Pcso act: ಈ ಕಾಯಿದೆ ಕುರಿತು ತಪ್ಪದೇ ಅರಿಯಿರಿ .
ಆರೋಗ್ಯಕರ ಪ್ರಪಂಚದ ಸೃಷ್ಠಿಗೆ ಆರೋಗ್ಯಕರ ಮಕ್ಕಳ ಬೆಳವಣಿಗೆ ಮತ್ತು ವಿಕಾಸ ಅತ್ಯಗತ್ಯವಾದುದು. ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಮಕ್ಕಳು ಯಾವುದೇ ತರಹದ ಹಿಂಸೆ, ಶೋಷಣೆ, ಅವಮಾನ ಮತ್ತು ದೂಷಣೆಗಳಿಂದ ಮುಕ್ತವಾಗಿರಬೇಕು. ಈ ಹಿನ್ನೆಲೆಯಲ್ಲಿ ಮನೆ, ಶಾಲೆ, ವಿವಿಧ ಸಾಮಾಜಿಕ ಪರಿಸರದಲ್ಲಿ ಮಕ್ಕಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಾಗಿರುವುದು ದೊಡ್ಡವರ ಕರ್ತವ್ಯವಾಗಿದ್ದು . ಆದರೆ, ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು ಪರಿಚಿತರಾದ ಮತ್ತು ಪರಿಚಿತರಲ್ಲದ ವಯಸ್ಕರಿಂದ ಲೈಂಗಿಕ ಶೋಷಣೆಗೆ ಗುರಿಯಾಗುವ ಸಂಭವ ಇರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳೊಡನೆ ವ್ಯವಹರಿಸುವ ಎಲ್ಲರೂ ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಲ್ಲದೇ ಮಕ್ಕಳೂ ಸಹ ಈ ಅಂಶಗಳ ಬಗೆಗೆ ತಿಳಿದುಕೊಳ್ಳುವುದು ಅತ್ಯಂತ ಅತ್ಯಾವಶ್ಯಕವಾಗಿದೆ.
ಕೆಲವು ಸಂದರ್ಭಗಳಲ್ಲಿ ಮಕ್ಕಳು ಹತ್ತಿರದ ಮತ್ತು ದೂರದ ಸಂಬಂಧಿಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಗುರಿ ಮಾಡುವ ಉದಾಹರಣೆಗಳನ್ನು ನಾವೆಲ್ಲಾ ಕೇಳಿರುತ್ತೇವೆ. ಉದ್ದೇಶಪೂರ್ವಕವಾಗಿ ಮಕ್ಕಳನ್ನು ಮುಟ್ಟುವುದು. ತಬ್ಬಿಕೊಳ್ಳುವುದು ಅಥವಾ ಲೈಂಗಿಕವಾಗಿ ಸಂಪರ್ಕ ಸಾಧಿಸುವುದು, ಇತ್ಯಾದಿಗಳನ್ನು ಕೆಲವು ವಯಸ್ಕರು ಮಾಡುತ್ತಾರೆ. ಸಂಬಂಧಿಗಳು ಮತ್ತು ಪೋಷಕರ ಸ್ನೇಹಿತರು. ನೆರೆಯವರು ಈ ರೀತಿ ಮಕ್ಕಳೊಂದಿಗೆ ತಪ್ಪಾಗಿ ವರ್ತಿಸಿದಾಗ ಮಕ್ಕಳು ಗೊಂದಲಕ್ಕೊಳಗಾಗುತ್ತಾರೆ. ತಂದೆತಾಯಿ, ಪೋಷಕರಿಗೆ ಸಂಬಂಧಿಸಿದ ಬಂಧುಗಳು, ಮಿತ್ರರಿಂದ ಘಟಿಸುವ ಇಂತಹ ದುರ್ವತ್ರನೆಯ ಬಗ್ಗೆ ಮುಕ್ತವಾಗಿ ಯಾರೊಂದಿಗೂ ಹೇಳಿಕೊಳ್ಳಲು ಹಿಂಜರಿಕೆ, ಸಂಕೋಚಗಳನ್ನು ಮಕ್ಕಳು ಅನುಭವಿಸುತ್ತಾರೆ. ಇದೇ ರೀತಿ ಮನೆಯಷ್ಟೇ ಅಲ್ಲದೇ ಶಾಲೆ ಹಾಗೂ ಇತರೆ ಸಮಾಜದಲ್ಲಿಯೂ ಮಕ್ಕಳು ಲೈಂಗಿಕ ಶೋಷಣೆಗೆ ಗುರಿಯಾಗುವ ಸಂಭವ ಇರುತ್ತದೆ.
