ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ: 30 ಸಾವಿರ ಸ್ತ್ರೀಯರಿಗೆ ಸ್ವಯಂ ಉದ್ಯೋಗ ತರಬೇತಿ ಹಾಗೂ ಸಾಲ ಸೌಲಭ್ಯ; ಯಾರೆಲ್ಲಾ ಅರ್ಹರು?
ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ: ಸ್ತ್ರೀಯರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಗ್ರಾಮೀಣ ಸ್ತ್ರೀಯರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ರಾಜ್ಯದ ಬಜೆಟ್ನ ಭಾಗವಾಗಿ ಘೋಷಿಸಲಾದ ಈ ಯೋಜನೆಯು 100 ಗ್ರಾಮ ಪಂಚಾಯತ್ಗಳಲ್ಲಿ 30,000 ಸ್ತ್ರೀಯರಿಗೆ ಅವರ ಆಸಕ್ತಿಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಕೌಶಲ್ಯಗಳಲ್ಲಿ ತರಬೇತಿಯನ್ನು ಒದಗಿಸಲಿದೆ. ಇದು ಸ್ವ-ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಕ್ರಿಯಗೊಳಿಸುತ್ತದೆ.
ಏನು ಇದು ಪುಲೆ ಮಹಿಳಾ ಸಬಲೀಕರಣ ಯೋಜನೆ?
ಸ್ತ್ರೀಯರು ಆತ್ಮವಿಶ್ವಾಸದಿಂದ ತಮ್ಮದೇ ಆದ ವ್ಯವಹಾರ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಪೂರಕವಾಗಿ ‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ಸ್ತ್ರೀಯರಿಗೆ ಕೌಶಲ್ಯ ತರಬೇತಿಯ ಜೊತೆಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಸಾಲ ಸೌಲಭ್ಯವನ್ನು ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುವ ಮೂಲಕ, ಗ್ರಾಮೀಣ ಆಧಾರಿತ ಆರ್ಥಿಕತೆಯಲ್ಲಿ ಸ್ತ್ರೀಯರ ಪಾತ್ರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಕೌಶಲಾಭಿವೃದ್ಧಿ ನಿಗಮದಿಂದ ಯೋಜನೆಯ ಅನುಷ್ಠಾನ ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಅನೇಕ ಸ್ತ್ರೀಯರು ಕೃಷಿಯಿಂದ ಸುಸ್ಥಿರ ಆದಾಯವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಪರ್ಯಾಯ ಜೀವನೋಪಾಯವನ್ನು ಹುಡುಕುತ್ತಿದ್ದಾರೆ. ಉದ್ಯೋಗ-ಸಂಬಂಧಿತ ತರಬೇತಿ ಕಾರ್ಯಕ್ರಮಗಳಿಗೆ ಸೀಮಿತ ಪ್ರವೇಶದೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂತಹ ಕೇಂದ್ರಗಳ ತುರ್ತು ಅವಶ್ಯಕತೆಯಿದೆ. ಪ್ರತಿ ಕೇಂದ್ರವು 300 ಸ್ತ್ರೀಯರಿಗೆ ತರಬೇತಿಯನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಒಟ್ಟು 30,000 ಅರ್ಹ ಫಲಾನುಭವಿಗಳನ್ನು ಒಳಗೊಂಡಿರುತ್ತದೆ. ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ, RUDSETI/RSETI ಸಂಸ್ಥೆಗಳು ಹಾಗೂ ಇತರ ತಾಂತ್ರಿಕ ಬೆಂಬಲ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಸ್ವ-ಉದ್ಯೋಗ ಅವಕಾಶಗಳಿಗಾಗಿ ತರಬೇತಿ ನೀಡಲಾಗುವುದು.ಸರ್ಕಾರವು ತರಬೇತಿ ಪಡೆಯುವವರನ್ನು ಬ್ಯಾಂಕ್ಗಳೊಂದಿಗೆ ಸಂಪರ್ಕಿಸಲು ಮತ್ತು ಅವರ ಉದ್ಯಮಗಳನ್ನು ಪ್ರಾರಂಭಿಸಲು ಅವರಿಗೆ ಅನುಸರಣಾ ಬೆಂಬಲವನ್ನು ಒದಗಿಸಲು ಯೋಜಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣ ಯೋಜನೆಯ ಉದ್ದೇಶವೇನು?
