TeachersDaySpeech:ಶಿಕ್ಷರದಿನಾಚರಣೆಗೆನೀವೂಭಾಷಣಮಾಡ್ತೀರಾ?ಹಾಗಾದ್ರೆಇಂದಿನಿಂದಲೇ ಈಸಾಲುಗಳನ್ನು ಓದಿ ನೆನಪಿನಲ್ಲಿಟ್ಟುಕೊಳ್ಳಿ-2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
Teachers Day Kannada Speech: ಶಿಕ್ಷಕರ ದಿನಾಚರಣೆಗೆ ಇನ್ನೊಂದೇ ವಾರ ಬಾಕಿ ಇದೆ. ನೀವೂ ಕೂಡ ಈ ಬಾರಿ ಭಾಷಣ ಮಾಡಬೇಕು ಎಂದುಕೊಂಡಿದ್ದರೆ ನಾವಿಲ್ಲಿ ನೀಡಿದ ವಿಷಯವನ್ನು ಅಭ್ಯಾಸ ಮಾಡಿಕೊಳ್ಳಿ. ಪ್ರತಿನಿತ್ಯ ಇದನ್ನೊಮ್ಮೆ ಓದಿ.
ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಕೂಡ ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತದೆ. ನೀವು ಭಾಷಣ ಮಾಡಬೇಕು ಎಂದು ತಯಾರಿ ನಡೆಸುತ್ತಿದ್ದರೆ ನಾವಿಲ್ಲಿ ನೀಡಿದ ಭಾಷಣವನ್ನು ಪ್ರತಿನಿತ್ಯ ಓದಿ ರೂಡಿ ಮಾಡಿಕೊಳ್ಳಿ. ಶಿಕ್ಷಣ ಮತ್ತು ಸಮಾಜಕ್ಕಾಗಿ ಕೊಡುಗೆ ನೀಡುತ್ತಿರುವ ಶಿಕ್ಷಕರನ್ನು ಗೌರವಿಸುವ ನಿಟ್ಟಿನಲ್ಲಿ ಈ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಕಾರ್ಯವನ್ನು ವಹಿಸುತ್ತಾರೆ. ಈ ದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಗೌರವಾರ್ಪಣೆ ಮಾಡುತ್ತಾರೆ. ಅದೇ ರೀತಿ ನೀವು ನಿಮ್ಮ ಭಾಷಣದಲ್ಲಿ ಈ ಎಲ್ಲಾ ವಿಷಯವನ್ನು ಒಳಗೂಡಿ ಮಾತನಾಡಬೇಕು.
ಭಾಷಣದ ಆರಂಭ ಹೀಗಿರಲಿ:
ಆತ್ಮೀಯ ಸ್ನೇಹಿತರೆ,ಹಾಗೂ ಗೌರವಾನ್ವಿತ ಶಿಕ್ಷಕರೇ ಎಲ್ಲರಿಗೂ ಶುಭೋದಯ. ಇಂದು ನಾವು ಬಹಳ ವಿಶೇಷವಾದ ದಿನವನ್ನು ಆಚರಿಸುತ್ತಿದ್ದೇವೆ. ಪ್ರತಿನಿತ್ಯವೂ ನಮ್ಮ ತಂದೆ ತಾಯಿಯರಂತೆ ನಾವು ಕಂಡು ಆರಾಧಿಸುವ ಗೌರವಿಸುವ ಎಲ್ಲ ಶಿಕ್ಷಕರಿಗೂ ಮೊದಲನೆಯದಾಗಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಇಲ್ಲಿರುವ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಾನು ಶುಭಾಶಯ ತಿಳಿಸುತ್ತಿದ್ದೇನೆ. ನಮಗೆ ಅಕ್ಷರ ಜ್ಞಾನವಿತ್ತು ಮುಂದಿನ ಬದುಕಿನ ದಾರಿ ತೋರಿಸಿ ನಮ್ಮನ್ನು ಮುನ್ನಡೆಸುತ್ತಿರುವುದಕ್ಕಾಗಿ ಧನ್ಯವಾದಗಳು.
