KPSC Recruitment: ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ.

KPSC Recruitment: ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ.

KPSC

KPSC Recruitment: ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸ್ತಕರು ಅರ್ಜಿ ಸಲ್ಲಿಸಬಯಸುವವರು ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು, ಮತ್ತು ಕೊನೇ ದಿನಾಂಕ ಯಾವಾಗ ಹಾಗೂ ಮಾಸಿಕ ವೇತನ ಎಷ್ಟು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ.

ಕರ್ನಾಟಕ ಲೋಕೋಪಯೋಗಿ ಇಲಾಖೆ(KPSC) ಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್‌- A ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾಸಿಸಲಾಗಿದೆ. 2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು. ಆದರೆ, ಇದೀಗ ಇದೇ ಉದ್ಯೋಗಗಳಿಗೆ ಕರ್ನಾಟಕ ಲೋಕಸೇವಾ ಆಯೋಗ(KPSC) ಅರ್ಜಿಗಳನ್ನು ಮತ್ತೆ ಆಹ್ವಾನಿಸಿದೆ.

ಗ್ರೂಪ್‌- A- 30 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಪೈಕಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಮತ್ತು 01 ಕೆಲಸಕ್ಕೆ ಸೇವಾನಿರತ ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ.
• ಸಾಮಾನ್ಯ ವರ್ಗ 13,
• ಪರಿಶಿಷ್ಟ ಜಾತಿ 05,
• ಪರಿಶಿಷ್ಟ ಪಂಗಡ 02,
• ಪ್ರವರ್ಗ1 01,
• ಪ್ರವರ್ಗ-2ಎ 05,
• ಪ್ರವರ್ಗ-2ಬಿ 01,
• ಪ್ರವರ್ಗ-3ಎ 01,
• ಪ್ರವರ್ಗ-3ಬಿ 01,
• ಎಸ್​ಸಿ 01,
ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವರು ಇಂಜಿನಿಯರಿಂಗ್ ಪದವಿ ಪಡೆದಿರಬೇಕಾಗುತ್ತದೆ. ಸಿವಿಲ್ ಇಂಜಿನಿಯರ್, ಕನ್​ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಜಿಯೋಮೆಕಾನಿಕ್ಸ್‌ ಮತ್ತು ಸ್ಟ್ರಕ್ಚರ್ಸ್‌, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಹಾಗೂ ಕಂಸ್ಟ್ರಕ್ಷನ್ ಪದವಿ ಇದರಲ್ಲಿ ಯಾವುದಾದರೂ ಒಂದನ್ನು ಪೂರ್ಣಗೊಳಿಸಿರಬೇಕು.

ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 83,700-1,55,200 ರೂಪಾಯಿವರೆಗೂ ಇರಲಿದೆ. ಇನ್ನು ಸೇವಾನಿರತ ಹುದ್ದೆ ಸ್ಪರ್ಧೆಯ ಹುದ್ದೆಗೆ ಅರ್ಜಿ ಸಲ್ಲಿಸುವವರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಗ್ರೇಡ್‌-1 ಮತ್ತು ಸಹಾಯಕ ಇಂಜಿನಿಯರ್ ಗ್ರೇಡ್‌-2 ಹಾಗೂ ಕಿರಿಯ ಇಂಜಿನಿಯರ್ ಆಗಿರಬೇಕು. ಯಾವುದೇ ಕೇಡರ್‌ನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿರಬೇಕು. ಇಲಾಖೆ ವಯಸ್ಸು ನಿಗದಿಪಡಿಸಿಲ್ಲ. ಸೇವಾನಿರತ ಅಭ್ಯರ್ಥಿ, ಸಹ ಮುಕ್ತ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.

ಅರ್ಜಿ ಸಲ್ಲಿಕೆ ಶುಲ್ಕ .

• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 600 ರೂಪಾಯಿ, • • ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 300 ರೂಪಾಯಿ ಪಾವತಿಸಬೇಕಾಗುತ್ತದೆ.
• ಎಸ್​ಸಿ, ಎಸ್​ಟಿ, ಪ್ರ-01, ಮಾಜಿ ಸೈನಿಕ, ವಿಶೇಷ ಚೇತನ ಅಭ್ಯರ್ಥಿಗೆ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು  ದಿನಾಂಕ.

• ಜನವರಿ 20, 2025 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,
•  ಕೊನೆ ದಿನಾಂಕ ಫೆಬ್ರವರಿ 03 ಆಗಿದೆ. ಅಭ್ಯರ್ಥಿಗಳು

ಹೆಚ್ಚಿನ ಮಾಹತಿಗಾಗಿ ಈ ಕೆಳಗೆ ಕೋಟ್ಟಿರುವ ವೆಬ್ ಸೈಟ್ ಗೆ ಭೇಟಿ ನೀಡಿ.

• NOTIFICATION – CLICK HERE

•WEBSITE LINK – CLICK HERE

WhatsApp Group Join Now
Telegram Group Join Now