KPSC Departmental Exam Notification 2024 For 2nd Session : ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನ ಎರಡನೇ ಅಧಿವೇಶನದ ಇಲಾಖಾ ಪರೀಕ್ಷೆ ಅಧಿಸೂಚನೆ ಪ್ರಕಟ: ಅರ್ಜಿ, ಪರೀಕ್ಷೆ ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ..

  KPSC Departmental Exam Notification 2024 For 2nd Session : ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನ ಎರಡನೇ ಅಧಿವೇಶನದ ಇಲಾಖಾ ಪರೀಕ್ಷೆ ಅಧಿಸೂಚನೆ ಪ್ರಕಟ: ಅರ್ಜಿ, ಪರೀಕ್ಷೆ ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ..

KPSC Departmental Exam Notification 2024

  KPSC Departmental Exam Notification 2024 For 2nd Session : ಕರ್ನಾಟಕ ಲೋಕಸೇವಾ ಆಯೋಗವು( KPSC) ಇದೀಗ 2024ನೇ ಸಾಲಿನ ಎರಡನೇ  ಅಧಿವೇಶನದ ಇಲಾಖಾ ಪರೀಕ್ಷೆಯ ಅಧಿಸೂಚನೆ ಬಿಡುಗಡೆ ಮಾಡಿದ್ದು. ಈ ಪರೀಕ್ಷೆ ತೆಗೆದುಕೊಳ್ಳಲು ಜನವರಿ 29 ರವರೆಗೆ ಕಾಲಾವಕಾಶ ನೀಡಿದ್ದು, ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂಣ೯ ಮಾಹಿತಿ ಇಲ್ಲಿದೆ ನೋಡಿ.

  ಕರ್ನಾಟಕ ಲೋಕಸೇವಾ ಆಯೋಗವು(KPSC) 2024ನೇ ಸಾಲಿನ ಎರಡನೇ ಅಧಿವೇಶನದ ಇಲಾಖಾ ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ / ಮಂಡಳಿ / ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳು / ಪ್ರಾಧಿಕಾರಗಳ ಖಾಯಂ ನೌಕರರು ತಮ್ಮ ಮುಂದಿನ ಜೀವನದ ಅಭಿವೃದ್ಧಿಗೆ, ಉನ್ನತ ಹುದ್ದೆಗೆ ಭಡ್ತಿ ಪಡೆಯಲು, ಅರ್ಹತೆ ಪಡೆಯಲು ಈ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಮತ್ತು ಪರೀಕ್ಷೆಯ ವೇಳಾಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ ನೋಡಿ.

  • Read more…

    2024-25 ನೇ ಸಾಲಿನಲ್ಲಿ ‘ ಓದು ಕರ್ನಾಟಕ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ  ಕುರಿತು ಯು ಟ್ಯೂಬ್ ಲೈವ್‌ನಲ್ಲಿ ಭಾಗವಹಿಸುವ ಬಗ್ಗೆ.

ಪರೀಕ್ಷೆ ನಡೆಸುವ ಪ್ರಾಧಿಕಾರ:ಕರ್ನಾಟಕ ಲೋಕಸೇವಾ ಆಯೋಗವು(KPSC)
• ಪರೀಕ್ಷೆ ಹೆಸರು: ಇಲಾಖಾ ಪರೀಕ್ಷೆಗಳು (ಎರಡನೇ ಅಧಿವೇಶನ ಪರೀಕ್ಷೆ – 2024)

ಪ್ರಮುಖ ದಿನಾಂಕಗಳು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 30-12-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29-01-2025
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 31-01-2025

ಅರ್ಜಿ ಸಲ್ಲಿಸುವ ವಿಧಾನ.

2024ನೇ ಸಾಲಿನ ಎರಡನೇ ಅಧಿವೇಶನದ ಇಲಾಖಾ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ http://www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಲಿಂಕ್‌ ಅನ್ನು ಡಿಸೆಂಬರ್ 30 ರಂದು ಆಯೋಗ ಆಕ್ಟಿವೇಟ್‌ ಮಾಡಲಿದೆ.

