆಯನ್ನು ಬಳಸಿಕೊಳ್ಳಬಹುದು.

5. Skill India Digital Hub ನಲ್ಲಿ ನೋಂದಣಿ ಹೇಗೆ ಮಾಡಿಕೊಳ್ಳಬೇಕು?

ಅಧಿಕೃತ ವೆಬ್‌ಸೈಟ್ ತೆರೆಯಿರಿ. Register ಆಯ್ಕೆ ಮಾಡಿಕೊಂಡು ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ. ಪೋರ್ಟಲ್ ಸೂಚಿಸುವ e-KYC ಪ್ರಕ್ರಿಯೆಯನ್ನು ಅನುಸರಿಸಿ.

6. Skill India Digital Hub ನಲ್ಲಿ ಎಲ್ಲಾ ಕೋರ್ಸ್‌ಗಳು ಉಚಿತವೇ?

ಇಲ್ಲ. ಈ ವೇದಿಕೆಯಲ್ಲಿ ಉಚಿತ ಹಾಗೂ ಶುಲ್ಕವಿರುವ ಎರಡೂ ರೀತಿಯ ಕೋರ್ಸ್‌ಗಳು ಇರಬಹುದು. ಕೋರ್ಸ್‌ನ ಪ್ರತ್ಯೇಕ ವಿವರಗಳನ್ನು ಪರಿಶೀಲಿಸಬೇಕು.

7. ಇಂಗ್ಲಿಷ್ ಕಲಿಯಲು ಎಷ್ಟು ದಿನ ಬೇಕಾಗುತ್ತದೆ?

ಇದು ವಿದ್ಯಾರ್ಥಿಯ ಪ್ರಸ್ತುತ ಜ್ಞಾನ, ಅಭ್ಯಾಸದ ಸಮಯ ಮತ್ತು ಕಲಿಕೆಯ ವೇಗವನ್ನು ಅವಲಂಬಿಸಿರುತ್ತದೆ. ಪ್ರತಿದಿನ ನಿರಂತರ ಅಭ್ಯಾಸ ಮಾಡಿದರೆ ಹಂತ ಹಂತವಾಗಿ ಉತ್ತಮ ಪ್ರಗತಿ ಸಾಧಿಸಬಹುದು.

8. ಮೊಬೈಲ್ ಮೂಲಕ ಇಂಗ್ಲಿಷ್ ಕಲಿಯಬಹುದೇ?

ಹೌದು. ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‌ಫೋನ್ ಮೂಲಕ ಅನೇಕ ಆನ್‌ಲೈನ್ ಕೋರ್ಸ್‌ಗಳು ಹಾಗೂ ವಿಡಿಯೋ ಪಾಠಗಳನ್ನು ಬಳಸಿಕೊಳ್ಳಬಹುದು.

9. ಇಂಗ್ಲಿಷ್ ಕಲಿಯಲು ಮೊದಲು ವ್ಯಾಕರಣ ತಿಳಿದಿರಬೇಕೇ?

ಮೂಲಭೂತ ವ್ಯಾಕರಣದ ಜ್ಞಾನ ಸಹಾಯಕವಾಗಿದೆ. ಆದರೆ ವ್ಯಾಕರಣ ಸಂಪೂರ್ಣವಾಗಿ ಕಲಿತ ನಂತರವೇ ಮಾತನಾಡಬೇಕು ಎಂಬ ನಿಯಮವಿಲ್ಲ. ಸರಳ ವಾಕ್ಯಗಳಿಂದ ಮಾತನಾಡುವ ಅಭ್ಯಾಸ ಆರಂಭಿಸಬಹುದು.

10. ಈ ಕೋರ್ಸ್‌ಗಳನ್ನು ಶಾಲಾ ವಿದ್ಯಾರ್ಥಿಗಳು ಬಳಸಬಹುದೇ?

ಕೋರ್ಸ್‌ನ ಅರ್ಹತಾ ನಿಯಮಗಳಿಗೆ ಅನುಗುಣವಾಗಿ ಶಾಲಾ ವಿದ್ಯಾರ್ಥಿಗಳು ಸೂಕ್ತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೋಂದಣಿಗೂ ಮುನ್ನ ವಯಸ್ಸು ಮತ್ತು ಅರ್ಹತೆಯ ವಿವರಗಳನ್ನು ಪರಿಶೀಲಿಸಬೇಕು.

11. ಇಂಗ್ಲಿಷ್ ಕೋರ್ಸ್ ಪೂರ್ಣಗೊಳಿಸಿದರೆ ಉದ್ಯೋಗ ಸಿಗುತ್ತದೆಯೇ?

