ಪುಟಿದೆದ್ದ ಹೈನೋದ್ಯಮ | ಕೋಟಿ ಲೀಟರ್ ಸನಿಹಕ್ಕೆ ಹಾಲು ಸಂಗ್ರಹ .
ಕೆಎಂಎಫ್‌ನಲ್ಲಿ ಹಾಲಿನ ಹೊಳೆ.
ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಉತ್ತಮ ಮಳೆಯಿಂದಾಗಿ ಹೈನೋದ್ಯಮವು ಪುಟಿದೆದ್ದಿದ್ದು, ರಾಜ್ಯದಲ್ಲಿ ದಿನದ ಸರಾಸರಿ ಹಾಲು ಉತ್ಪಾದನೆ ಪ್ರಮಾಣವು ಕೋಟಿ ಲೀಟರ್ನ ಸನಿಹಕ್ಕೆ ಬಂದಿದೆ. ಕೆಎಂಎಫ್‌ನ ಐದು ದಶಕಗಳ ಇತಿಹಾಸದಲ್ಲೇ ಮಂಗಳವಾರ (ಜೂ.18) ಒಂದೇ ದಿನ98.87 ಲಕ್ಷಲೀಟರ್ ಹಾಲು ಸಂಗ್ರಹವಾಗಿದೆ. ಇದರೊಂದಿಗೆ ಹಾಲು ಸಂಗ್ರಹಣೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. 2022ರ ಜೂ.29ರಂದು 94.18 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದ್ದು, ಇದು ಈವರೆಗಿನ ಗರಿಷ್ಠ ದಾಖಲೆಯಾಗಿತ್ತು. ಕಳೆದೊಂದು ವರ್ಷದಿಂದ ಕುಸಿತದ ಹಾದಿಯಲ್ಲೇ ಸಾಗಿದ್ದ ಹಾಲು ಉತ್ಪಾದನೆಯು ಮೇ ಆರಂಭದಿಂದ ಏರಿಕೆಯತ್ತ ಮುಖ ಮಾಡಿದೆ.
ಮಾರಾಟದಲ್ಲೂ ದಾಖಲೆ:-
ಕೆಎಂಎಫ್. ಏಪ್ರಿಲ್ ತಿಂಗಳಲ್ಲಿ ಹಾಲು ಮತ್ತು ಮೊಸರಿನ ಮಾರಾಟ ದಲ್ಲೂ ಸಾರ್ವಕಾಲಿಕ ದಾಖಲೆ ಬರೆದಿತ್ತು. ಕೆಎಂಎಫ್‌ನ ಇತಿಹಾಸದಲ್ಲೇ ಏ.11ರಂದು 51.60 ಲಕ್ಷ ಲೀಟರ್ ನಂದಿನಿ ಸ್ಯಾಚೆಟ್ ಹಾಲು ಮತ್ತು ಏ.6ರಂದು 13.56 ಲಕ್ಷಲೀಟರ್ ಮೊಸರು ಮಾರಾಟವಾಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಸಾಲುಸಾಲು ಹಬ್ಬಗಳಿದ್ದ ಕಾರಣಕ್ಕೆನಂದಿನಿ ಹಾಲು ಮತ್ತು ಮೊಸರು ದಾಖಲೆ ಮಟ್ಟದಲ್ಲಿ ಮಾರಾಟವಾಗಿದ್ದವು.
ಕಳೆದ ವರ್ಷಕ್ಕೆ ಹೋಲಿಸಿದರೆ ಹಾಲಿನ ಮಾರಾಟ ಶೇ.10ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಮೊಸರಿನ ಮಾರಾಟ ಪ್ರಮಾಣವು ಶೇ.22 ರಷ್ಟು ಪ್ರಗತಿ ಸಾಧಿಸಿತ್ತು. ನಂದಿನಿ ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನದ ಮಾರಾಟದಲ್ಲಿ ಹೆಚ್ಚಳವಾಗಿತ್ತು. ಮಜ್ಜಿಗೆ ಮಾರಾಟವು ಶೇ.30 ಮತ್ತು ನಂದಿನಿ ಬಸ್ ಕ್ರೀಂ ಮಾರಾಟ ಶೇ.36ರಷ್ಟು ಏರಿಕೆ ದಾಖಲಿಸಿದೆ.
