Masked Aadhaar Card: ಗೌಪ್ಯತೆ ಕಾಪಾಡುವ ಮಾಸ್ಕ್ಡ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇದರ ವಿಶೇಷತೆಗಳು ಏನು? -2025.

Masked Aadhaar Card: ಗೌಪ್ಯತೆ ಕಾಪಾಡುವ ಮಾಸ್ಕ್ಡ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇದರ ವಿಶೇಷತೆಗಳು ಏನು? -2025.

Masked Aadhaar Card

Masked Aadhaar Card:ಕೇಂದ್ರ ಸರ್ಕಾರ ದೇಶದ ಪ್ರತಿ ಪ್ರಜೆಗೂ ‘ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ’ (UIDAI) ಮೂಲಕ ಆಧಾರ್ ಕಾರ್ಡ್ ಗುರುತಿನ ಚೀಟಿ ನೀಡಿದೆ. ಇದೊಂದು ಪ್ರಮುಖ ಗುರುತಿನ ಚೀಟಿ ಆಗಿದೆ. ನಮ್ಮೆಲ್ಲರ ಆಧಾರ್ ಮಾಹಿತಿ ಗೌಪ್ಯತೆಗೆ ಕಾಪಾಡಲು ಮಾಸ್ಕ್ಡ್ ಆಧಾರ್ ಕಾರ್ಡ್ (Masked Aadhaa) ವ್ಯವಸ್ಥೆ ಪರಿಚಯಿಸಲಾಗಿದೆ. ಇದನ್ನು ನಾವು ಹೇಗೆ ಪಡೆಯಬೇಕು? ಮಾಸ್ಕ್ಡ್ ಆಧಾರ್ ಕಾರ್ಡ್ ಎಂದರೇನು? ಇದರ ವೈಶಿಷ್ಟ್ಯತೆಗಳೇನು? ಎಂಬ ಇತ್ಯಾದಿ ಈ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ.

‘ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ’ (UIDAI) ಆಧಾರ್ ಕಾರ್ಡ್ ಮಾಹಿತಿ ದುರ್ಬಳಕೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಈ ಪ್ರಮುಖ ಉದ್ದೇಶದಿಂದ ಮಾಸ್ಕ್ಡ್ ಆಧಾರ್ ಅನ್ನು ಪರಿಚಯಿಸಿದೆ. ನೀವು ಒಂದು ಭಾರಿ ಇದನ್ನು ಪಡೆದರೆ, ಆಧಾರ್ ಗೌಪ್ಯತೆ ಕಾಪಾಡಲು ಸಹಾಯವಾಗುತ್ತದೆ. ಅಗತ್ಯ ಉದ್ದೇಶಗಳಿಗೆ ಬಳಕೆ ಮಾಡಿದರೆ ಹೆಚ್ಚು ಅನುಕೂಲಕರವಾಗಲಿದೆ. ಕಾರ್ಡ್ ಕಳೆದರೂ ಇತರರಿಂದ ದುರುಪಯೋಗ ಆಗುವುದು ತಪ್ಪಲಿದೆ.

ಮಾಸ್ಕ್ಡ್ ಆಧಾರ್ ಕಾರ್ಡ್( Masked Aadhaar Card)ಎಂದರೇನು?

ಆಧಾರ್ ಸಂಖ್ಯೆಯಲ್ಲಿ ಒಟ್ಟು 12 ಸಂಖ್ಯೆಗಳನ್ನು ನೀಡಲಾಗಿರುತ್ತದೆ. ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಮೊದಲ 08 ಸಂಖ್ಯೆಗಳನ್ನು ಮರೆ ಮಾಚಲಾಗುತ್ತದೆ. ಕೊನೆಯ 04 ಸಂಖ್ಯೆಗಳನ್ನು ಮಾತ್ರವೇ ಕಾಣುವಂತೆ  ಮಾಡಲಾಗುತ್ತದೆ. ಈ ಆಧಾರ್ ಕಾರ್ಡ್ ಅನ್ನು ಮಾಸ್ಕ್ಡ್‌ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ.

