Gram Panchayat E-Swathu:ಇನ್ನು ಮುಂದೆ ಎಲ್ಲಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ| ಪಂಚಾಯತ್ ರಾಜ್ ಹೊಸ ಅಧಿನಿಯಮ ಜಾರಿ.

Gram Panchayat E-Swathu:ಇನ್ನು ಮುಂದೆ ಎಲ್ಲಾ ಗ್ರಾಮಪಂಚಾಯ್ತಿ ವ್ಯಾಪ್ತಿಯ  ಆಸ್ತಿಗಳಿಗೆ ಇ-ಸ್ವತ್ತು ವಿತರಣೆ| ಪಂಚಾಯತ್ ರಾಜ್ ಹೊಸ ಅಧಿನಿಯಮ ಜಾರಿ.

Gram Panchayat E-Swathu

Gram Panchayat E-Swathu:ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವ ಪೂರ್ಣ ಹೆಜ್ಜೆ ಇಟ್ಟಿದೆ. ಗ್ರಾಮ ಪಂಚಾಯತಿ (Gram Panchayat) ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಖಾತಾ (e-Khata) ನೀಡುವ ಬಗ್ಗೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ; ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಕಳೆದ 2025ರ ಮಾರ್ಚ್ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993’ಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಈ ತಿದ್ದುಪಡಿಯ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ಖಾಸಗಿ ಆಸ್ತಿಗಳಿಗೆ ಇ-ಖಾತೆ (e-Khata) ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

ಇ-ಖಾತೆ(E-Khata) ಎಂದರೇನು?

ಇ-ಖಾತೆ ಎಂದರೆ ಡಿಜಿಟಲ್ ಆಸ್ತಿ ದಾಖಲೆ ಪದ್ದತಿ. ಇದನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿನ  ಮನೆ, ಭೂಮಿ ಮತ್ತು ಕಟ್ಟಡಗಳ ಮಾಲಿಕತ್ವ ವಿಸ್ತೀರ್ಣ, ಬಾಕಿ ತೆರಿಗೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸರ್ಕಾರ ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗುತ್ತದೆ.

ತಿದ್ದುಪಡಿ ನಿಯಮದಿಂದ ಜನಸಾಮಾನ್ಯರಿಗೆ ಆಗುವ ಪ್ರಯೋಜನಗಳು ಏನು.

• 199-ಬಿ ಮತ್ತು 199-ಸಿ ಸೆಕ್ಷನ್‌ಗಳ ಸೇರ್ಪಡೆ:-ಗ್ರಾಮೀಣ ಪ್ರದೇಶದ ಎಲ್ಲಾ ಖಾಸಗಿ ಆಸ್ತಿಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಈ 2 ಹೊಸ ಸೆಕ್ಷನ್‌ಗಳನ್ನು ಸೇರ್ಪಡಿಸಲಾಗುತ್ತಿದೆ. ತಿದ್ದುಪಡಿಯು ಪ್ರಸ್ತುತ 1993ರ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಸ್ತಿತ್ವದಲ್ಲಿರುವ ಶ್ರೇಣಿಗಳಿಗೆ ಪೂರಕವಾಗಲಿದೆ.
96 ಲಕ್ಷ ಅನಧಿಕೃತ ಆಸ್ತಿಗಳ ನಿಯಂತ್ರಣ:- ಇಲ್ಲಿಯವರೆಗೆ ಕೇವಲ 44 ಲಕ್ಷ ಆಸ್ತಿಗಳೇ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲಾಗಿದ್ದು, ಉಳಿದ 96 ಲಕ್ಷ ಆಸ್ತಿಗಳು ಸಿಸ್ಟಮ್‌ನ ಹೊರಗಿದ್ದವು. ಇವುಗಳ ಮೇಲೆ ಸೂಕ್ತ ಶುಲ್ಕ ಅಥವಾ ದಂಡ ವಿಧಿಸಿ, ಸರಕಾರವು ಇವುಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರುವ ಪ್ರಯತ್ನ ಯೋಜಿಸುತ್ತಿದೆ.
ನೋಂದಣಿಯಾದ ಹಾಗೂ ಕ್ರಮಬದ್ಧವಲ್ಲದ ಆಸ್ತಿಗಳ ದಾಖಲೆ:- 2013ರ ನಂತರ ಅಥವಾ ಮೊದಲು ನೋಂದಣಿಯಾದ ಎಲ್ಲಾ ನಿವೇಶನಗಳು ಹಾಗೂ ಕಟ್ಟಡಗಳು ಇ-ಖಾತೆಗೆ ಒಳಪಡುತ್ತವೆ. ಇದರಿಂದ ಆಸ್ತಿ ಮಾರಾಟ ಹಾಗೂ ಖರೀದಿಯ ಸಮಯದಲ್ಲಿ ಯಾವುದೇ ಕಾನೂನು ತೊಂದರೆಗಳಿಲ್ಲದೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.
ತೆರಿಗೆ ಆಧಾರದ ಮೇಲೆ ಸ್ಥಳೀಯ ಆದಾಯ ಹೆಚ್ಚಳ:-ಗ್ರಾಮ ಪಂಚಾಯತಿಗಳಿಗೆ ನಿಖರವಾದ ಆಸ್ತಿ ತೆರಿಗೆ ಸಂಗ್ರಹಿಸುವ ಅವಕಾಶ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಸಂಪತ್ತು ದೊರಕುತ್ತಿದೆ.