ಸಸಿ ಒಂದನ್ನು ತೋಟದಲ್ಲಿ ನೆಟ್ಟು ನಿತ್ಯ ಅದನ್ನು ಪೋಷಣೆ ಮಾಡಿ ಕಾವಲುಗಾರನು ಹೇಗೆ ಕಾಯ್ದು ಅದರಿಂದ ಬರುವ ಫಲವನ್ನು ರಕ್ಷಿಸುತ್ತಾನೋ ಹಾಗೆ ಆ ಎಲ್ಲ ಗಿಡಗಳಿಗೆ ಯಾವ ರೀತಿ ಕಾಳಜಿ ಮಾಡುತ್ತಾನೋ ಅದೇ ರೀತಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಬೆಳೆಸುತ್ತಾರೆ. ನಮ್ಮ ಮನಸ್ಸು ಮತ್ತು ಹೃದಯಗಳನ್ನ ಪೋಷಿಸುತ್ತಾರೆ. ನಮ್ಮನ್ನ ಪ್ರೋತ್ಸಾಹಿಸುತ್ತಾರೆ. ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ನಮಗೆ ಸಹಾಯ ಮಾಡುತ್ತಾರೆ ನಮ್ಮ ಭವಿಷ್ಯ ಉಜ್ವಲವಾಗಬೇಕೆಂದರೆ ಅದಕ್ಕೆ ಶಿಕ್ಷಕರೇ ಕಾರಣರಾಗಿರುತ್ತಾರೆ.
ಹಿಂದೆ ಗುರುವಿರಲಿ ಮುಂದೆ ಗುರಿಯಿರಲಿ ಎಂಬ ಒಂದು ಮಾತಿದೆ ಅದೇ ರೀತಿ ಶಿಕ್ಷಕರು ಯಾವಾಗಲೂ ನಮಗೆ ಗುರಿ ತೋರಿಸುತ್ತಾರೆ. ನಾವು ಆ ಗುರಿಯ ಪಥದಲ್ಲಿ ನಡೆಯಬೇಕಷ್ಟೆ. ಆಟ, ಪಾಠ, ಸಂಗೀತ -ನೃತ್ಯ ಎಲ್ಲವನ್ನು ಕೂಡ ಶಿಕ್ಷಕರೇ ಕಲಿಸುತ್ತಾರೆ. ಮನೆಯಲ್ಲಿ ನಾವು ತಂದೆ ತಾಯಿಯರನ್ನು ಯಾವ ರೀತಿ ಪ್ರೀತಿಸುತ್ತೇವೋ ಅದೇ ರೀತಿ ಶಾಲೆಯಲ್ಲಿ ಮಾರ್ಗದರ್ಶಕರಾದ ಶಿಕ್ಷಕರನ್ನು ಪ್ರೀತಿಸುತ್ತೇವೆ. ನಮ್ಮ ಜೀವನದಲ್ಲಿ ನಾವು ದೊಡ್ಡ ನಗುವನ್ನು ಸಂತೋಷದ ಮತ್ತು ಸಾಧನೆಯ ಕ್ಷಣವನ್ನು ಕಾಣಬೇಕೆಂದರೆ ಅದಕ್ಕೆ ಕಾರಣಿಕರ್ತರು ಶಿಕ್ಷಕರೆ ಆಗಿರುತ್ತಾರೆ. ಪ್ರತಿಯೊಬ್ಬ ಶಿಕ್ಷಕರು ಸಹ ತಮ್ಮ ಶಿಷ್ಯರನ್ನು ಅಥವಾ ವಿದ್ಯಾರ್ಥಿಗಳನ್ನು ಜೀವನದಲ್ಲಿ ಮೇಲಕ್ಕೆತ್ತಲು ಸಾಧನೆ ಮಾಡಲು ಸ್ಪೂರ್ತಿ ತುಂಬುತ್ತಾರೆ.
ಧನ್ಯವಾದಗಳು…….