ಕಿತ್ತೂರು ರಾಣಿ ಚನ್ನಮ್ಮ (Kittur Rani Channamma) ಬಾಲಕಿಯರ ಸೈನಿಕ ವಸತಿ ಶಾಲೆ,6ನೇ ತರಗತಿಗೆ ಅಖಿಲ ಭಾರತ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ.2024-25.

ಕಿತ್ತೂರು ರಾಣಿ ಚನ್ನಮ್ಮ (Kittur Rani Channamma) ಬಾಲಕಿಯರ ಸೈನಿಕ ವಸತಿ ಶಾಲೆ,6ನೇ ತರಗತಿಗೆ ಅಖಿಲ ಭಾರತ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ.2024-25.

Kittur Rani Channamma

ಕಿತ್ತೂರು ರಾಣಿ ಚನ್ನಮ್ಮ ( Kittur Rani Channamma) ಬಾಲಕಿಯರ ಸೈನಿಕ ವಸತಿ ಶಾಲೆ   ಧೇಯೋದ್ದೇಶ :

ಕಿತ್ತೂರ ರಾಣಿ ಚನ್ನಮ್ಮ ( Kittur Rani Channamma) ಬಾಲಕಿಯರ ಸೈನಿಕ ವಸತಿ ಶಾಲೆಯು ಬಾಲಕಿಯರಿಗಾಗಿಯೇ ಇರುವ ಭಾರತದ ಏಕಮೇವ ಪಬ್ಲಿಕ್ ಶಾಲೆಯಾಗಿದ್ದು ಸೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವಂತಹ ಗುರಿ ಹೊಂದಲಾಗಿದೆ. ಶೈಕ್ಷಣಿಕ ವರ್ಷ 2025-26 ನೆಯ ಸಾಲಿಗೆ 6ನೆಯ ವರ್ಗದ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆಯಲಾಗಿದ್ದು ಅಖಿಲ ಭಾರತ ಪ್ರವೇಶ ಪರೀಕ್ಷೆಯು ಲಿಖಿತ, ದೇಹದಾರ್ಢತೆ, ವೈದ್ಯಕೀಯ ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷಾ ದಿನಾಂಕ:


2 ನೆಯ ಫೆಬ್ರುವರಿ 2025

ಪರೀಕ್ಷಾ ವಿಧಾನ:

ಓ.ಎಮ್.ಆರ್.ಮಾದರಿ

ಮಾಧ್ಯಮ:


ಇಂಗ್ಲಿಷ್ ಅಥವಾ ಕನ್ನಡ

ಪರೀಕ್ಷಾ ಕೇಂದ್ರಗಳು

ಕಿತ್ತೂರ, ವಿಜಯಪುರ, ಬೆಂಗಳೂರು, ಕಲಬುರಗಿ [ಕರ್ನಾಟಕದಲ್ಲಿ ಮಾತ್ರ]

ವಯೋಮಿತಿ

ಜೂನ್ 1, 2013 ಮತ್ತು ಮೇ 31, 2015ರ ನಡುವೆ ಜನಿಸಿದ 5ನೆಯ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಪರೀಕ್ಷಾ ಶುಲ್ಕ

ರೂ.2000/-, (ರೂ.1,600/-ಪಜಾ/ಪಪಂ ಅಭ್ಯರ್ಥಿಗಳು, ಕರ್ನಾಟಕದ ರಹವಾಸಿಗಳು ಮಾತ್ರ ಇತ್ತೀಚಿನ ಅಧಿಕೃತ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಲಗತ್ತಿಸಬೇಕು)

ಶುಲ್ಕ ವಿವರ

ರೂ. 2,24,300/-(ಊಟ, ವಸತಿ, ಸಮವಸ್ತ್ರ ಮತ್ತು ಇತರೆ ಠೇವಣಿಗಳು ಸೇರಿ) ಶೈಕ್ಷಣಿಕ ಸಾಮಗ್ರಿ ಮತ್ತು ಇತರೆ ಶುಲ್ಕ ಹೊರತುಪಡಿಸಿ.

