KARNATAKA LKG,UKG :2025-26ನೇ ಶೈಕ್ಷಣಿಕ ಸಾಲಿನಿಂದ LKG,UKG ಪ್ರವೇಶಕ್ಕೆ ಎಷ್ಟು ವರ್ಷ ಕಡ್ಡಾಯ ಶಿಕ್ಷಣ ಇಲಾಖೆ ಸೂಚನೆ.

KARNATAKA LKG,UKG :2025-26ನೇ ಶೈಕ್ಷಣಿಕ ಸಾಲಿನಿಂದ LKG,UKG ಪ್ರವೇಶಕ್ಕೆ ಎಷ್ಟು ವರ್ಷ ಕಡ್ಡಾಯ ಶಿಕ್ಷಣ ಇಲಾಖೆ ಸೂಚನೆ.

LKG,UKG

KARNATAKA LKG,UKG :2025-26ನೇ ಶೈಕ್ಷಣಿಕ ಸಾಲಿನಿಂದ LKG ದಾಖಲಾತಿಗೆ 4 ವರ್ಷ ಮತ್ತು UKGಗೆ 5 ವರ್ಷ ತುಂಬುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಸರ್ಕಾರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಕಟ್ಟುನಿಟ್ಟಾಗಿ ಆರದೇಶವನ್ನು  ನೀಡಿದ್ದಾರೆ.

ಕನಾಟಕ ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ತರಗತಿ (LKG)ಗೆ ಸೇರ್ಪಡೆ ಮಾಡಲು 4 ವರ್ಷ ತುಂಬಿರಬೇಕು ಎಂಬ ನಿಯಮ 2023-24ರಿಂದಲೇ ಜಾರಿಯಲ್ಲಿದ್ದರೂ ಹಲವಾರು ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷ ಸಾಕಷ್ಟು ಗೊಂದಲ ಸೃಷ್ಟಿಯಾಗಿ ಹಲವು ಪೋಷಕರು ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿ ಈ ವರ್ಷದಿಂದ ಜಾರಿಯಾಗಬೇಕಿದ್ದ 1ನೇ ತರಗತಿ ಸೇರ್ಪಡೆಗೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸಡಿಲ ಮಾಡುವಲ್ಲಿ ಸಫಲರಾಗಿದ್ದರು.

ಆದರೆ ಇದರಿಂದ ಪಾಠ ಕಲಿಯದ ಕೆಲವು ಪೂರ್ವ ಪ್ರಾಥಮಿಕ ಶಾಲೆಗಳು ಮತ್ತು ಪೋಷಕರು ಜೂನ್ 1ಕ್ಕೆ 4 ವರ್ಷ ತುಂಬಿರದಿದ್ದರೂ ಮಕ್ಕಳನ್ನು LKGಗೆ ದಾಖಲಿಸಿಕೊಳ್ಳುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತು ಈಗ ನಿಯಮಬಾಹಿರವಾಗಿ ಶಾಲೆಗೆ ದಾಖಲು ಮಾಡಿ ಆ ಬಳಿಕ ಮುಂದಿನ ಶೈಕ್ಷಣಿಕ ವರ್ಷಗಳ ಆರಂಭದಲ್ಲಿ ಮತ್ತೆ ಸರಕಾರದ ಮೇಲೆ ನಿಯಮ ಸಡಿಲಗೊಳಿಸುವಂತೆ ಒತ್ತಡ ಹೇರಿ ಗೊಂದಲ ಸೃಷ್ಟಿಸುವುದನ್ನು ತಪ್ಪಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ಮಕ್ಕಳ ದಾಖಲಾತಿಗೆ ವಯೋಮಿತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶವನ್ನು ನೀಡಿದೆ.

2026-27ನೇ ಶೈಕ್ಷಣಿಕ ಸಾಲಿನಿಂದ ಜೂನ್ 1ಕ್ಕೆ 6 ವರ್ಷ ತುಂಬಿರುವ ಮಕ್ಕಳನ್ನು ಮಾತ್ರ 1ನೇ ತರಗತಿಗೆ ಸೇರಿಸಿ ಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ LKG ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು UKG ಅಥವಾ ತತ್ಸಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಪರಿಗಣಿಸಬೇಕು ಎಂದು ಅದೇಶವನ್ನು ಹೊರಡಿಸಲಾಗಿದೆ.

WhatsApp Group Join Now
Telegram Group Join Now