KPSC Recruitment: 2025ರಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ KPSC ಪರೀಕ್ಷೆಗಳು.
KPSC Recruitment: 2025ರಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ KPSC ಪರೀಕ್ಷೆಗಳು.
KPSC Recruitment:ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC)ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. KPSC ಡಿಸೆಂಬರ್ ತಿಂಗಳಿನಲ್ಲಿ ಮುಂಬರುವ ವರ್ಷದಲ್ಲಿ ನಡೆಸುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಇದರಿಂದಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಹಾಯವಾಗುತ್ತದೆ.
ಈಗ KPSC ಕಾರ್ಯದರ್ಶಿ ರಮಣದೀಪ್ ಚೌಧರಿ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಅದರಲ್ಲಿ ಆಯೋಗದಿಂದ ಅಧಿಸೂಚಿಸಲಾದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ತಾತ್ಪೂರ್ವಿಕ ಪರೀಕ್ಷಾ ವೇಳಾಪಟ್ಟಿ ಎಂದು ಮಾಹಿತಿಯನ್ನು ನೀಡಿದ್ದಾರೆ.
2025ರ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಲಿರುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದವರು ಪರೀಕ್ಷೆಗೆ ತಯಾರಿಯನ್ನು ನಡೆಸಬಹುದಾಗಿದೆ.
1. ಜನವರಿ 2025ರಲ್ಲಿ ಅಧಿಸೂಚನೆ ಸಂಖ್ಯೆ ಮತ್ತು ದಿನಾಂಕ ಪಿಎಸ್ಸಿ 1 ಆರ್ಟಿಬಿ-1/2023. ದಿನಾಂಕ 13-03-2024ರಂತೆ ಕನ್ನಡ ಭಾಷಾ ಪರೀಕ್ಷೆ (ಉಳಿಕೆ ಮೂಲ ವೃಂದ) 18/1/2025 ಶನಿವಾರ, ಮಧ್ಯಾಹ್ನ. ಸಾಮಾನ್ಯ ಪತ್ರಿಕೆ – 1 (ಉಳಿಕೆ ಮೂಲ ವೃಂದ) 19/1/2025 ಪೂರ್ವಾಹ್ನ ನಡೆಸಲಾಗುತ್ತದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಹೇಳಿದೆ.
2 ಪಿಎಸ್ಸಿ 1709 ಇ(1)/2024-25. ದಿನಾಂಕ19/11/2024ರ ಅಧಿಸೂಚನೆಯಂತೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು (Group-A) ಮತ್ತು ಲೆಕ್ಕಪರಿಶೋಧನಾಧಿಕಾರಿ (Group-B) -15 ಹುದ್ದೆಗಳಿಗೆ ಮುಖ್ಯ ಪರೀಕ್ಷೆ (ಕಲ್ಯಾಣ ಕರ್ನಾಟಕ ವೃಂದ) 21/1/2025ರ (ಮಂಗಳವಾರ) ರಿಂದ 24/01/2025ರ (ಶುಕ್ರವಾರ)ದ ತನಕ ನಡೆಸಲಾಗುತ್ತದೆ.
3. ಪಿಎಸ್ಸಿ 1 ಆರ್ಟಿಬಿ-1/2023. ದಿನಾಂಕ 13-03-2024ರ ಅಧಿಸೂಚನೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು 21 ಹುದ್ದೆಗಳು (ಉಳಿಕೆ ಮೂಲ ವೃಂದ). 25/1/2025 (ಶನಿವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2 ಪರೀಕ್ಷೆ ನಡೆಸಲಾಗುತ್ತದೆ.
4 ಪಿಎಸ್ಸಿ 1710 ಇ (1)/ 2024-25 ದಿನಾಂಕ 19-11-2024ರ ಅಧಿಸೂಚನೆಯಂತೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು (Group-A) ಮತ್ತು ಲೆಕ್ಕಪರಿಶೋಧನಾಧಿಕಾರಿ (Group-B) – 97 ಹುದ್ದೆಗಳಿಗೆ ಮುಖ್ಯ ಪರೀಕ್ಷೆ (ಉಳಿಕೆ ಮೂಲ ವೃಂದ). 27/1/2025 (ಸೋಮವಾರ) ರಿಂದ 30/1/2025 (ಗುರುವಾರ)ದ ತನಕ ಪರೀಕ್ಷೆ ನಡೆಸಲಾಗುತ್ತದೆ.
5. ಪಿಎಸ್ಸಿ 1 ಆರ್ಟಿಬಿ-1/ 2023. ದಿನಾಂಕ 13-03-2024. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) – 92 ಹುದ್ದೆಗಳು (ಉಳಿಕೆ ಮೂಲ ವೃಂದ). 31/1/2025 (ಶುಕ್ರವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.
