International Court of Justice: ಅಂತಾರಾಷ್ಟ್ರೀಯ ನ್ಯಾಯಾಲಯ,ಇದು ಈಗ ಸುದ್ದಿಯಲ್ಲಿದೆ ಗೊತ್ತೇ?-2024.

International Court of Justice: ಅಂತಾರಾಷ್ಟ್ರೀಯ ನ್ಯಾಯಾಲಯ,ಇದು ಈಗ ಸುದ್ದಿಯಲ್ಲಿದೆ ಗೊತ್ತೇ?-2024.

International Court of Justice:

ವಿಷಯ : ಗಾಜಾದಲ್ಲಿ ನಾಗರಿಕರ ಮೇಲೆ ಇಸ್ರೇಲ್ ಪಡೆಗಳು ನರಮೇಧ ನಡೆಸಿದ್ದನ್ನು ಖಂಡಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಮೊಕದ್ದೊಮ್ಮೆ ಹೂಡಿದ ದಕ್ಷಿಣ ಆಫ್ರಿಕಾದ ನಡೆಯನ್ನು ಇತ್ತೀಚೆಗೆ ಚೀನಾ ಶ್ಲಾಘಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಬಗ್ಗೆ ತಿಳಿಯಿರಿ :

• ಈ ನ್ಯಾಯಾಲಯವನ್ನು ಜೂನ್ 1945 ರಲ್ಲಿ ವಿಶ್ವಸಂಸ್ಥೆಯ ಹಕ್ಕುಪತ್ರದ ಮೂಲಕ ಅಸ್ತಿತ್ವಕ್ಕೆ ತರಲಾಯಿತು.

1946ನೆಯ ಏಪ್ರಿಲ್ ನಲ್ಲಿ ಎರಡನೆಯ ಮಹಾಯುದ್ಧ ಮುಗಿದಮೇಲೆ ಆ ನ್ಯಾಯಾಲಯ ಪುನಾರಚನೆಗೊಂಡು ವಿಶ್ವಸಂಸ್ಥೆಯ ಒಂದು ಪ್ರಧಾನ ಅಂಗವಾಗಿ ಅಂತಾರಾಷ್ಟ್ರೀಯ ನ್ಯಾಯಲಯ ಎಂಬ ಹೆಸರಿನಿಂದ ತನ್ನ ಕೆಲಸಕಾರ್ಯಗಳನ್ನಾರಂಭಿಸಿತು.

• ವಿಶೇಷವೆಂದರೆ ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದೆಂದು ಗುರುತಿಸಲ್ಪಡುವ ಈ ನ್ಯಾಯಾಲಯವು ಉಳಿದ 5 ಅಂಗಗಳಂತೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿಲ್ಲ.
• ಈ ನ್ಯಾಯಾಲಯದ ಪ್ರಧಾನ ಕಚೇರಿ ಇರುವುದು ನೆದಲ್ಯಾರ್ಂಡ್ ದೇಶದ ಹೇಗ್‌ನಲ್ಲಿ.
• ನ್ಯಾಯಾಲಯದ ಅಧಿಕೃತ ಭಾಷೆ ಫ್ರೆಂಚ್ ಮತ್ತು ಇಂಗ್ಲೀಷ್.
• ಭಾರತವೂ ಈ ನ್ಯಾಯಾಲಯದ ಸದಸ್ಯ ರಾಷ್ಟ್ರವಾಗಿದೆ.

International Court of Justice:

   ನ್ಯಾಯಾಲಯದ ಕಾರ್ಯಗಳು :

• ಈ ನ್ಯಾಯಾಲಯವು 2 ರೀತಿಯ ಪ್ರಕರಣಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ.

1. ದೇಶಗಳ ನಡುವಿನ ಕಾನೂನು ವಿವಾದಗಳನ್ನು (ವಿವಾದಾತ್ಮಕ ಪ್ರಕರಣಗಳು) ಪರಿಹರಿಸುವುದು.

2. ವಿಶ್ವಸಂಸ್ಥೆಯ ಅಂಗಗಳು ಕೇಳಿದ ಕಾನೂನು ಪ್ರಶ್ನೆಗಳ ಕುರಿತು ಸಲಹೆ ಅಥವಾ ಅಭಿಪ್ರಾಯಗಳನ್ನು ನೀಡುವುದು.(ಸಲಹಾ ಪ್ರಕ್ರಿಯೆಗಳು).

• ವಿವಾದಾತ್ಮಕ ಪ್ರಕರಣಗಳಲ್ಲಿ ಈ ನ್ಯಾಯಾಲಯದ ತೀರ್ಪು ಅಂತಿಮವಾಗಿದ್ದು ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆದರೆ ವಿಶ್ವಸಂಸ್ಥೆಯ ಅಂಗಗಳು ಕೇಳಿದ ಸಲಹೆಗಳಿಗೆ ಈ ನ್ಯಾಯಾಲಯ ನೀಡಿದ ತೀರ್ಪ ಅಂತಿಮವಲ್ಲ.

  ನ್ಯಾಯಾಲಯದ ಸಂಯೋಜನೆ :

  ನ್ಯಾಯಾಲಯದಲ್ಲಿ 15 ಜನ ನ್ಯಾಯಾಧೀಶರಿದ್ದಾರೆ. ಅವರು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಚುನಾಯಿಸಲ್ಪಡುತ್ತಾರೆ. ಅವರು ತಮ್ಮತಮ್ಮ ದೇಶದಲ್ಲಿ ಅತ್ಯುಚ್ಚ ನ್ಯಾಯಾಧೀಶ ಪದವಿಗೆ ಅರ್ಹರಾಗಿರಬೇಕು. ಇಲ್ಲವೆ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರದಲ್ಲಿ ಪರಿಣತರೆಂದು ಖ್ಯಾತಿವೆತ್ತಿರಬೇಕು. ಅಂಥವರನ್ನು 9 ವರ್ಷಗಳ ಅವಧಿಯವರೆಗೆ ಚುನಾಯಿಸುವರು. ಪ್ರತಿ 3 ವರ್ಷಕ್ಕೆ ಐವರು ನಿವೃತ್ತಿ ಹೊಂದುವರು.

   ಧನ್ಯವಾದಗಳು……

WhatsApp Group Join Now
Telegram Group Join Now