ವರವಾದ ಮಳೆ:-
ಕೆಎಂಎಫ್ ಹೈನೋದ್ಯಮದಲ್ಲಿ ರಾಷ್ಟ್ರದಲ್ಲಿಯೇ 7ನೇ ದೊಡ್ಡ ಮಹಾಮಂಡಳ ವಾಗಿದ್ದು, ದಕ್ಷಿಣ ಭಾರತದಲ್ಲಿ ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಕೆಎಂಎಫ್ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 26 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡುತ್ತಿದೆ. ಕೆಎಂಎಫ್ ವ್ಯಾಪ್ತಿಯಲ್ಲಿ 15 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿದ್ದು, ಮಳೆಗಾಲದ ಆರಂಭಕ್ಕೂ ಮುನ್ನ ಏಪ್ರಿಲ್‌ನಲ್ಲಿ ದಿನವೊಂದಕ್ಕೆ ಸರಾಸರಿ 80.89 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿತ್ತು. ಏಪ್ರಿಲ್ ಅಂತ್ಯ ಹಾಗೂ ಮೇ
ಹಾಲು ಒಕ್ಕೂಟ ಸರಾಸರಿ ಹಾಲು ಸಂಗ್ರಹ :-
(ದಿನಕ್ಕೆ ಲಕ್ಷ ಲೀಟರ್‌ನಲ್ಲಿ)
ಬೆಂಗಳೂರು
16.97
ಹಾಸನ
14.91
12.30
ಕೋಲಾರ-ಚಿಕ್ಕಬಳ್ಳಾಪುರ
ಮಂಡ್ಯ
11.24
ತುಮಕೂರು
9.67
ಮೈಸೂರು
9.28
ಶಿವಮೊಗ್ಗ
7.99
ದಕ್ಷಿಣ ಕನ್ನಡ
3.84
ಧಾರವಾಡ
1.47
ಚಾಮರಾಜನಗರ
3.14
ಬೆಳಗಾವಿ
1.94
2.15
ವಿಜಯಪುರ
1.81
ಕಲಬುರಗಿ
0.61 ಸಾವಿರ
ಹಾವೇರಿ
1.55
ಬಮೂಲ್ ಪ್ರಥಮ:-
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟವು (ಬಮುಲ್) ದಿನಕ್ಕೆ 16.97 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಸನ ಜಿಲ್ಲಾ ಹಾಲು ಒಕ್ಕೂಟ (ಹಮುಲ್) 14.91 ಲಕ್ಷ ಲೀಟರ್ ಮತ್ತು ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಕೋಚಿಮುಲ್) 12.30 ಲಕ್ಷ ಲೀಟರ್ ಹಾಲು ಸಂಗ್ರಹದೊಂದಿಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಹೆಚ್ಚಳಕ್ಕೆ ಕಾರಣಗಳು:-
# ಮಳೆಯ ಕಾರಣಕ್ಕೆ ಹಸಿರು ಮೇವಿನ ಲಭ್ಯತೆ
: 98.87
* ಹಾಲು-ಮೊಸರು ಮಾರಾಟ ದರ ಏರಿಕೆ
# ಚರ್ಮ ಗಂಟು ರೋಗದ ತೀವ್ರತೆ ತಗ್ಗಿರುವುದು
ಆರಂಭದಲ್ಲಿ ರಾಜ್ಯದ ಬಹುತೇಕ ಕಡೆ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಯಿತು. ಹೀಗಾಗಿ, ಜಾನುವಾರುಗಳಿಗೆ ಹಸಿರು ಮೇವಿನ ಲಭ್ಯತೆ ಹೆಚ್ಚಾಗಿದೆ. ಇದರಿಂದ ರಾಸುಗಳಲ್ಲಿ ಹಾಲಿನ ಇಳುಮ ವೃದ್ಧಿಸಿದ್ದು, ವರ್ಷಧಾರೆಯು ಹೈನೋದ್ಯಮಕ್ಕೆ ವರವಾಗಿ ಪರಿಣಮಿಸಿದೆ.
* ಖಾಸಗಿ ಹಾಲಿನ ಡೇರಿಗಳಿಂದ ಖರೀದಿ ಕುಸಿತ
* ಖಾಸಗಿ ಡೇರಿಗಳಿಗಿಂತಲೂ ಹೆಚ್ಚು ದರ ನೀಡಿಕೆ