ಇಂಗ್ಲಿಷ್ ಮತ್ತು ಸಂವಹನ ಕೌಶಲಗಳು ಉದ್ಯೋಗ ಪಡೆಯಲು ಸಹಾಯ ಮಾಡಬಹುದು. ಆದರೆ ಕೋರ್ಸ್ ಪೂರ್ಣಗೊಳಿಸಿದ ಮಾತ್ರಕ್ಕೆ ಉದ್ಯೋಗ ಖಚಿತವಾಗುವುದಿಲ್ಲ. ಸಂಬಂಧಿಸಿದ ಹುದ್ದೆಗೆ ಬೇಕಾದ ಇತರ ಅರ್ಹತೆಗಳೂ ಅಗತ್ಯ.

12. ಪ್ರಮಾಣಪತ್ರವನ್ನು ಉದ್ಯೋಗಕ್ಕೆ ಬಳಸಬಹುದೇ?

ಕೋರ್ಸ್‌ನ ಸಂಸ್ಥೆ, ಪ್ರಮಾಣಪತ್ರದ ಮಾನ್ಯತೆ ಹಾಗೂ ಉದ್ಯೋಗದಾತರ ನಿಯಮಗಳಿಗೆ ಅನುಗುಣವಾಗಿ ಬಳಸಬಹುದು. ಪ್ರಮಾಣಪತ್ರದ ಮಾನ್ಯತೆಯನ್ನು ಮುಂಚಿತವಾಗಿ ಪರಿಶೀಲಿಸಬೇಕು.

13. ಇಂಗ್ಲಿಷ್ ಮಾತನಾಡುವ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?

ಪ್ರತಿದಿನ ಸರಳ ವಾಕ್ಯಗಳನ್ನು ಮಾತನಾಡುವುದು, ಇಂಗ್ಲಿಷ್ ಆಲಿಸುವುದು, ಸ್ನೇಹಿತರೊಂದಿಗೆ ಸಂಭಾಷಣೆ ನಡೆಸುವುದು ಮತ್ತು ತಪ್ಪುಗಳನ್ನು ತಿದ್ದಿಕೊಳ್ಳುವುದು ಉತ್ತಮ ಮಾರ್ಗಗಳಾಗಿವೆ.

14. ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ವೇದಿಕೆಗಳು ಉಪಯುಕ್ತವೇ?

ಹೌದು. ಸೂಕ್ತ ಇಂಟರ್ನೆಟ್ ಸಂಪರ್ಕ ಮತ್ತು ಮೊಬೈಲ್ ಅಥವಾ ಕಂಪ್ಯೂಟರ್ ಇದ್ದರೆ ಗ್ರಾಮೀಣ ವಿದ್ಯಾರ್ಥಿಗಳೂ ಮನೆಯಲ್ಲಿಯೇ ಕುಳಿತು ಕೋರ್ಸ್‌ಗಳನ್ನು ಕಲಿಯಬಹುದು.

15. ಯಾವ ವೇದಿಕೆಯಲ್ಲಿ ಇಂಗ್ಲಿಷ್ ಕಲಿಯುವುದು ಉತ್ತಮ?

ಶೈಕ್ಷಣಿಕ ಕೋರ್ಸ್‌ಗಳಿಗೆ SWAYAM, ವಿವಿಧ ಡಿಜಿಟಲ್ ಕೌಶಲಗಳಿಗೆ eSkill India ಮತ್ತು ಕೌಶಲ ತರಬೇತಿ ಮತ್ತು ಪ್ರಮಾಣೀಕರಣದ ಅವಕಾಶಗಳನ್ನು ಅನ್ವೇಷಿಸಲು Skill India Digital Hub ಬಳಸಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ.

ವಿದ್ಯಾರ್ಥಿಗಳೇ, ಇಂಗ್ಲಿಷ್ ಕಲಿಯಲು ಹಣದ ಕೊರತೆ ನಿಮ್ಮ ಕನಸಿಗೆ ಅಡ್ಡಿಯಾಗದಿರಲಿ. ಕೇಂದ್ರ ಸರ್ಕಾರದ ಡಿಜಿಟಲ್ ಕಲಿಕಾ ವೇದಿಕೆಗಳನ್ನು ಬಳಸಿಕೊಂಡು ಇಂದಿನಿಂದಲೇ ನೀವು ನಿಮ್ಮ ಭಾಷಾ ಕೌಶಲವನ್ನು ಬೆಳೆಸಿಕೊಳ್ಳಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಹಂಚಿಕೊಳ್ಳಿ.

Free English Learning Courses 2026

ಅಧಿಕೃತ ವೆಬ್‌ಸೈಟ್‌ಗಳು

👉 SWAYAM ಅಧಿಕೃತ ವೆಬ್‌ಸೈಟ್
👉 Skill India Digital Hub
👉 SWAYAM Plus – English Courses
👉 Free English Learning Courses 2026 Click Here
WhatsApp Group Join Now
Telegram Group Join Now