Lecturers: ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರು(Lecturers) ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ-2025.
Lecturers:ಗೋಕಾಕ ಶಿಕ್ಷಣ ಸಂಸ್ಥೆಯ ಜೆ.ಎಸ್.ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಗೋಕಾಕ-591307 ಬಸವೇಶ್ವರ ವೃತ್ತ, ಫಾಲ್ಸ್ ರೋಡ್ ಜಿಲ್ಲಾ:ಬೆಳಗಾವಿ ರಾಜ್ಯ : ಕರ್ನಾಟಕ
ಸರ್ಕಾರದ ಪತ್ರ ಸಂಖ್ಯೆ : ಇಡಿ/357/ಯುಪಿಸಿ/2001 ದಿ : 19-12-2002, ಸರ್ಕಾರದ ಪತ್ರ ಸಂಖ್ಯೆ: ಇಡಿ/120/ಯುಪಿಸಿ/2018, ದಿ : 26-10-2018, ಸರ್ಕಾರದ ಸಂಖ್ಯೆ : ಡಿಪಿಎಆರ್/13/ಎಸ್.ಬಿ.ಸಿ/2001, ದಿ : 21-11-2001, ಮಾನ್ಯ ಆಯುಕ್ತರು ಇವರ ಸುತ್ತೂಲೆ ಸಂಖ್ಯೆ : ಕಾಶಿಇ/90/ಬ್ಯಾಹುಭ/2023-24/ಧಾವಿ/ನೇ.ವಿ-2 ದಿ. 10-09-2024ರ ಹಾಗೂ ಪ್ರಾ.ಜ.ನಿ, ಕಾ.ಶಿ.ಇ, ಧಾರವಾಡ ಕಾಶಿಇ/ಪ್ರಾಕಧಾ/477/ ಬ್ಯಾಕಲಾಗ/ಜಿಇಎಸ್-5/2023-24 ದಿನಾಂಕ 16-01-2025 ರನ್ವಯ ನಮ್ಮ ಅನುದಾನಿತ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಒಂದು ಬೋಧಕ ಮತ್ತು ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿರುವ ಒಂದು ಬೋಧಕೇತರ ಬ್ಯಾಕಲಾಗ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ವಿಳಾಸ, ಜಾತಿ, ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮೊದಲಾದ ದಾಖಲೆಗಳೊಂದಿಗೆ ದಿ. 02-04-2025 ರ ಒಳಗಾಗಿ ಚೇರಮನ್ನರು, ಆಡಳಿತ ಮಂಡಳಿ, ಗೋ.ಶಿ. ಸಂ. ಗೋಕಾಕ ಇವರ ಹೆಸರಿನಲ್ಲಿ ರೂ.2000/-ಬೋಧಕ ಹುದ್ದೆಗೆ ಮತ್ತು ರೂ.1000/-ಬೋಧಕೇತರ ಹುದ್ದೆಗೆ ಪೋಸ್ಟಲ್ ಆರ್ಡರ ಅಥವಾ ಬ್ಯಾಂಕಿನ ಡಿ.ಡಿ.ಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯ ಇನ್ನೊಂದು ಪ್ರತಿಯನ್ನು ಮಾನ್ಯ ಪ್ರಾದೇಶಿಕ ಜಂಟಿ ನಿರ್ದೆಶಕರು, ಕಾಲೇಜು ಶಿಕ್ಷಣ ಇಲಾಖೆ, ಧಾರವಾಡ ಇವರಿಗೆ ಕಳುಹಿಸಬೇಕು. ಅಪೂರ್ಣ ಅಥವಾ ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವದಿಲ್ಲ. ಈಗಾಗಲೇ ಸೇವೆಯಲ್ಲಿದ್ದವರು ತಮ್ಮ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಸರ್ಕಾರದ ನಿಯಮಾವಳಿಯ ಪ್ರಕಾರ ವೇತನ/ಇನ್ನಿತರ ಭತ್ಯೆಗಳು ಇರುತ್ತವೆ.