5 ಲಕ್ಷದವರೆಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?-2024.

5 ಲಕ್ಷದವರೆಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?-2024.

     ಸಾಮಾನ್ಯ ಜನರಿಗೆ ಆರ್ಥಿಕ ಸುರಕ್ಷತೆ (financial help) ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ (kisan sammani nidhi), ಅಯುಷ್ಮಾನ್ ಭಾರತ್‌ನಂತಹ (Ayushamn Card) ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ವಿವಿಧ ರೀತಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಯೋಜನೆಗಳಲ್ಲಿ ಫಲಾನುಭವಿಗಳು ಹಣಕಾಸಿನ ಸಹಾಯವನ್ನು ನೇರವಾಗಿ ಪಡೆಯುತ್ತಾರೆ.

     ಕೇಂದ್ರ ಸರಕಾರ ರೈತರಿಗಾಗಿ ನಡೆಸುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇದಕ್ಕೊಂದು ಉದಾಹರಣೆ. ಇದೇ ರೀತಿ ಆರ್ಥಿಕ ಪ್ರಯೋಜನವನ್ನು ನೀಡದ ಮತ್ತೊಂದು ಯೋಜನೆ ಇದೆ. ಆದರೆ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಇದರ ಅಡಿಯಲ್ಲಿ ನೀಡಲಾಗುತ್ತದೆ ಮತ್ತು ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಅಂದರೆ ಇದಕ್ಕಾಗಿ ಫಲಾನುಭವಿಗಳು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಯೋಜನೆಯ ಹೆಸರು ಆಯುಷ್ಮಾನ್ ಭಾರತ್ ಯೋಜನೆ.

    ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಯಸುವವರು ಇದರ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

   ಆಯುಷ್ಮಾನ್ ಭಾರತ್.

ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಮೊದಲು ಅರ್ಹರಿಗೆ ನೀಡಲಾಗುತ್ತದೆ. ಇದಾದ ಅನಂತರ ಕಾರ್ಡ್‌ದಾರರು 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ ಗಮನಿಸಿಸಬೇಕಾದ ವಿಚಾರವೆಂದರೆ ಪ್ರತಿ ವರ್ಷ ಕಾರ್ಡುದಾರರು 5 ಲಕ್ಷ ರೂ.ಗಳ ರಕ್ಷಣೆಯನ್ನು ಪಡೆಯುತ್ತಾರೆ. ಅಂದರೆ, ಪ್ರತಿ ವರ್ಷ ಈ ಮೊತ್ತದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

 ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

ಆಯುಷ್ಮಾನ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿ ಪಡೆಯಲು ಬಯಸಿದರೆ ಇದಕ್ಕಾಗಿ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಬೇಕು. ಇಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿಯಾಗಿ ಅದನ್ನು ಮಾಡಿಕೊಳ್ಳಬಹುದು.

  ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಯೋಜನೆಯ ಅಧಿಕೃತ ವೆಬ್‌ಸೈಟ್ https://beneficiary.nha.gov.in/ ಗೆ ಭೇಟಿ ನೀಡಬೇಕು.

  ಯಾರು ಪಡೆಯಬಹುದು?

   ಆಯುಷ್ಮಾನ್ ಕಾರ್ಡ್ ಅನ್ನು ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ ಕೆಳಗೆ ನೀಡಲಾದ ಅರ್ಹತಾ ಮಾನದಂಡಗಳನ್ನು ತಿಳಿದುಕೊಳ್ಳಿ.

   ಕುಟುಂಬದಲ್ಲಿ ಅಂಗವಿಕಲ ವ್ಯಕ್ತಿಯನ್ನು ಹೊಂದಿರುವವರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು, ದಿನಗೂಲಿ ಮಾಡುವವರು, ಬಡತನ ರೇಖೆಗಿಂತ ಕೆಳಗಿರುವವರು, ನಿರ್ಗತಿಕ ಅಥವಾ ಬುಡಕಟ್ಟು ಜನರು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.

 ಯಾರಿಗೆ ಸಾಧ್ಯವಿಲ್ಲ?

    ತೆರಿಗೆ ಪಾವತಿಸುವವರು, ಸರ್ಕಾರಿ ಕೆಲಸ ಮಾಡುವವರು, ಪಿಎಫ್ ಸದಸ್ಯರಾಗಿರುವವರು, ಇಎಸ್ ಐಸಿಯ ಲಾಭವನ್ನು ಪಡೆಯುವ ಜನರು, ವೈದ್ಯಕೀಯ ವಿಮೆ ಹೊಂದಿರುವವರು ಇದನ್ನು ಪಡೆಯುವುದು ಸಾಧ್ಯವಿಲ್ಲ.

WhatsApp Group Join Now
Telegram Group Join Now

2 thoughts on “5 ಲಕ್ಷದವರೆಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?-2024.”

Leave a Comment