ಮೀಸಲಾತಿ

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ತಲಾ ಎರಡು ಸ್ಥಾನಗಳನ್ನು ಕಿತ್ತೂರು ಹೋಬಳಿ ಮತ್ತು ರಕ್ಷಣಾ ಸಿಬ್ಬಂದಿ ವರ್ಗದ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಬಾಲಕಿಯರಿಗೆ ಗರಿಷ್ಠ ಮೂರು ಸ್ಥಾನಗಳವರೆಗೆ ಮೀಸಲಾತಿ ಲಭ್ಯವಿದೆ. (ಪ್ರಮಾಣ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಲಗತ್ತಿಸಬೇಕು).

ವಿದ್ಯಾರ್ಥಿ ವೇತನ

ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ಯೋಜನೆಯು, ಕರ್ನಾಟಕ ರಾಜ್ಯದ ರಹವಾಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಪ್ರವೇಶ ಪಡೆದಂತ ಅಭ್ಯರ್ಥಿಗಳು ತಮ್ಮ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲಿ 12ನೆಯ ತರಗತಿಯವರೆಗೆ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಬೇಕಾಗುತ್ತದೆ. ವಿಫಲರಾದಲ್ಲಿ ಕರ್ನಾಟಕ ಸರ್ಕಾರದಿಂದ ಪಡೆದಂಥ ವಿದ್ಯಾರ್ಥಿವೇತನವನ್ನು ಸಂಪೂರ್ಣವಾಗಿ ಭರಿಸಬೇಕಾಗುತ್ತದೆ.

ವಿವರಣಾ ಪುಸ್ತಕದ ಹಾಗೂ ಅರ್ಜಿಫಾರ್ಮಗಳ ಮಾರಾಟ (ಆನ್‌ಲೈನ್ ಹಣ ಪಾವತಿಯಿಂದ)

• ದಂಡ ರಹಿತ


24 ಅಕ್ಟೋಬರ್ ರಿಂದ 15 ಡಿಸೆಂಬರ್ 2024.ರೂ. 2000/- (1600/- ಪ.ಜಾ/ಪ.ಪಂ. ದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು) ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 20 ಡಿಸೆಂಬರ್ 2024

• ದಂಡ ಸಹಿತ

16 0 31 2 2024. ಡಿಸೆಂಬರ್ ರೂ. 2,500/- (2,100/- ಪ.ಜಾ/ಪ.ಪಂ. ದವರಿಗೆ. ಅವರು ಕರ್ನಾಟಕ ನಿವಾಸಿಯಾಗಿರಬೇಕು) ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05 ಜನವರಿ 2025

• ಸೂಚನೆ

ಆನ್‌ ಲೈನ್ ಹಣ ಪಾವತಿಯನ್ನು ಜಾಲತಾಣ: www.kittursainikschool.org ಮುಖಾಂತರ ಮಾಡಬೇಕು.
ಇದೇ ಜಾಲತಾಣದಿಂದಲೂ ವಿವರಣಾ ಪುಸ್ತಕ ಹಾಗೂ ಅರ್ಜಿಪಾರ್ಮಗಳನ್ನು ಪಡೆಯಬಹುದು.(Ph: 08288-234607)

• ಪೂರ್ಣ ಪ್ರಮಾಣ ಶುಲ್ಕ ಪಾವತಿ ಪ್ರವೇಶ ಯೋಜನೆ

ಅಭ್ಯರ್ಥಿಗಳ ಅರ್ಹತೆ (ಲಿಖಿತ ಪರೀಕ್ಷೆ+ಸಂದರ್ಶನ)ಯು ಸಾಧಾರಣ ಪ್ರತಿಭಾ ಮಟ್ಟದ್ದಾಗಿದ್ದಲ್ಲಿ ಸೀಟುಗಳು ಲಭ್ಯವಿದ್ದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಶುಲ್ಕ ಭರಿಸಿ ಪ್ರವೇಶ
ಪಡೆಯಬಹುದು. ಇಂಥ ಸ್ಥಳ ಕಾಯ್ದಿಡುವಿಕೆಗೆ ಪಾಲಕರು ತಮ್ಮ ಇಚ್ಛೆಯನ್ನು ಅರ್ಜಿಫಾರ್ಮಗಳಲ್ಲಿ ನಮೂದಿಸುವುದು.