ಇ-ಸ್ವತ್ತು ತಂತ್ರಾಂಶದ ಕುರಿತಾದ ಮಾಹಿತಿ.

2013ರ ಜೂನ್ 15ರಂದು ಕರ್ನಾಟಕದಲ್ಲಿ ಇ-ಸ್ವತ್ತು ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಲಾಯಿತು. ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳ ಸಮಗ್ರ ದಾಖಲೆ ಅಂತರ್ಜಾಲ ಆಧಾರಿತ ವ್ಯವಸ್ಥೆಯಲ್ಲಿ ನಿರ್ವಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ನಕಲಿ ದಾಖಲೆ, ವಿವಾದಾತ್ಮಕ ಆಸ್ತಿ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ.

ಈ ತಿದ್ದುಪಡಿಯ ಮೂಲಕ ಸರ್ಕಾರ ಪಾರದರ್ಶಕ ಆಸ್ತಿ ನಿರ್ವಹಣೆ, ಗ್ರಾಮ ಪಂಚಾಯತಿ ವಾರ್ಷಿಕ ಆದಾಯದಲ್ಲಿ ಏರಿಕೆ ಮತ್ತು ಆಸ್ತಿ ಖರೀದಿ/ಮಾರಾಟಕ್ಕೆ ಅನುಕೂಲತೆ ಕಲ್ಪಿಸುವಂತಹ 3 ಪ್ರಮುಖ ಗುರಿಗಳನ್ನು ಹೊಂದಿದೆ. ಈ ಮೂಲಕ ಇನ್ಮುಂದೆ ಇ-ಖಾತೆ ಇದ್ದರೆ ಆಸ್ತಿಯನ್ನು ಖರೀದಿಸಲು ಮತ್ತು ಮಾರಲು ಯಾವುದೇ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗಿಲ್ಲ.

ಯಾವ ಯಾವ ಆಸ್ತಿಗಳಿಗೆ ಈ ತಿದ್ದುಪಡಿ ಅನ್ವಯವಾಗುತ್ತದೆ?

ಕರ್ನಾಟಕ ರಾಜ್ಯದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ತಿದ್ದುಪಡಿಯ ಎಲ್ಲಾ ಖಾಸಗಿ ಆಸ್ತಿಗಳಿಗೆ ಅನ್ವಯವಾಗುತ್ತದೆ. ಸರ್ಕಾರಿ ಭೂಮಿ, ಅರಣ್ಯ ಭೂಮಿ, ಶಾಸನಬದ್ಧ ಸಂಸ್ಥೆಗಳ ಆಸ್ತಿಗಳು ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಹೊರತುಪಡಿಸಿ ಈ ಕೆಳಗಿನ ಆಸ್ತಿಗಳಿಗೆ ಅನ್ವಯವಾಗಲಿದೆ.

• ಕ್ರಮಬದ್ಧವಲ್ಲದ ನಿವೇಶನಗಳು
• ಗುತ್ತಿಗೆದಾರರಿಂದ ನಿರ್ಮಿಸಲಾದ ಮನೆಗಳು
• ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ ಕಟ್ಟಡಗಳು
• 2013ರ ನಂತರ ಮತ್ತು ಮುಂಚಿತವಾಗಿ ನೋಂದಣಿಯಾದ ಆಸ್ತಿಗಳು

ಇ-ಖಾತೆ ವ್ಯವಸ್ಥೆ ಅನ್ವಯವಾಗುವ ಮೂಲಕ ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ಬಹುಪಾಲು ಲಾಭವಾಗಲಿದೆ. ಇದರಿಂದ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುವುದು ಮಾತ್ರವಲ್ಲದೆ, ಗ್ರಾಮೀಣ ಅಭಿವೃದ್ಧಿಗೆ ಅವಶ್ಯಕವಾದ ಆರ್ಥಿಕ ಮೂಲಗಳನ್ನು ಸೃಷ್ಟಿಸಲು ಇದು ಸಹಕಾರಿಯಾಗಲಿದೆ. ಸರ್ಕಾರದ ಈ ತೀರ್ಮಾನ ಗ್ರಾಮೀಣ ಭಾಗದ ಆಸ್ತಿ ಮಾಲೀಕತ್ವದ ದೃಷ್ಟಿಕೋನದಲ್ಲಿ ಕ್ರಾಂತಿಕಾರಿಯಾಗಿ ಪರಿಗಣಿಸಬಹುದು.

WhatsApp Group Join Now
Telegram Group Join Now