ಉದಾಹರಣೆಗೆ-ಸಾಮಾನ್ಯ ಆಧಾರ್ ಕಾರ್ಡ್‌ನಲ್ಲಿ ಸಂಖ್ಯೆ 1111 2222 3333 ರೀತಿ ಇರುತ್ತವೆ. ಇವು ಎಲ್ಲರಿಗೂ ಗೋಚರಿಸುತ್ತವೆ. ಆದರೆ ಇದನ್ನು ಮಾಸ್ಕ್ಡ್ ಆಧಾರ್(Masked Aadhaar Card) ಆಗಿ ಬದಲಾಯಿಸಿ ಪಡೆದುಕೊಂಡಾಗ ಮೊದಲು ಎಂಟು ಸಂಖ್ಯೆ XXXX XXX‍X 3333 ಈ ರೀತಿ ಇರುತ್ತದೆ. 04 ಸಂಖ್ಯೆಗಳು ಮಾತ್ರವೇ ಗೋಚರಿಸುತ್ತವೆ. ಹೀಗಾಗಿ ಈ ಆಧಾರ್‌ನಿಂದ ದುರುಪಯೋಗ ಆಗುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಬಹುದು. ಇಂತಹ ಆಧಾರ್ ಪಡೆಯುವಂತೆ ಕೇಂದ್ರ ಸರ್ಕಾರ ಮಾಸ್ಕ್ಡ್ ವ್ಯವಸ್ಥೆ ಪರಿಚಯಿಸಿದೆ.

ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ಜಮೀನು, ಇನ್ನಿತರ ಹಲವಾರು ದಾಖಲೆಗಳೊಂದಿಗೆ ಆಧಾರ ಜೋಡಣೆ ಇರುತ್ತದೆ. ಹೀಗಾಗಿ ಇದರ ಗೌಪ್ಯತೆ ಅಗತ್ಯವಾಗಿರುತ್ತದೆ. ಆದ್ದರಿಂದ ಸಾಂಪ್ರದಾಯಿಕ ಆಧಾರ್ ಕಾರ್ಡ್ ಬದಲಾಗಿ ಮಾಸ್ಕ್ಡ್ ಆಧಾರ್ ಪಡೆಯುವುದು ಉತ್ತಮವಾಗಿದೆ.

ಮಾಸ್ಕ್ಡ್ ಆಧಾರ್( Masked Aadhaar Card) ಪ್ರಮುಖ ವೈಶಿಷ್ಟ್ಯಗಳು.

ಈ ಮಾಸ್ಕ್ಡ್ ಆಧಾರ್‌(Masked Aadhaar Card)ನಲ್ಲಿ ಗೌಪ್ಯತೆ ಕಾಪಾಡಲಾಗುತ್ತದೆ. ಮೊದಲು 08 ಸಂಖ್ಯೆಗಳು ಕಾಣವುದಿಲ್ಲ. ಸುರಕ್ಷಿತ QR ಕೋಡ್ ಹೊಂದಿರುವ ಕಾರ್ಡ್ ಇದಾಗಿರುತ್ತದೆ. ಇದು ನಿಮ್ಮ ವೈಯಕ್ತಿಕ ಮಾಹಿತಿ ಬಹಿರಂಗಪಡಿಸದೆ ಗುರುತು ಪರಿಶೀಲಿಸಲು ಮಾತ್ರವೇ ಸ್ಕ್ಯಾನ್ ಮಾಡಲಾಗುತ್ತದೆ. ಮುಖ್ಯವಾದ ಅಂಶವೆಂದರೆ ಇದನ್ನು UIDAI ಮಾತ್ರವೇ ನೇರವಾಗಿ ನಿಮಗೆ ನೀಡುತ್ತದೆ. ಈ ಕಾರ್ಡ್ ಕಾನೂನು ಬದ್ಧ ಸ್ವೀಕಾರಾರ್ಹವಾಗಿದೆ.

ಮಾಸ್ಕ್ಡ್‌ ಆಧಾರ್( Masked Aadhaar Card)ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಫೋಟೋ ಮಾತ್ರವೇ ಕಾಣುತ್ತದೆ. ಹೀಗಾಗಿ ಇದು ಬೇರೆ ಎಲ್ಲ ಕಡೆಗೆ ಉಪಯೋಗಿಸಬಹುದು. ಆಧಾರ್‌ನಲ್ಲಿ ಮುಖ್ಯವಾಗಿರುವ ಸಂಖ್ಯೆ ಇತರರಿಗೆ ಕಾಣದಂತೆ ಮಾಡುತ್ತದೆ.

