ಕನಿಷ್ಠ ಬೆಂಬಲ ಬೆಲೆ.

 

    ಕನಿಷ್ಠ ಬೆಂಬಲ ಬೆಲೆ .

             -:  ವಿಷಯ :-

ಕೇಂದ್ರ ಸಚಿವ ಸಂಪುಟವು ಬುಧವಾರ ಖಾರಿಫ್ (ಬೇಸಿಗೆ) ಬಿತ್ತನೆ ಅವಧಿಗೆ ಮುಂಚಿತವಾಗಿ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಏರಿಕೆ ಮಾಡಿದೆ.

ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ತಿಳಿಯಿರಿ :-

• ಕೃಷಿ ಉತ್ಪನ್ನದ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದಾಗ ರೈತರಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ‘ಕನಿಷ್ಠ ಬೆಂಬಲ ಬೆಲೆ’ ಯನ್ನು ಜಾರಿಗೆ ತಂದಿದೆ.

• ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ.

• ಕೃಷಿ ಉತ್ಪಾದನೆ ಹೆಚ್ಚಳವಾದಾಗ ಬೆಲೆಗಳು ತೀವ್ರ ಇಳಿಕೆಯಾಗುತ್ತದೆ. ಇದರಿಂದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾನೆ. ಹೀಗಾಗಿ ಕೇಂದ್ರ ಸರ್ಕಾರವೇ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ. ಇದರಿಂದ ಬೆಲೆ ಕುಸಿತದ ವಿರುದ್ದ ರೈತರನ್ನು ರಕ್ಷಿಸಬಹುದಾಗಿದೆ.

• ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ನೀಡುವ ಖಾತರಿಯ ಬೆಲೆಯಾಗಿದೆ.

• ಸರಿಯಾದ ಬೆಲೆಗೆ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಮಸ್ಯೆಯೂ ತಪ್ಪುತ್ತದೆ.

MSP ಎಂದರೇನು?

23 ಬೆಳೆ

CACP ಯಿಂದ ಮರುಕಳಿಸಲಾಗಿದೆ

CCEA ಯಿಂದ ಅನುಮೋದಿಸಲಾಗಿದೆ ಮತ್ತು ಘೋಷಿಸಲಾಗಿದೆ

• ಅಲ್ಲದೆ ಸರ್ಕಾರವು ಸಾರ್ವಜನಿಕ ವಿತರಣೆಗಾಗಿ (ಪಡಿತರ) ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

• ಆಯಾ ಋತುವಿನ ಆರಂಭದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗುತ್ತದೆ.

• ಸಚಿವಾಲಯ: ಕೃಷಿ ಸಚಿವಾಲಯ

ಒಟ್ಟಾರೆ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ :

* 7 ಸಿರಿಧಾನ್ಯಗಳು: ಭತ್ತ, ಗೋಧಿ, ಮೆಕ್ಕೆಜೋಳ, ಜೋಳ, ಸಜ್ಜೆ, ಬಾರ್ಲಿ ಮತ್ತು ರಾಗಿ

* 5 ಬೇಳೆಕಾಳುಗಳು: ಕಡಲೆ, ತೊಗರಿ, ಹೆಸರು, ಉದ್ದು,

 

• 7 ಎಣ್ಣೆಕಾಳುಗಳು: ನೆಲಗಡಲೆ, ರಾಫೀಡ್-ಸಾಸಿವೆ, ಸೋಯಾಬೀನ್, ಸೀಸ್ಟಮ್, ಸೂರ್ಯಕಾಂತಿ, ಕುಸುಮೆ, ನೈಗರ್ ಸೀಡ್

* 3 ವಾಣಿಜ್ಯ ಬೆಳೆಗಳು: ಕೊಬ್ಬರಿ, ಹತ್ತಿ ಮತ್ತು ಕಚ್ಚಾ ಸೆಣಬು

 

WhatsApp Group Join Now
Telegram Group Join Now