NMMS:ಪ್ರೌಢಶಾಲಾ 8ನೇ ತರಗತಿಯ ವಿದ್ಯಾರ್ಥಿಗಳೇ ಎನ್‌ಎಂಎಂಎಸ್‌ಗೆ ಪರೀಕ್ಷೆಗೆ ಸಜ್ಜಾಗಿ -2024.
ಕೇಂದ್ರ ಸರ್ಕಾರದಿಂದ ನೀಡಲಾಗುವ ನ್ಯಾಷನಲ್ ಮೀನ್ಸ್ ಕಂ- ಮೆರಿಟ್ ಸ್ಕಾಲರ್ ಶಿಫ್ (NMMS) ಗೆ ಅರ್ಜಿ ಸಲ್ಲಿಸಲು ಸೆ.30ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೊಸದಾಗಿ ಸ್ಟಾಲರ್‌ಶಿಪ್ ಬಯಸುವವರು ಹಾಗೂ ಈಗಾಗಲೇ ಪಡೆದವರು ನವೀಕರಣ .
ಈ ಮೊದಲು ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನವಾಗಿತ್ತು 2024-25 ಶೈಕ್ಷಣಿಕ ಸಾಲಿನ ಪರೀಕ್ಷೆಯನ್ನು ಡಿ.12ರಂದು ನಡೆಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ, ಅಂಗೀಕರಣ ಪರಿಷತ್ತು ಹೇಳಿದೆ.
ಸರ್ಕಾರಿ ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆರ್ಹರಾಗಿದ್ದಾರೆ. ವಿದ್ಯಾರ್ಥಿಗಳ ಪಾಲಕರ ಆದಾಯ ವಾರ್ಷಿಕ 3.50 ಲಕ್ಷ ರೂ. ಮೀರುವಂತಿಲ್ಲ ಏಳನೇ ತರಗತಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಗಳಿಸಿರಬೇಕು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.50 ಅಂಕ ಪಡೆದಿರಬೇಕು. ರೆಗ್ಯುಲರ್ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು.
ನೋಂದಣಿ ನವೀಕರಣಕ್ಕೆ 9ನೇ ತರಗತಿಯಲ್ಲಿ ಶಿಷ್ಯವೇತನ ಪಡೆಯಬೇಕಾದರೆ ಎಸ್ಎಸ್ಎಲ್‌ಸಿಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು.
ಯಾರಿಗೆ ಅವಕಾಶವಿಲ್ಲ?
ಕೇಂದ್ರೀಯ ವಿದ್ಯಾಲಯ ನವೋದಯ ಶಾಲೆ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನಡೆಸಲಾಗುವ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದವರು ಈ ಸ್ಟಾಲರ್‌ಶಿಪ್ ಗೆ ಅರ್ಹರಲ್ಲ.
ನೋಂದಣಿ ಹೇಗೆ?
NMMSಗೆ ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನ್ಯಾಷನಲ್ ಸ್ಟಾಲರ್‌ಶಿಪ್ ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಒಂದು ಬಾರಿಯ ನೋಂದಣಿಯನ್ನು ಮಾಡಿಕೊಳ್ಳಬೇಕಿದೆ. ಹೊಸದಾಗಿ ನೋಂದಣಿ ನವೀಕರಣಕ್ಕೂ ಇದು ಅನ್ವಯಿಸಲಿದೆ. ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಆಧರಿಸಿ ಅವರಿಗೆ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಅವರ ಅರ್ಜಿ ಸಂಖ್ಯೆ ಸೃಷ್ಟಿಯಾಗಲಿದೆ. ಈ ಮೂಲಕ ಒಂದೇ ನೋಂದಣಿಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಇರದಂತೆ ನೋಡಿಕೊಳ್ಳಲಾಗುತ್ತದೆ .
ಪರೀಕ್ಷೆ ಹೇಗಿರುತ್ತೆ?
ವಿದ್ಯಾರ್ಥಿಗಳಿಗೆ ಮೆಂಟಲ್ ಎಬಿಲಿಟಿ ಟೆಸ್ಟ್ ಹಾಗೂ ಸ್ಟಾಲಸ್ಟಿಕ್ ಎಬಿಲಿಟಿ ಟೆಸ್ಟ್ ನಡೆಸಲಾಗುತ್ತದೆ. ಈ ಎರಡೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಿದೆ. ಮೊದಲ ಪರೀಕ್ಷೆಯಲ್ಲಿ 90 ವಸ್ತುನಿಷ್ಠ, ಬಹುಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತದೆ. ಎರಡನೇ ಪರೀಕ್ಷೆಯಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಂಬಂಧಿಸಿದ 90 ಪ್ರಶ್ನೆಗಳಿರುತ್ತದೆ. ಪ್ರತಿ ಪರೀಕ್ಷೆಗೆ 90 ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ.
ಶಿಷ್ಯವೇತನ ಎಷ್ಟು?
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿವರ್ಷ 12 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತದೆ. 9ನೇ ತರಗತಿಯಿಂದ 12ನೇ ತರಗತಿಯವರೆಗೂ ನಾಲ್ಕು ವರ್ಷಗಳ ತನಕ ನೀಡಲಾಗುತ್ತದೆ. ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ.
5,534 ವಿದ್ಯಾರ್ಥಿಗಳಿಗೆ ಹಂಚಿಕೆ .
ದೇಶದಲ್ಲಿ ಒಟ್ಟು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಒಟ್ಟು ಮಕ್ಕಳ ಮೂರನೇ ಒಂದು ಭಾಗವನ್ನು ಆರ್ಹತೆಯಾಗಿ ಪರಿಗಣಿಸಿ ಆಯಾ ರಾಜ್ಯಕ್ಕೆ ಸ್ಟಾಲರ್‌ಶಿಪ್ ಸಂಖ್ಯೆ ನಿಗದಿ ಮಾಡಲಾಗಿದೆ. ಮೀಸಲಾತಿ ನಿಯಮಗಳನ್ವಯ ರಾಜ್ಯದಲ್ಲಿ 5,534 ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
1,827 ಕೋಟಿ ರೂ. ನಿಗದಿ .
ಕೇಂದ್ರ ಸರ್ಕಾರವು 2021-22 ರಿಂದ 2025-26ನೇ ಸಾಲಿನವರೆಗೆ ಈ ಯೋಜನೆಯನ್ನು ಮುಂದುವರಿಸಲು ಆನುಮೋದನೆ ನೀಡಿದೆ. ಅವಧಿಗಾಗಿ ಒಟ್ಟು 1,827 ಕೋಟಿ ರೂ. ಗಳನ್ನು ಮಿಸಲಿಟ್ಟಿದೆ.
ಆಯ್ಕೆ ವಿಧಾನ ಹೇಗೆ?
ಸ್ಕಾಲರ್‌ಶಿಪ್ ಗೆ ಅರ್ಹರನ್ನು ಆಯ್ಕೆ ಮಾಡಲು ಆಯಾ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಸರ್ಕಾರಗಳು ಪರೀಕ್ಷೆ ನಡೆಸುತ್ತವೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.40 ಅಂಕ ಪಡೆದವರು ಸ್ಟಾಲರ್‌ಶಿಪ್ ಅರ್ಹರಾಗಿರುತ್ತಾರೆ.
ನೋಂದಣಿಗೆ ಕೊನೆಯ ದಿನಾಂಕ :
30-09-2024
Website link…..