ಶಾಲೆ ಮಕ್ಕಳ ಎರಡನೇ ಮನೆ. ಶಾಲೆ ಮಕ್ಕಳ ಕಲಿಕೆಗೆ, ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು. ಆಟೋಟಗಳು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಮಾಡಿಕೊಡುತ್ತದೆ. ಇದಕ್ಕಾಗಿ ಶಾಲೆಯಲ್ಲಿ ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗದ ವಯಸ್ಕರೊಡನೆ ಮಕ್ಕಳು ಸಂವಹನ, ಸಂಪರ್ಕದಲ್ಲಿ ಇರಬೇಕಾಗುತ್ತದೆ. ಈ ಸಂವಹನ, ಸಂಪರ್ಕವು ಆರೋಗ್ಯಕರವಾಗಿರಬೇಕು. ಆರೋಗ್ಯಕರ ಚೌಕಟ್ಟನ್ನು ಮೀರಿ ಶಿಸ್ತಿನ ಹೆಸರಿನಲ್ಲೋ, ತಾರತಮ್ಯ ನಡೆಸಲೋ ಅಥವಾ ಬೇರೆ ಯಾವುದೋ ದುರುದ್ದೇಶದಿಂದಲೋ ಶಾಲೆಗೆ ಸಂಬಂಧಿಸಿದ ಅಥವಾ ಸಂಬಂಧಿಸದ ಕೆಲವು ವಯಸ್ಕರು ಮಕ್ಕಳ ಮೇಲೆ ವಿವಿಧ ರೀತಿಯ ಹಿಂಸೆ, ದೌರ್ಜನ್ಯ, ಶೋಷಣೆ ಮಾಡುವ ಸಾಧ್ಯತೆ ಇರುತ್ತದೆ. ಇದು ವಿದ್ಯಾರ್ಥಿಗಳು ಸರಿಯಾಗಿ ಕಲಿಯಲಿಲ್ಲವೆಂದೋ, ಶೈಕ್ಷಣಿಕ ಚಟುವಟಿಕೆಗಳನ್ನು ಪೂರೈಸಲಿಲ್ಲವೆಂದೋ, ಕ್ರೀಡೆ, ವ್ಯಾಯಾಮ, ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸರಿಯಾಗಿ ತೊಡಗಿಸಿಕೊಳ್ಳಲಿಲ್ಲವೆಂದೋ, ಅಥವಾ ಶಾಲಾ ಕಾಲೇಜಿನ ಸಮಯದಲ್ಲೋ ಅಥವಾ ಹೊರಗಡೆಯೋ ಅಶಿಸ್ತಿನಿಂದ ವರ್ತಿಸಿದರೆಂದೋ ಕೆಲವು ಶಾಲಾ ಕಾಲೇಜುಗಳ ಶಿಕ್ಷಕರು ಅಥವಾ ಆಡಳಿತದಲ್ಲಿರುವವರು ವಿದ್ಯಾರ್ಥಿಗಳ ಮೇಲೆ ಶಿಸ್ತುಕ್ರಮದ ಹೆಸರಿನಲ್ಲಿ ಬೈಯುವುದು, ಅದಮಾನ ಮಾಡುವುದು, ದೈಹಿಕವಾಗಿ ಹೊಡೆಯುವುದನ್ನು ಮಾಡುವ ಜೊತೆ ಲೈಂಗಿಕವಾಗಿ ಶೋಷಣೆ ಮಾಡಬಹುದು.
ಹಾಗೆಯೇ ಕೆಲವು ವಿದ್ಯಾರ್ಥಿಗಳು ಕೂಡಾ ಇತರ ಮಕ್ಕಳ ಮೇಲೆ ಪಠ್ಯ, ಪತ್ಯೇತರ, ಆಟ, ಸಾಂಸ್ಕೃತಿಕ ಚಟುವಟಿಕೆಗಳ ಸಂದರ್ಭದಲ್ಲಿ, ಅಥವಾ ತಮ್ಮದೇ ಸಮೂಹದಲ್ಲಿನ ಮಾತುಕತೆಗಳ ಮಧ್ಯೆ ಹಾಸ್ಯಮಾಡಲೋ, ಅಪಹಾಸ್ಯದಿಂದಲೋ, ನಿಂದನೆ, ಒತ್ತಡ, ಕಿರುಕುಳ, ಮೋಸ, ನೋವು ಮಾಡುವ ಸಾಧ್ಯತೆಗಳು ಇವೆ. ಈ ತೊಂದರೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿರುವ ಸಾಮಾಜಿಕ ಜಾಲತಾಣಗಳ ಮೂಲಕವೂ ಆಗುವ ಪ್ರಕರಣಗಳನ್ನು ನಾವು ಗಮನಿಸುತ್ತಿರುತ್ತೇವೆ.
ಮನೆಯಿಂದ ಶಾಲಾ ಕಾಲೇಜುಗಳಿಗೆ ಹೋಗಿ ಬರುವಾಗ ಅಥವಾ ಪಠ್ಯತ್ಯೇತರ ಚಟುವಟಿಕೆಗಳಿಗೆ ಹೋಗಿ ಬರುವಾಗ, ಹೆಚ್ಚಿನ ಶೈಕ್ಷಣಿಕ ನೆರವಿಗಾಗಿ ಟ್ಯೂಷನ್‌ಗೆ ಹೋದಾಗಲೂ ವಿದ್ಯಾರ್ಥಿಗಳು ಹಿಂಸೆ, ತೊಂದರೆಗೀಡಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ತೊಂದರೆಗೆ ಒಳಗಾದ ಎಲ್ಲ ಮಕ್ಕಳು ಅವುಗಳೆಲ್ಲವನ್ನೂ ಎದುರಿಸಿ, ಜೀರ್ಣಿಸಿಕೊಂಡು ಸಾಮಾನ್ಯ ಜೀವನವನ್ನು ನಡೆಸಿಕೊಂಡು ಸಾಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ಕೆಲವು ಮಕ್ಕಳು ಯಾರೊಡನೆಯೂ ಬೆರೆಯದೆ ಒಂಟಿಯಾಗಬಹುದು, ದೈಹಿಕನೋವು, ಮಾನಸಿಕ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಅವಮಾನದಿಂದ ಕುಗ್ಗಬಹುದು, ಸದಾಕಾಲಕ್ಕೂ ತಮ್ಮನ್ನು ತಾವೇ ಹಳಿದುಕೊಂಡು/ಬೈದುಕೊಂಡು ಸ್ವಯಂ ಹಾನಿ ಮಾಡಿಕೊಳ್ಳುವುದರತ್ತಲೂ ಮುಂದಾಗಬಹುದು.
ಇವೆಲ್ಲದರ ಒಟ್ಟು ಪರಿಣಾಮ ಮಕ್ಕಳು ಶಾಲಾ ಕಾಲೇಜುಗಳನ್ನು ತೊರೆಯಬಹುದು. ಶಿಕ್ಷಣದಿಂದ ವಿಮುಖರಾಗಬಹುದು. ಖಿನ್ನತೆಗೊಳಗಾಗಿ ಮಾನಸಿಕ ಅಸ್ವಸ್ಥರಾಗಬಹುದು. ದೈಹಿಕ ಹಿಂಸೆಯಿಂದಾಗಿ ಅಂಗವಿಕಲರಾಗಬಹುದು. ರೋಗಗ್ರಸ್ಥರಾಗಬಹುದು. ಚಿಕ್ಕವಯಸ್ಸಿನಲ್ಲೇ ಗರ್ಭಧರಿಸುವಂತಾಗಬಹುದು. ಇಲ್ಲವೇ ಬಾಲ್ಯವಿವಾಹಕ್ಕೆ ತುತ್ತಾಗಬಹುದು. ಕೆಲವೊಮ್ಮೆ ಮಾರಾಟ ಸಾಗಣೆಗೆ ಗುರಿಯಾಗಬಹುದು. ಈ ಎಲ್ಲವೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಕ್ಕಳ ಮೇಲಾಗುವ ಅಪರಾಧಗಳು ಎನಿಸಿಕೊಳ್ಳುತ್ತವೆ.
ಯಾವುದೇ ಮಗು ಇಂತಹ ಅಪರಾಧಗಳಿಗೆ ಈಡಾಗಬಾರದು, ಎಲ್ಲಾ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿ ಬೆಳೆಯಬೇಕು. ಉತ್ತಮ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ದೇಶದ ಸಂಪನ್ಮೂಲವಾಗಬೇಕು ಎಂಬುದು ಶಿಕ್ಷಣದ ಉದ್ದೇಶವಾಗಿದೆ. ಆದರೆ, ಇಂದಿನ ಕೆಲವು ಸಂದರ್ಭಗಳಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ರೀತಿಯ ಹಿಂಸೆ, ಶೋಷಣೆಗಳು, ಅದರಲ್ಲೂ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿರುವುದು ಕಂಡು ಬರುತ್ತಿದೆ. ವಿದ್ಯಾರ್ಥಿಗಳು ತಾವು ನಂಬಿದವರಿಂದಲೇ ಲೈಂಗಿಕ ಶೋಷಣೆಗೆ ಬಲಿಯಾದಾಗ ಗಲಿಬಿಲಿಗೊಳ್ಳುತ್ತಾರೆ. ತಮಗೇನು ಆಗುತ್ತಿದೆ ಎಂದು ಅರಿವಾಗದೆ ದಿಗ್ಗಾಂತರಾಗುತ್ತಾರೆ. ಅದರಲ್ಲೂ ಕಣ್ಣು ಕಾಣದ ಮಾತುಬಾರದ, ಕಿವಿ ಕೇಳದ, ಮಾನಸಿಕ ಅಸ್ವಸ್ಥತೆಯಿರುವ ಅಥವಾ ಇನ್ಯಾವುದೇ ರೀತಿಯ ಅಂಗವಿಕಲತೆಯಿರುವ ಮಕ್ಕಳ ಮೇಲೆ ಈ ಶೋಷಣೆಗಳು, ಅದರಲ್ಲೂ ಲೈಂಗಿಕ ಶೋಷಣೆಯಾದರೆ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟವಾಗುತ್ತದೆ. ಯಾರಿಗೆ ಹೇಳಿಕೊಳ್ಳುವುದು, ಹೇಗೆ ಹೇಳುವುದು ಎಂದು
ತಿಳಿಯದೆ ಚಡಪಡಿಸುತ್ತಾರೆ. ಅಪರಾಧಕ್ಕೆ ಈಡಾದ ಮೇಲೆ ತನಗೆ ಹೀಗಾಗಬಾರದಿತ್ತು ಎಂದು ಕೊರಗುತ್ತಾರೆ.
ಶಾಲೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ರಕ್ಷಿಸಲು ವಿವಿಧ ನೀತಿ, ಕಾಯಿದೆಗಳು ಜಾರಿಯಲ್ಲಿವೆ. ಈ ಕೈಪಿಡಿಯು ಮಕ್ಕಳ ಮೇಲಿನ ವಿವಿಧ ರೀತಿಯ ಲೈಂಗಿಕ ಶೋಷಣೆ, ಹಿಂಸೆಗಳ ವಿರುದ್ಧ ರಕ್ಷಣೆ ಪಡೆಯುವ ವಿಧಾನಗಳ ಬಗ್ಗೆ ತಿಳಿಸುತ್ತದೆ. ಅಷ್ಟೇ ಅಲ್ಲದೇ ಬೇರೆ ವಿದ್ಯಾರ್ಥಿಗಳಿಗೆ, ವಯಸ್ಕರಿಗೆ ಮುಜುಗರವಾಗದಂತೆ, ತೊಂದರೆ ಕೊಡದಂತೆ ನಾವು ನಮ್ಮ ನಡವಳಿಕೆಗಳನ್ನು ಯಾವ ರೀತಿ ಸೂಕ್ತವಾಗಿರಿಸಿಕೊಳ್ಳಬೇಕೆಂಬ ಅಂಶಗಳನ್ನು ಮನದಟ್ಟು ಮಾಡುತ್ತದೆ.
ಮಕ್ಕಳ ಮೇಲೆ ಲೈಂಗಿಕ ಶೋಷಣೆ ಎಂದರೇನು?
18 ವರ್ಷದೊಳಗಿನ ಎಲ್ಲರೂ ಮಕ್ಕಳು, ಬಾಲ್ಕತನದಿಂದ ಹದಿವಯಸ್ಸನ್ನು ಪ್ರವೇಶಿಸಿ, ವಯಸ್ಕರಾಗುವ ಹಂತದಲ್ಲಿರುವವರು. ಈ ಹಂತದಲ್ಲಿ ಮಾನಸಿಕ, ದೈಹಿಕ ವಿಕಾಸ, ಸುತ್ತಮುತ್ತಲಿನ ಹಲವಾರು ಬೆಳವಣಿಗೆಗಳು, ಒತ್ತಡಗಳು,ಬೇಡಿಕೆಗಳು ಸಾಮಾನ್ಯವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಹಲವು ರೀತಿಯ ಬೆಂಬಲ, ಒತ್ತಾಸೆಗಳನ್ನು ನೀಡಲು ಕುಟುಂಬ, ಶಾಲೆ, ಸಮಾಜ, ಸರ್ಕಾರ ಪ್ರಯತ್ನಿಸುತ್ತವೆ. ಮಕ್ಕಳೂ ಕೂಡಾ ತಮಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು, ಭವಿಷ್ಯದ ಶಿಕ್ಷಣ, ಕೌಶಲ್ಯ ಬೆಳವಣಿಗೆ, ಇತ್ಯಾದಿ ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ.
ಮಕ್ಕಳ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ಶಿಕ್ಷೆ, ಹಿಂಸೆ, ಶೋಷಣೆಗಳಿಗಿಂತಲೂ ಲೈಂಗಿಕ ಶೋಷಣೆಯು ಅತ್ಯಂತ ಹೇಯವಾದುದಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO World Health Organisation) “ಯಾವ ಲೈಂಗಿಕ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಸರಿಯಾದ ಇಲ್ಲವೋ, ಅವುಗಳ ಕುರಿತು ಅರಿವು ಪೂರ್ಣವಾಗಿ ಬಂದಿರುವುದಿಲ್ಲವೋ, ಮತ್ತು ಅಂತಹದರಲ್ಲಿ ಭಾಗಿಯಾಗಲು ಅವರು ಸಮ್ಮತಿ ಕೊಡಲು ಸಮರ್ಥರಲ್ಲವೋ ಹಾಗೂ ಯಾವ ಚಟುವಟಿಕೆಗಳನ್ನು ನಡೆಸಲು ದೈಹಿಕವಾಗಿ ಅವರು ವಿಕಾಸವಾಗಿಲ್ಲವೋ ಮತ್ತು ಅಂತಹದನ್ನು ಸಮಾಜ ಮತ್ತು ಕಾನೂನು ನಿಷೇಧಿಸಿರುವುದೋ-ಅವುಗಳಲ್ಲಿ ಮಕ್ಕಳನ್ನು ತೊಡಗಿಸುವುದು ಲೈಂಗಿಕ ಶೋಷಣೆಯಾಗಿದೆ (1999)” ಎಂದು ವ್ಯಾಖ್ಯಾನಿಸಿದೆ. ದ ತಿಳಿವಳಿಕೆ
ವಯಸ್ಕರು ಅಥವಾ ದೊಡ್ಡವರು. ಹದಿಹರೆಯದವರು, ಮಕ್ಕಳ ಜವಾಬ್ದಾರಿ ಹೊತ್ತಿರುವವರು, ಮಕ್ಕಳು ಯಾರನ್ನು ನಂಬುತ್ತಾರೋ, ಗೌರವಿಸುತ್ತಾರೋ ಅಥವಾ ಮಕ್ಕಳ ಮೇಲೆ ಅಧಿಕಾರ ಹೊಂದಿರುತ್ತಾರೋ ಅಂತಹವರು ಮಕ್ಕಳೊಡನೆ ಲೈಂಗಿಕವಾಗಿ ವರ್ತಿಸುವುದೇ ಮಕ್ಕಳ ಲೈಂಗಿಕ ದುರುಪಯೋಗ, ಶೋಷಣೆಯಾಗಿದೆ. ಇಂತಹವುಗಳಿಂದ ಮಕ್ಕಳನ್ನು ರಕ್ಷಿಸಲು ಯಾರಾದರೂ ವಯಸ್ಕರು ಮಕ್ಕಳನ್ನು ತೊಂದರೆಗೆ ಸಿಲುಕಿಸಿದರೆ, ಅಂತಹವರಿಗೆ ಶಿಕ್ಷೆ ನೀಡಲೆಂದೇ ಭಾರತ ಸರ್ಕಾರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ 2012 ಅನ್ನು ರೂಪಿಸಿದೆ.