ಪ್ರಮುಖ ಅಂಶಗಳು:

ಧಾರವಾಡದ ಹಂಚಿನಮನಿ ಸಂಸ್ಥೆಯೊಂದಿಗೆ ಶೈಕ್ಷಣಿಕ ಪಾಲುದಾರಿಕೆಯ ಅಡಿಯಲ್ಲಿ ಜೆ.ಇ.ಇ.(ಪ್ರಧಾನ)/
ಎ.ಐ.ಪಿ.ಎಮ್.ಟಿ./ಸಿ.ಇ.ಟಿ/ಎನ್.ಇ.ಇ.ಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಜ್ಞರಿಂದ ವಿಶೇಷ ತರಬೇತಿ
ತರಗತಿಗಳನ್ನು ನಡೆಸಲಾಗುವುದು, ಎನ್.ಸಿ.ಸಿ. ತರಬೇತಿ, ಗೈಡ್ಸ್ ತರಬೇತಿ, ಎನ್.ಡಿ. ಎ. ತರಬೇತಿ, ಕುದುರೆ ಸವಾರಿ, ಈಜು ತರಬೇತಿ ಅಲ್ಲದೆ ಯೋಗ, ಧ್ಯಾನ ಹಾಗೂ ಪ್ರಾರ್ಥನೆಗಳನ್ನು ಒಳಗೊಂಡಿದೆ.

• ಸೂಚನೆಗಳು

•ಪರೀಕ್ಷಾ ಮಾದರಿ, ಪ್ರವೇಶ ಮಾನದಂಡ ಮತ್ತು ಮತ್ತು ಪ್ರಶ್ನೆ ಪತ್ರಿಕೆಗಳ ವಸ್ತುತಾತ್ಪರ್ಯವನ್ನು ಬದಲಿಸುವ ಹಕ್ಕನ್ನು ಶಾಲಾ ಆಡಳಿತ ಮಂಡಳಿಯು ಹೊಂದಿದೆ
• ಪ್ರವೇಶ ಪತ್ರಗಳನ್ನು ಸಾಮಾನ್ಯ ಅಂಚೆ ಮುಖಾಂತರ ಕಳುಹಿಸಲಾಗುವದು.
• ವಿವರಣೆಪುಸ್ತಕ, ಪ್ರವೇಶಪತ್ರ ಹಾಗೂ ಫಲಿತಾಂಶ ಅಂಚೆಮೂಲಕ ತಲುಪದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ಶಾಲೆ ಜವಾಬ್ದಾರಿಯಾಗಿರುವುದಿಲ್ಲ.

• ಭರ್ತಿಮಾಡಿದ ಅರ್ಜಿಫಾರ್ಮಗಳ ಜೊತೆ ಸ್ವ-ವಿಳಾಸ ಹೊಂದಿದ ರೂ. 5/- ಸ್ಟಾಂಪ್ ಲಗತ್ತಿಸಿದ ಲಕೋಟೆಯನ್ನು
ಕಳುಹಿಸತಕ್ಕದ್ದು,
• ಕಿತ್ತೂರ ಹೋಬಳಿ ಹಾಗೂ ರಕ್ಷಣಾ ಸೇವಾ ಸಿಬ್ಬಂದಿ ಮೀಸಲಾತಿ ಬಯಸುವವರು ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.

• ಒಮ್ಮೆ ಸಂದಾಯಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರು ಪಾವತಿಸುವುದಿಲ್ಲ
• ಇತ್ತೀಚಿನ ಜಾತಿ ಪ್ರಮಾಣಿ ಪತ್ರಗಳನ್ನು ಸಲ್ಲಿಸಬೇಕು
• ಸುಳ್ಳು ವರಮಾನ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಕೂಡದು.

ಕಛೇರಿಯ ಸಮಯ:

ವಾರದ ದಿನಗಳಲ್ಲಿ ಸೋಮವಾರ ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂ.5.30ರ ವರೆಗೆ. ಭಾನುವಾರ / ರಜಾದಿನಗಳಂದು ತೆರೆದಿರುವುದಿಲ್ಲ.

More Information Click here… Mahitikannada.com

WhatsApp Group Join Now
Telegram Group Join Now

1 thought on “ಕಿತ್ತೂರು ರಾಣಿ ಚನ್ನಮ್ಮ (Kittur Rani Channamma) ಬಾಲಕಿಯರ ಸೈನಿಕ ವಸತಿ ಶಾಲೆ,6ನೇ ತರಗತಿಗೆ ಅಖಿಲ ಭಾರತ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ.2024-25.”

Leave a Comment