ಮಾಸ್ಕ್ಡ್ ಆಧಾರ್(Masked Aadhaar Card) ಡೌನ್‌ಲೋಡ್ ಹೇಗೆ? ಪ್ರಕ್ರಿಯೆ ವಿವರ.

ನೀವು ಮೊದಲು UIDAI ಅಧಿಕೃತ ವೆಬ್‌ಸೈಟ್‌ಗೆ https://uidai.gov.in ನಲ್ಲಿ ಅಧಿಕೃತ UIDAI ಭೇಟಿ ನೀಡಬೇಕು.
• ‘ಆಧಾರ್ ಡೌನ್‌ಲೋಡ್ ಮಾಡಿ’ ವಿಭಾಗ ಆಯ್ಕೆ ಮಾಡಬೇಕು.
• ನಂತರ ‘ನನ್ನ ಆಧಾರ್’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
• ಬಳಿಕ ‘ಆಧಾರ್ ಡೌನ್‌ಲೋಡ್’ ಆಯ್ಕೆ ಮಾಡಿಕೊಳ್ಳಬೇಕು. ಆಗ ಇದು ನಿಮ್ಮ ಆಧಾರ್ ಡೌನ್‌ಲೋಡ್ ಪುಟಕ್ಕೆ ಕರೆದೊಯ್ಯುತ್ತದೆ.

  1. ಕಾಣುವ ಪರದೆ ಮೇಲೆ ನಿಮ್ಮ ವಿವರ ನಮೂದಿಸಬೇಕು.
    • ನಿಮ್ಮ ಆಧಾರ್12 ಸಂಖ್ಯೆ/ 16 ಅಂಕಿಯ ವರ್ಚುವಲ್ ಐಡಿ (ವಿಐಡಿ), ಅಥವಾ ದಾಖಲಾತಿ ಐಡಿ (ಇಐಡಿ) ಅನ್ನು ನಮೂದಿಸಿಬೇಕು.
    • ಬಳಿಕ ಪೂರ್ಣ ಹೆಸರು, ಪಿನ್ ಕೋಡ್ ಮತ್ತು ಪರದೆಯ ಮೇಲೆ ಪ್ರದರ್ಶಿಸಲಾದ ಕ್ಯಾಪ್ಚಾ ಹಾಕಬೇಕು.
    • ವಿವರ ಭರ್ತಿ ಮಾಡಿದ ಮೇಲೆ ‘ಮಾಸ್ಕ್ಡ್ ಆಧಾರ್’ ಅನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕು.
    • ‘ನಿಮಗೆ ಮಾಸ್ಕ್ಡ್ ಆಧಾರ್ ಬೇಕೇ?’ ಎಂದು ಕೇಳುವ ಪೆಟ್ಟಿಗೆಯನ್ನು ಪರಿಶೀಲಿಸಬೇಕು.
    • ಇದೆಲ್ಲ ಆಗುತ್ತಿದ್ದಂತೆ OTP ಪ್ರಕ್ರಿಯೆ ನಡೆಯುತ್ತದೆ.
    ನಿಮ್ಮ ಮೊಬೈಲ್ಗೆ ಬರುವ ಒನ್-ಟೈಮ್ ಪಾಸ್‌ವರ್ಡ್ (OTPಗೆ) ನಮುದಿಸಿ, ಡೌನ್‌ಲೋಡ್ ಮಾಡಿ ಎಂಬ ಆಯ್ಕೆ ಆಯ್ದುಕೊಂಡು ಪಿಡಿಎಫ್ ಮಾಸ್ಕ್ ಆಧಾರ್ PDF ಡೌನ್‌ಲೋಡ್ ಮಾಡಿಕೊಳ್ಳಬೇಕು.

 

 

• website – Click here 

WhatsApp Group Join Now
Telegram Group Join Now

Leave a Comment