KPS SCHOOL:ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL), ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿಯನ್ನು ಹೆಚ್ಚಳ ಮಾಡುವ ಬಗ್ಗೆ ಆದೇಶ ಹೊರಡಿಸಿದೆ.

KPS SCHOOL:ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL), ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿಯನ್ನು ಹೆಚ್ಚಳ ಮಾಡುವ ಬಗ್ಗೆ ಆದೇಶ ಹೊರಡಿಸಿದೆ.

KPS SCHOOL

KPS SCHOOL:ರಾಜ್ಯದಲ್ಲಿ 2017-18ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಹಂತ-ಹಂತವಾಗಿ 308 ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL)ಗಳನ್ನು ಪ್ರಾರಂಭಿಸಲಾಗಿದೆ. ಈ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (KPS SCHOOL) ಪೂರ್ವ ಪ್ರಾಥಮಿಕ (LKG & UKG) ತರಗತಿಗಳನ್ನು ಹಾಗೂ ಈಗಾಗಲೇ ನಡೆಯುತ್ತಿರುವ ಕನ್ನಡ / ಇತರೆ ಮಾಧ್ಯಮದ ತರಗತಿಗಳೊಂದಿಗೆ ಒಂದನೇ ತರಗತಿಯಿಂದ ದ್ವಿ-ಭಾಷಾ ಮಾಧ್ಯಮ (Bilingual), ತರಗತಿಗಳನ್ನು ಸಹ ಪ್ರಾರಂಭಮಾಡಲಾಗಿದೆ.

ಮೇಲೆ ಓದಲಾದ ಕ್ರಮಾಂಕ (1) ರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL) ಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ವಿಧಿಸಿರುವ ಷರತ್ತುಗಳಂತೆ ಪೂರ್ವ ಪ್ರಾಥಮಿಕ ಒಂದು ವಿಭಾಗದಲ್ಲಿ 20 ರಿಂದ 30 ಮಕ್ಕಳನ್ನು ದಾಖಲಿಸತಕ್ಕದು. ಎಂದು ಆದೇಶಿಸಲಾಗಿದೆ

(2) ” vi ‘Adequate number of teachers qualifies for each subject shall be provided with overall pupil to teacher (PTR) no exceeding 30 for Primary classes, 40 for secondary classes and 60 for higher secondary classes d ಪ್ರಕಾರ ಸದರಿ ಶಾಲೆಗಳಲ್ಲಿ ನಡೆಯುತ್ತಿರುವ ಪೂರ್ವ ಪ್ರಾಥಮಿಕ LKG & UKG ಹಾಗೂ ದ್ವಿ-ಭಾಷಾ ಮಾಧ್ಯಮದ ತ ರಗತಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಗರಿಷ್ಠ 30 ಕ್ಕೆ ಸೀಮಿತಗೊಳಿಸಿದೆ.

ಮೇಲೆ ಓದಲಾದ ಕ್ರಮಾಂಕ (3) ರಲ್ಲಿ ದ್ವಿ-ಭಾಷಾ(Bilingual) ತರಗತಿಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತ (PTR ) 30:1ಕ್ಕೆ ಅನುಗುಣವಾಗಿ ಪ್ರತಿ ತರಗತಿಗೆ 30 ವಿದ್ಯಾರ್ಥಿಗಳಂತೆ ದಾಖಲಾತಿ ಪ್ರಕ್ರಿಯೆ ನಡೆಸುವುದು. ದಾಖಲಾತಿಗೆ ಹೆಚ್ಚಿನ ಬೇಡಿಕೆ ಬಂದಲ್ಲಿ ಲಾಟರಿ ಪ್ರಕ್ರಿಯೆ ಮೂಲಕ ದಾಖಲಾತಿ ನಡೆಸತಕ್ಕದು ಎಂದು ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (4) ರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL) ಗಳಲ್ಲಿ ಈಗಾಗಲೇ ಪ್ರಾರಂಭಿಸಿರುವ ದ್ವಿ-ಭಾಷಾ ಮಾಧ್ಯಮದ ತರಗತಿಗಳ ಜೊತೆಯಲ್ಲಿ ದಾಖಲಾತಿ ಹೆಚ್ಚಳದಿಂದಾಗಿ ಒಟ್ಟು 42 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) & 51 ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL)ಗಳಲ್ಲಿ 1 ನೇ ತರಗತಿ ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಸಂಪನ್ಮೂಲಗಳ ಗರಿಷ್ಠ ಬಳಕೆ ಮಾಡಿ ಹೆಚ್ಚಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಹಾಗೂ ಸಾಂವಿಧಾನಕ ಭಾದ್ಯತೆಯನ್ನು ಹೊಂದಿರುತ್ತದೆ. ಕೇಂದ್ರಿಯ ವಿದ್ಯಾಲಯ ಮತ್ತು ನಮೋದಯ ಶಾಲೆಗಳು ಈ ರೀತಿ ಹೆಚ್ಚಿನ ಮಕ್ಕಳ ದಾಖಲಾತಿಗೆ ಅವಕಾಶ ಕಲ್ಪಿಸಿ, ಯಶಸ್ಸು ಹೊಂದಿವೆ.

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿನ ಆಂಗ್ಲ ಮಾಧ್ಯಮದ ದ್ವಿಭಾಷಾ ಮಾಧ್ಯಮ (Bilingual) ತರಗತಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾದ ಹಿನ್ನೆಲೆಯಲ್ಲಿ SDMC ಮತ್ತು ಪೋಷಕರ ಹಾಗೂ ಜನಪ್ರತಿನಿಧಿಗಳ ಬೇಡಿಕೆಯನುಸಾರ ಸದರಿ ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL) ಗಳಲ್ಲಿ ಎಲ್.ಕೆ.ಜಿ & ಪ್ರಾಥಮಿಕ ತರಗತಿಗಳಲ್ಲಿ ಪ್ರಸ್ತುತ ಗರಿಷ್ಠ 30 ವಿದ್ಯಾರ್ಥಿಗಳ ದಾಖಲಾತಿಯ ಮಿತಿ ಇದ್ದು, ಇದನ್ನು ಹೆಚ್ಚಿಸಲು ಕೋರಿರುತ್ತಾರೆ. ಈ ಹಿನ್ನಲೆಯಲ್ಲಿ ಸದರಿ, ಕರ್ನಾಟಕ ಪಬ್ಲಿಕ್ ಶಾಲೆ (KPS SCHOOL) ಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ 10ನೇ ತರಗತಿಯವರೆಗೆ, ತರಗತಿವಾರು ವಿದ್ಯಾರ್ಥಿಗಳ ದಾಖಲಾತಿ 50 ಕ್ಕೆ ಹೆಚ್ಚಳ ಮಾಡುವ ಸಂಬಂಧ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಂದ ಪ್ರಸ್ತಾವನೆ ಸ್ವೀಕತವಾಗಿರುತ್ತದೆ. ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

Govt Order – CLICK HERE

WhatsApp Group Join Now
Telegram Group Join Now