Mudra Loan:52 ಕೋಟಿ ಅರ್ಹ ಫಲಾನುಭವಿಗಳಿಗೆ ಮುದ್ರಾ ಲೋನ್ ಮಂಜೂರು! ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
Mudra Loan:ಈ ಪ್ರಧಾನಮಂತ್ರಿ ಮುದ್ರಾ ಯೋಜನೆ (Mudra Yojana)ಯು ಕೇಂದ್ರ ಸರ್ಕಾರದಿಂದ ಜಾರಿಗೆ ಬಂದು ಇಲ್ಲಿಗೆ ಒಟ್ಟಾರೆ 10 ವರ್ಷ ಪೂರ್ತಿಯಾಗಿದೆ ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಮಂಗಳವಾರು ದೆಹಲಿ ನಿವಾಸದಲ್ಲಿ ಈ ಯೋಜನೆಯ ಫಲಾನುಭವಿಗಳ ಜೊತೆ ಸಂವಾದವನ್ನು ನಡೆಸಿದರು.
ಈ ಪ್ರಧಾನಮಂತ್ರಿ ಮುದ್ರಾ ಯೋಜನೆ (Mudra Yojana) ಮೂಲಕ ಕೇಂದ್ರ ಸರ್ಕಾರವು ಬ್ಯಾಂಕ್ ಗಳ ಮೂಲಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅತಿ ಕಡಿಮೆ ಬಡ್ಡಿದರದಲ್ಲಿ(MUDRA loan for small business) ಯಾವುದೇ ಜಾಮೀನು ಇಲ್ಲದೆ ಸಾಲವನ್ನು ನೀಡುವ ಈ ಯೋಜನೆಯನ್ನು ರೂಪಿಸಲಾಗಿದ್ದು ಇದರ ಬಗ್ಗೆ ಕುರಿತು ಈ ಲೇಖನದಲ್ಲಿ ಪ್ರಮುಖವಾದ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಈ ಮುದ್ರಾ ಲೋನ್ ಯೋಜನೆಯಡಿ ಸಾಲವನ್ನು(MUDRA loan application) ಪಡೆಯುವುದು ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು?ಈ ಯೋಜನೆಯಡಿಯಲ್ಲಿ ಸಾಲ ಪಡೆಯುವುದರಿಂದ ಅಗುವ ಲಾಭಗಳೇನು? ಇನ್ನಿತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
MUDRA loan Scheme-52 ಕೋಟಿ ಅರ್ಹ ಫಲಾನುಭವಿಗಳಿಗೆ ಮುದ್ರಾ ಲೋನ್.
ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಒಟ್ಟು 52 ಕೋಟಿ ಅರ್ಹ ಫಲಾನುಭವಿಗಳಿಗೆ ಸಾಲವನ್ನು ಮುಂಜೂರು ಮಾಡಲಾಗಿದ್ದು ಒಟ್ಟು ₹33 ಲಕ್ಷ ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿರುತ್ತದೆ.
MUDRA loan for Business- ಅರ್ಹ ಫಲಾನುಭವಿಗಳಲ್ಲಿ ಸ್ತ್ರೀಯರ ಸಂಖ್ಯೆ ಹೆಚ್ಚು.
ಈ ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಶೇ 70 ರಷ್ಟು ಮಹಿಳೆಯರೇ ಇರುವುದು ಅತಿ ವಿಶೇಷವಾಗಿದೆ ಸಾಲ ಮರುಪಾವತಿಯನ್ನು ಸಹ ಉತ್ತಮವಾಗಿ ಮಾಡುತ್ತಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
Mudra Loan Amount- ಅಂದಾಜು ಎಷ್ಟು ಮೊತ್ತದ ಸಾಲವನ್ನು ಪಡೆಯಬಹುದು?
