NEET-UG EXAM 2025: ನಾಳೇ ರಾಜ್ಯದಾದ್ಯಂತ ನಡೆಯುವ NEET – UG EXAM ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಪ್ರವೇಶ ಪರೀಕ್ಷೆ ಮಾಹಿತಿ ಇಲ್ಲಿದೆ…

NEET-UG EXAM 2025: ನಾಳೇ ರಾಜ್ಯದಾದ್ಯಂತ ನಡೆಯುವ NEET – UG EXAM ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಪ್ರವೇಶ ಪರೀಕ್ಷೆ ಮಾಹಿತಿ ಇಲ್ಲಿದೆ…

NEET-UG EXAM

NEET-UG EXAM 2025:2025ನೇ ಸಾಲಿನ ನೀಟ್-ಯುಜಿ ಪರೀಕ್ಷೆ(NEET-UG EXAM) ಸಂಬಂಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರಮುಖವಾಗಿ ಅನುಸರಿಸಬೇಕಾದ ಸುರಕ್ಷಾತಾ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ…

ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇಚ್ಛಿಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವತಿಯಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ (NEET-UG) 2025 ಅನ್ನು ಇದೇ ಮೇ 4, ಭಾನುವಾರ 2025ರ ದೇಶದಾದ್ಯಂತ ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿಯೂ ಸಹ ಈ ಪರೀಕ್ಷೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಈ ಸರಿ ಪರೀಕ್ಷೆಗೆ ಸುಮಾರು 1.49 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಏರ್ಪಡಿಸಲಾಗಿದ್ದು, ಪ್ರತಿ ವಿದ್ಯಾರ್ಥಿಗೆ ಸರಿಯಾಗಿ ಮಾರ್ಗಸೂಚನೆಗಳನ್ನ ಅನುಸರಿಸಿ ಹಾಜರಾಗುವ ಜವಾಬ್ದಾರಿ ಇದೆ.

NEET-UG EXAM ಪರೀಕ್ಷೆಯ ಅತಿ ಪ್ರಮುಖವಾದ ವಿವರಗಳು.

ಪರೀಕ್ಷೆಯ ದಿನಾಂಕ: 2025ರ ಮೇ 4, ಭಾನುವಾರ.
• ಪರೀಕ್ಷಾ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 5:00.
• ಪ್ರವೇಶ ಸಮಯ: ಬೆಳಿಗ್ಗೆ 11:00ರಿಂದ ಮಧ್ಯಾಹ್ನ 1:30ರೊಳಗೆ.
• ಪರೀಕ್ಷಾ ಕೇಂದ್ರಗಳು: ಕರ್ನಾಟಕದಾದ್ಯಂತ 381.
• ವಿದ್ಯಾರ್ಥಿಗಳ ಸಂಖ್ಯೆ: 1.49 ಲಕ್ಷ.

ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತರಬೇಕಾದ ಪ್ರಮುಖ ದಾಖಲೆಗಳು.

ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ದಿನ, ಮತ್ತು ಈ ಕೆಳಗಿನ ದಾಖಲೆಗಳು ಮತ್ತು ಸಾಮಗ್ರಿಗಳೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು.

ಪ್ರವೇಶ ಪತ್ರದ (Admit Card) ಡೌನ್‌ಲೋಡ್ ಮಾಡಿರುವ ಪ್ರಿಂಟೆಡ್ ಪ್ರತಿಯನ್ನು ತರಬೇಕು.
• ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದು.
• ವಿದ್ಯಾರ್ಥಿಯ ಶಾಲೆ/ಕಾಲೇಜು ನೀಡಿರುವ ಗುರುತಿನ ಚೀಟಿ.
• ಒಂದು ಪೋಸ್ಟ್ ಕಾರ್ಡ್ ಅಳತೆಯ ಭಾವಚಿತ್ರ.
• ಪ್ರವೇಶ ಪತ್ರದಲ್ಲಿ ನೀಡಿರುವ ಸ್ಥಳದಲ್ಲಿ ಅಂಟಿಸಲು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತರಬಾರದ ವಸ್ತುಗಳು ಯಾವವು?

ಪರೀಕ್ಷಾ ಕೇಂದ್ರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ವಸ್ತುಗಳನ್ನು ತರಲು ನಿಷೇಧಿಸಲಾಗಿದೆ.

ಪೂರ್ಣತೋಳಿನ ಉಡುಪುಗಳು, ದೊಡ್ಡ ಬಟನ್‌ಗಳಿರುವ ಶರ್ಟ್ಗಳು.
• ಶೂ-ಸಾಕ್ಸ್‌ಗಳು, ಎತ್ತರದ ಚಪ್ಪಲಿಗಳು.
• ಕಿವಿಯೋಲೆ, ಸರ, ಮೂಗುತಿ, ಜಡೆ ಕ್ಲಿಪ್ ಇತ್ಯಾದಿ ಲೋಹದ ಆಭರಣಗಳು.
• ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು.
• ಕಾಗದದ ಚೀಟಿಗಳು, ಕೈಲಿಖಿತ ನೋಟ್‌ಗಳು.

NEET-UG ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಪ್ರಮುಖ ಕ್ರಮಗಳು.

ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದ್ದು; ಬೆರಳಚ್ಚು ಅಥವಾ ಮುಖದ ಗುರುತು ಪರೀಕ್ಷೆ ನಡೆಸಲಾಗುತ್ತದೆ.
• ನಿರ್ಬಂಧಿತ ವಸ್ತುಗಳ ಪತ್ತೆಗಾಗಿ ಫ್ರಿಸ್ಕಿಂಗ್ (ಚೆಕ್‌) ಹಾಗೂ ಜಾಮ‌ರ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
• ಸಮಯದ ಸೂಚನೆಗಾಗಿ ಪ್ರತಿ ಗಂಟೆಗೆ ಒಂದು ಗಂಟೆ ಸೂಚಿಸುವ ಬೆಲ್ ಮೊಳಗಿಸಲಾಗುತ್ತದೆ.
• ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಗದಿತ ಕೊಠಡಿಗೆ ತೆರಳಬೇಕು.

ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಜಿಲ್ಲಾಡಳಿತ ಯಾವ ಯಾವ ವ್ಯವಸ್ಥೆಗಳನ್ನ ಮಾಡಿಕೊಂಡಿದೆ.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ತುರ್ತು ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಸಹಾಯ, ನಿರಂತರ ವಿದ್ಯುತ್, ಶುದ್ಧ ನೀರಿನ ಸೌಲಭ್ಯ ಅಂಗವಿಕಲರು ಮತ್ತು ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ವೀಲ್‌ಚೇ‌ರ್ ಸೌಲಭ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ತುರ್ತು ನಿರ್ವಹಣಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿರುತ್ತದೆ ಈ ನಿಯೋಜಿತ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಒಳಗಡೆ ಪ್ರವೇಶ ಇರುವುದಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ವ್ಯವಸ್ಥೆಗಳನ್ನು ಖಚಿತಪಡಿಸಬೇಕು ಎಂಬ ಸೂಚನೆ ನೀಡಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರತಿ ಅಂಶಗಳನ್ನು ಗಮನಿಸಿ, ಯಾವುದೇ ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಶ್ರದ್ಧೆಯಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದ ನಂತರದ ದಿನಗಳಲ್ಲಿ ಫಲಿತಾಂಶ ಪ್ರಕಟನೆಯ ಕುರಿತ ಮಾಹಿತಿ ಎನ್‌ಟಿಎ(NTA) ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

WhatsApp Group Join Now
Telegram Group Join Now