• ಗ್ರಾಮೀಣ ಭಾಗದ ಸ್ತ್ರೀಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು.
• ಇದು 100 ಗ್ರಾಮ ಪಂಚಾಯತ್ಗಳಲ್ಲಿ 30,000 ಸ್ತ್ರೀಯರಿಗೆ ಉದ್ಯೋಗ ಆಧಾರಿತ ಕೌಶಲ್ಯಗಳಲ್ಲಿ ತರಬೇತಿ ನೀಡುವುದು
• ಆಯ್ದ ಗ್ರಾಮಗಳಲ್ಲಿ ಮಹಿಳಾ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಸ್ತ್ರೀಯರು ತಮ್ಮ ಆಕಾಂಕ್ಷೆಗಳು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ಪಡೆಯಬಹುದಾಗಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ತರಬೇತಿ ನೀಡುವುದು.
• ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಕಾರ್ಯಕ್ರಮಗಳ ಮೂಲಕ ಆರ್ಥಿಕ ಸಬಲೀಕರಣ.
ಈ ಯೋಜನೆಯ ಪ್ರಮುಖ ಅಂಶಗಳು.
• ಸ್ತ್ರೀಯರಿಗೆ ಸ್ವಯಂ ಉದ್ಯೋಗ:- ಸದರಿ ಈ ಯೋಜನೆಯ ಅಡಿಯಲ್ಲಿ ಪ್ರತಿ ಕೇಂದ್ರದಲ್ಲಿ 300 ಸ್ತ್ರೀಯರಿಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದ್ದು, ಒಟ್ಟು 30,000 ಸ್ತ್ರೀಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುವುದು.
• ತರಬೇತಿ ಕೇಂದ್ರಗಳು ಮತ್ತು ವ್ಯಾಪ್ತಿ:- ಈ ಯೋಜನೆಯ ಭಾಗವಾಗಿ 100 ಕೇಂದ್ರಗಳನ್ನು ಸ್ಥಾಪಿಸಲಾಗುವುದು. 29 ಜಿಲ್ಲೆಗಳಿಂದ 87 ಕೇಂದ್ರಗಳು (ಪ್ರತಿ ಜಿಲ್ಲೆಯಿಂದ 3 ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ) ಹಾಗೂ ಬೆಳಗಾವಿಯಿಂದ 7 ಮತ್ತು ತುಮಕೂರಿನಿಂದ 6 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.
• ತರಬೇತಿ ಮತ್ತು ಬೆಂಬಲ:- ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಸರ್ಕಾರೇತರ ಸಂಸ್ಥೆಗಳು ತರಬೇತಿ ನೀಡಲಿದೆ. ಪ್ರತಿ ಕೇಂದ್ರದಿಂದ 300 ಸ್ತ್ರೀಯರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಜೊತೆಗೆ ಬ್ಯಾಂಕ್ ಸಂಪರ್ಕ, ಸಾಲ ಸೌಲಭ್ಯ ಹಾಗೂ ಮಾರುಕಟ್ಟೆ ಬೆಂಬಲ ನೀಡುವುದು.
ಈ ಯೋಜನೆಗೆ ಸಾವಿತ್ರಿಬಾಯಿ ಫುಲೆ ಹೆಸರಿಟ್ಟಿದ್ದು ಯಾಕೆ?
ಭಾರತದಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಪ್ರವರ್ತಕರಾದ ಸಾವಿತ್ರಿಬಾಯಿ ಫುಲೆ ಅವರ ಹೆಸರನ್ನು ಯೋಜನೆಗೆ ಇಡಲಾಗಿದೆ. ಸಾವಿತ್ರಿಬಾಯಿ ಫುಲೆ (1831-1897) ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಮತ್ತು ಮಹಿಳಾ ಶಿಕ್ಷಣದ ಪ್ರವರ್ತಕಿಯಾಗಿಯಾಗಿದ್ದಾರೆ. ತಮ್ಮ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಮಹಾರಾಷ್ಟ್ರದಲ್ಲಿ 1848ರಲ್ಲಿ ದೇಶದ ಮೊದಲ ವಿದ್ಯಾರ್ಥಿನಿಯರ ಶಾಲೆಯನ್ನು ಸ್ಥಾಪಿಸಿ, ಜಾತಿ-ಲಿಂಗ ತಾರತಮ್ಯದ ವಿರುದ್ಧ ಹೋರಾಡಿ, ಕೆಳವರ್ಗದವರು ಮತ್ತು ಸ್ತ್ರೀಯರಿಗೆ ಶಿಕ್ಷಣವನ್ನು ಒದಗಿಸಿದರು. ವಿಧವೆಯರ ಕೇಶಮುಂಡನ, ಜಾತಿ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದರು. ಸತ್ಯಶೋಧಕ ಸಮಾಜದ ಮೂಲಕ ಸಮಾನತೆಗಾಗಿ ಶ್ರಮಿಸಿದ್ದಾರೆ. “ಕಾವ್ಯಫುಲೆ”ನಂತಹ ಕಾವ್ಯಕೃತಿಗಳನ್ನು ರಚಿಸಿ, 1897ರಲ್ಲಿ ಪ್ಲೇಗ್ ರೋಗಿಗಳ ಸೇವೆಯಲ್ಲಿ ನಿಧನರಾದ ಅವರು, ಇಂದಿಗೂ ಶಿಕ್ಷಣ ಕ್ರಾಂತಿ ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿ ಸ್ಫೂರ್ತಿಯಾಗಿದ್ದಾರೆ.
ಈ ಯೋಜನೆಯಲ್ಲಿ ಯಾವ ಯಾವ ತರಬೇತಿಯನ್ನು ನೀಡಲಾಗುತ್ತದೆ?
‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ’ಯಡಿ ನೀಡಲಾಗುವ ತರಬೇತಿ ಪ್ರಸ್ತುತ ಬೇಡಿಕೆಯ ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರಗಳಿಗೆ ಹೊಂದಿಕೊಂಡಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 1-3 ತಿಂಗಳ ಕಾಲದ ತರಬೇತಿ (ಕೋರ್ಸ್ ಅನುಸಾರ) ಇರಲಿದೆ. ಪ್ರಮುಖ ತರಬೇತಿ ಕ್ಷೇತ್ರಗಳು ಈ ಕೆಳಗಿನಂತಿವೆ.
• ಜ್ಯಾಂ, ಉಪ್ಪಿನಕಾಯಿ, ಹಪ್ಪಳ ತಯಾರಿಯಂತಹ ಆಹಾರ ಸಂಸ್ಕರಣೆ ಉದ್ಯಮ
• ಹೊಲಿಗೆ, ಉಡುಪು ತಯಾರಿಕೆ
• ಹಸ್ತಕಲಾ ಮತ್ತು ಕುಸುರಿ ಕಲೆ ಉದ್ಯಮ
• ಬ್ಯೂಟಿ ಪಾರ್ಲ್ರ’ನಂತಹ ಸೌಂದಯ ಮತ್ತು ಮಹಿಳಾ ಸೇವೆಗಳು
• ಸಣ್ಣ ಪ್ಯಾಕೇಜಿಂಗ್, ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ
• ಡೇಟಾ ಎಂಟ್ರಿ, ಕಂಪ್ಯೂಟರ್ ಕೋರ್ಸ್
• ಸಾಲ ಮತ್ತು ಮಾರುಕಟ್ಟೆ ಸಹಾಯ
ಬ್ಯಾಂಕುಗಳಿಂದ ಸುಲಭದ ರೀತಿಯಲ್ಲಿ ಸಾಲ ಸೌಲಭ್ಯ.