ಈ ಮುದ್ರಾ ಯೋಜನೆಯಡಿ ಆರಂಭದಲ್ಲಿ ₹50.೦೦೦ ರೂ ದಿಂದ ₹5 ಲಕ್ಷದ ವರೆಗೆ ಸಾಲವನ್ನು ನೀಡಲಾಗುತ್ತಿತ್ತು ಆದರೆ ಈಗ ಸಾಲದ ಮಿತಿಯನ್ನು ₹20 ಲಕ್ಷಕ್ಕೆ ಜಾಸ್ತಿ ಮಾಡಲಾಗಿದೆ.
Mudra Loan Benefits-ಮುದ್ರಾ ಯೋಜನೆಯಡಿ ಸಾಲ ಪಡೆಯುವುದರಿಂದ ಆಗುವ ಪ್ರಯೋಜನಗಳು.
• ಮುದ್ರಾ ಯೋಜನೆಯಡಿ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.
• ಸಾಲ ಪಡೆಯಲು ಯಾವುದೇ ಜಾಮೀನು ಅಗತ್ಯವಿರುವುದಿಲ್ಲ.
• ಮಹಿಳಾ ಅರ್ಜಿದಾರರಿಗೆ ವಿಶೇಷ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
Mudra Loan Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ.
ಸ್ವಂತ ಉದ್ಯೋಗವನ್ನು ಆರಂಭಿಸಲು ಆಸ್ತಕಿ ಇರುವ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೇಂದ್ರ ಸರ್ಕಾರದ ಅಧಿಕೃತ www.jansamarth.in ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಈ ಅರ್ಜಿಯನ್ನು ಹಾಕಲು ಅವಕಾಶವಿರುತ್ತದೆ. ಸಾಲ ಪಡೆಯಲು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
1:- ಮೊದಲು ಈ Mudra Loan Application ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ “ಜನ್ ಸಮರ್ಥ” ತಂತ್ರಾಂಶವನ್ನು ಭೇಟಿ ಮಾಡಬೇಕು.
2:- ಇದಾದ ನಂತರ ಇಲ್ಲಿ ಮುಖ ಪುಟದಲ್ಲಿ ಕಾಣುವ “ನೋಂದಾಯಿಸಿ/Register” ಬಟನ್ ಮೇಲೆ ಕ್ಲಿಕ್ ಮಾಡಿ ಆ ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ “OTP ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು.
3:- ಬಳಿಕ “ಲಾಗಿನ್/Login” ಬಟನ್ ಮೇಲೆ ಕ್ಲಿಕ್ ಮಾಡಿ ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಸಾಲ ಪಡೆಯಲು ಇಚ್ಚಿಸುವ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Required Document For Mudra Loan-ಅರ್ಜಿ ಸಲ್ಲಿಸಲ ಪ್ರಮುಖ ದಾಖಲಾತಿಗಳು.
• ಪಾಸ್‌ಪೋರ್ಟ್ ಸೈಜ್ ಫೋಟೋ/Photo
• ಅಭ್ಯರ್ಥಿಯ ಆಧಾರ್ ಕಾರ್ಡ/Aadhar Card
• ವ್ಯಾಪಾರ/ಉದ್ದಿಮೆಯ ಯೋಜನಾ ವರದಿ/Project Report
• ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book
• ಪಾನ್ ಕಾರ್ಡ/Pan Card
• ವಿಳಾಸ ದೃಡೀಕರಣ/ವಿದ್ಯುತ್ ಬಿಲ್/ಗ್ಯಾಸ್ ಬಿಲ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ(SC/ST/OBC ಅಭ್ಯರ್ಥಿಗಳಿಗೆ ಮಾತ್ರ)
- Read more…
B. L. Rice:ಬಿ ಎಲ್ ರೈಸ್ ಯಾರು, ಮತ್ತು ಕರ್ನಾಟಕ ಇತಿಹಾಸಕ್ಕೆ ಇವರ ಕೊಡುಗೆ ಏನು, ಇವರ ಬಗ್ಗೆ ನಿಮಗೆಷ್ಟು ಗೊತ್ತು?