6. ಫೆಬ್ರವರಿ 2025: ಪಿಎಸ್ಸಿ/ 1640 (E)/ 2024-25 ದಿನಾಂಕ 18-09-2024. ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1) – 30 ಹುದ್ದೆಗಳು (ಉಳಿಕೆ ಮೂಲ ವೃಂದ). 4/2/2025ರಿಂದ 7/2/2025ರ ತನಕ ಪರೀಕ್ಷೆಗಳು ನಡೆಯಲಿವೆ.
7. ಪಿಎಸ್ಸಿ 1 ಆರ್ಟಿಬಿ-1/2023. ದಿನಾಂಕ 13-03-2024ರ ಅಧಿಸೂಚನೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು – 20 ಹುದ್ದೆಗಳು (ಉಳಿಕೆ ಮೂಲ ವೃಂದ). ಪರೀಕ್ಷೆಗಳು 2/2/2025 (ಭಾನುವಾರ) (ಪೂರ್ವಾಹ್ನ) ನಿರ್ದಿಷ್ಟ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.
- Click here…
8. ಪಿಎಸ್ಸಿ 1 | ಆರ್ಟಿಬಿ-1/ 2023. ದಿನಾಂಕ 13-03-2024. ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) (ವಿಭಾಗ-1) – 10 ಹುದ್ದೆಗಳು (ಉಳಿಕೆ ಮೂಲ ವೃಂದ). ಪರೀಕ್ಷೆಗಳು 8/2/2025 (ಶನಿವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2.
9. ಪಿಎಸ್ಸಿ/ 1639 ಇ (1)/2024-25 ದಿನಾಕ 18-09-2024. ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1) – 12 ಹುದ್ದೆಗಳು (ಕಲ್ಲಾಣ ಕರ್ನಾಟಕ ವೃಂದ). ಪರೀಕ್ಷೆಗಳು 10/2/2025 ರಿಂದ 13/2/2025ರ ತನಕ ನಡೆಯಲಿವೆ.
10. ಪಿಎಸ್ಸಿ 1 | ಆರ್ಟಿಬಿ-1/ 2023. ದಿನಾಂಕ 13-03-2024ರ ಅಧಿಸೂಚನೆಯಂತೆ ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) 90 ಹುದ್ದೆಗಳು (ಉಳಿಕೆ ಮೂಲ ವೃಂದ). ಪರೀಕ್ಷೆಗಳು 16/2/2025 (ಭಾನುವಾರ) (ಪೂರ್ವಾಹ್ನ ನಿರ್ದಿಷ್ಟ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.
- Click here…
Karnataka State Employees Group Insurance Scheme (Second Amendment) Rules, 2024.- Draft Rules
11. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 24 ಹುದ್ದೆಗಳು (ಉಳಿಕೆ ಮೂಲ ವೃಂದ). ಪರೀಕ್ಷೆಗಳು 18/2/2025 (ಮಂಗಳವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2.
12. ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿನ ಕಾರ್ಖಾನೆಗಳ ಸಹಾಯಕ ನಿರ್ದೇಶಕರು – 7 ಹುದ್ದೆಗಳು (ಉಳಿಕೆ ಮೂಲ ವೃಂದ). ಪರೀಕ್ಷೆಗಳು 19/2/2025 (ಬುಧವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2.
13. ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿನ ಬಾಯ್ಲರುಗಳ ಸಹಾಯಕ ನಿರ್ದೇಶಕರು – 3 ಹುದ್ದೆಗಳು (ಉಳಿಕೆ ಮೂಲ ವೃಂದ). ಪರೀಕ್ಷೆಗಳು 20/2/2025 (ಗುರುವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2.
14. ಅಂತರ್ಜಲ ನಿರ್ದೇಶನಾಲಯದಲ್ಲಿನ ಭೂ ವಿಜ್ಞಾನಿ 10 ಹುದ್ದೆಗಳು (ಉಳಿಕೆ ಮೂಲ ವೃಂದ). ದಿನಾಂಕ 21/2/2025 (ಶುಕ್ರವಾರ) (ಅಪರಾಹ್ನ) ನಿರ್ದಿಷ್ಟ ಪತ್ರಿಕೆ-2 ಪರೀಕಷೆಗಳು.
15.ಪಿಎಸ್ಸಿ 1 ಆರ್ಟಿಬಿ-2/ 2023. ದಿನಾಂಕ 13-03-2024. ಕನ್ನಡ ಭಾಷಾ ಪರೀಕ್ಷೆ (ಹೈ.ಕ.). ದಿನಾಂಕ 22/2/2025 (ಶನಿವಾರ) (ಅಪರಾಹ್ನ).
16. ಸಾಮಾನ್ಯ ಪತ್ರಿಕೆ – 1 (ಹೈ.ಕ.). ದಿನಾಂಕ 23-02-2025 (ಭಾನುವಾರ) (ಪೂರ್ವಾಹ್ನ) ಪರೀಕ್ಷೆಗಳು ನಡೆಯಲಿವೆ.