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸುವ ಇಲಾಖಾ ಪರೀಕ್ಷೆ ಬರೆಯಲು ಯಾರೆಲ್ಲಾ ಅರ್ಹರು?

ಸರ್ಕಾರಿ ನೌಕರರು.
• ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ / ಮಂಡಳಿ / ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳು / ಪ್ರಾಧಿಕಾರಗಳ ಖಾಯಂ ನೌಕರರು.
• ಗ್ರೂಪ್ ಡಿ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಕರ್ನಾಟಕ ಲೋಕಸೇವಾ ಆಯೋಗವ ( KPSC) ನಡೆಸುವ ಇಲಾಖಾ ಪರೀಕ್ಷೆ ಕೇಂದ್ರಗಳು.

ಕರ್ನಾಟಕ ಲೋಕಸೇವಾ ಆಯೋಗವು( KPSC) ಇಲಾಖಾ ಪರೀಕ್ಷೆಗಳನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸಲು ಉದ್ದೇಶಿಸಿದೆ. 1 ಹಂತದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. 2 ಹಂತದಲ್ಲಿ ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. 3 ಹಂತದ ಪರೀಕ್ಷಾ ಕೇಂದ್ರಗಳ ನಿಗದಿಪಡಿಸುವಿಕೆಯು ಆಯೋಗದ ತೀರ್ಮಾನಕ್ಕೊಳಪಟ್ಟಿರುತ್ತದೆ.

ಪಠ್ಯಕ್ರಮ.

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಪಠ್ಯಕ್ರಮವನ್ನು ಆಯೋಗದವ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಿಕೊಳ್ಳಬಹುದು.

ಪರೀಕ್ಷಾ ವೇಳಾಪಟ್ಟಿ.

2024ನೇ ಸಾಲಿನ ಎರಡನೇ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಒಟ್ಟು 03 ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಪ್ರಸ್ತುತ ಪರೀಕ್ಷೆಗಳ ವೇಳಾಪಟ್ಟಿಯನ್ನು ನಂತರದಲ್ಲಿ ಅಭ್ಯರ್ಥಿಗಳಿಗೆ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತ / ತಿದ್ದುಪಡಿಗೊಂಡಿದೆ. ಈ ಕುರಿತು ಹಾಗೂ ಪಠ್ಯಕ್ರಮವನ್ನು ಕೆಳಗಿನ ನೋಟಿಫಿಕೇಶನ್‌ನಲ್ಲಿ ಚೆಕ್‌ ಮಾಡಬಹುದು.

Click here to download

ಒಂದೊಂದು ಪತ್ರಿಕೆಗೆ ಒಂದೊಂದು ಪರೀಕ್ಷಾ ಶುಲ್ಕ ನಿಗದಿಯಾಗಿದೆ. ರೂ.50 ರಿಂದ 100 ವರೆಗೆ ಶುಲ್ಕ ನಿಗದಿ ಮಾಡಲಾಗಿದೆ. ಪರೀಕ್ಷೆ ವೇಳಾಪಟ್ಟಿಗಳನ್ನು ಮುಂದಿನ ದಿನಗಳಲ್ಲಿ ಪತ್ರಿಕೆವಾರು ಬಿಡುಗಡೆ ಮಾಡಲಾಗಿದೆ.

•  website link… Click here 

WhatsApp Group Join Now
Telegram Group Join Now

1 thought on “KPSC Departmental Exam Notification 2024 For 2nd Session : ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನ ಎರಡನೇ ಅಧಿವೇಶನದ ಇಲಾಖಾ ಪರೀಕ್ಷೆ ಅಧಿಸೂಚನೆ ಪ್ರಕಟ: ಅರ್ಜಿ, ಪರೀಕ್ಷೆ ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ..”

  1. Just wish to say your article is as astounding. The clearness in your post is simply excellent and i could assume you’re an expert on this subject. Fine with your permission let me to grab your RSS feed to keep updated with forthcoming post. Thanks a million and please continue the gratifying work.

    Reply

Leave a Comment