Lecturers: ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರು ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ-2025.
Lecturers:ಸರ್ಕಾರದ ಆದೇಶ ಸಂಖ್ಯೆ:ಇಪಿ01:ಟಿಪಿಯು:2024. ದಿನಾಂಕ: 22.11.2024 ಹಾಗೂ ಮಾನ್ಯ ನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ಪತ್ರ ಸಂಖ್ಯೆ: 2-1651774:໙໙໕:໑໖:30:໑໑: (2222)1:2825: ಆರ್ ಆ್ಯಂಡ್ ಜಿ:ದಿನಾಂಕ:13.02.2025 ರನ್ವಯ ನಮ್ಮ ಸಂಸ್ಥೆಯ ಆಧೀನದಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸೇವಾ ಸಮೀತಿ ಪದವಿಪೂರ್ವ ಕಾಲೇಜು ಮೋರಟಗಿ-586123 ತಾ: ಆಲಮೇಲ ಜಿ: ವಿಜಯಪುರ ಇಲ್ಲಿ ಖಾಲಿ ಇರುವ ದೈಹಿಕ-ಶಿಕ್ಷಣ ಉಪನ್ಯಾಸಕರ(Lecturers) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Lecturers: ಅರ್ಜಿ ಸಲ್ಲಿಸುವ ವಿಧಾನ .
ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಸ್ವ-ವಿವರಗಳೊಂದಿಗೆ ತಮ್ಮ ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣ ಪತ್ರ, ಜನ್ಮ ದಾಖಲೆ ಮತ್ತು ಇತರೇ ಚಟುವಟಿಕೆಗಳ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿದ ನಕಲುಗಳೊಂದಿಗೆ ಇತರೇ ಅಭ್ಯರ್ಥಿಗಳು ರೂ: 1000/- ಹಾಗೂ ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳು ರೂ. 500/-ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿ.ಯೊಂದಿಗೆ ಅಧ್ಯಕ್ಷರು, ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮೀತಿ ಮೋರಟಗಿ ಇವರ ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಜಾಹೀರಾತು ಪ್ರಕಟಣೆಗೊಂಡ 21 ದಿನಗಳೊಳಗಾಗಿ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದಿವಿ ಪೂರ್ವ (ಶಿಕ್ಷಣ) ಸರ್ಕಾರಿ ಬಾಲಕೀಯ ಪಪೂ ಕಾಲೇಜು ಆವರಣ ಗಾಂಧಿ ಚೌಕ ಹತ್ತಿರ, ವಿಜಯಪುರ ಇವರಿಗೆ ನಿಗದಿತ ಸಮಯದೊಳಗೆ ಸಲ್ಲಿಸಬೇಕು. ಅಪೂರ್ಣ ಮತ್ತು ನಿಗದಿತ ಅವಧಿಯೊಳಗೆ ತಲುಪದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಮಾತ್ರ ನೊಂದಾಯಿತ ಅಂಚೆಯ ಮೂಲಕ ಸಂದರ್ಶನಕ್ಕೆ ಕರೆಯಲಾಗುವುದು.
Lecturers: ವಿಶೇಷ ಸೂಚನೆ.
ಮೇಲ್ಕಾಣಿಸಿದ ದೈಹಿಕ-ಶಿಕ್ಷಣ ಉಪನ್ಯಾಸಕರ(Lecturers) ಹುದ್ದೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55% ಅಂಕಗಳನ್ನು ಪಡೆದಿರಬೇಕು. ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿ ಸರ್ಕಾರದ ನಿಯಮಾನುಸಾರವಾಗಿರುತ್ತದೆ.