ತರಬೇತಿ ಪೂರೈಸಿದ ಬಳಿಕ ಸ್ತ್ರೀಯರಿಗೆ ಸ್ಥಳೀಯ ಸಹಕಾರ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕೈಗಾರಿಕಾ ಉದ್ದೇಶಕ್ಕಾಗಿ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಈ ಯೋಜನೆಯ ವಿಶೇಷತೆ ಏನೆಂದರೆ ತರಬೇತಿ ನಿಗಮಗಳು ಹಣಕಾಸು ಮಾರ್ಗದರ್ಶನವನ್ನು ನೀಡುತ್ತವೆ. ಉತ್ಪನ್ನ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆ ಮತ್ತು ಇ-ಕಾಮರ್ಸ್ ತಾಣಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಯುವ ಮಹಿಳೆಯರು ಉದ್ಯಮ ಆರಂಭಿಸಲು ಪ್ರೇರಣೆ ನೀಡಲಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಪ್ರಸ್ತುತ ಯೋಜನೆ ಪ್ರಾಯೋಗಿಕ ಹಂತದಲ್ಲಿ ಇರುವ ಕಾರಣ ಆಯ್ದ ಗ್ರಾಮಗಳಲ್ಲಿ ಮಾತ್ರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಗೆ ಆಯ್ಕೆಯಾದ ಗ್ರಾಮಗಳ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಕೌಶಲ್ಯ ವಿಕಾಸ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಗ್ರಾಮ ಪಂಚಾಯಿತಿ ಅಥವಾ ತಹಶೀಲ್ದಾರ್ ಕಚೇರಿ ಮುಖಾಂತರ ಈ ಯೋಜನೆಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.ಈ ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿ ಇರುವುದರಿಂದ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಡಿಜಿಟಲ್ ಅರ್ಜಿ ಪ್ರಕ್ರಿಯೆ (online registration) ಪ್ರಾರಂಭವಾಗಲಿದೆ.
ಈ ಯೋಜನೆಗೆ ಅಗತ್ಯವಿರುವ ದಾಖಲೆಗಳು ಯಾವವು.
• ಆಧಾರ್ ಕಾರ್ಡ್
• ವೋಟರ್ ಐಡಿ
• ರೇಷನ್ ಕಾರ್ಡ್
• ಬ್ಯಾಂಕ್ ಖಾತೆ ವಿವರ
ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ ಪ್ರಮುಖ ಗುಣಲಕ್ಷಣಗಳು.
• ಯೋಜನೆಯ ಹೆಸರು:-ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ.
• ಉದ್ದೇಶ:-ಗ್ರಾಮೀಣ ಪ್ರದೇಶದ ಸ್ತ್ರೀಯರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸುವುದು, ಸ್ವ-ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು.
• ವ್ಯಾಪ್ತಿ:-29 ಜಿಲ್ಲೆಗಳ 100 ಗ್ರಾಮ ಪಂಚಾಯತ್ಗಳಲ್ಲಿ (87 ಕೇಂದ್ರಗಳು: ಪ್ರತಿ ಜಿಲ್ಲೆಗೆ 3; ಬೆಳಗಾವಿ: 7 ಕೇಂದ್ರಗಳು; ತುಮಕೂರು: 6 ಕೇಂದ್ರಗಳು).
• ಫಲಾನುಭವಿಗಳು:-30,000 ಸ್ತ್ರೀಯರು (ಪ್ರತಿ ತರಬೇತಿ ಕೇಂದ್ರಕ್ಕೆ 300 ಸ್ತ್ರೀಯರು).
• ಅನುಷ್ಠಾನ ಸಂಸ್ಥೆಗಳು:-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, RUDSETI/RSETI ಮತ್ತು ಇತರ ತಾಂತ್ರಿಕ ಬೆಂಬಲ ಸಂಸ್ಥೆಗಳು.
• ತರಬೇತಿಗಳು:-ಆಹಾರ ಸಂಸ್ಕರಣೆ (ಜ್ಯಾಮ್, ಉಪ್ಪಿನಕಾಯಿ, ಹಪ್ಪಳ), ಹೊಲಿಗೆ ಮತ್ತು ಉಡುಪು ತಯಾರಿಕೆ, ಹಸ್ತಕಲೆ – ಸೌಂದರ್ಯ ಸೇವೆಗಳು – ಸಣ್ಣ ಪ್ಯಾಕೇಜಿಂಗ್ ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಕೋರ್ಸ್ಗಳು
• ಆರ್ಥಿಕ ಬೆಂಬಲ:-ಸಹಕಾರ, ಗ್ರಾಮೀಣ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ.