ಜಿಲ್ಲೆಯ ಗ್ರಾಮ ಪಂಚಾಯತ್ ನಲ್ಲಿ ಖಾಲಿಯಿರುವ DEO ಹುದ್ದೆಗಳಿಗೆ ಅಧಿಸೂಚನೆ,2024-25. ಸಂಪೂರ್ಣ ವಿವರ ಇಲ್ಲಿದೆ.
DEO ಹುದ್ದೆಗಳಿಗೆ ಅಧಿಸೂಚನೆ ಕರ್ನಾಟಕ ಗ್ರಾಮ ಸ್ಮರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 113(1) ರಂತೆ ಹಾಗೂ ನಿರ್ದೇಶಕರು(ಪಂ.ರಾಜ್) ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು ರವರ ಅಧಿಸೂಚನೆ ಸಂಖ್ಯೆ: ಗ್ರಾಅಪ 886 ಗ್ರಾಪಂಕಾ 2016 ದಿನಾಂಕ: 29.09.2020 ರನ್ನಯ ಬೀದರ ಜಿಲ್ಲೆಯ, ಔರಾದ(ಬಾ), ಬಸವಕಲ್ಯಾಣ, ಭಾಲ್ಕಿ, ಬೀದರ, ಹುಮನಾಬಾದ, ಹುಲಸೂರ, ಕಮಲನಗರ ಮತ್ತು ಚಿಟಗುಪ್ಪಾ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ 29 ಗ್ರಾಮ ಪಂಚಾಯತ ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್ ಹಾಗೂ 14 ಕರವಸೂಲಿಗಾರ ಖಾಲಿಯಿರುವ ಹುದ್ದೆಗಳು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ನಮೂನೆಯನ್ನು ಜಿಲ್ಲಾ ಪಂಚಾಯತ ಬೀದರ ಆಡಳಿತ ಶಾಖೆಯ ಸಹಾಯಕ ಕಾರ್ಯದರ್ಶಿಗಳು(ಆಡಳಿತ) ಜಿಲ್ಲಾ, ಪಂಚಾಯತ ಬೀದರ ಇಲ್ಲಿ ಪಡೆದುಕೊಳ್ಳತಕ್ಕದ್ದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಕೊನೆಯ ದಿನಾಂಕದೊಳಗೆ ಮುಚ್ಚಿದ/ಸೀಲ್ ಮಾಡಿದ ಲಕೋಟೆಯಲ್ಲಿ ಸಹಾಯಕ ಕಾರ್ಯದರ್ಶಿಗಳು (ಆಡಳಿತ) ಜಿಲ್ಲಾ ಪಂಚಾಯತ್ ಬೀದರನಲ್ಲಿ ಸಲ್ಲಿಸತಕ್ಕದ್ದು.
- Read more…
KPTCL Recruitment:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿಯಲ್ಲಿ ಪ್ರಮುಖವಾದ ಬದಲಾವಣೆ? 2024-25.
DEO ಹುದ್ದೆಗಳಿಗೆ ಅಧಿಸೂಚನೆ ಇಲಾಖೆ ಹೆಸರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ
• ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್ -29
• ಕರವಸೂಲಿಗಾರ -14
DEO ಹುದ್ದೆಗಳಿಗೆ ಶೈಕ್ಷಣಿಕ ವಿದ್ಯಾರ್ಹತೆ:-
1) ಕರವಸೂಲಿಗಾರ ಹುದ್ದೆಗೆ:
ಕನ್ನಡವನ್ನು ಒಂದು ಭಾಷೆಯನ್ನಾಗಿ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು.
2) ಕಂಪ್ಯೂಟರ್ ತರಬೇತಿ ಕೋರ್ಸ್‌ನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಮೂರು ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.
3) ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು.
2) ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್:
• ಕನ್ನಡವನ್ನು ಒಂದು ಭಾಷೆಯನ್ನಾಗಿ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು.
• ಕಂಪ್ಯೂಟರ್ ತರಬೇತಿ ಕೋರ್ಸ್‌ನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಆರು ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.
• ಆಯ್ಕೆ ಸಮಿತಿಯು (ಜಿಲ್ಲಾ ಪಂಚಾಯತ ಬೀದರ) ನಡೆಸುವ ಅರ್ಹತಾ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಬೇಕು.
• ಆಯ್ಕೆ ಸಮಿತಿಯು (ಜಿಲ್ಲಾ ಪಂಚಾಯತ ಬೀದರ) ರವರು ನಡೆಸಿದ ಅರ್ಹತಾ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಡೆದ 50% ಅಂಕಗಳು ಹಾಗೂ ಪಿ.ಯು.ಸಿ/ ತತ್ಸಮಾನ ವಿದ್ಯಾರ್ಹತೆಯಲ್ಲಿ ಪಡೆದ 50% ಅಂಕಗಳನ್ನು ಒಳಗೊಂಡಿರುವ ಅರ್ಹತೆಯ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಅಂತಿಗೊಳಿಸಲಾಗುವುದು.
- Read more…
DEO ಹುದ್ದೆಗಳಿಗೆ ವಯೋಮಿತಿ:-
ಕರ್ನಾಟಕ ನಾಗರೀಕ ಸೇವಾ ಸೇವೆಗಳು ( ಸಾಮಾನ್ಯ ನೇಮಕಾತಿ) ನಿಯಮ 1977ರಲ್ಲಿ ನಿರ್ದಿಷ್ಟಪಡಿಸಿರುವಂತೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಆಯಾ ಮೀಸಲಾತಿಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು.
DEO ಹುದ್ದೆಗಳಿಗೆ ಅರ್ಜಿಯ ಸ್ವೀಕೃತಿ ಕಾಲಮಿತಿ:–
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭಿಕ ದಿನಾಂಕ
07-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
06-11-2024
DEO ಹುದ್ದೆಗಳಿಗೆ ಶುಲ್ಕ:
• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – ರೂ 600/-
• ಪ್ರವರ್ಗ 2(ಎ), 2(ಬಿ), 3(ಎ), 3(ಬಿ),ಗೆ ಸೇರಿದ ಅಭ್ಯರ್ಥಿಗಳಿಗೆ – 300/-
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 200/-
• ಪ.ಜಾತಿ, ಪ.ಪಂ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ -200/-
ಹೆಚ್ಚಿನ ಮಾಹಿತಿಗಾಗಿ Click here…