ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಬಗ್ಗೆ ಸರಕಾರದಿಂದ ರೈತರಿಗೆ ಗುಡ್ ನ್ಯೂಸ್.

PM Kisan Nidhi Yojana: ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಬಗ್ಗೆ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್! ಈಗಲೇ ತಿಳಿದುಕೊಳ್ಳಿ.

    ರಾಜ್ಯದ ರೈತರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ. ರೈತರಿಗೆ ಕಿಸಾನ್ ಹಣ ವನ್ನು ಸರಕಾರ ಬಿಡುಗಡೆ ಮಾಡಿದ್ದು ರೈತರ ಪಟ್ಟಿ ಕೂಡ ಬಿಡುಗಡೆ ಮಾಡಿದೆ.ಈ ಭಾರಿ ಬರಗಾಲ ಪರಿಸ್ಥಿತಿ ಯಿಂದಾಗಿ ರೈತರು ಬಹಳಷ್ಟು ನಷ್ಟ ವನ್ನು ಅನುಭವಿಸಿದ್ದರು. ಬೆಳೆದಂತಹ ಬೆಳೆಯಲ್ಲು ಇಳುವರಿ ಕಾಣದೇ ತೊಂದರೆ ಗೆ ಸಿಲುಕಿದ್ದರು.ಇದಕ್ಕಾಗಿ ಸರಕಾರ ನಷ್ಟ ಉಂಟಾದ ರೈತರಿಗೆ ಪರಿಹಾರ ಕೂಡ ನೀಡಿದೆ.‌ ಇದೀಗ ಕಿಸಾನ್ ಹಣ (PM Kisan Money) ಬಿಡುಗಡೆ ಯಾಗುವ ಬಗ್ಗೆ ಮಾಹಿತಿ ಬಂದಿದ್ದು ರೈತರು ತಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಬಹುದು.

ಹೌದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Nidhi Yojana) ಯ ಹಣ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ.

ಈಗಾಗಲೇ ಈ‌ ಕಿಸಾನ್ ಹಣವನ್ನು ಹದಿನಾರು ಕಂತಿನ ವರೆಗೆ ಬಿಡುಗಡೆ ಮಾಡಿದ್ದು ಕಿಸಾನ್ ಯೋಜನೆ 17ನೇ ಕಂತಿನ ಹಣ ಇನ್ನಷ್ಟೆ ಬಿಡುಗಡೆಯಾಗ ಬೇಕಿದೆ. ಈ ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಜಾರಿಗೆ ತರಲಾಗಿದ್ದು ಅಂದಿನಿಂದ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡ್ತ ಬಂದಿದೆ. ಇದೀಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Nidhi Yojana) ಮೂಲಕ ಕೇಂದ್ರ ಸರ್ಕಾರ ದೇಶಾದ್ಯಂತ ಒಟ್ಟು 9.26 ಕೋಟಿ ರೈತರಿಗೆ ಒಟ್ಟು 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಪಿ ಎಂ ಕಿಸಾನ್ ಯೋಜನೆಯ ಹಳ್ಳಿವಾರು ಅರ್ಹ ರೈತರ ಪಟ್ಟಿ ಚೆಕ್ ಮಾಡುವ ವಿಧಾನ‌ ಹೀಗಿದೆ:-

ಮೊದಲಿಗೆ ರೈತರು ಕೃಷಿ ಇಲಾಖೆಯ ಲಿಂಕ್ fruitspmk.karnataka.gov.in ಇಲ್ಲಿ ತಿಳಿಯಬಹುದಾಗಿದೆ. ಇದರಲ್ಲಿ PM-Kisan Village List-2024 ಲಿಂಕ್ ಮೇಲೆ ಕ್ಲಿಕ್ ಮಾಡಿ ರೈತರ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು ವೀಕ್ಷಿಸು ಅನ್ನುವ ಆಪ್ಚನ್ ಮೇಲೆ ಕ್ಲಿಕ್ ಮಾಡಬೇಕು. ತದನಂತರ ಹಳ್ಳಿ ರೈತರ ಪಟ್ಟಿ ತೊರಲಿದ್ದು ಪಟ್ಟಿಯಲ್ಲಿ ಪಿಎಂಕೆಐಡಿ, ರೈತರ ಹೆಸರು, ಅರ್ಜಿ ಸ್ಥಿತಿ ವಿವರ ಗೊತ್ತಾಗಲಿದೆ.

ಹೀಗೆಯು ನೋಡಬಹುದು:-

PM ಕಿಸಾನ್ ಸೌಲಭ್ಯ ಪಡರಯುವ ರೈತರು ಚೆಕ್​ ಮಾಡಲು https://pmkisan.gov.in ಈ ಲಿಂಕ್ ನಲ್ಲಿ Know Your Status ಆಯ್ಕೆಯನ್ನು ಕ್ಲಿಕ್ ಮಾಡಿ, ನೋಂದಣಿ ಸಂಖ್ಯೆ ಯನ್ನು ಹಾಕಿ, ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ, ಅದರ ನಂತರ, GET DATA ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಫಲಾನುಭವಿಗಳ ಪಟ್ಟಿ ತಿಳಿಯಲಿದೆ.

WhatsApp Group Join Now
Telegram Group Join Now