KPSC: ಗ್ರೂಪ್ ಸಿ ಹುದ್ದೆಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟ. ಪರೀಕ್ಷೆ ಮಾದರಿ ಹೇಗಿರುತ್ತೆ? ಇಲ್ಲಿದೆ ನೂತನ ಮಾಹಿತಿ-2024.
ಕೆಪಿಎಸ್‌ಸಿ ಗ್ರೂಪ್ ಸಿ ಪರೀಕ್ಷೆ ಹೇಗಿರುತ್ತೆ? ಪದವಿ, ಪದವಿ ಪೂರ್ವ ಮಟ್ಟದ ಹುದ್ದೆಗೆ ವಿಭಿನ್ನತೆ ಇರುತ್ತಾ ಈ ಪರೀಕ್ಷೆ ಮಾದರಿ? ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಈ ಕೆಳಗೆ ನೀಡಲಾಗಿದೆ.
KPSC ಯು ಕಳೆದ ಮಾರ್ಚ್ ತಿಂಗಳಲ್ಲಿ ಹೊರಡಿಸಲಾದ ಹಲವು ಅಧಿಸೂಚನೆಗಳ ಪೈಕಿ ಕೆಲವು ತಾಂತ್ರಿಕ ಹಾಗೂ ತಾಂತ್ರಿಕೇತರ ಗ್ರೂಪ್ ಸಿ ವೃಂದದ ಹುದ್ದೆಗಳು ಕೂಡ ಇವೆ. ಅಂತಹ ಯಾವುದಾದರೂ ಹುದ್ದೆಗೆ ಅರ್ಜಿ ಹಾಕಿದ್ದರೆ ನೀವು ಪರೀಕ್ಷೆಯ ಮಾದರಿ ತಿಳಿಯುವುದು ಮುಖ್ಯವಾಗಿದೆ.. ಸದ್ಯ ಈಗಾಗಲೇ ಲೋಕಸೇವಾ ಆಯೋಗದ ಕೆಲವು ಹುದ್ದೆಗಳಿಗೆ ಎಕ್ಸಾಂ ನಡೆಸಿದ್ದು, ಇನ್ನು ಕೆಲವು ಗ್ರೂಪ್ ಸಿ ಹುದ್ದೆಗಳಿಗೆ ಪರೀಕ್ಷೆಗಳನ್ನು ಜರುಗಿಸುವುದು ಬಾಕಿ ಇದೆ.
ಕರ್ನಾಟಕ ಲೋಕಸೇವಾ ಆಯೋಗದ ಪದವಿ ಮಟ್ಟದ ಗ್ರೂಪ್ ಸಿ ವೃಂದದ ಹುದ್ದೆಗಳು, ಪದವಿ ಪೂರ್ವ ಮಟ್ಟದ ಗ್ರೂಪ್ ಸಿ ವೃಂದದ ಹುದ್ದೆಗಳಿಗೆ ಈ ವರ್ಷ ನೇಮಕಾತಿ ಅಧಿಸೂಚನೆ ಪ್ರಕಟ ಮಾಡಿದೆ. ನೀವು ಇನ್ನು ಸಹ ಪರೀಕ್ಷೆ ಮಾದರಿ ಪದ್ದತಿ ತಿಳಿದಿಲ್ಲ ಎಂದರೆ ಈ ಕೆಳಗಿನಂತೆ ಪರೀಕ್ಷೆ ಮಾದರಿಗಳನ್ನು ತಿಳಿದುಕೊಳ್ಳುವುದು ಮುಖ್ಯ.
ಪರೀಕ್ಷೆ ಮಾದರಿ ಹೇಗಿರುತ್ತೆ?
ಗ್ರೂಪ್ ಸಿ ತಾಂತ್ರಿಕ ಹುದ್ದೆಗೆ ಎರಡು ಪತ್ರಿಕೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಜರುಗಿಸಲಾಗುತ್ತದೆ.
ಪತ್ರಿಕೆ -1 : ಸಾಮಾನ್ಯ ಪತ್ರಿಕೆ (ಪರೀಕ್ಷಾ ಸಮಯ 01:30 ಗಂಟೆ)
ಪತ್ರಿಕೆ -2 : ಸಂವಹನ ಪತ್ರಿಕೆ (ಪರೀಕ್ಷಾ ಸಮಯ 02 ಗಂಟೆ)
ಪ್ರತಿಯೊಂದು ಪ್ರಶ್ನೆ ಪತ್ರಿಕೆಗಳು 100 ಅಂಕಗಳಿಗೆ ಪ್ರಶ್ನೆಗಳನ್ನು ಹೊಂದಿರುತ್ತವೆ.
ಸಂವಹನ ಪತ್ರಿಕೆಯು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಗಣಕಯಂತ್ರ ಜ್ಞಾನ ಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
ಸ್ಪರ್ಧಾತ್ಮಕ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕ ನೀಡುವ ಪದ್ದತಿ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.
ಸೂಚನೆಗಳನ್ನು ಒಂದ್ಸಲ ನೋಡಿ ಬಿಡಿ.
ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಮಟ್ಟದ್ದಾಗಿರುತ್ತದೆ. ಪದವಿ ವಿದ್ಯಾರ್ಹತೆಯುಳ್ಳ ಹುದ್ದೆಗಳಿಗೆ ಒಂದು ಪರೀಕ್ಷೆ ಇರುತ್ತದೆ. ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಹುದ್ದೆಗಳಿಗೆ ಒಂದು ಪರೀಕ್ಷೆ ಇರುತ್ತದೆ.
ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎರಡೂ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.
ಪದವಿ ಹಂತದ ಎಷ್ಟೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಒಂದೇ ಪರೀಕ್ಷೆ ಬರೆಯಬೇಕಾಗುತ್ತದೆ. ಹಾಗೂ ಈ ಪರೀಕ್ಷೆಯ ಫಲಿತಾಂಶವನ್ನು ಎಲ್ಲಾ ಹುದ್ದೆಗಳಿಗೂ ಪರಿಗಣಿಸಲಾಗುತ್ತದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹೇಗಿರುತ್ತೆ?
SSLC ತರಗತಿ ಅಥವಾ ತತ್ಸಮಾನವೆಂದು ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಇತರೆ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಿಂತ ಮೇಲ್ಮಟ್ಟ ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ ಅಥವಾ ಮೇಲಿನ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಪಾಸಾಗಿರುವ ಅಥವಾ ಕರ್ನಾಟಕ ಲೋಕಸೇವಾ ಆಯೋಗ ಈ ಹಿಂದೆ ನಡೆಸಲಾದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಾಸಾಗಿದ್ದಲ್ಲಿ ಅಂತಹವರಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
ಒಂದು ವೇಳೆ ಈ ಯಾವುದೇ ಪರೀಕ್ಷೆಗಳು, ತರಗತಿಗಳಲ್ಲಿ ಕನ್ನಡ ಭಾಷೆ ವ್ಯಾಸಂಗ ಮಾಡದಿದ್ದಲ್ಲಿ, 150 ಅಂಕಗಳಿಗೆ ನಡೆಸುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಹಾಗೂ ಕನಿಷ್ಠ 50 ಅಂಕಗಳನ್ನು ಪಡೆದು ಪಾಸ್ ಆಗಲೇಬೇಕು. ಆದರೆ ಈ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ವಿವರ ಹೀಗಿದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ ಬೆಳಗಾವಿ, ಕಲಬುರ್ಗಿ ಮತ್ತು ಆಯೋಗವು ನಿಗದಿಪಡಿಸಲಾದ ಇತರೆ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು.
ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತದೆ.
ಪಠ್ಯಕ್ರಮ ಹೇಗೆ ಚೆಕ್ ಮಾಡುವುದು?
KPSC ವೆಬ್‌ಸೈಟ್ https://www.kpsc.kar.nic.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.